(VIDEO): 15 ಎಸೆತಗಳಲ್ಲಿ ಕೇವಲ 4 ರನ್​​ಗೆ 6 ವಿಕೆಟ್ ಕಳೆದುಕೊಂಡ ಶ್ರೀಲಂಕಾ

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ತಂಡ ಟೆಸ್ಟ್​ ಪಂದ್ಯವನ್ನ ಆಡುತ್ತಿದೆ. ಎರಡನೇ ಟೆಸ್ಟ್​​ನಲ್ಲಿ ಟ್ರೆಂಟ್ ಬೌಲ್ಟ್ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉರುಳಿದ ಸಿಂಹಳೀಯರು 104 ರನ್​ಗೆ ಆಲೌಟ್ ಆಗಿದ್ದಾರೆ.

Vinay Bhat | news18
Updated:December 27, 2018, 3:01 PM IST
(VIDEO): 15 ಎಸೆತಗಳಲ್ಲಿ ಕೇವಲ 4 ರನ್​​ಗೆ 6 ವಿಕೆಟ್ ಕಳೆದುಕೊಂಡ ಶ್ರೀಲಂಕಾ
ಶ್ರೀಲಂಕಾದ 6 ವಿಕೆಟ್ ಕಿತ್ತ ಟ್ರೆಂಟ್ ಬೌಲ್ಟ್​
Vinay Bhat | news18
Updated: December 27, 2018, 3:01 PM IST
ಶ್ರೀಲಂಕಾ ಕ್ರಿಕೆಟ್ ತಂಡ ಇತ್ತೀಚೆಗೆ ಕಳಪೆ ಪ್ರದರ್ಶನದಿಂದಲೆ ಸುದ್ದಿಯಲ್ಲಿದೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಲಂಕಾನ್ನರು 15 ಎಸೆತಗಳಲ್ಲಿ ಕೇವಲ 4 ರನ್​ಗಳಿಸಿ ತನ್ನ 6 ವಿಕೆಟ್ ಕಳೆದುಕೊಂಡಿದೆ.

ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ತಂಡ ಟೆಸ್ಟ್​ ಪಂದ್ಯವನ್ನ ಆಡುತ್ತಿದೆ. ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದ್ದು, ಎರಡನೇ ಟೆಸ್ಟ್​​ನಲ್ಲಿ ಟ್ರೆಂಟ್ ಬೌಲ್ಟ್ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉರುಳಿದ ಸಿಂಹಳೀಯರು 104 ರನ್​ಗೆ ಆಲೌಟ್ ಆಗಿದ್ದಾರೆ.

ಇದನ್ನೂ ಓದಿ: 'ನೀನು ಸಿಕ್ಸ್​ ಸಿಡಿಸಿದರೆ ನನ್ನ ಬೆಂಬಲ ಮುಂಬೈ ತಂಡಕ್ಕೆ': ರೋಹಿತ್​ರನ್ನು ಕೆಣಕಿದ ಆಸೀಸ್ ನಾಯಕ

ಅದರಲ್ಲು 100 ರನ್ ಆಗುವಾಗ 6ನೇ ವಿಕೆಟ್ ಕಳೆದುಕೊಂಡ ಶ್ರೀಲಂಕಾ 104 ರನ್​ಗೆ ಸರ್ವಪತನ ಕಂಡಿದೆ. ಲಂಕಾದ ವಿಕೆಟ್ ಕೀಪರ್ ನಿರೋಶನ್ 4 ರನ್​ಗೆ 6ನೇ ಬ್ಯಾಟ್ಸ್​ಮನ್​ ಆಗಿ ನಿರ್ಗಮಿಸಿದರೆ, ಬಳಿಕ ಬಂದ ದಿಲ್ರುವನ್ ಪೆರೆರಾ, ಸುರಂಗ ಲಕ್ಮಲ್, ದುಶ್ಮಂತ ಚಮೀರಾ ಸೊನ್ನೆ ಸುತ್ತಿ ಬೌಲ್ಟ್ ಬಾಲ್​ನಲ್ಲಿ ಎಲ್​ಬಿ ಬಲೆಗೆ ಬಲಿಯಾದರು. ಈ ಮೂಲಕ ಶ್ರೀಲಂಕಾ ತಂಡ ಬರಬರುತ್ತಾ ತನ್ನ ಕೆಟ್ಟ ಪ್ರದರ್ಶನವನ್ನು ಮುಂದುವರಿಸುತ್ತಲೆ ಇದೆ. ಟ್ರೆಂಟ್ ಬೌಲ್ಟ್​ ಲಂಕಾನ್ನರ 6 ವಿಕೆಟ್ ಕಿತ್ತು ಮಿಂಚಿದರು.

 



ಎರಡನೇ ಟೆಸ್ಟ್​ನಲ್ಲಿ ಮೊದಲ ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 178 ರನ್​ಗೆ ಆಲೌಟ್ ಆಗಿತ್ತು. ಬಳಿಕ ಶ್ರೀಲಂಕಾವನ್ನು 104 ರನ್​ಗೆ ಆಲೌಟ್ ಮಾಡಿ  ಎರಡನೇ ಇನ್ನಿಂಗ್ಸ್​ನಲ್ಲಿ ಕಿವೀಸ್ 2ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿದೆ. ಅಂತೆಯೆ 305 ರನ್​ಗಳ ಮುನ್ನಡೆಯಲ್ಲಿದೆ.

First published:December 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...