ಕೊನೆಗೂ ನಿವೃತ್ತಿ ಹಿಂದಿನ ಕಾರಣವನ್ನು ಬಹಿರಂಗ ಪಡಿಸಿದ ಡಿವಿಲಿಯರ್ಸ್​

news18
Updated:August 18, 2018, 6:43 PM IST
ಕೊನೆಗೂ ನಿವೃತ್ತಿ ಹಿಂದಿನ ಕಾರಣವನ್ನು ಬಹಿರಂಗ ಪಡಿಸಿದ ಡಿವಿಲಿಯರ್ಸ್​
news18
Updated: August 18, 2018, 6:43 PM IST
ನ್ಯೂಸ್ 18 ಕನ್ನಡ

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರು ಕಳೆದ ಮಾರ್ಚ್ 23ರಂದು ಎಲ್ಲ ಮಾದರಿಯ ಅಂತರಾಷ್ಟ್ರೀಯಾ ಕ್ರಿಕೆಟ್​ಗೆ ದಿಢೀರ್​ ವಿದಾಯ ಘೋಷಿಸಿದ್ದರು. ಆದರೆ ತನ್ನ ದಿಢೀರ್ ನಿವೃತ್ತಿಗೆ ಯಾವುದೇ ಕಾರಣವನ್ನು ನೀಡಿರಲಿಲ್ಲ. ಸದ್ಯ ಎಬಿಡಿ ತನ್ನ ನಿವೃತ್ತಿ ಹಿಂದಿನ ಕಾರಣವನ್ನು ತಿಳಿಸಿದ್ದಾರೆ.

'ನಮ್ಮ ತಂಡ, ಕೋಚ್​ಗಳಿಂದ ಹಾಗೂ ನನ್ನ ಅಭಿಮಾನಿಗಳಿಂದ ಇನ್ನಷ್ಟು ಉತ್ತಮ ಪ್ರದರ್ಶನ ತೋರುವಂತೆ ತೀವ್ರ ಒತ್ತಡವಿತ್ತು. ಕ್ರಿಕೆಟ್ ಅಭಿಮಾನಿಗಳು ನನ್ನಿಂದ ತುಂಬಾನೇ ನಿರೀಕ್ಷೆ ಮಾಡುತ್ತಿದ್ದರು. ಆದರೆ ಅವರ ನಿರೀಕ್ಷೆಗೆ ತಕ್ಕಂತೆ ಕ್ರಿಕೆಟ್​​ನತ್ತ ನನ್ನನ್ನು ನಾನು ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನಾನು ನಿವೃತ್ತಿ ನಿರ್ಧಾರಕ್ಕೆ ಮುಂದಾದೆ. ಆದರೆ ಈ ವಿಚಾರದಿಂದ ನನಗೆ ಯಾವುದೇ ನೋವಾಗಿಲ್ಲ. ಸದ್ಯ ಕ್ರಿಕೆಟ್ ಜೀವನದಿಂದ ದೂರವಿದ್ದೇನೆ, ಕುಟುಂಬ ಸದಸ್ಯರ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ' ಎಂದು ಎಬಿಡಿ ಹೇಳಿದ್ದಾರೆ.

ಎಬಿ ಡಿವಿಲಿಯರ್ಸ್​ ಅವರಿಗೆ 34 ವರ್ಷವಾಗಿದ್ದು, ಟೆಸ್ಟ್, ಏಕದಿನ ಮತ್ತು ಟಿ-20 ಮೂರೂ ಮಾದರಿಯ ಕ್ರಿಕೆಟ್​ನಲ್ಲೂ ಆಡಿದ್ದಾರೆ. 123 ಟೆಸ್ಟ್​ ಪಂದ್ಯಗಳು, 228 ಏಕದಿನ ಪಂದ್ಯ ಹಾಗೂ 78 ಟಿ-20 ಪಂದ್ಯಗಳನ್ನು ಆಡಿರುವ ಎಬಿಡಿ ವಿಶ್ವದ ಶ್ರೇಷ್ಠ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ