• Home
  • »
  • News
  • »
  • sports
  • »
  • Team India: ಕಿವೀಸ್​​ ಸರಣಿ ಬಳಿಕ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ, 8 ಆಟಗಾರರು ತಂಡದಿಂದ ಔಟ್!

Team India: ಕಿವೀಸ್​​ ಸರಣಿ ಬಳಿಕ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ, 8 ಆಟಗಾರರು ತಂಡದಿಂದ ಔಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Team India: ನ್ಯೂಜಿಲೆಂಡ್ ಪ್ರವಾಸದ ಬಳಿಕ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸಕ್ಕಾಗಿ ಭಾರತ ಏಕದಿನ ತಂಡದಲ್ಲಿ 8 ಹೊಸ ಆಟಗಾರರಿದ್ದಾರೆ.

  • Share this:

ಟೀಂ ಇಂಡಿಯಾ ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಭಾನುವಾರ (ನವೆಂಬರ್ 27) ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಆತಿಥೇಯ ಕಿವೀಸ್ 1-0 ಮುನ್ನಡೆ ಸಾಧಿಸಿದೆ. ನವೆಂಬರ್ 30 ರಂದು ಶಿಖರ್ ಧವನ್ (Shikhar Dhawan) ನೇತೃತ್ವದ ಭಾರತ ತಂಡ ಸರಣಿಯ ಕೊನೆಯ ಪಂದ್ಯವನ್ನು ಆಡಲಿದೆ. ಈ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸುವ ಗುರಿಯೊಂದಿಗೆ ಭಾರತ ತಂಡ (Team India) ಮೈದಾನಕ್ಕಿಳಿಯಲಿದೆ. ಒಂದು ವೇಳೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಸರಣಿಯು ಭಾರತ ತಂಡದಿಂದ ಕೈ ತಪ್ಪಲಿದೆ. ಆದರೆ ಈ ಪ್ರವಾಸದ ನಂತರ ಟೀಂ ಇಂಡಿಯಾದ ಕೆಲ ಆಟಗಾರರು ತಂಡದಿಂದ ಮತ್ತೆ ಹೊರಗುಳಿಯಲಿದ್ದಾರೆ.


ಡಿಸೆಂಬರ್​ನಲ್ಲಿ ಟೀಂ ಇಂಡಿಯಾ ಬಾಂಗ್ಲಾ ಪ್ರವಾಸ:


ಈ ಪ್ರವಾಸದ ನಂತರ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಲಿದೆ. ಅಲ್ಲಿ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಪ್ರವಾಸದ ವೇಳೆ ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ 8 ಆಟಗಾರರು ಬಾಂಗ್ಲಾದೇಶಕ್ಕೆ ಹೋಗುವುದಿಲ್ಲ. ಏಕೆಂದರೆ, ನಾಯಕ ರೋಹಿತ್ ಶರ್ಮಾ ಮತ್ತು ಹಿರಿಯ ಆಟಗಾರರು ಪುನರಾಗಮನ ಮಾಡುತ್ತಿರುವುದರಿಂದ ಅನೇಕರಿಗೆ ಈ ಪ್ರವಾಸ ಕೈ ತಪ್ಪಲಿದೆ.


ಬಾಂಗ್ಲಾ ಪ್ರವಾಸದಿಂದ 8 ಆಟಗಾರರು ಔಟ್​:


ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಈಗ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಇತರ ಆಟಗಾರರು ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ತೆರಳಿದ್ದ ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್ ಬಾಂಗ್ಲಾದೇಶ ಪ್ರವಾಸದ ತಂಡದಲ್ಲಿ ಸ್ಥಾನ ಪಡೆದಿಲ್ಲ.


ಇಬ್ಬರು ಯುವ ಕ್ರಿಕೆಟಿಗರಾದ ರಜತ್ ಪಾಟಿದಾರ್ ಮತ್ತು ರಾಹುಲ್ ತ್ರಿಪಾಠಿ ಬಾಂಗ್ಲಾದೇಶ ಪ್ರವಾಸಕ್ಕೆ ಅವಕಾಶ ಪಡೆದಿದ್ದಾರೆ. ಪ್ರಸ್ತುತ ಋತುವಿನಲ್ಲಿ ದೇಶೀಯ ಸ್ಪರ್ಧೆಯಲ್ಲಿ ಇಬ್ಬರೂ ಮಿಂಚಿದ್ದಾರೆ. ಇದರೊಂದಿಗೆ ರಿಷಭ್ ಪಂತ್ ಜೊತೆಗೆ ಇಶಾನ್ ಕಿಶನ್ ವಿಕೆಟ್ ಕೀಪರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇದನ್ನೂ ಓದಿ: Team India: ಬಿಸಿಸಿಐನಲ್ಲಿ ನಡಿತಿದ್ಯಾ ಪಾಲಿಟಿಕ್ಸ್? ಆಗ ಮನೋಜ್ ತಿವಾರಿ, ಈಗ ಸಂಜು ಸ್ಯಾಮ್ಸನ್​ಗೆ ಅನ್ಯಾಯ


ಕುಲದೀಪ್ ಸೇನ್ ಪಾದಾರ್ಪಣೆ:


ಈ ಪ್ರವಾಸದಿಂದ ವೇಗದ ಬೌಲರ್ ಕುಲದೀಪ್ ಸೇನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಬಹುದು. ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಸ್ಪಿನ್ನರ್‌ಗಳಾಗಿ ಅವಕಾಶ ಪಡೆಯಬಹುದು. ಏಕದಿನ ಸರಣಿಯ ಪಂದ್ಯಗಳು ಡಿಸೆಂಬರ್ 4, 7 ಮತ್ತು 10ರಂದು ನಡೆಯಲಿವೆ. ಇದಾದ ಬಳಿಕ ಉಭಯ ತಂಡಗಳು 2 ಟೆಸ್ಟ್ ಪಂದ್ಯಗಳನ್ನು ಆಡಲಿವೆ. ಇದರಿಂದ ಆಟಗಾರರ ಪ್ರದರ್ಶನವನ್ನೂ ಪರಿಶೀಲಿಸಲಾಗುವುದು.


ಬಾಂಗ್ಲಾದೇಶ ಪ್ರವಾಸಕ್ಕಾಗಿ ಭಾರತ ಏಕದಿನ ತಂಡ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ರಿಷಬ್ ಪಂತ್, ಇಶಾನ್ ಕಿಶನ್ (ಇಬ್ಬರೂ ವಿಕೆಟ್ ಕೀಪರ್‌ಗಳು), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಸೇನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.

Published by:shrikrishna bhat
First published: