ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC 2023) ಕದನ ಆರಂಭವಾಗಿದೆ. ಪ್ರಶಸ್ತಿ ಸಮರದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ತಂಡಗಳು ಮುಖಾಮುಖಿಯಾಗಿವೆ. ಉಭಯ ತಂಡಗಳ ನಡುವಿನ ಈ ಪಂದ್ಯ ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಫೈನಲ್‌ನಲ್ಲಿ ಟಾಸ್ ಗೆದ್ದ ರೋಹಿತ್ ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ. ಬೌಲಿಂಗ್ ವಿಷಯದಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆದರೂ ಸಹ ಭೋಜನ ವಿರಾಮದ ಬಳಿಕ ಸ್ಮಿತ್ ಮತ್ತು ಹೆಡ್ ಜೊತೆಯಾಟದ ಮೂಲಕ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಮೊದಲ ದಿನಾದಟದ ಅಂತ್ಯಕ್ಕೆ ಆಸೀಸ್ 85 ಓವರ್ಗೆ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದ್ದು, ಸ್ಮಿತ್ ಮತ್ತು ಹೆಡ್ ನಾಳಿನ 2ನೇ ದಿನಕ್ಕೆ ಕ್ರೀಸ್ ಕಾಯ್ದಿಸಿರಿಕೊಂಡಿದ್ದಾರೆ.
ಸ್ಮಿತ್ - ಹೆಡ್ ದ್ವಿಶತಕದ ಜೊತೆಯಾಟ:
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಿಂದಲೇ ಭಾರತೀಯ ಬೌಲರ್ಗಳು ಕಂಟಕವಾದರು. ನಿಧಾನವಾಗಿ ಸ್ಕೋರ್ ಕಲೆಹಾಕುತ್ತಿದ್ದ ಆಸೀಸ್ ಬ್ಯಾಟರ್ಗೆ ಮೊದಲ ಶಾಕ್ ನೀಡುವ ಮೂಲಕ ಸಿರಾಜ್ ಮಿಂಚಿದರು. ಉಸ್ಮಾನ್ ಕವಾಜಾ ಶೂನ್ಯಕ್ಕೆ ಔಟ್ ಆದರು. ಇತ್ತ ಡೇವಿಡ್ ವಾರ್ನರ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಅವರು 60 ಎಸೆತದಲ್ಲಿ 8 ಫೋರ್ ಮೂಲಕ 43 ರನ್ಗೆ ಔಟ್ ಆದರು.
Stumps on the opening day of #WTC23 Final!
Australia ended Day 1 at 327/3.
See you tomorrow for Day 2 action.
Scorecard ▶️ https://t.co/0nYl21pwaw#TeamIndia pic.twitter.com/G0Lbyt17Bm
— BCCI (@BCCI) June 7, 2023
ಇದನ್ನೂ ಓದಿ: IND vs AUS: ಬೌಲಿಂಗ್ ಆಯ್ಕೆ ಮಾಡಿ ತಪ್ಪು ಮಾಡಿದ್ರಾ ರೋಹಿತ್? ಸಂಕಷ್ಟಕ್ಕೆ ಸಿಲುಕುತ್ತಾ ಟೀಂ ಇಂಡಿಯಾ?
ಟ್ರಾವಿಸ್ ಹೆಡ್ ಬುಧವಾರ ಇತಿಹಾಸ ಬರೆದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಓವಲ್‌ನಲ್ಲಿ ನಡೆದ WTC ಫೈನಲ್ 2023ರ ಆರಂಭಿಕ ದಿನದ ಮೂರನೇ ಸೆಷನ್‌ನಲ್ಲಿ ಅವರು ಭಾರತದ ವಿರುದ್ಧ ಶತಕ ಸಿಡಿಸಿದರು.
ಲಯ ತಪ್ಪಿದ ಟೀಂ ಇಂಡಿಯಾ ಬೌಲಿಂಗ್:
ಇನ್ನು, ಆರಂಭದಲ್ಲಿ ಬೀಗಿ ಬೌಲಿಂಗ್ ದಾಳಿ ಮಾಡಿದ ಭಾರತ ತಂಡ ಭೋಜನ ವಿರಾಮದ ಬಳಿಕ ಲಯ ತಪ್ಪಿದಂತೆ ಪ್ರದರ್ಶನ ನೀಡಿತು. ಭಾರತದ ಪರ ಮೊದಲ ದಿನದಾಟದ ಅಂತ್ಯಕ್ಕೆ ಮೊಹಮ್ಮದ್ ಶಮಿ 20 ಓವರ್ಗೆ 77 ರನ್ ನೀಡಿ 1 ವಿಕೆಟ್, ಮೊಹಮ್ಮದ್ ಸಿರಾಜ್ 19 ಓವರ್ಗೆ 67 ರನ್ ನೀಡಿ 1 ವಿಕೆಟ್ ಹಾಗೂ ಶಾರ್ದೂಲ್ ಠಾಕೂರ್ 18 ಓವರ್ಗೆ 75 ರನ್ ನೀಡಿ 1 ವಿಕೆಟ್ ಪಡೆದರು. ಉಳಿದಂತೆ ಉಮೇಶ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 14 ಓವರ್ ಮಾಡಿದ್ದಾರೆ.
ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ( C), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (WK), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (WK), ಪ್ಯಾಟ್ ಕಮಿನ್ಸ್ (C), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ