HOME » NEWS » Sports » 3 PLAYERS WHOSE WORLD CUP BERTH COULD BE CONFIRMED BASED ON THEIR PERFORMANCE IN AUSTRALIA

ವಿಶ್ವಕಪ್ 2019: ಆಸ್ಟ್ರೇಲಿಯಾದಲ್ಲಿ ನಿರ್ಧಾರವಾಗಲಿದೆ ಭಾರತದ ಈ 3 ಆಟಗಾರರ ಭವಿಷ್ಯ

Vinay Bhat | news18
Updated:December 9, 2018, 3:07 PM IST
ವಿಶ್ವಕಪ್ 2019: ಆಸ್ಟ್ರೇಲಿಯಾದಲ್ಲಿ ನಿರ್ಧಾರವಾಗಲಿದೆ ಭಾರತದ ಈ 3 ಆಟಗಾರರ ಭವಿಷ್ಯ
ಕೆ. ಎಲ್. ರಾಹುಲ್
  • News18
  • Last Updated: December 9, 2018, 3:07 PM IST
  • Share this:
2019ರ ವಿಶ್ವಕಪ್​ಗೆ ಇನ್ನೇನು ಕೆಲವು ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಇದಕ್ಕಾಗಿ ಟೀಂ ಇಂಡಿಯಾ ಭರ್ಜರಿ ತಯಾರಿ ಕೂಡ ನಡೆಸುತ್ತಿದೆ. ಅದರಲ್ಲು ಈ ಪ್ರಮುಖ 3 ಆಟಗಾರರು ವಿಶ್ವಕಪ್​​ನಲ್ಲಿ ಆಡಲಿದ್ದಾರ ಎಂಬ ನಿರ್ಧಾರ ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಸರಣಿಯಿಂದ ತಿಳಿಯಲಿದೆ. ವಿದೇಶಿ ಪಿಚ್​ನಲ್ಲಿ ಉತ್ತಮ ಪ್ರದರ್ಶನ ತೋರಿದರೆ ಈ ಮೂವರು ಆಟಗಾರರು ವಿಶ್ವಕಪ್​​ನಲ್ಲಿ ಆಡುವುದು ಖಚಿತ. ಹಾಗಾದರೆ ಅವರು ಯಾರು ಎಂಬುದನ್ನು ನೋಡೋಣ…

ಮೊಹಮ್ಮದ್ ಶಮಿ:

ಟೀಂ ಇಂಡಿಯಾದ ಸ್ಟಾರ್ ಬೌಲರ್​ಗಳಾದ ಜಸ್​ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಮುಂಬರುವ ವಿಶ್ವಕಪ್​​ನಲ್ಲಿ ಆಡುವುದರಲ್ಲಿ ಅನುಮಾನವಿಲ್ಲ. ಆದರೆ, ಇವರ ಜೊತೆಯಲ್ಲಿ ಭಾರತಕ್ಕೆ ಮತ್ತೊಬ್ಬ ಅನುಭವಿ ವೇಗಿಯ ಅವಶ್ಯಕತೆಯಿದೆ. ಇದಕ್ಕಾಗಿ ಸದ್ಯ ಪೈಪೋಟಿಯು ಏರ್ಪಟ್ಟಿದೆ. ಮೂರನೇ ವೇಗಿಯಾಗಿ ಇತ್ತೀಚೆಗೆ ಖಲೀಲ್ ಅಹ್ಮದ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ, ಖಲೀಲ್ ಅವರಿಗೆ ಅನುಭವ ಇಲ್ಲದ ಕಾರಣ ಉಮೇಶ್ ಯಾದವ್ ಅಥವಾ ಶಮಿ ಅವರು ಆಯ್ಕೆಯಾಗುವ ಸಾಧ್ಯತೆಯಿದೆ. ಸದ್ಯ ಆಸೀಸ್ ವಿರುದ್ಧದ ಟೆಸ್ಟ್​ನಲ್ಲಿ ಶಮಿ ಉತ್ತಮ ಪ್ರದರ್ಶನ ತೋರುತ್ತಿದ್ದು, ವಿಶ್ವಕಪ್​ನಲ್ಲಿ ಕಣಕ್ಕಿಳಿಯುತ್ತಾರ ಎಂಬುದು ಕಾದುನೋಡಬೇಕಿದೆ.

ರಿಷಭ್ ಪಂತ್:

ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಎಂ. ಎಸ್. ಧೋನಿ 2019 ವಿಶ್ವಕಪ್​​ನಲ್ಲಿ ಆಡುವುದು ಖಚಿತ. ಇವರ ಜೊತೆ ದಿನೇಶ್ ಕಾರ್ತಿಕ್ ಕೂಡ ಉತ್ತಮ ಫಾರ್ಮ್​ನಲ್ಲಿದ್ದಾರೆ. ಆದರೆ, ಭಾರತಕ್ಕೆ ಬ್ಯಾಕಪ್​​ ಕೀಪರ್​ ಆಗಿ ಮತ್ತೊಬ್ಬ ಆಟಗಾರ​ನ ಅಗತ್ಯವಿದೆ. ಈ ಸ್ಥಾನಕ್ಕೆ ಕಾರ್ತಿಕ್ ಅಥವಾ ಯುವ ಸ್ಪೋಟಕ ಆಟಗಾರ ರಿಷಭ್ ಪಂತ್ ಆಯ್ಕೆ ಆಗಲಿದ್ದಾರೆ. ಪಂತ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಎಚ್ಚರಿತೆಯ ಆಟ ಪ್ರದರ್ಶಿಸಿದರೆ ವಿಶ್ವಕಪ್​​ಗೆ ಆಯ್ಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ'ಆ ಚಡ್ಡಿ ಧರಿಸಿ ಆಡಿದ್ದರೆ ನಾನು ಹೆಚ್ಚು ವಿಕೆಟ್ ಪಡೆಯುತ್ತಿದ್ದೆ': ಹರ್ಭಜನ್ ಸಿಂಗ್

ಕೆ. ಎಲ್. ರಾಹುಲ್:ಕರ್ನಾಟಕದ ಕೆ. ಎಲ್. ರಾಹುಲ್ ಭಾರತ ಕ್ರಿಕೆಟ್ ತಂಡದಲ್ಲಿ ಭವಿಷ್ಯದ ಆರಂಭಿಕ ಆಟಗಾರ ಎಂದೆ ಹೇಳಲಾಗುತ್ತಿದೆ. 3ನೇ ಕ್ರಮಾಂಕದಲ್ಲಿ ಅಥವಾ ಓಪನರ್​​ ಆಗಿ ರಾಹುಲ್ ಕಣಕ್ಕಿಳಿದರೆ ಎಂತಹದೆ ದೊಡ್ಡ ಮೊತ್ತವಿದ್ದರು ಗುರಿ ಬೆನ್ನತ್ತುವ ಸಾಮರ್ಥ್ಯವಿದೆ. ಇದು ಅನೇಕ ಬಾರಿ ಸಾಬೀತು ಕೂಡ ಆಗಿದೆ. ಹೀಗಾಗಿ ರಾಹುಲ್ ಅವರ ಉಪಸ್ಥಿತಿ ವಿಶ್ವಕಪ್​ನಲ್ಲಿ ಭಾರತಕ್ಕೆ ತುಂಬಾನೆ ಸಹಾಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಹುಲ್ ಕಳಪೆ ಫಾರ್ಮ್​ನಲ್ಲಿದ್ದು ಆದಷ್ಟು ಬೇಗ ಇದರಿಂದ ಹೊರ ಬಂದು ತಮ್ಮ ನೈಜ್ಯ ಪ್ರದರ್ಶನ ತೋರಬೇಕಿದೆ.

First published: December 9, 2018, 2:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories