ಭಾರತ ಮತ್ತು ನ್ಯೂಜಿಲ್ಯಾಂಡ್ (IND vs NZ) ನಡುವಿನ 3 ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯವು ಮಳೆಯಿಂದ ಸಂಪೂರ್ಣ ರದ್ದಾಗಿದೆ. ಈ ಮೂಲಕ ನ್ಯೂಜಿಲ್ಯಾಂಡ್ ತಂಡವು ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಹ್ಯಾಮಿಲ್ಟನ್ನ ಸಿಡಾನ್ ಪಾರ್ಕ್ನಲ್ಲಿ (Seddon Park) ಆರಂಭವಾದ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ನಂತರ ನ್ಯೂಜಿಲೆಂಡ್ ತಂಡದ ನಾಯಕ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಭಾರತ ಕೇವಲ 4.5 ಓವರ್ ಆಡುವಷ್ಟರಲ್ಲಿ ಮಳೆ ಬಂದು ಪಂದ್ಯವನ್ನು ನಿಲ್ಲಿಸಲಾಗಿತ್ತು. ಬಳಿಕ ಮತ್ತೆ ಆರಂಭವಾದರೂ ಮಳೆ ಹೆಚ್ಚಾದ ಕಾರಣ ಸಂಪೂರ್ಣ ಪಂದ್ಯವನ್ನೇ ರದ್ದು ಮಾಡಲಾಗಿದೆ. ಇನ್ನು, ಸರಣಿಯ ಕೊನೆಯ ಪಂದ್ಯ ನವೆಂಬರ್ 30 ರಂದು ನಡೆಯಲಿದೆ.
ಏಕದಿನ ಸರಣಿ ಗೆಲ್ಲುವ ಕನಸು ಭಗ್ನ:
ಹೌದು, ಈಗಾಗಲೇ 3 ಪಂದ್ಯಗಳ ಸರಣಿಯಲ್ಲಿ ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ತಂಡವು ಮೊದಲ ಏಕದಿನ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಆದರೆ ಇಂದಿನ ಪಂದ್ಯ ರದ್ದಾದ ಕಾರಣ ಇದೀಗ ಕಿವೀಸ್ ತಂಡ ಅದೇ ಮುನ್ನಡೆಯನ್ನು ಹೊಂದಿದೆ. ಇದರಿಂದಾಗಿ ಮುಂದಿನ ಹಾಗೂ ಕೊನೆಯ ಪಂದ್ಯವನ್ನು ಭಾರತ ಗೆದ್ದರೂ ಸಹ ಸರಣಿ ಸಮಬಲದಿಂದ ಎರಡೂ ತಂಡಗಳಿಗೆ ನೀಡಲಾಗುತ್ತದೆ. ಅದೇ ಒಂದು ವೇಳೆ ಮುಂದಿನ ಪಂದ್ಯಕ್ಕೂ ಮಳೆ ಬಂದಲ್ಲಿ ಅಥವಾ ಸೋತಲ್ಲಿ ಭಾರತ ಸರಣಿ ಸೋಲನ್ನು ಅನುಭವಿಸಬೇಕಾಗುತ್ತದೆ.
Rain plays spoilsport as #NZvIND ends without a result 🌧
Watch the remainder of the ODI series LIVE on https://t.co/CPDKNxoJ9v (in select regions) 📺 pic.twitter.com/LWEq0IMPCh
— ICC (@ICC) November 27, 2022
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 89 ರನ್ಗೆ 1 ವಿಕೆಟ್ ಕಳೆದುಕೊಂಡಾಗ ಪಂದ್ಯವನ್ನು ಸಂಪೂರ್ಣ ರದ್ದು ಎಂದು ಘೋಷಿಸಲಾಯಿತು. ಇದಕ್ಕೂ ಮೊದಲು 4.5 ಓವರ್ ವೇಳೆ ಮಳೆ ಬಂದಾಗ ಪಂದ್ಯವನ್ನು ಕೆಲಕಾಲ ನಿಲ್ಲಿಸಿ ಬಳಿಕ ಎರಡೂ ತಂಡಗಳಿಗೆ ತಲಾ 29 ಓವರ್ ಪಂದ್ಯ ಎಂದು ನಿಗದಿಪಡಿಸಿದರೂ ಮಳೆ ಮತ್ತೆ ಆರಂಭವಾದ ಹಿನ್ನಲೆ ಪಂದ್ಯ ರದ್ದಾಗಿದೆ.
ಭಾರತದ ಪರ ನಾಯಕ ಶಿಖರ್ ಧವನ್ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಶುಭ್ಮನ್ ಗಿಲ್ 42 ಎಸೆತದಲ್ಲಿ 45 ರನ್ ಮತ್ತು ಸೂರ್ಯಕುಮಾರ್ ಯಾದವ್ 25 ಎಸೆತದಲ್ಲಿ 34 ರನ್ ಗಳಿಸಿ ಅಜೇಯರಾಗಿ ಉಳಿದರು. ಅತ್ತ ನ್ಯೂಜಿಲ್ಯಾಂಡ್ ಪರ ಮ್ಯಾಟ್ ಹೆನ್ರಿ 1 ವಿಕೆಟ್ ಪಡೆದು ಮಿಂಚಿದರು.
ಪದೇ ಪದೇ ತಮಡದಿಂದ ಸ್ಯಾಮ್ಸನ್ ಡ್ರಾಫ್:
ಆಕ್ಲೆಂಡ್ನ ಮೊದಲ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಕೇವಲ 15 ರನ್ ಗಳಿಸಿದ್ದರು. ಆದರೆ ಅದೇ ಸಮಯದಲ್ಲಿ ಸಂಜು ಸ್ಯಾಮ್ಸನ್ 38 ಎಸೆತಗಳಲ್ಲಿ 36 ರನ್ ಗಳಿಸಿದರು. T20 ಕ್ರಿಕೆಟ್ನಲ್ಲಿಯೂ ಸಹ, ಪಂತ್ ಅವರ ಕಳಪೆ ಪ್ರದರ್ಶನದ ಹೊರತಾಗಿಯೂ ಆಗಾಗ್ಗೆ ಅವಕಾಶಗಳನ್ನು ನೀಡಲಾಗುತ್ತದೆ. ಆದರೆ ಸಂಜು ಸ್ಯಾಮ್ಸನ್ ವಿಷಯದಲ್ಲಿ ಮಾತ್ರ ಪದೇ ಪದೇ ಅನ್ಯಾಯವಾಗುತ್ತಿದೆ. ಅಷ್ಟೇ ಏಕೆ ಏಕದಿನ ಸರಣಿಯಲ್ಲೂ ಒಂದೇ ಒಂದು ಪಂದ್ಯ ಆಡಿ ಡ್ರೆಸ್ಸಿಂಗ್ ರೂಂನಲ್ಲಿ ಕೂರಬೇಕಾದ ಸ್ಥಿತಿ ಬಂದಿದ್ದು ತಂಡದ ಆಯ್ಕೆ ಬಗ್ಗೆ ಅಭಿಮಾನಿಗಳು ಬಿಸಿಸಿಐಗೆ ಪ್ರಶ್ನೆ ಮಾಡಿದ್ದಾರೆ. ಇಷ್ಟೇ ಅಲ್ಲ, ಸಂಜು ಸ್ಯಾಮ್ಸನ್ ಅವರ ಹ್ಯಾಶ್ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ