ಮೊದಲ ಏಕದಿನ: ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದು ಈ 5 ಅಂಶ

4 ರನ್​ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆಸರೆಯಾಗಿದ್ದು ಎಂ ಎಸ್ ಧೋನಿ ಹಾಗೂ ರೋಹಿತ್ ಶರ್ಮಾ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಆದರೆ, ಧೋನಿ ಅವರ ಆಮೆಗತಿಯ ಆಟಕ್ಕೆ ಟೀಂ ಇಂಡಿಯಾ ಮತ್ತೊಮ್ಮೆ ಬಲಿಯಾಯಿತು ಎನ್ನಬಹುದು.

Vinay Bhat | news18
Updated:January 13, 2019, 1:21 PM IST
ಮೊದಲ ಏಕದಿನ: ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದು ಈ 5 ಅಂಶ
ಎಂ ಎಸ್ ಧೋನಿ
  • News18
  • Last Updated: January 13, 2019, 1:21 PM IST
  • Share this:
ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಿರುವ ಏಕದಿನ ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲೆ ಸೋಲುಂಡಿದೆ. 289 ರನ್​ಗಳ ಸವಾಲಿನ ಮೊತ್ತ ಬೆನ್ನತ್ತಿದ ಕೊಹ್ಲಿ ಪಡೆ 9 ವಿಕೆಟ್ ಕಳೆದುಕೊಂಡು 254 ರನ್ ಗಳಿಸಲಷ್ಟೇ ಶಕ್ತವಾಯಿತು. ಹಾಗಾದ್ರೆ ಟೀಂ ಇಂಡಿಯಾ ಸೋಲಿಗೆ ಏನು ಕಾರಣ ಎಂಬುದನ್ನು ನೋಡುವುದಾದರೆ…

ಹ್ಯಾಂಡ್ಸ್​ಕಾಂಬ್​​​ ಬ್ಯಾಟಿಂಗ್ ಅಬ್ಬರ

ಆಸ್ಟ್ರೇಲಿಯಾ ಪರ ಪೀಟರ್ ಹ್ಯಾಂಡ್ಸ್​ಕಾಂಬ್ 73 ರನ್ ಬಾರಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇವರು ಭಾರತೀಯ ಬೌಲರ್​ಗಳ ಬೆವರಿಳಿಸಿದರು. ಅದರಲ್ಲು ಕೊನೆ ಕ್ಷಣದಲ್ಲಿ ಅಬ್ಬರಿಸಿದ ಹ್ಯಾಂಡ್ಸ್​ಕಾಂಬ್​ ತಂಡದ ಮೊತ್ತ 288 ಆಗಲು ಪ್ರಮುಖ ಪಾತ್ರ ವಹಿಸಿದರು. ಹ್ಯಾಂಡ್ಸ್​​ಕಾಂಬ್​​ರನ್ನು ಕಟ್ಟಿಹಾಕಲು ವಿಫಲವಾಗಿದ್ದು ಟೀಂ ಇಂಡಿಯಾ ಸೋಲಿಗೆ ಮುಖ್ಯ ಕಾರಣವಾಯಿತು.

ಡೆತ್ ಓವರ್​ನಲ್ಲಿ ರನ್​ಗಳ ಸುರಿಮಳೆ

ಬೌಲಿಂಗ್​ನಲ್ಲಿ ಉತ್ತಮ ಆರಂಭ ಪಡೆದುಕೊಂಡ ಟೀಂ ಇಂಡಿಯಾ ಅದೇ ಗತಿಯನ್ನು ಕೊನೆಯ ವರೆಗೆ ಕಾಪಾಡುವಲ್ಲಿ ಯಶಸ್ವಿಯಾಗಿಲ್ಲ. 40 ಓವರ್​ಗೆ 4 ವಿಕೆಟ್ ಕಳೆದುಕೊಂಡು 195 ರನ್ ಕಲೆಹಾಕಿದ್ದ ಆಸ್ಟ್ರೇಲಿಯಾ 50 ಓವರ್​ ಆಗುವ ಹೊತ್ತಿಗೆ 5 ವಿಕೆಟ್ ಕಳೆದುಕೊಂಡು 288 ರನ್ ಚಚ್ಚಿದರು. ಕೊನೆಯ 10 ಓವರ್​ನಲ್ಲಿ ಭಾರತೀಯ ಬೌಲರ್​ಗಳು 93 ರನ್ ನೀಡಿದರು. ಅದರಲ್ಲು ಕೊನೆಯ 50ನೇ ಓವರ್​ನಲ್ಲಿ ಭುವನೇಶ್ವರ್ ಕುಮಾರ್ 18 ರನ್ ನೀಡಿದ್ದು ಮತ್ತಷ್ಟು ದುಬಾರಿಯಾಯಿತು.

ಕೈಕೊಟ್ಟ ನಂಬಿಕಸ್ತ ಬ್ಯಾಟ್ಸ್​ಮನ್​ಗಳು

289 ರನ್​​ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಕೇವಲ 4 ರನ್ ಆಗುವ ಹೊತ್ತಿಗೆ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದೆ ಸೋಲಿಗೆ ಕಾರಣ. ಮೊದಲ ಓವರ್​ನಲ್ಲೆ ಶಿಖರ್ ಧವನ್ ಪೆವಿಲಿಯನ್ ಹಾದಿ ಹಿಡಿದರೆ, ಇದರ ಬೆನ್ನಲ್ಲೆ ವಿರಾಟ್ ಕೊಹ್ಲಿ ಹಾಗೂ ಅಂಬಟಿ ರಾಯುಡು ಕೂಡ ಔಟ್ ಆಗಿದ್ದು ಭಾರತವನ್ನು ಸೋಲಿಗೆ ಸುಳಿಗೆ ಸಿಲುಕುವಂತೆ ಮಾಡಿತು. ಮಧ್ಯಮ ಕ್ರಮಾಂಕದ ನಂಬಿಕಸ್ತ ಬ್ಯಾಟ್ಸ್​ಮನ್​ಗಳು ಕೈಕೊಟ್ಟು ಆಸೀಸ್ ಜಯಕ್ಕೆ ಕಾರಣರಾದರು.
Loading...

ಇದನ್ನೂ ಓದಿ: ರಾಹುಲ್-ಪಾಂಡ್ಯ ಬದಲು ಇಬ್ಬರು ಯುವ ಆಟಗಾರರು ಟೀಂ ಇಂಡಿಯಾ ಸೇರ್ಪಡೆ

ಬೆಹನ್​​​​ಡ್ರಾಫ್​​-ರಿಚರ್ಡಸನ್​​ ದಾಳಿ

ಭಾರತ ಸೋಲಿಗೆ ಆಸ್ಟ್ರೇಲಿಯಾ ಬೌಲರ್​​​ಗಳು ನೇರ ಕಾರಣ. ಅದರಲ್ಲು ಬೆಹನ್​​​​ಡ್ರಾಫ್ ಹಾಗೂ ರಿಚರ್ಡಸನ್ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​ಮನ್​​ಗಳನ್ನು ಪೆವಿಲಿಯನ್​ಗೆ ಅಟ್ಟಿದರು. ಇವರಿಬ್ಬರು ಎಸೆದ ಬೆಂಕಿಯ ಚೆಂಡಿಗೆ ಭಾರತೀಯ ಬ್ಯಾಟ್ಸ್​ಮನ್​ಗಳು ತರಗಲೆಯಂತೆ ಉರುಳಿದರು. ರಿಚರ್ಡಸನ್ 10 ಓವರ್​ಗೆ ಕೇವಲ 26 ರನ್ ನೀಡಿ 4 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಧೋನಿ ಆಮೆಗತಿಯ ಬ್ಯಾಟಿಂಗ್

4 ರನ್​ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆಸರೆಯಾಗಿದ್ದು ಎಂ ಎಸ್ ಧೋನಿ ಹಾಗೂ ರೋಹಿತ್ ಶರ್ಮಾ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಆದರೆ, ಧೋನಿ ಅವರ ಆಮೆಗತಿಯ ಆಟಕ್ಕೆ ಟೀಂ ಇಂಡಿಯಾ ಮತ್ತೊಮ್ಮೆ ಬಲಿಯಾಯಿತು ಎನ್ನಬಹುದು. 96 ಎಸೆತಗಳನ್ನು ಎದುರಿಸಿದ ಧೋನಿ ಬ್ಯಾಟ್​ನಿಂದ ಬಂದಿದ್ದ 51 ರನ್​ಗಳಷ್ಟೆ. ಈ ಪೈಕಿ ಮೊದಲ 6 ರನ್​​ಕಲೆಹಾಕಲು ಧೋನಿ ತೆಗೆದುಕೊಂಡಿದ್ದು ಬರೋಬ್ಬರಿ 37 ಎಸೆತಗಳನ್ನು. ಹೀಗಾಗಿ ಧೋನಿ ಅವರ ನಿಧಾನಗತಿಯ ಆಟ ತಂಡದ ಸೋಲಿಗೂ ಕಾರಣವಾಗಿದೆ.

First published:January 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...