• Home
  • »
  • News
  • »
  • sports
  • »
  • Aaron Finch: ಗ್ರೌಂಡ್‌ನಲ್ಲೇ ಅವಾಚ್ಯ ಪದಗಳಿಂದ ಅಂಪೈರ್‌ಗೆ ನಿಂದನೆ! ತಪ್ಪು ರಿಪೀಟ್ ಆದ್ರೆ ಫಿಂಚ್‌ಗೆ ಅಮಾನತು ಶಿಕ್ಷೆ ಫಿಕ್ಸ್

Aaron Finch: ಗ್ರೌಂಡ್‌ನಲ್ಲೇ ಅವಾಚ್ಯ ಪದಗಳಿಂದ ಅಂಪೈರ್‌ಗೆ ನಿಂದನೆ! ತಪ್ಪು ರಿಪೀಟ್ ಆದ್ರೆ ಫಿಂಚ್‌ಗೆ ಅಮಾನತು ಶಿಕ್ಷೆ ಫಿಕ್ಸ್

ಅರೋನ್​ ಫಿಂಚ್​

ಅರೋನ್​ ಫಿಂಚ್​

ಆಸ್ಟ್ರೇಲಿಯಾ (Australia) T20 ನಾಯಕ ಆರೊನ್ ಫಿಂಚ್ (Aaron Finch) ಅಧಿಕೃತ ಛೀಮಾರಿಗೆ ಒಳಗಾಗಿದ್ದಾರೆ. ಇಂಗ್ಲೆಂಡಿನ ಒಂಬತ್ತನೇ ಓವರ್‌ನಲ್ಲಿ ಫಿಂಚ್ ಅನುಚಿತ ಭಾಷೆ  (Inappropriate Language) ಬಳಸಿದ್ದು ಐಸಿಸಿ (ICC) ನೀತಿ ಸಂಹಿತೆಯ ಹಂತ 1 ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.

ಮುಂದೆ ಓದಿ ...
  • Share this:

ಅಕ್ಟೋಬರ್ (October) 9 ರಂದು ಪರ್ತ್‌ನಲ್ಲಿ ನಡೆದ ಮೊದಲ T20I ನಲ್ಲಿ ಇಂಗ್ಲೆಂಡ್ (England) ವಿರುದ್ಧ ತಮ್ಮ ತಂಡದ ಸೋಲಿನ ಸಂದರ್ಭದಲ್ಲಿ ಆಸ್ಟ್ರೇಲಿಯಾ (Australia) T20 ನಾಯಕ ಆರೊನ್ ಫಿಂಚ್ (Aron Finch) ಅಧಿಕೃತ ಛೀಮಾರಿಗೆ ಒಳಗಾಗಿದ್ದಾರೆ. ಇಂಗ್ಲೆಂಡಿನ ಒಂಬತ್ತನೇ ಓವರ್‌ನಲ್ಲಿ ಫಿಂಚ್ ಅನುಚಿತ ಭಾಷೆ  (Inappropriate Language) ಬಳಸಿದ್ದು ಐಸಿಸಿ (ICC) ನೀತಿ ಸಂಹಿತೆಯ ಹಂತ 1 ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಆಟಗಾರರು ಹಾಗೂ ಬೆಂಬಲ ಸಿಬ್ಬಂದಿಗಾಗಿ ICC ನೀತಿ ಸಂಹಿತೆಯ ಕಾಯ್ದೆ 2.3 ಅನ್ನು ಆಸ್ಟ್ರೇಲಿಯಾದ ತಂಡದ ನಾಯಕ ಉಲ್ಲಂಘಿಸಿರುವುದು ಕಂಡುಬಂದಿದ್ದು, ಕಾಯ್ದೆಯು "ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಶ್ರವ್ಯ ಅಶ್ಲೀಲತೆಯ ಬಳಕೆ" ಗೆ ಸಂಬಂಧಿಸಿದ್ದಾಗಿದೆ.


ತಪ್ಪು ಪುನರಾವರ್ತನೆಯಾದಲ್ಲಿ ತಂಡದಿಂದ ಅಮಾನತು


ತನ್ನ ತಪ್ಪನ್ನು ಒಪ್ಪಿಕೊಂಡಿರುವ ಫಿಂಚ್ ಅಧಿಕೃತವಾಗಿ ಛೀಮಾರಿ ಹಾಕಿಸಿಕೊಂಡರು ಮತ್ತು ಅವರ ಅಶಿಸ್ತಿನ ವರ್ತನೆಗೆ ನ್ಯೂನತೆಯ ಅಂಕವನ್ನು ಸೇರಿಸಲಾಗಿದೆ. ಕಳೆದ 24 ತಿಂಗಳುಗಳಲ್ಲಿ ಫಿಂಚ್ ಮಾಡಿರುವ ಮೊದಲ ಅಪರಾಧ ಇದಾಗಿದ್ದರೂ, ಸರಣಿಯ ಉಳಿದ ಸಮಯದಲ್ಲಿ ಅಥವಾ ಮುಂಬರುವ ಐಸಿಸಿ ಪುರುಷರ T20 ವಿಶ್ವಕಪ್ 2022 ನಲ್ಲಿ ಇಂತಹುದೇ ಹೆಚ್ಚಿನ ಘಟನೆಗಳು ಸಂಭವಿಸಿದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಅಮಾನತುಗೊಳ್ಳುವ ಅಪಾಯ ಇದ್ದೇ ಇದೆ.


ಆಟಗಾರನನ್ನು ನಿಷೇಧಿಸುವ ಹಕ್ಕು


24-ತಿಂಗಳ ಅವಧಿಯಲ್ಲಿ ಆಟಗಾರನು ನಾಲ್ಕು ಅಥವಾ ಹೆಚ್ಚಿನ ನ್ಯೂನತೆಯ ಅಂಕಗಳನ್ನು ತಲುಪಿದಾಗ, ಅವುಗಳನ್ನು ಅಮಾನತು ಅಂಕಗಳಾಗಿ ಪರಿವರ್ತಿಸಲಾಗುತ್ತದೆ ಮತ್ತು ಆಟಗಾರನನ್ನು ನಿಷೇಧಿಸಲಾಗುತ್ತದೆ. ಅಕ್ಟೋಬರ್ 22 ರಂದು ಸಿಡ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಹಾಲಿ ಚಾಂಪಿಯನ್‌ಗಳು ತಮ್ಮ T20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸುವ ಮೊದಲು, ಈ ವಾರ ಕ್ಯಾನ್‌ಬೆರಾದಲ್ಲಿ ಇಂಗ್ಲೆಂಡ್ ವಿರುದ್ಧದ ಉಳಿದ ಎರಡು T20I ನಲ್ಲಿ ಫಿಂಚ್ ಆಸ್ಟ್ರೇಲಿಯಾವನ್ನು ಮುನ್ನಡೆಸಲಿದ್ದಾರೆ.


ಇದನ್ನೂ ಓದಿ: ಹರಿಣಗಳನ್ನು ಹುರಿದು ಮುಕ್ಕಿದ ಟೀಂ ಇಂಡಿಯಾ ಬೌಲರ್ಸ್! 100ರ ಗಡಿ ದಾಟದೇ ತತ್ತರಿಸಿದ ಸೌತ್​​ ಆಫ್ರಿಕಾ!


ಆರೊನ್ ಫಿಂಚ್ ಮಾಡಿದ ತಪ್ಪಾದರೂ ಏನು?


ರಿವ್ಯೂಗೆ ವಿನಂತಿ ಸಲ್ಲಿಸಬೇಕೇ ಬೇಡವೇ ಎಂಬುದನ್ನು ಕುರಿತು ತಮ್ಮ ಸಹ ಆಟಗಾರರೊಂದಿಗೆ ಚರ್ಚಿಸಿದ ನಂತರ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್‌ ಚೆಂಡನ್ನು ಕ್ಯಾಚ್ ಮಾಡಿದ್ದಾರೆಯೇ ಎಂದು ಫಿಂಚ್ ಅಂಪೈರ್‌ಗಳನ್ನು ಕೇಳಿದ್ದಾರೆ. ಕ್ರೀಡಾಂಗಣದಲ್ಲಿದ್ದ ಅಂಪೈರ್‌ಗಳು ಈ ಸಮಯದಲ್ಲಿ ಫಿಂಚ್‌ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. DRS ಟೈಮರ್‌ನಲ್ಲಿ ಸಮಯ ಮೀರುತ್ತಿರುವುದನ್ನು ನೋಡಿ ಫಿಂಚ್ ಅವಾಚ್ಯ ಪದವನ್ನು ಬಳಸಿದ್ದಾರೆ ಎಂಬುದು ತಿಳಿದು ಬಂದಿದೆ.


15 ಸೆಕೆಂಡ್‌ನೊಳಗೆ ನಿರ್ಣಯವನ್ನು ತಿಳಿದುಕೊಳ್ಳುವುದು ಉತ್ತಮ ಎಂಬುದಾಗಿ ಫಿಂಚ್ ಗೊಣಗಿದ್ದನ್ನು ಸ್ಟಂಪ್ ಮೈಕ್ರೊಫೋನ್‌ಗಳು ರೆಕಾರ್ಡ್ ಮಾಡಿಕೊಂಡಿವೆ.


ಅಗ್ರಸ್ಥಾನಕ್ಕೆ ಮರಳುವುದಾಗಿ ಖಚಿತಪಡಿಸಿರುವ ಫಿಂಚ್


ಆಸ್ಟ್ರೇಲಿಯದ ಇಂಗ್ಲೆಂಡ್ ವಿರುದ್ಧದ ಮುಂಬರುವ T20 ಗಳಿಗೆ ತಮ್ಮ ಹಿಂದಿನ ಅಗ್ರಸ್ಥಾನಕ್ಕೆ ಮರಳುವುದಾಗಿ ಫಿಂಚ್ ಖಚಿತಪಡಿಸಿದ್ದಾರೆ. ಹೊಸ ಹೊಸ ಯೋಜನೆಗಳನ್ನು, ಸುಳಿವುಗಳನ್ನು ಪಂದ್ಯದ ಆಟಗಾರರು ಪ್ರಯತ್ನಿಸುತ್ತಲೇ ಇರುತ್ತಾರೆ. ಮುಂದಿನ ಪಂದ್ಯದಲ್ಲಿ ಅಗ್ರಸ್ಥಾನಕ್ಕೆ ಮರಳುವುದು ತಮ್ಮ ಎಂದಿನ ಯೋಜನೆಯಾಗಿದೆ ಎಂಬುದಾಗಿ ಫಿನ್ಸ್ ಆರಂಭಿಕ ಸೋಲಿನ ನಂತರ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.


ವಿಶ್ವಕಪ್‌ಗೆ ಸಾಕಷ್ಟು ಸಿದ್ಧತೆ ನಡೆಸಲಿರುವ ಆಸ್ಟ್ರೇಲಿಯಾ


ಮೊದಲ ಎರಡು (ವೆಸ್ಟ್ ಇಂಡೀಸ್ ವಿರುದ್ಧ ಟಿ20) ಪಂದ್ಯದ ನಂತರ ಈ ಆಟಕ್ಕೆ ಮರಳಲಿದ್ದೇವೆ ತದನಂತರ ವಿಶ್ವಕಪ್‌ಗೆ ತಯಾರಿಯಾಗಿ ಅಗ್ರಸ್ಥಾನಕ್ಕೆ ಮರಳುವುದಾಗಿ ಫಿಂಚ್ ಹೇಳಿಕೊಂಡಿದ್ದಾರೆ. ಪಂದ್ಯದಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದರೂ ಹೊಸ ವಿಷಯಗಳನ್ನು ಅರಿತುಕೊಳ್ಳಲು ತಂಡಕ್ಕೆ ಇದೊಂದು ಅವಕಾಶವಾಗಿದೆ ಎಂದು ಫಿಂಚ್ ಹೇಳಿದ್ದಾರೆ.


ಇದನ್ನೂ ಓದಿ: ಬಿಸಿಸಿಐ ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್​ ಬಿನ್ನಿ ಆಯ್ಕೆ? ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿಕೆ


ಈ ಸೋಲಿನ ನಂತರ, ಜತೆಗಾರರಿಗೆ ಸಾಕಷ್ಟು ಕಹಿಯನುಭವ ಉಂಟಾಗಬಹುದು. ಆದರೆ ಸಾಕಷ್ಟು ಸಿದ್ಧತೆಗಳೊಂದಿಗೆ ಮುಂದಿನ ಆಟದಲ್ಲಿ ಮುನ್ನುಗ್ಗಬೇಕಾಗುತ್ತದೆ ಎಂಬುದು ಆಸ್ಟ್ರೇಲಿಯಾ ನಾಯಕನ ಮಾತಾಗಿದೆ.

Published by:ವಾಸುದೇವ್ ಎಂ
First published: