Neeraj Chopra: ರೈತನ ಮಗ ಜಾವಲಿನ್‌ನಲ್ಲಿ ವಿಶ್ವದಾಖಲೆ: ಒಲಿಂಪಿಕ್ಸ್ ಫೈನಲ್ಸ್​​ಗೆ ನೀರಜ್ ಚೋಪ್ರಾ

ಹರಿಯಾಣಾದ ಪಾಣಿಪತ್ ಜಿಲ್ಲೆಯ ಖಂಡ್ರಾ ಗ್ರಾಮದಲ್ಲಿ ಹುಟ್ಟಿದ ಎಂದೂ ಜಾವೆಲಿನ್ ಅನ್ನೂ ನೋಡಿರದ ಹುಡುಗ ಇಂದು ಈ ಮಟ್ಟಕ್ಕೆ ಬೆಳೆದದ್ದು ಒಂದು ಸಾಧನೆಯೇ ಸರಿ. ಈಗ ಹಲವಾರು ಭಾರತೀಯ ಯುವಕರು ಜಾವಲಿನ್ ಕಡೆಗೆ ಆಕರ್ಷಿತರಾಗಲು ನೀರಜ್ ಚೋಪ್ರಾ ಕಾರಣವಾಗುತ್ತಿದ್ದಾರೆ.

ನೀರಜ್​ ಚೋಪ್ರಾ

ನೀರಜ್​ ಚೋಪ್ರಾ

 • Share this:

  ಭಾರತವು ಅದ್ಭುತ ಕ್ರಿಕೆಟಿಗರು, ಹಾಕಿ ಆಟಗಾರರು, ಬ್ಯಾಡ್ಮಿಂಟನ್ ಆಟಗಾರರು ಮತ್ತು ಶೂಟರ್‌ಗಳಿಗೆ ಹೆಸರುವಾಸಿಯಾಗಿದೆ. ಆದರೆ ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ದೊಡ್ಡ ಛಾಪು ಮೂಡಿಸಿರುವುದು ಅಪರೂಪ. ಆದರೆ ಏಕೈಕ ವಿಶ್ವ ದಾಖಲೆ ಹೊಂದಿರುವ ಕ್ರೀಡಾಪಟು ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅದನ್ನು ಬದಲಾಯಿಸಿದ್ದಾರೆ. ಈಗ ಎಲ್ಲೆಡೆ ಪಾಣಿಪತ್ ಹುಡುಗ ನೀರಜ್ ಅವರದ್ದೇ ಮಾತು.


  ಭಾರತದ ಅತ್ಯುತ್ತಮ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ,ಏಷ್ಯನ್ ಮತ್ತು ಕಾಮನ್‍ವೆಲ್ತ್ ಕ್ರೀಡೆಗಳ ಚಾಂಪಿಯನ್. ಹರಿಯಾಣದ ಪಾಣಿಪತ್ ಜಿಲ್ಲೆಯ ಖಂಡ್ರಾ ಗ್ರಾಮದಲ್ಲಿ ಹುಟ್ಟಿದ, ಒಂದು ಜಾವೆಲಿನ್ ಅನ್ನೂ ನೋಡಿರದ ಹುಡುಗ ಇಂದು ಈ ಮಟ್ಟಕ್ಕೆ ಬೆಳೆದದ್ದು ಒಂದು ವಿಶೇಷವೇ ಸರಿ. ಈಗ ಹಲವಾರು ಭಾರತೀಯ ಯುವಕರು ಜಾವೆಲಿನ್ ಕಡೆಗೆ ಆಕರ್ಷಿತರಾಗಲು ನೀರಜ್ ಚೋಪ್ರಾ ಕಾರಣವಾಗುತ್ತಿದ್ದಾರೆ.


  ಟೋಕಿಯೋ ಒಲಂಪಿಕ್ ಫೈನಲ್ಸ್‌ನಲ್ಲಿ ನೀರಜ್ ಚೋಪ್ರಾ
  2020 ಟೋಕಿಯೋ ಒಲಂಪಿಕ್‍ನಲ್ಲಿ ಭಾರತವನ್ನು ಅನೇಕ ಕ್ರೀಡಾಪಟುಗಳು ಪ್ರತಿನಿಧಿಸಿದ್ದರು, ಅವರ ಮೇಲೆ ದೇಶವು ಒಲಂಪಿಕ್ ಪದಕದ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಆದರೆ ಕೆಲವರು ಅದನ್ನು ಶ್ರೇಷ್ಟ ಹಂತದಲ್ಲಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ 1.3 ಬಿಲಿಯನ್ ಜನರ ಕನಸುಗಳನ್ನು ಈಡೇರಿಸುವ ಜವಾಬ್ಧಾರಿ ನೀರಜ್ ಚೋಪ್ರಾ ಅವರ ಮೇಲಿದೆ. ಮತ್ತೊಂದು ಪದಕಕ್ಕಾಗಿ ಅಗ್ರ ಪಂಥದಲ್ಲಿ ಕಾಣಿಸಿಕೊಂಡಿರುವ ನೀರಜ್, 86.65 ಮೀಟರ್‌ಗಳ ಮೊದಲ ಪ್ರಯತ್ನದಲ್ಲಿ ಪುರುಷರ ಜಾವೆಲಿನ್ ಫೈನಲ್‍ಗೆ ಅರ್ಹತೆ ಪಡೆದಿದ್ದಾರೆ. ಆಗಸ್ಟ್ 7 ರಂದು ನಡೆಯುವ ಫೈನಲ್ಸ್‍ನಲ್ಲಿ ನೀರಜ್ ಚೋಪ್ರಾ ಸ್ಪರ್ಧಿಸಲಿದ್ದಾರೆ.


  ಯುವ ಪ್ರತಿಭೆ ನೀರಜ್ ಚೋಪ್ರಾ
  ಭಾರತದ ಏಕೈಕ ವಿಶ್ವದಾಖಲೆ ಹೊಂದಿರುವ ಜಾವೆಲಿನ್ ಎಸೆತದ ಕ್ರೀಡಾಪಟು ನೀರಜ್ ಚೋಪ್ರಾ 2016ರಲ್ಲಿ ಏಕಾಏಕಿ ಪ್ರಸಿದ್ಧರಾದರು.2016ರಲ್ಲಿ ಪೋಲ್ಯಾಂಡ್‍ನಲ್ಲಿ ನಡೆದ ಐಎಎಎಫ್ ವಿಶ್ವ ಯು20 ಚಾಂಪಿಯನ್‍ಶಿಪ್‍ನಲ್ಲಿ 18 ವರ್ಷದ ನೀರಜ್ ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿದರು. 86.48 ಮೀ ಈಟಿಯನ್ನು ಎಸೆದು ಹೊಸ ಜೂನಿಯರ್ ವಿಶ್ವ ದಾಖಲೆಯನ್ನು ಸ್ಥಾಪಿಸಿ, ಚಿನ್ನದ ಪದಕವನ್ನು ಪಡೆದರು. ಆ ಎಸೆತ, ಅವರು ಕಿರಿಯ ಕ್ರೀಡಾಪಟು ಆಗಿದ್ದರೂ, ಅವರನ್ನು ಹಿರಿಯರ ಶ್ರೇಯಾಂಕದಲ್ಲಿ 11ನೇ ಸ್ಥಾನದಲ್ಲಿ ಇರಿಸಿದೆ.


  ಜಾವೆಲಿನ್ ಚಾಂಪಿಯನ್ ಆದ ದಢೂತಿ ಹುಡುಗ
  ಸ್ನೇಹಿತರೊಂದಿಗೆ ಜೇನುಗೂಡು ಕೀಳುವುದು, ಮಾವಿನ ಹಣ್ಣು ಕದಿಯುವುದು ಮತ್ತು ಸ್ನೇಹಿತರೊಂದಿಗೆ ಜಗಳವಾಡುವುದು. . . , ಈಗಷ್ಟೆ ಮುಗಿದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಜಾವೆಲಿನ್ ಚಿನ್ನದ ಪದಕ ಪಡೆದ ನೀರಜ್ ಅವರದ್ದು ಇಂತಹ ಬಾಲ್ಯವಾಗಿತ್ತು.
  ಬಾಲ್ಯದಲ್ಲಿ ಅವರು ತಿಂಡಿಪೋತನಾಗಿದ್ದರು. ಅಜ್ಜಿಯ ಅಕ್ಕರೆಯ ಕೈತುತ್ತು ತಿಂದು ಬೆಳೆದ ನೀರಜ್ ತುಂಬಾ ದಢೂತಿ ಹುಡುಗನಾಗಿದ್ದರು. 12ನೇ ವಯಸ್ಸಿಗೆ 90ಕೆಜಿ ತೂಕ ಹೊಂದಿದ್ದರು.


  ಇದನ್ನೂ ಓದಿ: ಸೆಮಿಫೈನಲ್​ನಲ್ಲಿ ಮುಗ್ಗರಿಸಿದ ಮಹಿಳಾ ಹಾಕಿ ತಂಡ; ಅರ್ಜೈಂಟೀನಾ ಎದುರು ಸೋಲು; ಕಂಚಿನ ಆಸೆ ಜೀವಂತ

  ಅತ್ಯುತ್ತಮ ವೈಯುಕ್ತಿಕ ಸಾಧನೆ
  ಜಕಾರ್ತದಲ್ಲಿ 2018ರಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಅವರು ಚಿನ್ನದ ಪದಕ ಗೆದ್ದು, 88.06ಮೀ ಭಾರತೀಯ ಹೊಸ ದಾಖಲೆ ಸೃಷ್ಟಿಸಿದ್ದರು. 2021ರಲ್ಲಿ ಇಂಡಿಯನ್ ಗ್ರಾಂಡ್ ಪ್ರಿಕ್ಸ್‍ನಲ್ಲಿ 88.07ಮೀ ಎಸೆತದ ಮೂಲಕ ತಾವೇ ತಮ್ಮ ದಾಖಲೆಯನ್ನು ಮುರಿದಿದ್ದರು. ಗೋಲ್ಡ್ ಕೋಸ್ಟ್ 2018 ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು 2016ರ ಐಎಎಎಫ್ ವಿಶ್ವ ಯು20ನಲ್ಲಿ 86.48ಮೀ ಎಸೆತದ ಮೂಲಕ ವಿಶ್ವ ಜೂನಿಯರ್ ದಾಖಲೆ ನಿರ್ಮಿಸಿದ ವಿಶ್ವ ಚಾಂಪಿಯನ್ ಕೂಡ.


  ಭಾರತೀಯ ಸೇನೆಯ ನಿಯೋಜಿತ ಅಧಿಕಾರಿ
  ನೀರಜ್ ಚೋಪ್ರಾ ಭಾರತೀಯ ಸೇನೆಗೆ ಸೇರಿದ್ದಾರೆ, ರೈತನಾಗಿರುವ ತಂದೆಗೆ ಆರ್ಥಿಕ ಸಹಾಯ ಮಾಡಿದ ತೃಪ್ತಿ ಅವರಿಗಿದೆ. ಅವರನ್ನು ಭಾರತೀಯ ಸೇನೆಯು ಕಿರಿಯ ನಿಯೋಜಿತ ಅಧಿಕಾರಿಯಾಗಿ ನೇಮಿಸಿದೆ. ವಿಶ್ವದ ಅತ್ಯಂತ ಪ್ರಸಿದ್ಧ ತರಬೇತುದಾರಾದ ಯುವೆ ಹೋನ್ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.


  ಒಲಂಪಿಕ್ಸ್‌ನಲ್ಲಿ ಬಿಲಿಯನ್‍ಗಟ್ಟಲೆ ಜನರ ಆಶಾಕಿರಣ
  ಈ ಬಾರಿ 1.3 ಬಿಲಿಯನ್ ಜನರ ಕನಸುಗಳನ್ನು ಈಡೇರಿಸುವ ಜವಾಬ್ಧಾರಿ ಭಾರತದ ಶ್ರೇಷ್ಟ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಅವರ ಮೇಲಿದೆ. ಟೊಕಿಯೋ ಒಲಂಪಿಕ್ಸ್ 2020ನಲ್ಲಿ 86.65 ಮೀಟರ್‌ಗಳ ಮೊದಲ ಪ್ರಯತ್ನದಲ್ಲಿ ಪುರುಷರ ಜಾವೆಲಿನ್ ಫೈನಲ್‍ಗೆ ಅರ್ಹತೆ ಪಡೆದಿದ್ದಾರೆ.

  First published: