ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರು; ಮೊದಲ ದಿನವೇ ಆಲೌಟ್

news18
Updated:August 30, 2018, 11:58 PM IST
ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರು; ಮೊದಲ ದಿನವೇ ಆಲೌಟ್
news18
Updated: August 30, 2018, 11:58 PM IST
ನ್ಯೂಸ್ 18 ಕನ್ನಡ

ಸೌಥಾಂಪ್ಟನ್​​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ 4ನೇ ಟೆಸ್ಟ್​​ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಮೊದಲ ದಿನವೇ ಆಘಾತ ಅನುಭವಿಸಿದೆ. ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 246 ರನ್​​ಗೆ ಸರ್ವಪತನ ಕಂಡಿದೆ. ಬಳಿಕ ಮೊದಲ ಇನ್ನಿಂಗ್ಸ್​ ಆರಂಭಿಸಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿ 227 ರನ್​​ಗಳ ಹಿನ್ನಡೆಯಲ್ಲಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್​ಗೆ ಟೀಂ ಇಂಡಿಯಾ ಬೌಲರ್​ಗಳು ಮಾರಕವಾಗಿ ಪರಿಣಮಿಸಿದರು. ಕೇವಲ 86 ರನ್​ ಆಗುವ ಹೊತ್ತಿಗೆನೆ ತನ್ನ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಲೈಸ್ಟರ್ ಕುಕ್(17), ಜೆನ್ನಿಂಗ್ಸ್​(0), ನಾಯಕ ಜೋ ರೂಟ್(4), ಜಾನಿ ಬೈರ್ಸ್ಟೋ(6) ಬೇಗನೆ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಬೆನ್ ಸ್ಟೋಕ್ಸ್​ ಹಾಗೂ ಜಾಸ್ ಬಟ್ಲರ್ ಜೊತೆಯಾಗಿ ಇನ್ನಿಂಗ್ಸ್​ ಕಟ್ಟಲು ಮುಂದಾದರಾದರು ಬಟ್ಲರ್ 21 ರನ್​ಗೆ ಔಟ್ ಆದರೆ, ಇದರ ಬೆನ್ನಲ್ಲೆ ಸ್ಟೋಕ್ಸ್​ ಕೂಡ 23 ಗಳಿಸಿದ ಹೊತ್ತಿಗೆ ಸುಸ್ತಾದರು. 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್​ಗೆ ಸ್ಯಾಮ್ ಕುರ್ರನ್ ಹಾಗೂ ಮೊಯೀನ್ ಅಲಿ ಎಚ್ಚರಿಕೆ ಆಟವಾಡಿ ಕೊಂಚ ಚೇತರಿಕೆ ನೀಡಿದರು. 7ನೇ ವಿಕೆಟ್​ಗೆ ಈ ಜೋಡಿ 81 ರನ್​​ಗಳ ಕಾಣಿಕೆ ನೀಡಿತು. ಆದರೆ 40 ರನ್​ಗಳಿಸಿದ ವೇಳೆ ಅಲಿ ಅವರು ಅಶ್ವಿನ್​ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಬಳಿಕ ಬಂದ ಬೆನ್ನಲ್ಲೆ ಆದಿಲ್ ರಶೀದ್(6) ಔಟ್ ಆದರೆ, 17 ರನ್ ಗಳಿಸಿ ಬ್ರಾಡ್ ಕೂಡ ನಿರ್ಗಮಿಸಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಇತ್ತ ಏಕಾಂಗಿಯಾಗಿ ನಿಂತು ಬ್ಯಾಟ್ ಬೀಸಿದ ಕುರ್ರನ್ ಅರ್ಧಶತಕ ಸಿಡಿಸಿದರು. ಆದರೆ 78 ರನ್ ಗಳಿಸಿರುವಾಗ ಅಶ್ವಿನ್ ಎಸೆತದಲ್ಲಿ ಕುರ್ರನ್ ಬೌಲ್ಡ್​​ ಆದ ಹೊತ್ತಿಗೆ ಇಂಗ್ಲೆಂಡ್ ಆಲೌಟ್ ಆಯಿತು. ಇತ್ತ ಜೇಮ್ಸ್ ಆಂಡರ್ಸನ್(0) ಅಜೇಯ ರಾಗಿ ಉಳಿದರು.

ಭಾರತ ಪರ ಜಸ್​ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತು ಮಿಂಚಿದರೆ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಹಾಗೂ ಆರ್. ಅಶ್ವಿನ್ ತಲಾ 2 ವಿಕೆಟ್ ಕಿತ್ತು ಮಿಂಚಿದರೆ, ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಭಾರತ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 19 ರನ್ ಬಾರಿಸಿದೆ. ಶಿಖರ್ ಧವನ್ 3 ಹಾಗೂ ಕೆಎಲ್ ರಾಹುಲ್ 11 ರನ್ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ