• Home
  • »
  • News
  • »
  • sports
  • »
  • FIFA World Cup 2022: ಫಿಫಾ ವಿಶ್ವಕಪ್ 2022 ಅರ್ಜೆಂಟೀನಾದ ಪಾಲಿಗೆ; ಮೆಸ್ಸಿಯವರ ವೃತ್ತಿಜೀವನದ ಕುರಿತು ಮಾಧ್ಯಮದಲ್ಲಿ ಪ್ರತಿಕ್ರಿಯೆ

FIFA World Cup 2022: ಫಿಫಾ ವಿಶ್ವಕಪ್ 2022 ಅರ್ಜೆಂಟೀನಾದ ಪಾಲಿಗೆ; ಮೆಸ್ಸಿಯವರ ವೃತ್ತಿಜೀವನದ ಕುರಿತು ಮಾಧ್ಯಮದಲ್ಲಿ ಪ್ರತಿಕ್ರಿಯೆ

ಲಿಯೋನೆಲ್​ ಮೆಸ್ಸಿ

ಲಿಯೋನೆಲ್​ ಮೆಸ್ಸಿ

ಈ ವರ್ಷದ ಫಿಫಾ ವಿಶ್ವಕಪ್​ 2022 ಕತಾರ್​ನಲ್ಲಿ ನಡೆದಿದೆ. ಈ ಪಂದ್ಯಾಟ ಜನರಿಂದ ಹೆಚ್ಚಿನ ಮೆಚ್ಚುಗೆಯನ್ನು ಪಡೆದಿದ್ದು, ಇದರ ಫೈನಲ್ ಪಂದ್ಯಾಟದಲ್ಲಿ ಅರ್ಜೆಂಟೀನಾ ತಂಡ ವಿಜಯವನ್ನು ಸಾಧಿಸಿದೆ. ಇದಲ್ಲದೆ ಫುಟ್​ಬಾಲ್​ನಲ್ಲಿ ಪ್ರಸಿದ್ಧಿಯನ್ನು ಪಡೆದ ಆಟಗಾರ ಲಿಯೋನೆಲ್​ ಮೆಸ್ಸಿಯವರು ತನ್ನ ವೃತ್ತಿಜೀವನವನ್ನು ಫುಟ್​ಬಾಲ್​ ಮೂಲಕವೇ ಮುಂದುವರಿಸುತ್ತೇನೆ ಎಮದು ಹೇಳಿದ್ದಾರೆ.

ಮುಂದೆ ಓದಿ ...
  • Share this:

    ಈ ವರ್ಷದ ಫಿಫಾ ಫುಟ್​ಬಾಲ್​ ವಿಶ್ವಕಪ್ (Fifa Football Worldcup)​ ಕತಾರ್​ನಲ್ಲಿ ನಡೆದಿದ್ದು ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಈ ವರ್ಷದ ಫಿಫಾ ವಿಶ್ವಕಪ್​ ದಾಖಲೆ ಮಾಡುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದೆ. ಡಿಸೆಂಬರ್​ 18ರಂದು ಫುಟ್​ಬಾಲ್​ ಫೈನಲ್​ ಪಂದ್ಯಾಟ ಆಡಿದ್ದು, ಈ ಫಿಫಾ 2022 ವಿಶ್ವಕಪ್‌ನಲ್ಲಿ ಅರ್ಜೆಂಟೀನಾ (Argentina) ತಂಡ ಫ್ರಾನ್ಸ್ ತಂಡವನ್ನು ಸೋಲಿಸಿ ವಿಶ್ವಕಪ್ ಅನ್ನು ಗೆದ್ದುಕೊಂಡಿದೆ ಮಾತ್ರವಲ್ಲದೆ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ತಮ್ಮ ಜೀವಮಾನದ ಮಹತ್ವಾಕಾಂಕ್ಷೆಯನ್ನೂ ಅರಿತುಕೊಂಡಿರುವುದಾಗಿ ತಿಳಿಸಿದ್ದು, ತನ್ನ ದೇಶಕ್ಕಾಗಿ ಫುಟ್​ಬಾಲ್​ ಆಡುವುದನ್ನು ಮುಂದುವರಿಸುವುದಾಗಿ ಪ್ರತಿಜ್ಞೆಗೈದಿದ್ದಾರೆ.


    ಈ ವರ್ಷದ ಫಿಫಾ ವಿಶ್ವಕಪ್​ 2022 ಕತಾರ್​ನಲ್ಲಿ ನಡೆದಿದೆ. ಈ ಪಂದ್ಯಾಟ ಜನರಿಂದ ಹೆಚ್ಚಿನ ಮೆಚ್ಚುಗೆಯನ್ನು ಪಡೆದಿದ್ದು, ಇದರ ಫೈನಲ್ ಪಂದ್ಯಾಟದಲ್ಲಿ ಅರ್ಜೆಂಟೀನಾ ತಂಡ ವಿಜಯವನ್ನು ಸಾಧಿಸಿದೆ. ಇದಲ್ಲದೆ ಫುಟ್​ಬಾಲ್​ನಲ್ಲಿ ಪ್ರಸಿದ್ಧಿಯನ್ನು ಪಡೆದ ಆಟಗಾರ ಲಿಯೋನೆಲ್​ ಮೆಸ್ಸಿಯವರು ತನ್ನ ವೃತ್ತಿಜೀವನವನ್ನು ಫುಟ್​ಬಾಲ್​ ಮೂಲಕವೇ ಮುಂದುವರಿಸುತ್ತೇನೆ ಎಮದು ಹೇಳಿದ್ದಾರೆ.


    ಇನ್ನಷ್ಟು ಅನುಭವ ಪಡೆಯುತ್ತೇನೆ; ಸ್ಟಾರ್ ಆಟಗಾರ


    ವಿಶ್ವಚಾಂಪಿಯನ್ ಆಗಿ ಇನ್ನಷ್ಟು ಪಂದ್ಯಾಟಗಳಲ್ಲಿ ಇನ್ನಷ್ಟು ಅನುಭವವನ್ನು ಪಡೆಯಲು ಬಯಸುತ್ತೇನೆ ಎಂದು 35 ರ ಹರೆಯದ ಮೆಸ್ಸಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅರ್ಜೆಂಟೀನಾ ವಿರುದ್ಧ ಪೆನಾಲ್ಟಿ ಶೂಟ್-ಔಟ್ ವಿಜಯದ ನಗೆ ಬೀರಿರುವ ಅರ್ಜೆಂಟೀನಾ ವಿಶ್ವಕಪ್‌ನ ಪಟ್ಟವನ್ನು ಮುಡಿಗೇರಿಸಿಕೊಂಡು ಗೆಲುವಿನ ನಗೆ ಬೀರಿದೆ.


    ಇದನ್ನೂ ಓದಿ: ಕಾಲ್ಚೆಂಡಿನ ಸಮರದಲ್ಲಿ ಗೆದ್ದು ಬೀಗಿದ ಅರ್ಜೆಂಟಿನಾ! ಮೆಸ್ಸಿ ವಿಶ್ವಕಪ್ ಕನಸು ನನಸು!


    ತನ್ನ ಸಂಗ್ರಹದಿಂದ ಅತಿಪ್ರಮುಖ ಅಂತಾರಾಷ್ಟ್ರೀಯ ಟ್ರೋಫಿ ಕಳೆದುಕೊಂಡಿದ್ದೇನೆಂದು ತಿಳಿದಿದ್ದ ಅವರು ತಮ್ಮ ವೃತ್ತಿಜೀವನವು ಬಹುತೇಕ ಮುಗಿದಿದೆ ಎಂದೇ ಭಾವಿಸಿದ್ದಾಗಿ ಮೆಸ್ಸಿ ಒಪ್ಪಿಕೊಂಡರು.


    ಫ್ರಾನ್ಸ್ ಸೋಲಿಸಿ ಗೆಲುವಿನ ನಗೆ ಬೀರಿದ ಅರ್ಜೆಂಟೀನಾ


    ಅರ್ಜೆಂಟೀನಾ 4-2 ಗೋಲುಗಳಿಂದ ಫ್ರಾನ್ಸ್ ಅನ್ನು ಸೋಲಿಸಿ ವಿಜಯದ ಪತಾಕೆಯನ್ನು ಹಾರಿಸಿತು. 3-3 ರಲ್ಲಿ ಕೊನೆಗೊಂಡ ಅಂತಿಮ ಹಣಾಹಣಿಯಲ್ಲಿ ಫ್ರಾನ್ಸ್ ಎರಡು ಗೋಲುಗಳನ್ನು ಗಳಿಸಿದರೆ, ಏಳು ಬಾರಿ ಬ್ಯಾಲನ್ ಡಿ ಓರ್ ವಿಜೇತ ಮೆಸ್ಸಿ, ಶೂಟ್-ಔಟ್‌ನಲ್ಲಿ ಬಿರುಸಾದ ಪ್ರದರ್ಶನ ನೀಡಿ ಅರ್ಜೆಂಟೀನಾವನ್ನು 4-2 ಗೋಲುಗಳಲ್ಲಿ ಗೆಲ್ಲುವಂತೆ ಮಾಡಿದರು.


    ನನ್ನ ವೃತ್ತಿಜೀವನದ ಕೊನೆಯ ವರ್ಷಗಳು


    ತಮ್ಮ ದೇಶವು ಫಿಫಾದ ವಿಶ್ವಕಪ್ ಅನ್ನು ಗೆದ್ದುಕೊಂಡಿದ್ದು ತನಗಿದು ಹೆಚ್ಚಿನ ಖುಷಿಯನ್ನು ಸಂತೋಷವನ್ನುಂಟು ಮಾಡಿದ್ದು ನಿಸ್ಸಂಶಯವಾಗಿ ನನ್ನ ವೃತ್ತಿಜೀವನವನ್ನು ಇದರೊಂದಿಗೆ ಕೊನೆಗೊಳಿಸಲು ಬಯಸುತ್ತೇನೆ, ಇದಕ್ಕಿಂತ ಹೆಚ್ಚಿನದೇನನ್ನು ನನಗೆ ಕೇಳಲು ಸಾಧ್ಯವಿಲ್ಲ ಎಂದು ಮೆಸ್ಸಿ ತಿಳಿಸಿದ್ದಾರೆ. ಇದು ನನ್ನ ಕೊನೆಯ ವರ್ಷಗಳಾಗಿರುವುದರಿಂದ ನನ್ನ ವೃತ್ತಿಜೀವನ ಬಹುತೇಕ ಮುಗಿದಿದೆ ಎಂದೇ ಮೆಸ್ಸಿ ತಿಳಿಸಿದ್ದಾರೆ.


    ಉತ್ತಮ ಸಮಯಕ್ಕಾಗಿ ಕಾಯುತ್ತಿದ್ದೆ


    2014 ರ ವಿಶ್ವಕಪ್‌ ಅನ್ನು ಬ್ರೆಜಿಲ್ ನೆಲದಲ್ಲಿ ಜರ್ಮನಿಯ ವಿರುದ್ಧ ಸೋಲುವ ಮೂಲಕ ಮೆಸ್ಸಿ ತಂಡವು ಸಾಕಷ್ಟು ನೋವು ನಿರಾಸೆಗಳನ್ನು ಕಂಡುಕೊಂಡಿದೆ. ಆದರೆ ತಮ್ಮ ಸಮಯ ಬಂದೇ ಬರುತ್ತದೆ ಎಂಬ ಆಶಾಭಾವನೆಯನ್ನು ತಾನು ಹೊಂದಿದ್ದೆ ಎಂದೇ ಮೆಸ್ಸಿ ತಿಳಿಸಿದ್ದಾರೆ.


    ಅರ್ಜೆಂಟೀನಾ ವಿಶ್ವಕಪ್ ಗೆದ್ದಿರುವುದು ಇದು ಸಂಭವಿಸುವ ಸಮಯದಲ್ಲೇ ನಡೆದಿದೆ ಇದು ಒಂದು ರೀತಿಯಲ್ಲಿ ಹುಚ್ಚುತನವಾಗಿದೆ ಅದರೂ ಇದೊಂದು ಅದ್ಭುತ ಹಾಗೂ ಮರೆಯಲಾರದ ಕ್ಷಣವಾಗಿದೆ ಎಂದು ಮೆಸ್ಸಿ ತಿಳಿಸಿದ್ದಾರೆ.

    ಅದ್ಭುತವಾಗಿ ಆಡಿದ ಮೆಸ್ಸಿ


    ವಾರದ ಹಿಂದೆ ನೆದರ್ಲ್ಯಾಂಡ್ಸ್ ವಿರುದ್ಧದ ಕ್ವಾರ್ಟರ್-ಫೈನಲ್ ವಿಜಯದ ನಂತರ ಅರ್ಜೆಂಟೀನಾ ಎರಡನೇ ಬಾರಿಗೆ ಎರಡು ಗೋಲುಗಳ ಲೀಡ್ ಪಡೆದಿದ್ದಂತಹ ಈ ಸನ್ನಿವೇಶವನ್ನು ವಿವರಿಸುವುದು ಕಷ್ಟ ಎಂದು ಮೆಸ್ಸಿ ತಿಳಿಸಿದ್ದಾರೆ.


    ಅರ್ಜೆಂಟೀನಾ ಹಾಫ್-ಟೈಮ್‌ನಲ್ಲಿ 2-0 ಮುನ್ನಡೆಯೊಂದಿಗೆ ಎಕ್ಸ್ಟ್ರಾ ಟೈಮ್‌ನಲ್ಲಿ 3-2 ಮುನ್ನಡೆ ಸಾಧಿಸಿದರೆ, ಫ್ರಾನ್ಸ್‌ನ ಕೈಲಿಯನ್ ಎಂಬಪ್ಪೆ ನಾರ್ಮಲ್ ಟೈಮ್‌ನಲ್ಲಿ 2 ತಡವಾದ ಗೋಲುಗಳೊಂದಿಗೆ ಹಾಗೂ ಎಕ್ಸ್ಟ್ರಾ ಟೈಮ್‌ನಲ್ಲಿ ಇನ್ನೊಂದು ಗೋಲ್ ಮಾಡುವ ಮೂಲಕ ಅರ್ಜೆಂಟೀನಾವನ್ನು ಹಿಂದಿಕ್ಕಿ, ಪಂದ್ಯವನ್ನು ಪೆನಾಲ್ಟಿಗೆ ಕೊಂಡೊಯ್ದರು.


    ವಿಚಿತ್ರ ಪಂದ್ಯಾಟ


    ನೆದರ್ಲ್ಯಾಂಡ್ಸ್ ವಿರುದ್ಧದ ಇನ್ನೊಂದು ಪಂದ್ಯದಂತೆಯೇ ಇದು ವಿಚಿತ್ರವಾದ ಪಂದ್ಯಾಟವಾಗಿತ್ತು ಎಂದು ಮೆಸ್ಸಿ ತಿಳಿಸಿದ್ದಾರೆ. ಅದಾಗ್ಯೂ ವಿಶ್ವಕಪ್ ಟ್ರೋಫಿ ಸುಂದರವಾಗಿದೆ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


    ಕೋಚ್ ಲಿಯೋನೆಲ್ ಸ್ಕಾಲೋನಿ, ಅರ್ಜೆಂಟೀನಾದ ಎರಡನೇ ಗೋಲು ಗಳಿಸಿದ ವಿಂಗರ್ ಏಂಜೆಲ್ ಡಿ ಮಾರಿಯಾ ಮತ್ತು ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಮೆಸ್ಸಿ ಅರ್ಜೆಂಟೀನಾ ಪರ 172 ಬಾರಿ ಆಡಿದ್ದಾರೆ, 2005 ರಲ್ಲಿ ಫುಟ್ಬಾಲ್‌ಗೆ ಪಾದಾರ್ಪಣೆ ಮಾಡಿದ ನಂತರ 98 ಗೋಲುಗಳನ್ನು ಗಳಿಸಿದ್ದಾರೆ.

    Published by:Prajwal B
    First published: