• Home
  • »
  • News
  • »
  • sports
  • »
  • Lionel Messi: ಹಣೆ ಮೇಲೆ ಮೆಸ್ಸಿ ಟ್ಯಾಟೂ ಹಾಕಿಸಿಕೊಂಡು ಫ್ಯಾನ್‌! ಆದ್ರೆ ಈಗ ಪಶ್ಚಾತ್ತಾಪ ಪಡ್ತಿದ್ದಾನಂತೆ

Lionel Messi: ಹಣೆ ಮೇಲೆ ಮೆಸ್ಸಿ ಟ್ಯಾಟೂ ಹಾಕಿಸಿಕೊಂಡು ಫ್ಯಾನ್‌! ಆದ್ರೆ ಈಗ ಪಶ್ಚಾತ್ತಾಪ ಪಡ್ತಿದ್ದಾನಂತೆ

ಮೆಸ್ಸಿ

ಮೆಸ್ಸಿ

ಮೆಸ್ಸಿ ಟ್ಯಾಟೂ ಹಾಕಿಸಿಕೊಂಡವರು ಕೊಲಂಬಿಯಾದ ಅಭಿಮಾನಿ ಮೈಕ್ ಜಾಂಬ್ಸ್ ಎಂಬುವವರು. ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ಫ್ರಾನ್ಸ್ ವಿರುದ್ಧ ಗೆದ್ದ ನಂತರ ತನ್ನ ಫುಟ್‌ಬಾಲ್ ಸ್ಟಾರ್ ಐಕಾನ್ ಹೆಸರನ್ನು ಹಣೆಯ ಮೇಲೆ ಬರೆಯಿಸಿಕೊಂಡಿದ್ದರು. 

  • Trending Desk
  • 4-MIN READ
  • Last Updated :
  • Share this:

ಪಿಫಾ ವರ್ಲ್ಡ್‌ ಕಪ್‌ ವಿಜೇತ ಅರ್ಜೇಂಟೈನಾದ ಫುಲ್ಬಾಲ್‌ ದಂತಕಥೆ ಲಿಯೋನಲ್‌ ಮೆಸ್ಸಿಗೆ (Lionel Messi) ಇಡೀ ಜಗತ್ತೇ ಅಭಿಮಾನಿ. ಕತಾರ್‌ ನಲ್ಲಿ ಪಿಫಾ ವಿಶ್ವಕಪ್‌ (FIFA World Cup) ಪಂದ್ಯ ಮುಗಿದೊಡನೇ ಮೆಸ್ಸಿ ಅಭಿಮಾನಿಗಳು ಹರ್ಷೋದ್ಘಾರ ಮಾಡಿದ್ದರು. ಇನ್ನು ತವರಿನಲ್ಲಂತೂ ಸಂಭ್ರಮ ಮೇರೆ ಮೀರಿತ್ತು. ಈ ಮಧ್ಯೆ ಹಲವಾರು ಜನ ಮೆಸ್ಸಿ ಅಭಿಮಾನಿಗಳು ಮೆಸ್ಸಿ ಟ್ಯಾಟೂ ಹಾಕಿಸಿಕೊಂಡಿದ್ದರು. ಆದ್ರೆ ಇಲ್ಲೊಬ್ಬ ಭೂಪ ಹಣೆಯ ಮೇಲೆಯೇ ಮೆಸ್ಸಿ ಎಂದು ಟ್ಯಾಟೂ ಹಾಕಿಸಿಕೊಂಡು ಈಗ ಬೇಸರ ಪಡುತ್ತಿದ್ದಾನೆ. ಅಂದಹಾಗೆ, ತಮ್ಮಿಷ್ಟದ ಜನರ ಹೆಸರನ್ನು, ಮಕ್ಕಳ ಹೆಸರನ್ನು, ಅಥವಾ ಬೇರೆ ಬೇರೆ ಡಿಸೈನ್‌ಗಳ ಟ್ಯಾಟೂಗಳನ್ನು ದೇಹದ ಮೇಲೆ ಹಾಕಿಸಿಕೊಳ್ಳೋದು ಇಂದು ಕಾಮನ್.‌ ಆದ್ರೆ ಮುಖದ ಮೇಲೆ ಸಾಮಾನ್ಯವಾಗಿ ಯಾರೂ ಹಚ್ಚೆ ಹಾಕಿಸಿಕೊಳ್ಳೋದಿಲ್ಲ. ಆದ್ರೆ ಇಲ್ಲೊಬ್ಬ ಲಿಯೋನಲ್‌ ಮೆಸ್ಸಿ ಅಭಿಮಾನಿಯೊಬ್ಬ ವಿಶ್ವಕಪ್‌ ಗೆದ್ದ ಬಳಿಕ ಮೆಸ್ಸಿ ಹೆಸರನ್ನೇ ದೊಡ್ಡದಾಗಿ ಹಣೆಯ ಮೇಲೆ ಬರೆಸಿಕೊಂಡಿದ್ದಾರೆ.


ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ಪಶ್ಚಾತ್ತಾಪ: 


ಮೆಸ್ಸಿ ಟ್ಯಾಟೂ ಹಾಕಿಸಿಕೊಂಡವರು ಕೊಲಂಬಿಯಾದ ಅಭಿಮಾನಿ ಮೈಕ್ ಜಾಂಬ್ಸ್ ಎಂಬುವವರು. ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ಫ್ರಾನ್ಸ್ ವಿರುದ್ಧ ಗೆದ್ದ ನಂತರ ತನ್ನ ಫುಟ್‌ಬಾಲ್ ಸ್ಟಾರ್ ಐಕಾನ್ ಹೆಸರನ್ನು ಹಣೆಯ ಮೇಲೆ ಬರೆಯಿಸಿಕೊಂಡಿದ್ದರು. ಆದ್ರೆ ಇದೀಗ ಅವರು "ನಾನು ಟ್ಯಾಟೂವನ್ನು ಹಾಕಿಸಿಕೊಂಡಿದ್ದಕ್ಕಾಗಿ ವಿಷಾದಿಸುತ್ತೇನೆ. ಏಕೆಂದರೆ ಇದು ನನಗೆ ವೈಯಕ್ತಿಕವಾಗಿ ಹಾಗೂ ನನ್ನ ಕುಟುಂಬಕ್ಕೆ ಧನಾತ್ಮಕವಾಗಿರಲಿಲ್ಲ. ಬದಲಾಗಿ ಅದು ನಕಾರಾತ್ಮಕ ಅಂಶಗಳಿಗೆ ಕಾರಣವಾಯಿತು" ಎಂದಿದ್ದಾರೆ.


ನಾನು ಇದನ್ನು ಇಷ್ಟು ಬೇಗ ಹೇಳುತ್ತೇನೆ ಎಂದು ಭಾವಿಸಿರಲಿಲ್ಲ. ಮೊದಲ ಕೆಲವು ದಿನಗಳಲ್ಲಿ ನಾನು ಏನು ಮಾಡಿದ್ದೇನೆ ಎಂಬುದರ ಬಗ್ಗೆ ತುಂಬಾ ಹೆಮ್ಮೆಪಡುತ್ತಿದ್ದೆ. ಆದರೆ ನಾನು ಅದನ್ನು ಮಾಡಬಾರದಿತ್ತು ಎಂದು ಈಗ ಅನಿಸುತ್ತಿದೆ ಎಂಬುದಾಗಿ ಅವರು ಹೇಳುತ್ತಾರೆ.


ಸಾಕಷ್ಟು ನೆಗೆಟಿವ್‌ ಕಾಮೆಂಟ್‌ಗಳು ಬಂದಿದ್ದವು:


ಅರ್ಜೆಂಟೀನಾ ವಿಶ್ವಕಪ್ ಗೆದ್ದ ತಕ್ಷಣ ಜಾಂಬ್ಸ್ ತನ್ನ ಟ್ಯಾಟೂದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ಸಾಕಷ್ಟು ಜನರು ನೆಗೆಟಿವ್‌ ಕಾಮೆಂಟ್‌ ಕೂಡ ಮಾಡಿದ್ದರು. ಆದ್ರೆ ಜಾಂಬ್ಸ್‌ ತಮ್ಮ ಟ್ಯಾಟೂವನ್ನು ಸಮರ್ಥಿಸಿಕೊಂಡಿದ್ದರು. "ನಾನು ಯಾರಿಗೂ ಹಾನಿ ಮಾಡುತ್ತಿಲ್ಲ, ನಾನು ಕಾನೂನುಬಾಹಿರವಾಗಿ ಏನನ್ನೂ ಮಾಡುತ್ತಿಲ್ಲ" ಎಂಬುದಾಗಿ ಅವರು ಹೇಳಿದ್ದರು.


ಇದನ್ನೂ ಓದಿ: Mandira Bedi: 50ರ ಹರೆಯದಲ್ಲಿ ಕ್ರಿಕೆಟಿಗರ ಹಿಂದೆಬಿದ್ದ ನಟಿ, 'ಎಕ್ಸ್ಟ್ರಾ ಇನ್ನಿಂಗ್ಸ್' ಆರಂಭಸ್ತಾರಾ ಮಂದಿರಾ ಬೇಡಿ?


ಇನ್ನು ವರದಿಯೊಂದರ ಪ್ರಕಾರ, ವಿಶ್ವಕಪ್ ಗೆಲುವಿನ ನಂತರ, ಅನೇಕ ಜನರು ಹೀಗೆ ತಮ್ಮ ಫೆವರಿಟ್‌ ಆಟಗಾರನ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ. ಅದರಲ್ಲೂ ಮೆಸ್ಸಿ ಟ್ಯಾಟೂ ಹಾಕಿಸಿಕೊಂಡವರೇ ಹೆಚ್ಚು ಎನ್ನಲಾಗಿದೆ. ಇನ್ನು ಅರ್ಜೆಂಟೀನಾದಲ್ಲಿ, ಫುಟ್‌ಬಾಲ್ ವಿಜಯ ಜನರಲ್ಲಿ ಉತ್ಸಾಹವನ್ನು ಉಂಟುಮಾಡುತ್ತದೆ. ಕತಾರ್‌ನಿಂದ ಹಿಂದಿರುಗಿದ ನಂತರ ರಾಷ್ಟ್ರೀಯ ತಂಡಕ್ಕೆ ವೀರರ ಸ್ವಾಗತವನ್ನು ನೀಡಲು ಲಕ್ಷಾಂತರ ಜನರು ಬೀದಿಗಿಳಿದಿದ್ದರು.


ಸಾಕಷ್ಟು ಜನರು ಅಂದೇ ಅರ್ಜೆಂಟೈನಾ ಗೆಲುವಿಗೆ ಕಾರಣರಾದ ಮೆಸ್ಸಿ ಟ್ಯಾಟೂ ಹಾಕಿಸಿಕೊಳ್ಳೋದಕ್ಕೆ ಟ್ಯಾಟೂ ಪಾರ್ಲರ್‌ಗಳಿಗೆ ಲಗ್ಗೆ ಇಟ್ಟಿದ್ದರು. ಟ್ಯಾಟೂ ಅನ್ನೋದು ಶಾಶ್ವತವಾಗಿ ಉಳಿಯುವಂಥದ್ದು. ಹಾಗಾಗಿ ಹಾಕಿಸಿಕೊಳ್ಳೋಕೂ ಮುನ್ನ ಎರಡು ಬಾರಿ ಯೋಚಿಸೋದು ಒಳ್ಳೆಯದು. ಕೊನೆಗೆ ಅದನ್ನು ಹಾಕಿಸಿಕೊಳ್ಳಬಾರತ್ತು ಅಂತ ಅನ್ನಿಸಬಾರದಲ್ಲ! ಇನ್ನು ಅದನ್ನು ರಿಮೂವ್‌ ಮಾಡಬಹುದಾದರೂ ಅದು ಅಷ್ಟು ಸುಲಭವಲ್ಲ. ಸಾಕಷ್ಟು ಜನರಿಗೆ ಇಂಥ ಅನುಭವಗಳಾಗಿವೆ.


ಒಟ್ಟಾರೆ, ಈ ಅಭಿಮಾನಿ ಕೈಮೇಲೋ ಕಾಲ ಮೇಲೋ ಟ್ಯಾಟೂ ಹಾಕಿಸಿಕೊಂಡಿದ್ದರೆ ಹೇಗೋ ನಡೆಯುತ್ತಿತ್ತೇನೋ ಆದ್ರೆ ಮುಖದ ಮೇಳೆ ಅದರಲ್ಲೂ ಹಣೆಯ ಮೇಲೆ ಹಾಕಿಸಿಕೊಂಡು, ಈಗ ಹಾಕಿಸಿಕೊಳ್ಳಬಾರದಿತ್ತು ಎಂದು ಕೊರಗುತ್ತಿದ್ದಾರೆ. ಹಾಕಿಸಿಕೊಳ್ಳೋಕೂ ಮುನ್ನ ಸ್ವಲ್ಪ ಯೋಚನೆ ಮಾಡಿದ್ದರೆ ಈಗ ಪಶ್ಚಾತ್ತಾಪ ಪಡುವುದೇ ಇರುತ್ತಿರಲಿಲ್ಲ.‌

Published by:shrikrishna bhat
First published: