381 ರನ್​ಗಳ ಹೀನಾಯ ಸೋಲು ಕಂಡ ಇಂಗ್ಲೆಂಡ್: ದಾಖಲೆ ಬರೆದ ವೆಸ್ಟ್​ ಇಂಡೀಸ್

ಇಂಗ್ಲೆಂಡ್​​ಗೆ ಗೆಲ್ಲಲು ವಿಂಡೀಸ್ 627 ರನ್​ಗಳ ಬೆಟ್ಟದತ್ತ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಆಂಗ್ಲರು ಕೇವಲ 246 ರನ್​ಗೆ ಆಲೌಟ್ ಆಗಿ ಸೋಲುಪ್ಪಿಕೊಂಡಿತು. ರೋಸ್ಟನ್ ಚೇಸ್ ಬೌಲಿಂಗ್ ಬಿರುಗಾಳಿಗೆ ತರಗೆಲೆಯಂತೆ ವಿಕೆಟ್ ಉರುಳಿದವು.

ಸಂಭ್ರಮಾಚರಣೆಯಲ್ಲಿ ವೆಸ್ಟ್​ ಇಂಡೀಸ್ ತಂಡದ ಆಟಗಾರರು

ಸಂಭ್ರಮಾಚರಣೆಯಲ್ಲಿ ವೆಸ್ಟ್​ ಇಂಡೀಸ್ ತಂಡದ ಆಟಗಾರರು

  • News18
  • Last Updated :
  • Share this:
ಬಾರ್ಬಡಸ್: ವೆಸ್ಟ್​ ಇಂಡೀಸ್ ಪ್ರವಾಸ ಬೆಳೆಸಿರುವ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್​​ನಲ್ಲೆ ಭಾರೀ ಮುಖಭಂಗ ಅನಭವಿಸಿದೆ. ಆಂಗ್ಲರನ್ನು ಬಗ್ಗುಬಡಿದ ಕೆರಿಬಿಯನ್ನರು 381 ರನ್​ಗಳ ಭರ್ಜರಿ ಗೆಲುವು ಸಾಧಿಸಿ ದಾಖಲೆ ಬರೆದಿದೆ.

ಈ ಗೆಲುವಿನೊಂದಿಗೆ ವೆಸ್ಟ್​ ಇಂಡೀಸ್ ಮೂರು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಅಲ್ಲದೆ ವೆಸ್ಟ್​ ಇಂಡೀಸ್ ತನ್ನ ಕ್ರಿಕೆಟ್ ಇತಿಹಾಸದಲ್ಲೇ ತವರು ಮೈದಾನದಲ್ಲಿ ಗೆದ್ದ ಬೃಹತ್ ಜಯ ಇದಾಗಿದೆ.

 ಇಂಗ್ಲೆಂಡ್​​ಗೆ ಗೆಲ್ಲಲು ವಿಂಡೀಸ್ 627 ರನ್​ಗಳ ಬೆಟ್ಟದತ್ತ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಆಂಗ್ಲರು ಕೇವಲ 246 ರನ್​ಗೆ ಆಲೌಟ್ ಆಗಿ ಸೋಲುಪ್ಪಿಕೊಂಡಿತು. ರೋಸ್ಟನ್ ಚೇಸ್ ಬೌಲಿಂಗ್ ಬಿರುಗಾಳಿಗೆ ತರಗೆಲೆಯಂತೆ ವಿಕೆಟ್ ಉರುಳಿದವು. 60 ರನ್​ಗೆ 8 ವಿಕೆಟ್ ಕಿತ್ತ ಚೇಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ: ಸಚಿನ್ ದಾಖಲೆ ಪುಡಿ ಮಾಡಿದ 16ರ ಪೋರ: ನೇಪಾಳ ಬ್ಯಾಟ್ಸ್​ಮನ್​​ನ ಹೊಸ ಸಾಧನೆ ಏನು?

ಇದಕ್ಕೂ ಮೊದಲು ವೆಸ್ಟ್​ ಇಂಡೀಸ್ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 289 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಕೇವಲ 77 ರನ್​ಗೆ ಸರ್ವಪತನ ಕಂಡಿತು. ಬೃಹತ್ ಮುನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ ವಿಂಡೀಸ್ 120 ರನ್​ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭ ಜೊತೆಯಾದ ನಾಯಕ ಜೇಸನ್ ಹೋಲ್ಡರ್ ಹಾಗೂ ಶೇನ್ ಡೌರಿಚ್ ದಾಖಲೆಯ ಜೊತೆಯಾಟ ವಾಡಿದರು. ಟೊಂಕಕಟ್ಟಿ ಆಡಿದ ಈ ಜೋಡಿ ತಂಡದ ಮೊತ್ತವನ್ನು 415 ಕ್ಕೆ ತಂದಿಟ್ಟು ಡಿಕ್ಲೇರ್ ಮಾಡಿಕೊಂಡರು. ಅಂತೆಯೆ ಎದುರಾಳಿಗೆ 627 ರನ್​ಗಳ ಟಾರ್ಗೆಟ್ ನೀಡಿತು.

ಈ ಪಂದ್ಯದ ಪ್ರಮುಖ ಆಕರ್ಷಣೆ ಎಂದರೆ ಜೇಸನ್ ಹೋಲ್ಡರ್ ಹಾಗೂ ಶೇನ್ ಡೌರಿಚ್​ರ ಅಮೋಘ ಜೊತೆಯಾಟ. ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಬರೋಬ್ಬರಿ 295 ರನ್​ಗಳ ಕಾಣಿಕೆ ನೀಡಿದರು. ಅದರಲ್ಲು ನಾಯಕನ ಆಟವಾಡಿದ ಹೋಲ್ಡರ್​ 229 ಎಸೆತಗಳಲ್ಲಿ 23 ಬೌಂಡರಿ ಹಾಗೂ 8 ಸಿಕ್ಸ್​ ಸಿಡಿಸಿ ಅಜೇಯ 202 ರನ್​​ ಬಾರಿಸಿ ಜೇವನ ಶ್ರೇಷ್ಠ ಸಾಧನೆ ಮಾಡಿದರು. ಇವರಿಗೆ ಜೊತೆಯಾಗಿದ್ದ ಡೌರಿಚ್ ಅಜೇಯ 116 ರನ್ ಬಾರಿಸಿದರು.

First published: