ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಜನಪ್ರಿಯರಾಗಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಕತಾರ್ನಲ್ಲಿ (Qatar) ನಡೆಯುತ್ತಿರುವ ಫಿಫಾ ವಿಶ್ವಕಪ್ನಲ್ಲಿ (FifaWorld Cup) ಇದೇ ರೀತಿಯ ಸನ್ನಿವೇಶವನ್ನು ನೋಡಲಾಗಿದೆ. ಬ್ರೆಜಿಲ್ ಮತ್ತು ಸರ್ಬಿಯಾ ನಡುವೆ ನಡೆಯುತ್ತಿರುವ ಫುಟ್ಬಾಲ್ ಪಂದ್ಯದಲ್ಲಿ ಅಭಿಮಾನಿಯೊಬ್ಬ ಹಳದಿ ಜರ್ಸಿ ಧರಿಸಿ ಕ್ರೀಡಾಂಗಣಕ್ಕೆ ಕಾಣಿಸಿಕೊಂಡಿದ್ದಾನೆ. ಅದು ಯಾವುದೋ ಫುಟ್ಬಾಲ್ ದೇಶದ ಜೆರ್ಸಿಯಲ್ಲ. ಬದಲಿಗೆ ಕ್ರಿಕೆಟ್ನಲ್ಲಿ ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ಜೆರ್ಸಿಯನ್ನು ಧರಿಸಿ ಫಿಫಾ ವಿಶ್ವಕಪ್ ನೋಡಲು ವ್ಯಕ್ತಿ ತೆರಳಿದ್ದನು.
ಫಿಫಾ ವಿಶ್ವಕಪ್ನಲ್ಲೂ ಧೊನಿ ಹವಾ:
ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಟ್ವಿಟರ್ ಖಾತೆಯಿಂದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಹಳದಿ ಜರ್ಸಿ ಧರಿಸಿದ ಅಭಿಮಾನಿಯೊಬ್ಬ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದು. ಈ ಕ್ಷಣದ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಫ್ರಾಂಚೈಸ್, 'ನಾವು ಎಲ್ಲಿಗೆ ಹೋದರೂ ಅಲ್ಲೆಲ್ಲ ಹಳದಿ-ಹಳದಿ ಇರುತ್ತದೆ' ಎಂದು ಬರೆದಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಈ ವೇಳೆ ಅಭಿಮಾನಿಯ ಕೈಯಲ್ಲಿ ಪೋಸ್ಟರ್ ಕೂಡ ಕಾಣಿಸಿಕೊಂಡಿದೆ. ಅದರ ಮೇಲೆ 'ಯಾವಾಗಲೂ ಥಾಲ ಧೋನಿ' ಎಂದು ಬರೆಯಲಾಗಿತ್ತು. ಅಲ್ಲದೇ ಮೈದಾನದಲ್ಲಿ ಧೋನಿ 7 ನಂಬರ್ ಜೆರ್ಸಿಯನ್ನು ಹಿಡಿದ ಫೋಟೋ ಇದೀಗ ಸಾಮಾಜಿ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Everywhere we go, there’s always Yellove! 💛 https://t.co/xMRix13Ea1
— Chennai Super Kings (@ChennaiIPL) November 25, 2022
ಧೋನಿಗೆ ಬಿಸಿಸಿಐ ಹೊಸ ಜವಬ್ದಾರಿ?:
ಧೋನಿ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಆದಾಗ್ಯೂ, ಅವರು ಐಪಿಎಲ್ 2023 ರಲ್ಲಿ ಆಕ್ಷನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಭಾರತದ ಸೋಲಿನ ನಂತರ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಮೆಂಟರ್ ಆಗಬಹುದು ಎಂಬ ವರದಿಗಳಿವೆ. ಹೌದು, 2007ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು. ಇದಾದ ಬಳಿಕ ತಂಡಕ್ಕೆ ಇಲ್ಲಿಯವರೆಗೆ ಎರಡನೇ ಟಿ20 ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಧೋನಿ ಐಪಿಎಲ್ 2023ರ ನಂತರ ನಿವೃತ್ತರಾಗಬಹುದು ಎನ್ನಲಾಗಿದೆ. ಧೋನಿ ನಿವೃತ್ತಿಯ ನಂತರ ಬಿಸಿಸಿಐ ಅವರಿಗೆ ಮಹತ್ವದ ಹುದ್ದೆ ನೀಡಬಹುದು. ಅದರಲ್ಲಿಯೂ ಧೋನಿಗೆ ಬಿಸಿಸಿಐ ಟೀಂ ಇಂಡಿಯಾದ ಟಿ20 ಕ್ರಿಕೆಟ್ನ ಕೋಚ್ ಹುದ್ದೆಯನ್ನು ನೀಡುವ ಸಾಧ್ಯತೆ ಹೆಚ್ಚು ಕಾಣುತ್ತಿದೆ ಎಂಬ ಮಾತಿದೆ.
ಇದನ್ನೂ ಓದಿ: MS Dhoni: ಧೋನಿ ಮನೆಗೆ ಹೊಸ ಅತಿಥಿ ಆಗಮನ, ವೆಲ್ಕಮ್ ಮಾಡೋಕೆ ಬಂದ್ರು CSK ಪ್ಲೇಯರ್ಸ್
ಹೊಸ ಕಾರು ಖರೀದಿಸಿದ ಧೋನಿ:
ಧೋನಿ ಅವರು ಹೊಚ್ಚ ಹೊಸ ಕಿಯಾ ಇವಿ6 ಅನ್ನು ಖರೀದಿಸಿದ್ದಾರೆ. ಇದು ಅವರ ಕಾರು ಸಂಗ್ರಹಕ್ಕೆ ಸೇರ್ಪಡೆಯಾದ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. 2022 ರಲ್ಲಿ ಬಿಡುಗಡೆಯಾದ ಕಿಯಾ ಇವಿ6 ಅತ್ಯಂತ ದುಬಾರಿ ಮತ್ತು ಭಾರತದಲ್ಲಿನ ಕೊರಿಯನ್ ಕಾರು ತಯಾರಕರಿಂದ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. ಕಿಯಾ ಇವಿ6 ಅನ್ನು ತುಂಬಾನೇ ಸೀಮಿತ ಸಂಖ್ಯೆಯಲ್ಲಿ ಬಿಡುಗಡೆ ಮಾಡಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ