Pay and Play: ಇನ್ಮುಂದೆ ಸ್ಟೇಡಿಯಂಗಳಲ್ಲಿ ಆಡಲು ಬೀಳುತ್ತೆ ಚಾರ್ಜ್! ಏನಿದೆ ಹೊಸ ನಿಯಮ?

ಕೆಲವು ಕ್ರೀಡಾಂಗಣಗಳ ನಿರ್ವಹಣೆ ಮತ್ತು ಉನ್ನತೀಕರಣಕ್ಕಾಗಿ ಹಣವನ್ನು ಕ್ರೋಢೀಕರಿಸುವುದು ದೊಡ್ಡ ಸವಾಲಾಗಿ ಪರಿಣಮಿಸುವುದರಿಂದ ಕರ್ನಾಟಕ ರಾಜ್ಯ ಸರ್ಕಾರವು ಕ್ರೀಡಾ ಉತ್ಸಾಹಿಗಳಿಂದ ಬಳಕೆದಾರರ ಶುಲ್ಕವನ್ನು ಸಂಗ್ರಹಿಸುವುದನ್ನು ಕಡ್ಡಾಯಗೊಳಿಸುವ 'ಪೇ ಅಂಡ್ ಪ್ಲೇ' ವ್ಯವಸ್ಥೆಯನ್ನು ಪರಿಚಯಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನೀವು ಬೆಂಗಳೂರು (Bengaluru) ಮತ್ತು ಹೈದರಾಬಾದ್ ಅಂತಹ ಮಹಾನಗರಗಳಲ್ಲಿ ನೋಡಿರಬಹುದು, ಅಲ್ಲೇ ರಸ್ತೆಯ ಬದಿಗಳಲ್ಲಿ ಒಂದು ಚಿಕ್ಕದಾಗಿ ಸ್ಪೋರ್ಟ್ಸ್ ಕ್ಲಬ್ (Sports Club) ಹಾಗೆ ಮಾಡಿಕೊಂಡು ಅಲ್ಲಿ ಚಿಕ್ಕದಾಗಿರುವ ಹುಲ್ಲು ಹಾಸಿನ ಮೈದಾನವನ್ನು ಮಾಡಿರುತ್ತಾರೆ. ಅಲ್ಲಿ ಈ ಫುಟ್ಬಾಲ್ ಆಡಲು ಅಥವಾ ಕ್ರಿಕೆಟ್ ಆಡಲು ಜನರಿಗೆ ಒಂದು ಗಂಟೆಗೆ ಇಷ್ಟು ರೂಪಾಯಿ ಹಣ (Money) ಅಂತ ಹಣ ನಿಗದಿಪಡಿಸಿ ಅಲ್ಲಿ ಆಟವಾಡಬಹುದು (Play) ಅಂತ ಬೋರ್ಡ್ ನೇತಾಕಿರುವುದನ್ನು ನೀವು ನೋಡಿರುತ್ತೀರಿ. ಅವರು ಹಣ ಪಾವತಿಸಿದ ಸಮಯಕ್ಕಿಂತ ಸ್ವಲ್ಪ ಜಾಸ್ತಿ ಅಲ್ಲಿ ನಿಂತರೂ ಸಹ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಾರೆ ಆ ಖಾಸಗಿ ಕ್ಲಬ್ ನವರು.

ಈಗೇಕೆ ಇದರ ಬಗ್ಗೆ ನಾವು ಹೇಳುತ್ತಿದ್ದೇವೆ ಅಂತ ನಿಮಗೆ ಸ್ವಲ್ಪ ಗೊಂದಲ ಅನ್ನಿಸಬಹುದು, ಆದರೆ ವಿಷಯ ಇದೆ. ಆದರೆ ಈ ನಗರಗಳಲ್ಲಿರುವ ಸ್ಟೇಡಿಯಂಗಳಲ್ಲಿ ನೀವು ಬೆಳಿಗ್ಗೆ ಹೋಗಿ ಸಂಜೆವರೆಗೂ ಆಡಿದರೂ ಅಲ್ಲಿ ನಿಮಗೆ ಯಾರೂ ಏನು ಕೇಳುವುದಿಲ್ಲ. ಆದರೆ ಇನ್ಮುಂದೆ ಇಲ್ಲಿಯೂ ಸಹ ನೀವು ಉಚಿತವಾಗಿ ಆಟವಾಡಲು ಸಾಧ್ಯವಿಲ್ಲ ಅಂತ ಹೇಳಿದರೆ ನೀವು ಒಂದು ಕ್ಷಣ ಶಾಕ್ ಆಗಬಹುದು.

'ಪೇ ಅಂಡ್ ಪ್ಲೇ' ವ್ಯವಸ್ಥೆಯನ್ನು ಪರಿಚಯಿಸಿದ ರಾಜ್ಯ ಸರ್ಕಾರ
ಹೌದು.. ಕೆಲವು ಕ್ರೀಡಾಂಗಣಗಳ ನಿರ್ವಹಣೆ ಮತ್ತು ಉನ್ನತೀಕರಣಕ್ಕಾಗಿ ಹಣವನ್ನು ಕ್ರೋಢೀಕರಿಸುವುದು ದೊಡ್ಡ ಸವಾಲಾಗಿ ಪರಿಣಮಿಸುವುದರಿಂದ ಕರ್ನಾಟಕ ರಾಜ್ಯ ಸರ್ಕಾರವು ಕ್ರೀಡಾ ಉತ್ಸಾಹಿಗಳಿಂದ ಬಳಕೆದಾರರ ಶುಲ್ಕವನ್ನು ಸಂಗ್ರಹಿಸುವುದನ್ನು ಕಡ್ಡಾಯಗೊಳಿಸುವ 'ಪೇ ಅಂಡ್ ಪ್ಲೇ' ವ್ಯವಸ್ಥೆಯನ್ನು ಪರಿಚಯಿಸಿದೆ.

ಪ್ರತಿಯೊಬ್ಬರೂ ಗುಣಮಟ್ಟದ ಕ್ರೀಡಾ ಮೂಲಸೌಕರ್ಯಕ್ಕೆ ಪ್ರವೇಶವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು 'ಪೇ ಅಂಡ್ ಪ್ಲೇ' ವ್ಯವಸ್ಥೆಯ ಹಿಂದಿನ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ.

ಯಾವುದೇ ಕ್ರೀಡಾಪಟು, ನಾಗರಿಕ ಅಥವಾ ಉದಯೋನ್ಮುಖ ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ವ್ಯಯಿಸುವ ಪ್ರತಿ ಗಂಟೆಗೆ ಪ್ರತಿದಿನ ಬಳಕೆದಾರರ ಶುಲ್ಕವನ್ನು ಪಾವತಿಸಬಹುದು ಎಂದು ಸರ್ಕಾರ ಹೇಳಿದೆ. ಕ್ರೀಡೆಯನ್ನು ಅವಲಂಬಿಸಿ ಈ ಬಳಕೆದಾರರ ಶುಲ್ಕವು ಪ್ರತಿ ಗಂಟೆಗೆ 5 ರಿಂದ 100 ರೂಪಾಯಿವರೆಗೆ ಬದಲಾಗುತ್ತದೆ.

ಈ ಕ್ರಮವು ಕ್ರೀಡಾ ಉತ್ಸಾಹಿಗಳನ್ನು ನಿರುತ್ಸಾಹಗೊಳಿಸುತ್ತದೆ: ಪ್ರತಿಪಕ್ಷಗಳು
ಸರ್ಕಾರದ ಈ ಹೊಸ ಕ್ರಮವು ವಿವಾದವೊಂದನ್ನು ಹುಟ್ಟು ಹಾಕಿದ್ದು, ಇದು ಜನರಲ್ಲಿ ಕ್ರೀಡೆಯ ಬಗ್ಗೆ ಇರುವಂತಹ ಅಸಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಪ್ರತಿಪಕ್ಷಗಳು ಹೇಳಿವೆ.

ಇದನ್ನೂ ಓದಿ: IND vs AUS: ಟೀಂ ಇಂಡಿಯಾ ಸೋಲಿಗೆ ಗೇಲಿ ಮಾಡಿದ ಪಾಕಿಸ್ತಾನಿ ನಟಿ, ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಟ್ರೋಲ್

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರು ಇದರ ಬಗ್ಗೆ ಮಾತನಾಡಿ "ಬಜೆಟ್ ಭಾಷಣದಲ್ಲಿ ಸಿಎಂ ಘೋಷಿಸಿದ ಘೋಷಣೆಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉತ್ತಮ ಸೌಲಭ್ಯಗಳೊಂದಿಗೆ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸುವುದನ್ನು ಗಮನದಲ್ಲಿಟ್ಟುಕೊಂಡು ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಈ ಕ್ರೀಡಾಂಗಣಗಳಲ್ಲಿ ತರಬೇತಿ ನೀಡಲು ಕ್ರೀಡಾಪಟುಗಳಿಂದ ಶುಲ್ಕವನ್ನು ಸಂಗ್ರಹಿಸುವ ಖಾಸಗಿ ಸಂಸ್ಥೆಗಳಿಗೆ ಶುಲ್ಕವನ್ನು ವಿಧಿಸಲಾಗುತ್ತದೆ" ಎಂದು ಅವರು ಹೇಳಿದರು.

ಬಳಕೆದಾರರು ಮಾಸಿಕ ಮತ್ತು ವಾರ್ಷಿಕ ಪಾಸ್ ಗಳನ್ನು ಸಹ ಪಡೆಯಬಹುದು
ಬಳಕೆದಾರರು ದೈನಂದಿನ ಆಧಾರದ ಮೇಲೆ ಶುಲ್ಕವನ್ನು ಪಾವತಿಸಬಹುದು ಅಥವಾ ಮಾಸಿಕ ಅಥವಾ ವಾರ್ಷಿಕ ಪಾಸ್ ಗಳನ್ನು ಪಡೆಯಬಹುದು. ಇದಲ್ಲದೆ, 16 ವರ್ಷದೊಳಗಿನ ಕ್ರೀಡಾಪಟುಗಳು, 60 ವರ್ಷಕ್ಕಿಂತ ಮೇಲ್ಪಟ್ಟವರು, ಸರ್ಕಾರಿ ನೌಕರರು ಮತ್ತು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಸರ್ಕಾರ ಶೇಕಡಾ 50 ರಷ್ಟು ರಿಯಾಯಿತಿ ಸಹ ನೀಡಿದೆ.

ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ಲಭ್ಯವಿರುವ ತರಬೇತುದಾರರು ಮತ್ತು ಕ್ರೀಡಾ ಸಲಕರಣೆಗಳನ್ನು ಬಳಸಲು ಬಯಸಿದರೆ ಇಲಾಖೆ ಪ್ರತ್ಯೇಕ ಶುಲ್ಕಗಳನ್ನು ಜಾರಿಗೊಳಿಸಿದೆ. "ಯಾರಾದರೂ ಪಂದ್ಯಾವಳಿಗಳನ್ನು ನಡೆಸಲು ಬಯಸಿದರೆ, ಅವರು ವಲಯ ಮಟ್ಟದ ಕ್ರೀಡಾ ಕೂಟದಿಂದ ರಾಷ್ಟ್ರಮಟ್ಟದವರೆಗೆ 1,000 ರೂಪಾಯಿಗಳಿಂದ 1,00,000 ರೂಪಾಯಿಗಳವರೆಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ" ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Yuvaraj Singh: ಯುವರಾಜ್​ ಸಿಂಗ್​ ಮನೆಯಲ್ಲಿ ಸ್ಟೇ ಮಾಡ್ಬೇಕಾ? ಹೀಗ್​ ಮಾಡಿ 2 ದಿನ ಅಲ್ಲೇ ಇದ್ದು ಮಸ್ತ್​ ಮಜಾ ಮಾಡಿ!

ಕ್ರೀಡಾ ವಸತಿ ನಿಲಯಗಳ ವಿದ್ಯಾರ್ಥಿಗಳು, ಫೆಡರೇಷನ್ ಗಳಲ್ಲಿ ಕೆಲಸ ಮಾಡುವ ತರಬೇತುದಾರರು ಮತ್ತು ಬಡ ಕುಟುಂಬ ಮಕ್ಕಳಿಗೆ ಬಳಕೆದಾರರ ಶುಲ್ಕ ಪಾವತಿಸುವುದರಿಂದ ಇಲಾಖೆ ವಿನಾಯಿತಿ ನೀಡಿದೆ. ಜಿಲ್ಲಾ ಮತ್ತು ತಾಲ್ಲೂಕು ಕ್ರೀಡಾಂಗಣ ಸಮಿತಿಗಳು ಬಳಕೆದಾರರ ಶುಲ್ಕವನ್ನು ನಿರ್ಧರಿಸಬಹುದು ಮತ್ತು ಪರಿಷ್ಕರಿಸಬಹುದು ಎಂದು ಸಚಿವರು ಹೇಳಿದರು.
Published by:Ashwini Prabhu
First published: