ಐಪಿಎಲ್: ಟೂರ್ನಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ಟಾಪ್ 5 ಬ್ಯಾಟ್ಸ್​ಮನ್​ಗಳು ಇವರೆ ನೋಡಿ!

2018ರ ಐಪಿಎಲ್ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ತನ್ನದಾಗಿಸಿದ ಕೇನ್ 8 ಅರ್ಧಶತಕದೊಂದಿಗೆ 17 ಪಂದ್ಯಗಳಲ್ಲಿ 735 ರನ್ ಕಲೆಹಾಕಿ ಐಪಿಎಲ್ ಟೂರ್ನಿ ಇತಿಹಾಸದಲ್ಲೇ ಗರಿಷ್ಠ ರನ್ ಗಳಿಸಿದ 3ನೇ ಬ್ಯಾಟ್ಸ್​ಮನ್​​ ಆಗಿದ್ದಾರೆ.

Vinay Bhat | news18
Updated:February 5, 2019, 6:45 PM IST
ಐಪಿಎಲ್: ಟೂರ್ನಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ಟಾಪ್ 5 ಬ್ಯಾಟ್ಸ್​ಮನ್​ಗಳು ಇವರೆ ನೋಡಿ!
ವಿರಾಟ್ ಕೊಹ್ಲಿ
Vinay Bhat | news18
Updated: February 5, 2019, 6:45 PM IST
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ವಿಶ್ವದ ಅತಿ ದೊಡ್ಡ ಟಿ-20 ಕ್ರಿಕೆಟ್ ಟೂರ್ನಿ. ರನ್ ಮಳೆಯನ್ನೆ ಸುರಿಸುವ ಈ ಚುಟುಕು ಸಮರದಲ್ಲಿ ಕತ್ತಲು ಕಳೆದು ಬೆಳಕಾಗುವ ಹೊತ್ತಿಗೆ ಅದೆಷ್ಟೊ ಆಟಗಾರರು ಸ್ಟಾರ್ ಪಟ್ಟಕ್ಕೇರಿರುತ್ತಾರೆ. ಜೊತೆಗೆ ಹೊಸ ಮುಖಗಳಿಗೆ ಇದೊಂದು ಉತ್ತಮ ವೇದಿಕೆ ಕೂಡ ಔದು. ಇಂತಹ ಹೊಡಿಬಡಿ ಆಟದಲ್ಲಿ ಟೂರ್ನಿಯೊಂದರಲ್ಲೆ ಗರಿಷ್ಠ ರನ್ ಚಚ್ಚಿದ ಟಾಪ್ 5 ಬ್ಯಾಟ್ಸ್​ಮನ್​ಗಳನ್ನು ನೋಡುವುದಾದರೆ..

ಮೈಕ್ ಹಸ್ಸಿ- 733 ರನ್ಸ್​​​ (2013 ಆವೃತ್ತಿ)

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ ಮೈಕ್ ಹಸ್ಸಿ 2013ರ ಐಪಿಎಲ್ ಆವೃತ್ತಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದರು. ಇಡೀ ಟೂರ್ನಿಯಲ್ಲಿ ಒಟ್ಟು 17 ಪಂದ್ಯಗಳಲ್ಲಿ 733 ರನ್ ಕಲೆಹಾಕಿದ ಹಸ್ಸಿ ಖಾತೆಯಲ್ಲಿ 6 ಅರ್ಧಶತಕ ಸೇರಿತ್ತು. 129.50 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್ ಬೀಸಿದ್ದರು.

ಕ್ರಿಸ್ ಗೇಲ್- 733 ರನ್ಸ್​​ (2012 ಆವೃತ್ತಿ)

2012ರ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಕಲೆಹಾಕಿದವರ ಪೈಕಿ ಮೊದಲ ಸ್ಥಾನದಲ್ಲಿ ವೆಸ್ಟ್​ ಇಂಡೀಸ್​ನ ದೈತ್ಯ ಸ್ಪೋಟಕ ಬ್ಯಾಟ್ಸ್​ಮನ್​​ ಕ್ರಿಸ್ ಗೇಲ್. ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡಿದ ಗೇಲ್ ಇಡೀ ಟೂರ್ನಿಯಲ್ಲಿ 46 ಬೌಂಡರಿ ಹಾಗೂ ಬರೋಬ್ಬರಿ 59 ಸಿಕ್ಸ್​ ಸಿಡಿಸಿ 733 ರನ್ ಕಲೆಹಾಕಿದ್ದಾರೆ.

ಇದನ್ನೂ ಓದಿ: ಹರ್ಭಜನ್​ರಿಂದ ಮತ್ತೊಂದು ಕಪಾಳ ಮೋಕ್ಷ: ಈ ಬಾರಿ ಪೊಲೀಸ್​ಗೆ ಹೊಡೆದ ಭಜ್ಜಿ

ಕೇನ್ ವಿಲಿಯಮ್ಸ್​ನ್​​​- 735 ರನ್ಸ್​​​​​​ (2018 ಆವೃತ್ತಿ)
Loading...

ಕಳೆದ ಐಪಿಎಲ್ ಟೂರ್ನಿಯಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ತಂಡ ಫೈನಲ್ ಹಂತಕ್ಕೇರಲು ಪ್ರಮುಖ ಕಾರಣ ತಂಡದ ನಾಯಕ ಕೇನ್ ವಿಲಿಯಮ್ಸನ್. 2018ರ ಐಪಿಎಲ್ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ತನ್ನದಾಗಿಸಿದ ಕೇನ್ 8 ಅರ್ಧಶತಕದೊಂದಿಗೆ 17 ಪಂದ್ಯಗಳಲ್ಲಿ 735 ರನ್ ಕಲೆಹಾಕಿ ಐಪಿಎಲ್ ಟೂರ್ನಿ ಇತಿಹಾಸದಲ್ಲೇ ಗರಿಷ್ಠ ರನ್ ಗಳಿಸಿದ 3ನೇ ಬ್ಯಾಟ್ಸ್​ಮನ್​​ ಆಗಿದ್ದಾರೆ.

ಡೇವಿಡ್ ವಾರ್ನರ್- 848 ರನ್ಸ್​​ (2016 ಆವೃತ್ತಿ)

ಎಡಗೈ ಸ್ಪೋಟಕ ಬ್ಯಾಟ್ಸ್​ಮನ್​​ ಡೇವಿಡ್ ವಾರ್ನರ್ ಅವರು ಸನ್​ರೈಸರ್ಸ್​ ಹೈದರಾಬಾದ್ ತಂಡದ ಬೆನ್ನೆಲುಬು. 2016ರ ಐಪಿಎಲ್ ಆವೃತ್ತಿಯಲ್ಲಿ 9 ಅರ್ಧಶತಕ ಬಾರಿಸಿರುವ ವಾರ್ನರ್ 17 ಪಂದ್ಯಗಳಲ್ಲಿ 848 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ- 973 ರನ್ಸ್​​ (2016 ಆವೃತ್ತಿ)

ಇದನ್ನೂ ಓದಿ: ರಿಷಭ್ ಪಂತ್​ರ ಈ ವಿಭಿನ್ನ ಶಾಟ್​ಗೆ ಏನೆಂದು ಹೆಸರಿಡಬಹುದು?: ವಿಡಿಯೋ ವೈರಲ್

ಐಪಿಎಲ್ ಇತಿಹಾಸದಲ್ಲೇ ಟೂರ್ನಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ನಂಬರ್ 1 ಬ್ಯಾಟ್ಸ್​ಮನ್​ ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಆಗಿದ್ದಾರೆ. 2016ರ ಐಪಿಎಲ್​​ನಲ್ಲಿ 16 ಪಂದ್ಯಗಳನ್ನು ಆಡಿದ ಕೊಹ್ಲಿ 11 ಅರ್ಧಶತಕ ಸಿಹಿತ 152.03 ಸ್ಟ್ರೈಕ್​​ರೇಟ್​ನೊಂದಿಗೆ 973 ರನ್ ಚಚ್ಚಿದ್ದಾರೆ. ಟೂರ್ನಿಯೊಂದರಲ್ಲಿ ವಿರಾಟ್ ಕೊಹ್ಲಿ ಗಳಿಸಿದ 973 ರನ್ಸ್​​​ ಐಪಿಎಲ್​​​​ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಆಗಿದೆ.

First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...