IPL 2022: ಎಂದಿಗೂ ಮುರಿಯಲಾಗದಂತಹ 5 ಐಪಿಎಲ್ ದಾಖಲೆಗಳಿವು, ಯಾವ್ ರೆಕಾರ್ಡ್ಸ್​ಗಳು ಅಂತಿರಾ..!

ದಾಖಲೆ ಎಂಬುದು ನಿರ್ದಿಷ್ಟಕ್ಕೆ ಸೀಮಿತವಾದುದಲ್ಲ, ಅದು ಯಾವ ವಿಷಯಗಳಲ್ಲೂ ಆಗಬಹುದು. ಅದರಂತೆ ಕ್ರೀಡೆಯಲ್ಲೂ (Sports), ವಿಶೇಷವಾಗಿ ಐಪಿಎಲ್ (IPL) ಕ್ರಿಕೆಟ್‌ನಲ್ಲೂ (Cricket) ಆಗಬಹುದು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ದಾಖಲೆ ಎಂಬ ಪದದ ಮೂಲ ತಾತ್ಪರ್ಯವೇ ಪ್ರೇರಣೆ ಎಂಬುದಾಗಿದೆ ಅಂತ ಹೇಳಬಹುದು. ಏಕೆಂದರೆ, ಯಾವುದಾದರೂ ಒಂದು ದಾಖಲೆ ಸಂಭವಿಸಿದಾಗ, ಹಲವರಲ್ಲಿ ಅದನ್ನು ಮೀರಿಸುವಂತಹ ಮತ್ತೊಂದು ದಾಖಲೆ ಮಾಡಬೇಕೆಂಬ ಹುಮ್ಮಸ್ಸು ಮನದಲ್ಲಿ ಮೂಡುತ್ತದೆ. ಅಲ್ಲದೆ, 'ದಾಖಲೆಗಳು (Records) ಇರುವುದೇ ಮುರಿಯಲು' ಎಂಬ ವಾಕ್ಯವೂ ಸಾಕಷ್ಟು ಜನಪ್ರಿಯತೆ ಹೊಂದಿದೆ. ವಾಸ್ತವದಲ್ಲಿ ದಾಖಲೆಗಳು ಮುರಿಯುವಿಕೆ ಒಂದು ಉತ್ತಮ ಬೆಳವಣಿಗೆ ಎಂದು ಹೇಳಬಹುದು. ಆದರೆ, ಒಮ್ಮೊಮ್ಮೆ ಕೆಲ ದಾಖಲೆಗಳು ಹೇಗೆ ದಾಖಲಾಗುತ್ತವೆ ಎಂದರೆ ಬಹುಶಃ ಅವುಗಳನ್ನು ಮುರಿಯುವುದು ಅಸಾಧ್ಯ ಎಂಬಂತಾಗುತ್ತದೆ. ದಾಖಲೆ ಎಂಬುದು ನಿರ್ದಿಷ್ಟಕ್ಕೆ ಸೀಮಿತವಾದುದಲ್ಲ, ಅದು ಯಾವ ವಿಷಯಗಳಲ್ಲೂ ಆಗಬಹುದು. ಅದರಂತೆ ಕ್ರೀಡೆಯಲ್ಲೂ (Sports), ವಿಶೇಷವಾಗಿ ಐಪಿಎಲ್ (IPL) ಕ್ರಿಕೆಟ್‌ನಲ್ಲೂ (Cricket) ಆಗಬಹುದು.

ಈಗಾಗಲೇ ಐಪಿಎಲ್ ಆವೃತ್ತಿ ಆರಂಭವಾಗಿ 14 ವರ್ಷಗಳು ಕಳೆದಿವೆ. ಈ ಸಮಯದಲ್ಲಿ ಅದೆಷ್ಟೋ ದಾಖಲೆಗಳು ನಿರ್ಮಾಣವಾಗಿ ಮುರಿಯಲ್ಪಟ್ಟಿವೆ ಕೂಡ. ಆದರೆ, ಕೆಲವು ದಾಖಲೆಗಳು ಹೇಗಿವೆ ಎಂದರೆ ಅವುಗಳನ್ನು ಮುರಿಯುವುದು ಬಹುಶಃ ಅಸಾಧ್ಯ ಎಂದೇ ಹೇಳಬಹುದಾಗಿದೆ. ಹಾಗಾದರೆ ಆ ದಾಖಲೆಗಳು ಯಾವುವು ಎಂಬ ಕುತೂಹಲವಿದೆಯೇ? ಬನ್ನಿ ತಿಳಿಯೋಣ.

ಐಪಿಎಲ್​ನ ವಿಶೇಷ ದಾಖಲೆಗಳಿವು:

1. ಒಂದೇ ಋತುವಿನಲ್ಲಿ ನಾಲ್ಕು ಶತಕಗಳು:

ಇಂದು ಜಗತ್ತಿನ ಶ್ರೇಷ್ಠ ಕ್ರಿಕೆಟ್ ಆಟಗಾರರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ನಿಸ್ಸಂದೇಹವಾಗಿ ಒಬ್ಬ ಅದ್ಭುತ ಆಟಗಾರ. ತಮ್ಮ ಹೆಸರಿನಲ್ಲಿ ಅವರು ಈಗಾಗಲೇ ಹಲವು ದಾಖಲೆಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಕೆಲವು ದಾಖಲೆಗಳು ಹೇಗಿವೆ ಎಂದರೆ ಬಹುಶಃ ಅದನ್ನು ಯಾರಿಂದಲೂ ಮುರಿಯಲಾಗದು. ಅವರು ಐಪಿಎಲ್ ಆವೃತ್ತಿಯ ಒಂದೇ ಋತುವಿನಲ್ಲಿ ದಾಖಲಿಸಿರುವ ನಾಲ್ಕು ಶತಕಗಳು ಇಂದಿನವರೆಗೂ ಯಾರಿಂದಲೂ ಮುರಿಯಲಾಗದ ದಾಖಲೆಯಾಗಿದೆ ಹಾಗೂ ಇದನ್ನು ಮುರಿಯುವುದು ಬಹಳ ಕಷ್ಟ ಎಂದೇ ಹೇಳಲಾಗುತ್ತದೆ.

ಇದನ್ನೂ ಓದಿ: IPL ನಿಂದ ರಾತ್ರೋ ರಾತ್ರಿ ವೈರಲ್ ಆದ Mystery Girls ಇವರು!

2016 ರಲ್ಲಿ ಕೊಹ್ಲಿ ಅವರು 16 ಪಂದ್ಯಗಳಿಂದ 973 ರನ್ ಗಳಿಸಿದ್ದರು. ಇದರ ಸರಾಸರಿ ಪರಿಗಣಿಸಿದರೆ ಪ್ರತಿ ಪಂದ್ಯದಲ್ಲಿ ಅವರು 81.08 ರನ್ ಮಾಡಿದಂತೆ. ಜೊತೆಗೆ ಅವರ ಸ್ಟ್ರೈಕ್ ರೇಟ್ 152.03 ಆಗಿತ್ತೆಂಬುದು ಇನ್ನೊಂದು ವಿಶೇಷ. ಈ ದಾಖಲೆ ಇಂದಿಗೂ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಸೀಸನ್ ಎಂದೇ ಅವರ ಪಾಲಿಗೆ ಸಂಬಂಧಿಸಿದಂತೆ ಹೇಳಲಾಗುತ್ತದೆ.

2. ಕ್ರಿಸ್ ಗೇಲ್ ಅವರ ಅಜೇಯ 175:

ಕ್ರಿಸ್ ಗೇಲ್ ಟಿ20 ಪಂದ್ಯಗಳ ಅತ್ಯುತ್ತಮ ಬ್ಯಾಟರ್‌ಗಳ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಪಂದ್ಯಗಳಲ್ಲಿ ಈ ದೈತ್ಯ ಆಟಗಾರ ಪ್ರಚಂಡ ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಲ್ಲದೆ, ರನ್‌ಗಳ ಸುರಿಮಳೆ ಹರಿಸಿದ್ದಾರೆ. 2013 ರಲ್ಲಿ ಅವರು ಆರ್‌ಸಿಬಿ ಪರ ಬ್ಯಾಟ್ ಮಾಡುತ್ತ ಅಂದು ಅಸ್ತಿತ್ವದಲ್ಲಿದ್ದ ಪುಣೆ ವಾರಿಯರ್ಸ್ ತಂಡದ ವಿರುದ್ಧ ಅಜೇಯ 175 ರನ್ ಬಾರಿಸಿದ್ದು, ಇಂದಿಗೂ ಐಪಿಎಲ್ ಇತಿಹಾಸದ ಶ್ರೇಷ್ಠ ವೈಯಕ್ತಿಕ ಪ್ರದರ್ಶನವಾಗಿ ನಿಂತಿದೆ.

ತಮ್ಮ ಇನ್ನಿಂಗ್ಸ್‌ನಲ್ಲಿ ಅವರು ಬರೋಬ್ಬರಿ 13 ಬೌಂಡರಿ ಹಾಗೂ 17 ಸಿಕ್ಸರ್‌ಗಳನ್ನು ಬಾರಿಸಿದ್ದು ಈವರೆಗೂ ಆ ದಾಖಲೆ ಯಾರಿಂದಲೂ ಮುರಿಯಲಾಗಿಲ್ಲ. ಈ ಮೂಲಕ ಆರ್‌ಸಿಬಿ ದಾಖಲೆಯ 263 ರನ್ ಬಾರಿಸಿದ್ದು ಅದು ಕೂಡ ಒಂದು ಮುರಿಯಲಾಗದ ದಾಖಲೆಯಾಗಿಯೇ ಉಳಿದುಕೊಂಡಿದೆ.

3. ಒಂದೇ ಓವರ್‌ನಲ್ಲಿ 37 ರನ್:

ಇದು ತಾಂತ್ರಿಕವಾಗಿ ಅಸಾಧ್ಯವಾದದ್ದಾದರೂ ವಾಸ್ತವ ನೆಲೆಗಟ್ಟಿನಲ್ಲಿ ಇಷ್ಟು ರನ್ ಹೊಡೆದಿರುವುದು ಐಪಿಎಲ್ ಇತಿಹಾಸದಲ್ಲೇ ಒಂದು ದಾಖಲೆ. ಈ ದಾಖಲೆಯ ಹಿಂದೆಯೂ ಸಹ ಕ್ರಿಸ್ ಗೇಲ್ ಅವರಿದ್ದಾರೆ. ಸಾಮಾನ್ಯವಾಗಿ ಒಂದು ಓವರ್‌ನಲ್ಲಿ ಆರು ಎಸೆತಗಳಿರುತ್ತವೆ ಹಾಗೂ ಆ ಆರು ಎಸೆತಗಳಿಗೆ ಗರಿಷ್ಠ ಮೊತ್ತ ಪೇರಿಸಿದರೆ ಅಂದರೆ ಸಿಕ್ಸ್ ಹೊಡೆದರೆ 36 ರನ್‌ಗಳು ಬರಬಹುದು. ಆದರೆ, 2011 ರಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ಪರ ಆಟವಾಡುತ್ತಿದ್ದ ಕ್ರಿಸ್ ಗೇಲ್ ಕೇರಳದ ಕೊಚ್ಚಿ ಟಸ್ಕರ್ಸ್ ವಿರುದ್ಧ ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿಗಳನ್ನ ಬಾರಿಸಿದ್ದರು. ಅರೇ ಇದೇನಪ್ಪಾ ಒಂದು ಎಕ್ಸ್ಟ್ರಾ ಎಸೆತ ಅನ್ನಬೇಡಿ. ಏಕೆಂದರೆ ಈ ದಾಖಲೆ ನಿರ್ಮಾಣವಾಗಲು ಅಂದು ಬೌಲಿಂಗ್ ಮಾಡಿದ್ದ ಪ್ರಶಾಂತ್ ಪರಮೇಶ್ವರನ್ ಅವರ ಪಾತ್ರವೂ ಇದೆ. ಏಕೆಂದರೆ ಅವರು ಒಂದು ನೋ ಬಾಲ್ ಎಸೆದಿದ್ದರು.

4. ಕೊಹ್ಲಿ ಮತ್ತು ಎಬಿಡಿ ಮಧ್ಯದ 229 ರನ್‍ಗಳ ಜೊತೆಯಾಟ:

ದಕ್ಷಿಣ ಆಫ್ರಿಕಾ ತಂಡದ ದಿಗ್ಗಜ ಕ್ರಿಕೆಟ್ ಆಟಗಾರನಾದ ಎ ಬಿ ಡೆವಿಲಿಯರ್ಸ್ ಬಗ್ಗೆ ಯಾವ ಕ್ರಿಕೆಟ್ ಪ್ರೇಮಿಗೆ ತಾನೇ ಗೊತ್ತಿರದು ಹೇಳಿ. ಹೌದು, ಅವರೊಬ್ಬ ಉತ್ಕೃಷ್ಟ ಕ್ರಿಕೆಟ್ ಆಟಗಾರ ಹಾಗೂ ಅವರು ಹೇಗೆ ಪಂದ್ಯವನ್ನು ಏಕಾಂಗಿಯಾಗಿ ಮುನ್ನಡೆಸಿ ಜಯ ತಂದುಕೊಡಬಲ್ಲರು ಎಂಬುದನ್ನು ಹಲವು ಬಾರಿ ನಿರೂಪಿಸಿದ್ದಾರೆ.

ಇದನ್ನೂ ಓದಿ: MS Dhoni: ಧೋನಿ ನಾಯಕತ್ವದಿಂದ ಕೆಳಗಿಳಿಯಲು ಇದೇ ಕಾರಣ, ಇನ್ಮುಂದೆ CSK ಮೆಂಟರ್​ ಆಗಿರ್ತಾರೆ ಮಾಹಿ!

2016 ರಲ್ಲಿ ಆರ್‌ಸಿಬಿ ಅಂದು ಗುಜರಾತ್ ಲಯನ್ಸ್ ತಂಡದ ವಿರುದ್ಧ ಆಡುವಾಗ ಈ ಅದ್ಭುತ ದಾಖಲೆ ಮಾಡಿ ತೋರಿಸಿದೆ. ನಾಲ್ಕು ಓವರ್ ಮುಗಿದ ನಂತರ 19 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಆರ್‌ಸಿಬಿ ಪರದಾಡುತ್ತಿತ್ತು. ತದನಂತರ ಕ್ರಿಕೆಟ್ ಜಗತ್ತಿನ ಇಬ್ಬರು ದಿಗ್ಗಜರು ಒಂದೆಡೆ ಸೇರಿದಾಗ ಮುಂದೆ ನಡೆದದ್ದು ಇತಿಹಾಸದ ದಾಖಲೆ. ಹೌದು, ವಿರಾಟ್ ಹಾಗೂ ಎಬಿಡಿ 229 ರನ್ ಗಳ ಜೊತೆಯಾಟ ಆಡಿದರು. ಈ ಪಂದ್ಯದಲ್ಲಿ ಕೊಹ್ಲಿ 109 ರನ್‌ ಹೊಡೆದರೆ, ಎಬಿಡಿ ಅವರು ಕೇವಲ 52 ಚೆಂಡುಗಳನ್ನು ಎದುರಿಸಿ ಔಟಾಗದೆ 129 ರನ್​ಗಳನ್ನು ಪೇರಿಸಿದ್ದರು.

5. ಅತ್ಯುತ್ತಮ ಬೌಲಿಂಗ್, 6/12:

ಈ ದಾಖಲೆಯನ್ನು ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಅಲ್ಜಾರಿ ಜೊಸೆಫ್ ಅವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅವರು ತಮ್ಮ ಬೌಲಿಂಗ್ ಸ್ಪೆಲ್‌ನಲ್ಲಿ ಒಟ್ಟು 12 ರನ್‌ಗಳನ್ನು ನೀಡಿ 6 ವಿಕೆಟ್‌ಗಳನ್ನು ಪಡೆದಿದ್ದು ಕೇವಲ ಸಾಮಾನ್ಯ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಬೌಲಿಂಗ್ ಪ್ರದರ್ಶನಗಳಲ್ಲಿ ಒಂದಾಗಿರುವುದಲ್ಲದೆ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ ಪ್ರಥಮ ಪಂದ್ಯದಲ್ಲೇ ಈ ದಾಖಲೆ ನಿರ್ಮಿಸಿರುವುದು ಇದನ್ನು ಮತ್ತಷ್ಟು ವಿಶೇಷವನ್ನಾಗಿಸುತ್ತದೆ. 2019 ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ ಆಡುತ್ತಿದ್ದಾಗ ಈ ದಾಖಲೆಯು ನಿರ್ಮಾಣವಾಗಿದೆ.
Published by:shrikrishna bhat
First published: