ಮಳೆಯ ರುದ್ರ ನರ್ತನಕ್ಕೆ ಮಿಡಿದ ಕ್ರಿಕೆಟಿಗ ಡಿವಿಲಿಯರ್ಸ್

news18
Updated:August 18, 2018, 5:46 PM IST
ಮಳೆಯ ರುದ್ರ ನರ್ತನಕ್ಕೆ ಮಿಡಿದ ಕ್ರಿಕೆಟಿಗ ಡಿವಿಲಿಯರ್ಸ್
news18
Updated: August 18, 2018, 5:46 PM IST
ನ್ಯೂಸ್ 18 ಕನ್ನಡ

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ದೇವರನಾಡು ಕೇರಳ ತತ್ತರಿಸಿ ಹೋಗಿದೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಮಧ್ಯೆ ಅನೇಕರು ಕೇರಳಕ್ಕೆ ಸಹಾಯದ ಹಸ್ತಚಾಚಿದ್ದು, ಮಳೆಯ ರುದ್ರ ನರ್ತನಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಡಿವಿಲಿಯರ್ಸ್,​ ಕೇರಳದಲ್ಲಿ ಭೀಕರ ಪ್ರವಾಹದಿಂದ ನಲುಗಿರುವ ಜನರು ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ನೂರಕ್ಕೂ ಅಧಿಕ ಜನರು ಸಾವುಗೀಡಾಗಿದ್ದು, 200,000 ಕ್ಕೂ ಅಧಿಕ ಮಂದಿ ಮನೆ ಮಟಗಳನ್ನು ಕಳೆದುಕೊಂಡಿದ್ದಾರೆ, ಇದು ತುಂಬಾ ಬೇಸರದ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ.

 


Loading...ಎಬಿ ಡಿವಿಲಿಯರ್ಸ್ ಈ ರೀತಿ ಟ್ವೀಟ್ ಮಾಡಲು ಕಾರಣವಿದೆ.​ ಅವರಿಗೆ ಭಾರತ ದೇಶದ ಮೇಲೆ ಅಪಾರ ಅಭಿಮಾನವಿದೆ. ಈ ಹಿಂದೆ ಭಾರತೀಯರು ನನ್ನನ್ನು ತನ್ನವರೆಂದು ಭಾವಿಸಿದ್ದು, ಭಾರತದ ಬಗ್ಗೆ ನನಗಿರುವ ಭಾವನಾತ್ಮಕ ಸಂಬಂಧ ನಿಜಕ್ಕೂ ಬಣ್ಣಿಸಲು ಅಸಾಧ್ಯ ಎಂದು ಹೇಳಿಕೊಂಡಿದ್ದರು. ಐಪಿಎಲ್​​ನಲ್ಲಿ ರಾಯಲ್ ಚಾಲೆಂಜರ್ಸ್​​ ಬೆಂಗಳೂರು ಪರ ಎಬಿಡಿ ಕಳೆದ 11 ವರ್ಷದಿಂದ ಆಡುತ್ತಿದ್ದು, ಬೆಂಗಳೂರು ನನ್ನ ಎರಡನೇ ಮನೆ ಇದ್ದಂತೆ ಎಂದು ಹೇಳಿದ್ದರು. ಹೀಗಾಗೆ ಭಾರತ ಬಗ್ಗೆ ಎಬಿಡಿಗೆ ವಿಶೇಷ ಅಭಿಮಾನವಿದ್ದು, ಸದ್ಯ ಸಂಕಷ್ಟದಲ್ಲಿರುವ ಕೇರಳ ರಾಜ್ಯಕ್ಕೂ ಸಂತಾಪ ಸೂಚಿಸಿದ್ದಾರೆ.

ಮೊನ್ನೆಯಷ್ಟೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ಅವರು ಕೂಡ ಕೇರಳದ ಪ್ರವಾಹ ಪೀಡಿತ ಜನರಿಗೆ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿದ್ದರು.

ಪ್ರವಾಹ ಪೀಡಿತ ಕೇರಳ ಜನತೆಗೆ ನೆರವಾಗುವಂತೆ ಅಭಿಮಾನಿಗಳಿಗೆ ಕ್ರಿಕೆಟಿಗರ ಮನವಿ
First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ