• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Viral Video: 8ರ ಪೋರ, ಬ್ಯಾಟ್ ಹಿಡಿದು ನಿಂತರೆ ಸರದಾರ! ಕನ್ನಡಿಗ ರಾಹುಲ್​ ಸ್ಥಾನಕ್ಕೇ ಕುತ್ತು ಎಂದ ನೆಟ್ಟಿಗರು!

Viral Video: 8ರ ಪೋರ, ಬ್ಯಾಟ್ ಹಿಡಿದು ನಿಂತರೆ ಸರದಾರ! ಕನ್ನಡಿಗ ರಾಹುಲ್​ ಸ್ಥಾನಕ್ಕೇ ಕುತ್ತು ಎಂದ ನೆಟ್ಟಿಗರು!

ಪ್ರಸ್ತುತ ಆ ಎಂಟರ ಪೋರ ಕ್ರಿಕೆಟ್ ಆಡುತ್ತಿರುವ ವಿಡಿಯೋ ಕ್ಲಿಪ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಸದ್ಯ ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಎನ್ನಬಹುದು.

ಪ್ರಸ್ತುತ ಆ ಎಂಟರ ಪೋರ ಕ್ರಿಕೆಟ್ ಆಡುತ್ತಿರುವ ವಿಡಿಯೋ ಕ್ಲಿಪ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಸದ್ಯ ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಎನ್ನಬಹುದು.

ಪ್ರಸ್ತುತ ಆ ಎಂಟರ ಪೋರ ಕ್ರಿಕೆಟ್ ಆಡುತ್ತಿರುವ ವಿಡಿಯೋ ಕ್ಲಿಪ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಸದ್ಯ ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಎನ್ನಬಹುದು.

  • Share this:

ಭಾರತ (India) ಎಂದರೆ ಸಾಕು ಎಲ್ಲರಿಗೂ ನೆನಪಾಗುವುದೇ ಎರಡು ಪ್ರಮುಖ ಚಟುವಟಿಕೆಗಳು. ಒಂದು ಚಿತ್ರರಂಗವಾದರೆ ಇನ್ನೊಂದು ಕ್ರೀಡೆ (Sports) ಅದರಲ್ಲೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಅದು ಕ್ರಿಕೆಟ್ (Cricket). ಕ್ರಿಕೆಟ್ ಕ್ರೀಡೆಯನ್ನು ಜಗತ್ತಿನಾದ್ಯಂತ ಕೆಲ ಪ್ರಮುಖ ರಾಷ್ಟ್ರಗಳು ಆಡುತ್ತವೆ. ಅವುಗಳಲ್ಲಿ ಭಾರತವೂ ಒಂದು. ಹಾಗೆ ನೋಡಿದರೆ ಕ್ರಿಕೆಟ್ ಭಾರತದಲ್ಲಿ ಉಗಮಗೊಂಡ ಕ್ರೀಡೆಯೇನಲ್ಲ. ಇದು ಇಂಗ್ಲೆಂಡ್ (Engalnd) ನಲ್ಲಿ ಹುಟ್ಟಿದ ಕ್ರೀಡೆ. ಆದರೆ ಈ ಕ್ರೀಡೆಗೆ ಭದ್ರವಾದ ಜೀವನ ಹಾಗೂ ನೆಲೆ ಸಿಕ್ಕಿದ್ದು ಮಾತ್ರ ಭಾರತದಲ್ಲಿ ಎಂದರೆ ತಪ್ಪಾಗಲಿಕ್ಕಿಲ್ಲ.ಹಾಗಾಗಿ ಭಾರತದಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಸಹ ಹುಡುಗರು, ಯುವಕರು ಕ್ರಿಕೆಟ್ ಆಟದಲ್ಲಿ ನಿರತರಾಗಿರುವುದನ್ನು ಸಾಮಾನ್ಯವಾಗಿ ಕಾಣಬಹುದು.


ಭಾರತದಲ್ಲಿ ಕ್ರಿಕೆಟ್​ ಅಂದ್ರೆ ಹೆಚ್ಚಿನ ಕ್ರೇಜ್!


ಅಂತೆಯೇ ಈ ಕ್ರೀಡೆಯಲ್ಲಿ ಹಲವು ಕ್ರೀಡಾಪಟುಗಳು ದಿಗ್ಗಜ ಸ್ಥಾನಕ್ಕೇರಿದ್ದಾರೆ. ಭಾರತದ ಯಾವುದೇ ಮೂಲೆಯಲ್ಲಾಗಲಿ ಜಗತ್ತಿನ ಪ್ರಮುಖ ಕ್ರಿಕೆಟ್ ಆಟಗಾರರನ್ನು ಆದರ್ಶಪ್ರಾಯವನ್ನಾಗಿರಿಸಿರುವ, ಅವರ ಹಾದಿಯಲ್ಲೇ ನಡೆಯಬಯಸುವ ಹಲವು ಪ್ರತಿಭೆಗಳನ್ನು ಕಾಣಬಹುದು. ಇನ್ನೊಂದು ವಿಶೇಷ ಎಂದರೆ ಈ ರೀತಿಯ ಪ್ರತಿಭೆಗಳಿಗೆ ವಯಸ್ಸಿನ ಯಾವ ಪರೀಧಿಯೂ ಇಲ್ಲ.


ಏನ್​ ಸಖತ್ತಾಗಿ ಕ್ರಿಕೆಟ್​ ಆಡ್ತಾನೆ ನೋಡಿ ಈ ಪುಟ್ಟ ಬಾಲಕ!


ಇಲ್ಲಿಯೂ ಸಹ ಅಂತಹುದ್ದೆ ಒಬ್ಬ ಬಾಲಕನ ಕಥೆಯನ್ನು ಕೇಳೋಣ. ಅಷ್ಟೆ ಅಲ್ಲ ಆ ಬಾಲಕ ನೆಟ್ ನಲ್ಲಿ ದೃಢವಾಗಿ ನಿಂತು ತನ್ನೆದುರಿಗೆ ಬರುತ್ತಿರುವ ಚೆಂಡುಗಳನ್ನು ಅದು ಯಾವ ರೀತಿ ಬಾರಿಸುತ್ತಿದ್ದಾನೆ ಎಂಬುದನ್ನು ನೋಡುವುದೇ ಅಚ್ಚರಿಪಡುವಂತಿದೆ. ಅಷ್ಟಕ್ಕೂ ಈ ಬಾಲಕ ಕೇವಲ ಎಂಟರ ಪ್ರಾಯದವನೆಂದರೆ ನೀವು ನಂಬಲೇಬೇಕು.


ಎಂಟರ ಪೋರನ ಆಟಕ್ಕೆ ಎಲ್ಲರೂ ಫಿದಾ!


ಪ್ರಸ್ತುತ ಆ ಎಂಟರ ಪೋರ ಕ್ರಿಕೆಟ್ ಆಡುತ್ತಿರುವ ವಿಡಿಯೋ ಕ್ಲಿಪ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಸದ್ಯ ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಎನ್ನಬಹುದು. ಕ್ರಿಕೆಟ್ ಅಭಿಮಾನಿಗಳಂತೂ ಆ ಚಿಕ್ಕ ಹುಡುಗನ ಪ್ರತಿಭೆಯನ್ನು ನೋಡಿ ಕೊಂಡಾಡುತ್ತಿದ್ದಾರೆ ಎನ್ನಬಹುದು.ಇದನ್ನೂ ಓದಿ: ಇವ್ರೇ ನೋಡಿ ಅತಿ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ ಹೊಂದಿದ ಅತ್ಯಂತ ಕಿರಿಯ ಕ್ರಿಕೆಟಿಗ!


ಎಂಟು ವರ್ಷದ ಈ ಬಾಲಕನನ್ನು ಆರವ್ ಎಂದು ಗುರುತಿಸಲಾಗಿದೆ. ಇಎಸ್‍ಪಿಎನ್ ಕ್ರಿಕ್ ಇನ್ಫೋ ಎಂಬ ಹ್ಯಾಂಡಲ್ ನಿಂದ ಈ ವಿಡಿಯೋ ವನ್ನು ಹಂಚಿಕೊಳ್ಳಲಾಗಿದ್ದು ಅದು ಆ ಕ್ಲಿಪ್ ಲಗತ್ತಿಸುತ್ತ "ಎಂಟು ವರ್ಷದ ಆರವ್ Bazball ಆಟದ ದೊಡ್ಡ ಅಭಿಮಾನಿ" ಎಂದು ಬರೆದುಕೊಂಡಿದ್ದು ಈ ಶಾರ್ಟ್ ಕ್ಲಿಪ್ ಅನ್ನು ಕಳುಹಿಸಿದ ಅನೀಲ್ ಬಾತ್ರಾ ಅವರ ಹೆಸರನ್ನೂ ಸಹ ನಮೂದಿಸಿದೆ.


ವಿಡಿಯೋ ನಿಧಾನವಾಗಿ ವೈರಲ್ ಆಗುತ್ತಿದ್ದು ಸದ್ಯ 93 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 576 ಲೈಕುಗಳನ್ನೂ ಹಾಗೂ 37 ರಿಟ್ವೀಟ್ ಗಳನ್ನು ಗಳಿಸಿದೆ. ಅಲ್ಲದೆ ಈ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರುತ್ತಲೂ ಇದೆ ಎಂದರೆ ತಪ್ಪಾಗದು. ಒಟ್ಟಿನಲ್ಲಿ ಇಂಟರ್ನೆಟ್ ಬಳಕೆದಾರರು ಈ ಚಿಕ್ಕ ಹುಡುಗನ ಬ್ಯಾಂಟಿಂಗ್ ಕೌಶಲ್ಯ ನೋಡಿ ಬೆರಗಾಗಿದ್ದಂತೂ ನಿಜ.


ವೈರಲ್ ಆದ ವಿಡಿಯೋದಲ್ಲೇನಿದೆ?


ಇನ್ನು ಈ ವಿಡಿಯೋ ಅನ್ನು ನೋಡಿದಾಗ ಆರವ್ ನೆಟ್ ಅಭ್ಯಾಸದಲ್ಲಿ ಬ್ಯಾಟಿಂಗ್ ನಲ್ಲಿ ನಿರತನಾಗಿರುವುದನ್ನು ಕಾಣಬಹುದು. ಅವನ ಮುಂದೆ ಬಂದೆರಗುತ್ತಿದ್ದ ಚೆಂಡುಗಳನ್ನು ಹಿಗ್ಗಾ ಮುಗ್ಗಾ ಆರ್ಥಡಾಕ್ಸ್ ಶೈಲಿಯಲ್ಲಿ ಬಾರಿಸುತ್ತಿರುವುದನ್ನು ಕಾಣಬಹುದು. ಶಾರ್ಟ್ ಆಗಿರಲಿ, ಫುಲ್ ಟಾಸ್ ಆಗಿರಲಿ ಇಲ್ಲವೆ ಉತ್ತಮ ಲೆಂಗ್ತ್ ಬಾಲ್ ಆಗಿರಲಿ ಪ್ರತಿಯೊಂದು ಬಾಲನ್ನೂ ಆರವ್ ಸಮರ್ಥವಾಗಿ ಎದುರಿಸಿ ಅದನ್ನು ಬೌಂಡರಿಗಟ್ಟುತ್ತಿರುವ ರೀತಿಯಲ್ಲಿ ಹೊಡೆಯುತ್ತಿರುವುದನ್ನು ಕಾಣಬಹುದು.


ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವನಿಗಿರುವ ಬ್ಯಾಟಿಂಗ್ ಕೌಶಲ್ಯ ನೋಡಿರುವ ಹಲವು ಕ್ರಿಕೆಟಿಗರು ಹಾಗೂ ಕ್ರೀಡಾಭಿಮಾನಿಗಳು ಆರವನಿಗೆ ಜೈಕಾರ ಹಾಕಿ ಕೊಂಡಾಡಿದ್ದಾರೆ.

Published by:ವಾಸುದೇವ್ ಎಂ
First published: