ಮೂರುವರೆ ಗಂಟೆ; 1,111 ಬಾಣ ಪ್ರಯೋಗ: ಗಿನ್ನಿಸ್ ರೆಕಾರ್ಡ್​​​ನತ್ತ 3 ವರ್ಷದ ಬಾಲಕಿ

news18
Updated:August 21, 2018, 5:24 PM IST
ಮೂರುವರೆ ಗಂಟೆ; 1,111 ಬಾಣ ಪ್ರಯೋಗ: ಗಿನ್ನಿಸ್ ರೆಕಾರ್ಡ್​​​ನತ್ತ 3 ವರ್ಷದ ಬಾಲಕಿ
news18
Updated: August 21, 2018, 5:24 PM IST
ನ್ಯೂಸ್ 18ಕನ್ನಡ

ಇಂಡೋನೇಷ್ಯಾದಲ್ಲಿ ಭಾರತದ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್​ನಲ್ಲಿ ಬ್ಯುಸಿಯಾಗಿದ್ದರೆ, ಇಲ್ಲೊಬ್ಬಳು ಕೇವಲ ಮೂರುವರೆ ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 1,111 ಬಾಣಗಳಲ್ಲಿ ಪ್ರಯೋಗಿಸಿ ಬಿಲ್ಲುಗಾರಿಕೆಯಲ್ಲಿ ಗಿನ್ನಿಸ್ ವಿಶ್ವದಾಖಲೆ ಬರೆಯುವ ಪ್ರಯತ್ನದಲ್ಲಿದ್ದಾಳೆ.

ಚೆನ್ನೈ ಮೂಲದ 3 ವರ್ಷ ಪ್ರಾಯದ ಎಲ್​​ಕೆಜಿ ವಿದ್ಯಾರ್ಥಿನಿ ಪಿ. ಸಂಜನಾ 8 ಮೀಟರ್​​​​​ ದೂರದಲ್ಲಿನ ಗುರಿಗೆ ನೇರವಾಗ ಬಾಣ ಪ್ರಯೋಗಿಸಿ ಅಚ್ಚರಿ ಮೂಡಿಸಿದ್ದಾಳೆ. ಗಿನ್ನಿಸ್ ವಿಶ್ವದಾಖಲೆಯ ನಿಯಮದಂತೆ ಈಕೆ ಗಂಟೆಗೆ 5 ನಿಮಿಷ ಬ್ರೇಕ್ ತೆಗೆದುಕೊಂಡು, ಮೂರು ಗಂಟೆ ಮೂವತ್ತು ನಿಮಿಷದ ಅವಧಿಯಲ್ಲಿ 1,111 ಬಾಣಗಳನ್ನು ಪ್ರಯೋಗಿಸಿ ಜಯ ಸಾಧಿಸಿದ್ದಾಳೆ. ಇನ್ನು ಸಂಜನಾ ಬಗ್ಗೆ ಕೋಚ್ ಶಿಹಾನ್ ಹುಸ್ಸೇನಿ ಮಾತನಾಡಿದ್ದು, 3 ವರ್ಷದ ಸಂಜನಾಗೆ ಬಿಲ್ಲುಗಾರಿಕೆಯಲ್ಲಿ ಮುಂದೆ ಎತ್ತರಕ್ಕೆ ಬೆಳೆಯುವ ಸಾಮರ್ಥ್ಯವಿದೆ. ಮುಂದೊಂದು ದಿನ ಆಕೆ ಕಂಡಿತವಾಗಿಯು ಒಲಿಂಪಿಯನ್ ಆಗುತ್ತಾಳೆ ಎಂದಿದ್ದಾರೆ. ಇನ್ನು ದಿನಕ್ಕೆ ನಾಲ್ಕು ಗಂಟೆಗಳಿಗೂ ಅಧಿಕ ಸಮಯ ಸಂಜನಾ ಅಭ್ಯಾಸ ಮಾಡುತ್ತಿದ್ದು, ಆಕೆಗೆ ಬಿಲ್ಲುವಿನಲ್ಲಿ ಅಪಾರ ಆಸಕ್ತಿ ಇದೆ ಎಂದಿದ್ದಾರೆ. ಅಂತೆಯೆ ತಂದೆ ಪ್ರೇಮನಾಥ್ ಅವರು, ಮಗಳಿಗೆ ಎರಡನೇ ವರ್ಷ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಬಿಲ್ಲು ಬಾಣ ದೊರಕಿತ್ತು. ಅಲ್ಲಿಂದ ಆಕೆ ಅದರಲ್ಲೇ ಆಡತೊಡಗಿ ಆಸಕ್ತಿ ಮೂಡಿತು ಎಂದು ಹೇಳುತ್ತಾರೆ.

ಸದ್ಯ ದಕ್ಷಿಣ ಏಷ್ಯಾ ಆರ್ಚರಿ ಅಸೋಸಿಯೇಶನ್​​ನ ಅಧಿಕೃತ ವೀಕ್ಷಕರು ಸಂಜನಾಳ ಈ ಸಾಧನೆಯ ವಿಡಿಯೋ ಮಾಡಿದ್ದು, ಗಿನ್ನಿಸ್ ಸಂಸ್ಥೆಗೆ ಕಳುಹಿಸಿದ್ದಾರೆ. ಸಂಜನಾಗೆ ಒಲಿಂಪಿಕ್​​​​ನಲ್ಲಿ ಭಾಗವಹಿಸಿ ಚಿನ್ನ ಪಡೆಯಬೇಕು ಎಂಬ ಆಸೆ ಇದ್ದು, ಈಕೆಯ ಆಸೆ ನೆರವೇರಲಿ ಎಂಬುದೆ ಎಲ್ಲರ ಹಾರೈಕೆ.

First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...