2018ರಲ್ಲಿ ದೇಶಕ್ಕೆ ಟೀಂ ಇಂಡಿಯಾ ನೀಡಿದ ಮರೆಯಲಾಗದ ಉಡುಗೊರೆ ಏನು ಗೊತ್ತಾ?

ರಾಹುಲ್ ದ್ರಾವಿಡ್ ಮಾರ್ಗದರ್ಶನ ಹಾಗೂ ಪೃಥ್ವಿ ಶಾ ನಾಯಕತ್ವದಲ್ಲಿ ಮುನ್ನೆಡೆದ ಭಾರತದ ಅಂಡರ್​ 19 ಕ್ರಿಕೆಟ್ ತಂಡ ಈ ವರ್ಷ ಅದ್ಭುತವಾಗಿ ಪ್ರದರ್ಶನ ಕೊಟ್ಟಿತು. 4ನೇ ಬಾರಿಗೆ ದೇಶವನ್ನ ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿತು.

Vinay Bhat | news18
Updated:December 28, 2018, 3:54 PM IST
2018ರಲ್ಲಿ ದೇಶಕ್ಕೆ ಟೀಂ ಇಂಡಿಯಾ ನೀಡಿದ ಮರೆಯಲಾಗದ ಉಡುಗೊರೆ ಏನು ಗೊತ್ತಾ?
Pic: Twitter (Edited)
  • News18
  • Last Updated: December 28, 2018, 3:54 PM IST
  • Share this:
'2018' ಭಾರತ ಕ್ರಿಕೆಟ್ ತಂಡಕ್ಕೆ ಎಂದು ಮರೆಯಲಾಗದ ವರ್ಷ. ಆಟಗಾರರು ಹಾಗೂ ತಂಡಗಳು ಇವರ ಜೊತೆಗೆ ದೇಶೀಯ ಕ್ರಿಕೆಟಿಗರು ಕೂಡ ಈ ವರ್ಷ ಕ್ರಿಕೆಟ್​ನಲ್ಲಿ ಮಿಂಚು ಹರಿಸಿದರು. ಹಾಗಾದ್ರೆ 2018 ವರ್ಷದಲ್ಲಿ ಭಾರತೀಯ ಕ್ರಿಕೆಟ್​ನಲ್ಲಿ ನಡೆದ 5 ಅದ್ಭುತ ಕ್ಷಣಗಳನ್ನು ನೋಡುವುದಾದರೆ…

5. ಭರ್ಜರಿ ಕಮ್​ಬ್ಯಾಕ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್​ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಎರಡು ವರ್ಷ ನಿಷೇಧಕ್ಕೆ ಒಳಪಟ್ಟ ಚೆನ್ನೈ ಸೂಪರ್ ಕಿಂಗ್ಸ್​ ತಂಡ 2018ರಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಧೋನಿ ನಾಯಕತ್ವದಲ್ಲಿ ಅದ್ಭುತ ಆಟವಾಡಿದ ಸಿಎಸ್​​ಕೆ ಒಟ್ಟು 5 ಬಾರಿ ಪ್ರಶಸ್ತಿಗೆ ಮತ್ತಿಕ್ಕಿದ ಸಾಧನೆ ಮಾಡಿತು. ಲೀಗ್ ಸ್ಟೇಜ್​ನಿಂದ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಿಯಾಗಿ ಫೈನಲ್​ಗೇರಿ ಸನ್​ರೈಸರ್ಸ್​ ವಿರುದ್ಧ 8 ವಿಕೆಟ್​ಗಳ ಜಯ ದಾಖಲಿಸಿತು.

ಇದನ್ನೂ ಓದಿ: (VIDEO): ಬುಮ್ರಾ ಯಾರ್ಕರ್ ದಾಳಿಗೆ ಆಸೀಸ್ ಉಡೀಸ್: 39 ವರ್ಷಗಳ ದಾಖಲೆ ನೆಲಸಮ

ಶೇನ್ ವಾಟ್ಸನ್ ಟೂರ್ನಿಯುದ್ದಕ್ಕು ಅದ್ಭುತ ಪ್ರದರ್ಶನ ತೋರಿದ್ದರು. ಜೊತೆಗೆ ಫೈನಲ್ ಪಂದ್ಯದಲ್ಲು ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತೆಯೆ ಅಂಬಟಿ ರಾಯುಡು ಚೆನ್ನೈ ತಂಡದ ಪರ ಗರಿಷ್ಠ ರನ್ ಗಳಿಸಿದ ಆಟಗಾರನಾದರೆ, ಶಾರ್ದೂಲ್ ಠಾಕೂರ್ ಅತ್ಯಧಿಕ ವಿಕೆಟ್ ಕಬಳಿಸಿ ಮಿಂಚಿದರು.4. ಏಷ್ಯಾ ಕಪ್​ನಲ್ಲಿ ಭಾರತ ಚಾಂಪಿಯನ್ಈ ಬಾರಿ ದುಬೈನಲ್ಲಿ ನಡೆದ ಏಷ್ಯಾ ಕಪ್​​ ಟೂರ್ನಿಯಲ್ಲಿ ಭಾರತ ಒಟ್ಟು 7 ಬಾರಿ ಏಷ್ಯಾ ಕಪ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು. ಬಾಂಗ್ಲಾದೇಶ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಭಾರತ 3 ವಿಕೆಟ್​ಗಳ ಗೆಲುವು ಸಾಧಿಸಿತು. ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಖಾಯಂ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ರೋಹಿತ್ ಶರ್ಮಾಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಅಲ್ಲದೆ ಏಷ್ಯಾ ಕಪ್​ನಲ್ಲಿ ಧೋನಿ ಮತ್ತೆ ನಾಯಕನಾಗಿ 300 ಪಂದ್ಯಗಳನ್ನು ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು.

3. 4ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಭಾರತದ ಕಿರಿಯರುರಾಹುಲ್ ದ್ರಾವಿಡ್ ಮಾರ್ಗದರ್ಶನ ಹಾಗೂ ಪೃಥ್ವಿ ಶಾ ನಾಯಕತ್ವದಲ್ಲಿ ಮುನ್ನೆಡೆದ ಭಾರತದ ಅಂಡರ್​ 19 ಕ್ರಿಕೆಟ್ ತಂಡ ಈ ವರ್ಷ ಅದ್ಭುತವಾಗಿ ಪ್ರದರ್ಶನ ಕೊಟ್ಟಿತು. 4ನೇ ಬಾರಿಗೆ ದೇಶವನ್ನ ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿತು. ನ್ಯೂಜಿಲೆಂಡ್​​ನಲ್ಲಿ ಭಾರತದ ತಿರಂಗವನ್ನು ಹಾರಿಸಿ ದೇಶಕ್ಕೆ ವಿಶ್ವಕಪ್ ಹೊತ್ತು ತಂದರು.

ಟೂರ್ನಿಯುದ್ದಕ್ಕು ಉತ್ತಮ ಪ್ರದರ್ಶನ ತೋರಿದ ಶುಭ್ಮನ್ ಗಿಲ್ 5 ಪಂದ್ಯಗಳಲ್ಲಿ 2 ಶತಕದ ಜೊತೆ 351 ರನ್ ಗಳಿಸಿದರು. ಇವರ ಜೊತೆ ಪೃಥ್ವಿ ಶಾ, ಮನೋಜ್ ಕಲ್ರಾ, ಶಿವಂ ಮಾವಿ, ಅಭಿಶೇಕ್ ಶರ್ಮಾ, ಕಮಲೇಶ್ ನಗರ್​ಕೋಟಿ ಮತ್ತು ಅನುಕುಲ್ ರಾಯ್ ಕೂಡ ಮಿಂಚಿದ್ದರು.

ಇದನ್ನೂ ಓದಿ: ಕ್ರೀಡಾ ಲೋಕದಲ್ಲಿ ಈ ವರ್ಷ ಭಾರತದ ಸಾಧನೆ ಏನು?

2. 10 ವರ್ಷಗಳ ನಂತರ ಆಸ್ಟ್ರೇಲಿಯಾದಲ್ಲಿ ಟೆಸ್ಟ್​ ಜಯಆಸ್ಟ್ರೇಲಿಯಾ ಪ್ರವಾಸ ಬೆಳೆಸಿರುವ ಭಾರತ ತಂಡ ಅಡಿಲೇಡ್​​ನ ಓವೆಲ್​ನಲ್ಲಿ ಮೊದಲ ಟೆಸ್ಟ್​ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಭಾರತ 31 ರನ್​ಗಳ ಜಯದೊಂದಿಗೆ 10 ವರ್ಷಗಳ ನಂತರ ಆಸೀಸ್ ನೆಲದಲ್ಲಿ ಗೆಲುವು ಕಂಡ ಸಾಧನೆ ಮಾಡಿತು.

ಈ ಟೆಸ್ಟ್​​ನಲ್ಲಿ ಟೆಸ್ಟ್​​ ಸ್ಪೆಷಲಿಸ್ಟ್​​ ಚೇತೇಶ್ವರ್ ಪೂಜಾರ ಮೊದಲ ಇನ್ನಿಂಗ್ಸ್​​ನಲ್ಲಿ 123 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ 70 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಬ್ಯಾಟಿಂಗ್ ಜೊತೆ ಟೀಂ ಇಂಡಿಯಾ ಬೌಲರ್​ಗಳು ಅದ್ಭುತ ಪ್ರದರ್ಶನ ತೋರಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

1. ದಿನೇಶ್ ಕಾರ್ತಿಕ್ ಅಜೇಯ 29ಕೇವಲ 8 ಎಸೆತಗಳಲ್ಲಿ 29 ರನ್ ಚಚ್ಚಿ ದಿನೇಶ್ ಕಾರ್ತಿಕ್ ಅವರು ನಿದಾಸ್ ಟ್ರೋಫಿ ಫೈನಲ್​ನಲ್ಲಿ ಭಾರತ ಗೆಲ್ಲುವಂತೆ ಮಾಡಿದರು.

ತೀವ್ರ ರೋಚಕತೆಯಿಂದ ಕೂಡಿದ್ದ ಫೈನಲ್​​ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಭಾರತಕ್ಕೆ ಕೊನೆಯ ಎಸೆತದಲ್ಲಿ ಗೆಲ್ಲಲು 5 ರನ್​ಗಳ ಅವಶ್ಯಕತೆಯಿತ್ತು. ಈ ಸಂದರ್ಭ ಕ್ರೀಸ್​ನಲ್ಲಿದ್ದ ದಿನೇಶ್ ಕಾರ್ತಿಕ್ ಊಹಿಸಲಾಗದಂತೆ ಸಿಕ್ಸ್​​ ಸಿಡಿಸಿ ಭಾರತಕ್ಕೆ ಗೆಲುವು ತಂದು ಕೊಟ್ಟರು.

First published:December 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ