ಹೋದ ಮಾನ ಮರಳಿ ಪಡೆಯಲು ಕನ್ನಡಿಗನಿಗೆ ಇದು ಕೊನೆಯ ಅವಕಾಶ

ನಾಳೆಯಿಂದ ಮೈಸೂರಿನಲ್ಲಿ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್​​ ನಡುವೆ 2ನೇ ಅನಧಿಕೃತ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಇದರಲ್ಲಿ ರಾಹುಲ್​ ತಂಡವನ್ನು ಮುನ್ನಡೆಸುತ್ತಿದ್ದು, ಸಿಕ್ಕಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ.

Vinay Bhat | news18
Updated:February 12, 2019, 10:34 PM IST
ಹೋದ ಮಾನ ಮರಳಿ ಪಡೆಯಲು ಕನ್ನಡಿಗನಿಗೆ ಇದು ಕೊನೆಯ ಅವಕಾಶ
ಕಳೆದ ಕೆಲ ದಿನಗಳ ಹಿಂದೆ ರಾಹುಲ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದೇ ವೇಳೆ ತಮ್ಮ ಹುಟ್ಟಿದ ದಿನವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸುವ ಬಗ್ಗೆ ವಿಚಾರ ಹಂಚಿಕೊಂಡಿದ್ದರು.
  • News18
  • Last Updated: February 12, 2019, 10:34 PM IST
  • Share this:
ಬೆಂಗಳೂರು: ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ವಿವಾದಾತ್ಮ ಹೇಳಿಕೆ ನೀಡಿದ್ದಕ್ಕಾಗಿ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಜೊತೆ ಕೆ ಎಲ್ ರಾಹುಲ್ ಕೂಡ ಸಾಕಷ್ಟು ನೋವುಂಡಿದ್ದಾರೆ.

ಪಾಂಡ್ಯ ಸದ್ಯ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದು ಕಮ್​​ಬ್ಯಾಕ್ ಮಾಡಿದ್ದಾರೆ. ಆದರೆ, ಇತ್ತ ರಾಹುಲ್ ಕಳೆದು ಹೋದ ಮಾನವನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಭಾರತ ಎ ತಂಡದ ಪರ ಆಡುತ್ತಿರುವ ರಾಹುಲ್ ಇಂಗ್ಲೆಂಡ್ ಲಯನ್ಸ್​ ವಿರುದ್ಧದ ಏಕದಿನ ಪಂದ್ಯದಲ್ಲಿ ಮತ್ತದೆ ಕಳಪೆ ಪ್ರದರ್ಶನ ತೋರಿ ಕಮ್​ಬ್ಯಾಕ್ ಮಾಡಲು ಪರದಾಡುತ್ತಿದ್ದಾರೆ.

ಈಗ ರಾಹುಲ್​​ಗೆ ಮತ್ತೊಂದು ಕೊನೆಯ ಅವಕಾಶ ಸಿಕ್ಕಿದ್ದು, ಇದನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ನಾಳೆಯಿಂದ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್​​ ನಡುವೆ 2ನೇ ಅನಧಿಕೃತ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಇದರಲ್ಲಿ ಕೆ ಎಲ್ ರಾಹುಲ್​​ಗೆ ತಂಡದ ನಾಯಕ ಸ್ಥಾನ ನೀಡಲಾಗಿದ್ದು, ಉತ್ತಮ ಪ್ರದರ್ಶನ ನೀಡಲೇಬೇಕಾಗಿದೆ. ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಕಂಡ ಕಾರಣ ಉಳಿದಿರುವ ಈ ಪಂದ್ಯದಲ್ಲಿ ಭಾರತ ಎ ತಂಡವನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ರಾಹುಲ್ ಹೆಗಲಮೇಲಿದೆ. ಹೀಗಾಗಿ ರಾಹುಲ್​​​ಗೆ ತನ್ನ ಮೇಲಿರುವ ಕಳಪೆ ಹಣೆಪಟ್ಟಿಯನ್ನು ಕಿತ್ತೆಸೆಯಲು ಕೊನೆಯ ಹಾಗೂ ಉತ್ತಮ ಅವಕಾಶ ಇದಾಗಿದೆ.

ಇದನ್ನೂ ಓದಿ: 'ಮ್ಯಾಚ್ ಫಿನಿಶ್ ಮಾಡಲು ನೀವೆನು ಎಂ ಎಸ್ ಧೋನಿಯೇ?'; ಕಾರ್ತಿಕ್​ರನ್ನು ದೂರುವುದು ಎಷ್ಟು ಸರಿ?

ನಾಳೆ 9.30ಕ್ಕೆ ಪಂದ್ಯ ಆರಂಭವಾಗಲಿದ್ದು, ಈಗಾಗಲೇ ಮೈಸೂರಿಗೆ ಎರಡು ತಂಡಗಳು ಬಂದಿಳಿದಿವೆ. ನಾಳಿನ‌ ಪಂದ್ಯಕ್ಕೆ ಗಂಗೊತ್ರಿ ಗ್ಲೇಡ್ಸ್ ಸಜ್ಜಾಗಿದ್ದು ನಾಲ್ಕು ದಿನಗಳ ಕಾಲ ಪಂದ್ಯ ನಡೆಯಲಿದೆ. ಕೇರಳದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯ ಗೊಂಡಿತ್ತು.

ತಂಡಗಳು:

ಭಾರತ’:  ಕೆ .ಎಲ್.ರಾಹುಲ್ ( ನಾಯಕ ), ಎ.ಆರ್​​. ಈಶ್ವರನ್, ಪ್ರಿಯಾಂಕ್ ಪಾಂಚಾಲ್, ಅಂಕೀತ್ ಭಾವ್ನೆ, ಕರುಣ್ ನಾಯರ್, ರಿಕಿ ಭುಯಿ, ಸಿದ್ಧಾರ್ಥ್ ಲಾಡ್ , ಕೆ.ಎಸ್​. ಭರತ್ (ವಿಕೆಟ್ ಕೀಪರ್), ಶಹನಾಜ್ ನದೀಮ್, ಜಲಜ್ ಸಕ್ಸೇನಾ, ಮಯಂಕ್ ಮಾರ್ಕಂಡೆ, ಶರ್ದೂಲ್ ಠಾಕೂರ್, ನವದೀಪ್ ಸೈನಿ, ಆವೇಶ್ ಖಾನ್, ವರುಣ್ ಆ್ಯರನ್.ಇಂಗ್ಲೆಂಡ್ ಲಯನ್ಸ್​ : ಸ್ಯಾಮ್ ಬಿಲ್ಲಿಂಗ್ಸ್​ ( ನಾಯಕ ), ಥಾಮಸ್​ ಬೈಲಿ, ಡೊಮಿನಿಕ್ ಬೆಸ್ಸ್, ಡ್ಯಾನಿ ಬ್ರಿಗ್ಸ್, ಮ್ಯಾಥ್ಯೂ ಕಾರ್ಟರ್​​, ಜಾನ್ ಚಾಪೆಲ್, ಅಲೆಕ್ಸಾಂಡರ್ ಡೇವಿಸ್, ಬೆನ್ ಡಕೆಟ್, ಲೆವಿಸ್ ಗ್ರೆಗೊರಿ, ಸ್ಯಾಮುಯೆಲ್ ಹೈನ್, ಮ್ಯಾಕ್ಸ್​ ಹೋಲ್ಡನ್, ಮಿಲಿಯಂ ಜಾಕ್ಸ್​, ಜೇಮಿ ಅವರ್ಟನ್, ಅಲಿವರ್ ಪೋಪ್, ಜೇಮ್ಸ್ ಪೋರ್ಟ್ ರ್​, ಸ್ಟೀವನ್ ಮುಲಾನೆ.

First published: February 12, 2019, 10:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading