• Home
  • »
  • News
  • »
  • sports
  • »
  • Jayanti Kale: ವಯಸ್ಸು 77; ಈಜಿನಲ್ಲಿ 3 ಚಿನ್ನ, 2 ಬೆಳ್ಳಿ ಗೆದ್ದ ಮ್ಯಾಜಿಕ್ ಅಜ್ಜಿ

Jayanti Kale: ವಯಸ್ಸು 77; ಈಜಿನಲ್ಲಿ 3 ಚಿನ್ನ, 2 ಬೆಳ್ಳಿ ಗೆದ್ದ ಮ್ಯಾಜಿಕ್ ಅಜ್ಜಿ

ಜಯಂತಿ ಕಾಳೆ

ಜಯಂತಿ ಕಾಳೆ

Jayanti Kale: ನಾಸಿಕ್‌ನ 77 ವರ್ಷದ ಅಜ್ಜಿಯೊಬ್ಬರು ದೃಢಸಂಕಲ್ಪ ಮತ್ತು ಛಲವಿದ್ದರೆ ವಯಸ್ಸು ಅಡ್ಡಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈಜಿನಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ಐವತ್ತು ದಾಟಿದ ನಂತರ ಅನೇಕರು ನಿವೃತ್ತಿಯ ನಿರೀಕ್ಷೆಯಲ್ಲಿರುತ್ತಾರೆ. ವಯಸ್ಸಾಯಿತು ಈಗ ಏನೂ ಮಾಡಲು ಸಾಧ್ಯವಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಏನನ್ನಾದರೂ ಮಾಡಬೇಕೆಂಬ ದೃಢಸಂಕಲ್ಪ ಮತ್ತು ಇಚ್ಛಾಶಕ್ತಿ ಇದ್ದರೆ ವಯಸ್ಸು ಅದಕ್ಕೆ ಅಡ್ಡಿಯಾಗುವುದಿಲ್ಲ ಎಂದು ನಾಸಿಕ್ ನ (Nashik ) ಈ ಅಜ್ಜಿ ತೋರಿಸಿಕೊಟ್ಟಿದ್ದಾರೆ. ಹೌದು, ರಾಜ್ಯಮಟ್ಟದ ಈಜು (Swimming) ಸ್ಪರ್ಧೆಯಲ್ಲಿ 3 ಚಿನ್ನ (Gold) ಹಾಗೂ 2 ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ 77 ವರ್ಷದ ಅಜ್ಜಿ. ಅವರ ಪಯಣ ಯುವಜನತೆಗೆ (Youth) ಸ್ಫೂರ್ತಿದಾಯಕವೂ ಆಗಿದ್ದು, ಇದೀಗ ಅವರ ಬಗ್ಗೆ ದೇಶಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.


ಮನೆಯಲ್ಲಿ ಹೇಳದೆ ಗುಟ್ಟಾಗಿ ಈಜು ಕಲಿತ ಜಯಂತಿ:


ನಾಸಿಕ್ ನ ಈ ಅಜ್ಜಿಯ ಹೆಸರು ಜಯಂತಿ ಕಾಳೆ. ಎರಡನೇ ತರಗತಿಯಲ್ಲಿದ್ದಾಗ ಈಜುವುದರಲ್ಲಿ ಆಸಕ್ತಿ ಮೂಡಿತು. ಅವರು ಬಾವಿ, ನದಿಗಳಲ್ಲಿ ಸುಲಭವಾಗಿ ಈಜುತ್ತಾರೆ. ಅದರಿಂದ ಈಜಿನಲ್ಲಿ ಆಸಕ್ತಿ ಬೆಳೆಸಿಕೊಂಡರು. ಜಯಂತಿ ಅವರ ತಂದೆ ಸರ್ಕಾರಿ ನೌಕರರಾಗಿದ್ದರಿಂದ ನಿರಂತರವಾಗಿ ವರ್ಗಾವಣೆಯಾಗುತ್ತಿದ್ದರೂ ಎಲ್ಲೇ ವರ್ಗಾವಣೆಯಾದರೂ ತಮ್ಮ ಅಭ್ಯಾಸ ಮುಂದುವರಿಸಿದ್ದರು. ನಂತರ ಜಯಂತಿ ಚಿಕ್ಕವಳಿದ್ದ ಕಾರಣ ಆ ಕಾಲದಲ್ಲಿ ಈಜಲು ಸಾಕಷ್ಟು ತೊಂದರೆಗಳು ಎದುರಾಗಿದ್ದವು. ಆದರೆ ಮನೆಯಲ್ಲಿ ಯಾರಿಗೂ ಹೇಳದೆ ಗುಟ್ಟಾಗಿ ನದಿಯಲ್ಲಿ ಈಜುತ್ತಿದ್ದರಂತೆ.


ಮನೆಯಲ್ಲಿ ಅನೇಕ ನಿರ್ಬಂಧಗಳಿದ್ದವು, ಆದರೆ ಅವರ ಈಜು ನಿಲ್ಲಲಿಲ್ಲ. ಹೀಗಾಗಿ ಮದುವೆಯ ನಂತರವಾದರೂ ಈಜನ್ನು ನಿಲ್ಲಿಸಬಹುದೆಂಬ ನಂಬಿಕೆಯಿಂದ ಮನೆಯವರು ಅವರ ಮದುವೆಯನ್ನು ಏರ್ಪಡಿಸಿದರು. ಮದುವೆಯಾದ ನಂತರ ಅತ್ತೆಯೊಂದಿಗೆ ಹೊಲಕ್ಕೆ ಕೆಲಸಕ್ಕೆ ಹೋಗಿದ್ದಳು. ಆದರೆ ಜಮೀನಿನಲ್ಲಿ ಇದ್ದ ಬಾವಿಯಲ್ಲಿಯೇ ಜಯಂತಿ ಅವರು ಈಜನ್ನು ಮುಂದುವರೆಸಿದರು.


ಇದನ್ನೂ ಓದಿ: T20 World Cup 2022: ಈ ಬಾರಿ ವಿಶ್ವಕಪ್​ನಲ್ಲಿ ಉಡೀಸ್​ ಆಗಲಿವೆ ಈ ದಾಖಲೆಗಳು, ವಿಶೇಷ ರೆಕಾರ್ಡ್​ ಮೇಲೆ ಕೊಹ್ಲಿ ಕಣ್ಣು


ಅಂತಾರಾಷ್ಟ್ರೀಯ ಪದಕದ ಗುರಿ:


ಜಯಂತಿ ನಾಸಿಕ್ ನಗರದ ಈಜುಕೊಳದಲ್ಲಿ ಈಜು ಕಲಿಯಲು ಆರಂಭಿಸಿದರು. ಆ ವೇಳೆ ಈಜು ತರಬೇತುದಾರ ಹರಿ ಸೋನಕಾಂಬಳೆ ಅವರ ಪರಿಚಯವಾಯಿತು. ಸೋನಕಾಂಬಳೆ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದರು. ಶೀಘ್ರದಲ್ಲೇ ಇದು ಪರಿಣಾಮ ಬೀರಿತು. ವಿವಿಧೆಡೆ ಪದಕಗಳನ್ನು ಗೆದ್ದು ಬಂದರು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 3 ಚಿನ್ನ ಹಾಗೂ 2 ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ.


77ರ ಹರೆಯದಲ್ಲೂ ಸಮರ್ಪಣಾ ಭಾವದಿಂದ ಅಭ್ಯಾಸ ನಡೆಸುವ ಜಯಂತಿ ಕಾಳೆ ಇತರ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ. ಈ ವಯಸ್ಸಿನಲ್ಲೂ, ಅವರು ತರಬೇತುದಾರರು ಹೇಳಿದ್ದನ್ನು ಸುಲಭವಾಗಿ ತಿಳಿದುಕೊಳ್ಳುತ್ತಾರೆ. ಚಿನ್ನದ ಪದಕ ಗೆದ್ದಿರುವುದಕ್ಕೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಅವರು ಇನ್ನೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ನಂಬಿಕೆ ನಮಗಿದೆ. ಇತರ ಯುವಕರು ಕೂಡ ಅವರಿಂದ ಸ್ಫೂರ್ತಿ ಪಡೆಯಬೇಕು ಎಂದು ಈಜು ತರಬೇತುದಾರ ಹರಿ ಸೋನಕಾಂಬಳೆ ಸಹ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ನಲ್ಲಿ ಬಿಗ್​ ಟ್ವಿಸ್ಟ್, ಭಾರತ-ಪಾಕ್​ ಪಂದ್ಯ ನಡೆಯುವುದು ಡೌಟ್​?


ವಿಶೇಷ ಗುರಿ ಹೊಂದಿರುವ ಅಜ್ಜಿ:


ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಜಯಂತಿ ಕಾಳೆ ಈಗ ಅಂತಾರಾಷ್ಟ್ರೀಯ ಮಟ್ಟದ ಸಮುದ್ರ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸೆ ಹೊಂದಿದ್ದಾರೆ. ಆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆಯುವುದು ಅವರ ಗುರಿ ಆಗಿದೆಯಂತೆ. ಈ ಗುರಿಯನ್ನು ಖಂಡಿತ ಸಾಧಿಸುತ್ತೇವೆ ಎಂಬ ನಂಬಿಕೆಯನ್ನು ಜಯಂತಿ ವ್ಯಕ್ತಪಡಿಸಿದ್ದಾರೆ. ಜಯಂತಿ ಕಾಳೆ ಅವರ ಈ ಅದ್ಭುತ ಸಾಧನೆ ಈಗಿನ ಅನೇಖ ಯುವ ಪ್ರತಿಭೆಗಳಿಗೆ ಸ್ಪೂರ್ತಿದಾಯಕವಾಗಿದೆ.

Published by:shrikrishna bhat
First published: