ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಮೆರೆದ ಆಟಗಾರರಿವರು..!

ಐಪಿಎಲ್​​​ ಚುಟುಕು ಕ್ರಿಕೆಟ್ ಆಗಿದ್ದರಿಂದ ಒಂದು ತಂಡದಲ್ಲಿ ನಾಯಕನ ಪಾತ್ರ ಮುಖ್ಯವಾಗುತ್ತದೆ. ಹಾಗಾದರೆ ಐಪಿಎಲ್​​​ನಲ್ಲಿ ಈವರೆಗೆ ಕಂಡ ಮೂರು ಶ್ರೇಷ್ಠ ನಾಯಕರು ಯಾರು ಎಂಬುದನ್ನು ನೋಡೋಣ

Vinay Bhat | news18
Updated:December 11, 2018, 1:32 PM IST
ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಮೆರೆದ ಆಟಗಾರರಿವರು..!
Pic: Twitter IPL
  • News18
  • Last Updated: December 11, 2018, 1:32 PM IST
  • Share this:
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 12ನೇ ಆವೃತ್ತಿಗೆ ಇನ್ನೇನು ಕೆಲವು ತಿಂಗಳುಗಳಷ್ಟೆ ಬಾಕಿ ಉಳಿದಿವೆ. ಇದೇ ಡಿ. 18 ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಸಕಲ ಸಿದ್ದತೆಗಳು ಆರಂಭವಾಗಿದೆ. ಐಪಿಎಲ್​​​ ಚುಟುಕು ಕ್ರಿಕೆಟ್ ಆಗಿದ್ದರಿಂದ ಒಂದು ತಂಡದಲ್ಲಿ ನಾಯಕನ ಪಾತ್ರ ಮುಖ್ಯವಾಗುತ್ತದೆ. ಹಾಗಾದರೆ ಐಪಿಎಲ್​​​ನಲ್ಲಿ ಈವರೆಗೆ ಕಂಡ ಮೂರು ಶ್ರೇಷ್ಠ ನಾಯಕರು ಯಾರು ಎಂಬುದನ್ನು ನೋಡೋಣ…

3. ಶೇನ್ ವಾರ್ನ್​​ಶೇನ್ ವಾರ್ನ್ ಅವರ ನಾಯಕತ್ವ, ತಂಡವನ್ನು ಮುನ್ನಡೆಸುವ ಶೈಲಿ ಬೇರೆ ಯಾರಿಗೂ ಇರಲಾರದು. ಇದಕ್ಕೆ ಸಾಕ್ಷಿ ಐಪಿಎಲ್​​ ಮೊದಲ ಆವೃತ್ತಿಯಲ್ಲೇ ನಾಯಕನಾಗಿ ತಂಡವನ್ನು ಚಾಂಪಿಯನ್ ಆಗಿಸಿದ್ದು. ಹೊಸ ತಂಡ, ಅನೇಕ ಆಟಗಾರರ ಪರಿಚಯವೇ ಇಲ್ಲದ  ತಂಡವನ್ನು ನಾಯಕನಾಗಿ ಮುನ್ನಡೆಸುವುದು ಸುಲಭವಲ್ಲ. ಆದರೆ ರಾಜಸ್ಥಾನ್ ತಂಡದಲ್ಲಿ ಕ್ಯಾಪ್ಟನ್ ಪಟ್ಟಕ್ಕೇರಿ ವಾರ್ನ್ ಅವರು ಇದರಲ್ಲಿ ಯಶಸ್ವಿಯಾದರು. ಜೊತೆಗೆ ಕೇವಲ ಬೌಲರ್ ಆಗಿ ಅಲ್ಲದೆ ಐಪಿಎಲ್​​ನಲ್ಲಿ ಬ್ಯಾಟ್ಸ್​ಮಾನ್ ಆಗಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರಕೂಡ ವಹಿಸಿದರು.

ಇದನ್ನೂ ಓದಿ: ವಿರುಷ್ಕಾ ಲವ್​​ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು?

2. ರೋಹಿತ್ ಶರ್ಮಾ

ನಾಯಕನಾಗಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದರೆ ಗೆಲುವು ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ ಇತ್ತೀಚಿನ ಹಿಟ್​​ಮ್ಯಾನ್ ರೆಕಾರ್ಡ್​​. 2013ರಲ್ಲಿ ಮುಂಬೈ ಇಂಡಿಯನ್ಸ್​ ತಂಡದ ನಾಯಕ ಪಟ್ಟತೊಟ್ಟ ರೋಹಿತ್ ಶರ್ಮಾ ಒಟ್ಟು ಮೂರು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮುಂಬೈ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ರಿಕ್ಕಿ ಪಾಂಟಿಂಗ್ ನಾಯಕನಾಗಿದ್ದಾರೆ. ಆದರೆ, ಐಪಿಎಲ್ ಟ್ರೋಫಿ ಎತ್ತಿಹಿಡಯುವಲ್ಲಿ ಯಶಸ್ವಿಯಾಗಿಲ್ಲ. ನಂತರದಲ್ಲಿ ರೋಹಿತ್ ನಾಯಕನಾಗಿ ಇದನ್ನು ಸಾಭೀತು ಪಡಿಸಿದ್ದಾರೆ. ನಾಯಕನಾಗಿ ರೋಹಿತ್ ಶರ್ಮಾ ಶೇ. 59.04 ರಷ್ಟು ಜಯ ಕಂಡಿದ್ದಾರೆ. ತಂಡದ ಆಟಗಾರರಿಗೆ ಒತ್ತಡ ಹಾಕದೆ ಕೂಲ್ ಆಗಿ ಮುನ್ನಡೆಸುವ ರೋಹಿತ್ ನಾಯಕತ್ವವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

1.  ಎಂ. ಎಸ್. ಧೋನಿಧೋನಿ ಅವರ ನಿಜವಾದ ಕ್ರಿಕೆಟ್ ಜೀವನ ಆರಂಭವಾಗಿದ್ದೆ ನಾಯಕತ್ವ ವಹಿಸಿಕೊಂಡ ಬಳಿಕ. ಯುವ ತಂಡವನ್ನು ಕಟ್ಟಿಕೊಂಡು ಧೋನಿ ಟಿ20 ವಿಶ್ವಚಾಂಪಿಯನ್​​ ಆಗುವಂತೆ ಮಾಡಿದರು. ಕೂಲ್ ಕ್ಯಾಪ್ಟನ್ ಎಂದೆ ಖ್ಯಾತಿ ಪಡೆದಿರುವ ಧೋನಿ ಐಪಿಎಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನಾಯಕನಾಗಿ ಬೆನ್ನೆಲುಬಾಗಿದ್ದಾರೆ. 9 ವರ್ಷದಿಂದ ಚೆನ್ನೈ ತಂಡದ ನಾಯಕನಾಗಿ ಧೋನಿ ಅವರು 3 ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದರೆ, 7 ಬಾರಿ ಫೈನಲ್​​ಗೆ ಲಗ್ಗೆ ಇಡುವಂತೆ ಮಾಡಿದ್ದಾರೆ. ನಾಯಕನಾಗಿ ಧೋನಿ ಅವರು ಶೇ. 61.97 ರಷ್ಟು ಯಶಸ್ಸು ಕಂಡಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್​​ನಲ್ಲಿ ನಾಯಕನಾಗಿ ಯಶಸ್ಸು ಕಂಡಿರುವ ಧೋನಿ ಐಪಿಎಲ್​​ನಲ್ಲೂ ದಿ ಬೆಸ್ಟ್​ ನಂಬರ್ 1 ನಾಯಕನಾಗಿ ಮೆರೆಯುತ್ತಿದ್ದಾರೆ.

First published:December 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ