• Home
  • »
  • News
  • »
  • sports
  • »
  • Cricket News: ಏಕದಿನ ಕ್ರಿಕೆಟ್​ನಲ್ಲಿ ಇತಿಹಾಸ ಬರೆದ ಸಾಗರದ ಹುಡುಗ; 24 ಸಿಕ್ಸ್, 48 ಬೌಂಡರಿ, ದಾಖಲೆಯ 407 ರನ್!

Cricket News: ಏಕದಿನ ಕ್ರಿಕೆಟ್​ನಲ್ಲಿ ಇತಿಹಾಸ ಬರೆದ ಸಾಗರದ ಹುಡುಗ; 24 ಸಿಕ್ಸ್, 48 ಬೌಂಡರಿ, ದಾಖಲೆಯ 407 ರನ್!

Cricket News: 16 ವರ್ಷದ ತನ್ಮಯ್ 50 ಓವರ್‌ಗಳ ಪಂದ್ಯದಲ್ಲಿ ಏಕಾಂಗಿಯಾಗಿ 407 ರನ್ ಗಳಿಸಿದ್ದಾರೆ. ಇದಕ್ಕಾಗಿ ಅವರು ಆಡಿದ್ದು ಕೇವಲ 165 ಎಸೆತಗಳು.

Cricket News: 16 ವರ್ಷದ ತನ್ಮಯ್ 50 ಓವರ್‌ಗಳ ಪಂದ್ಯದಲ್ಲಿ ಏಕಾಂಗಿಯಾಗಿ 407 ರನ್ ಗಳಿಸಿದ್ದಾರೆ. ಇದಕ್ಕಾಗಿ ಅವರು ಆಡಿದ್ದು ಕೇವಲ 165 ಎಸೆತಗಳು.

Cricket News: 16 ವರ್ಷದ ತನ್ಮಯ್ 50 ಓವರ್‌ಗಳ ಪಂದ್ಯದಲ್ಲಿ ಏಕಾಂಗಿಯಾಗಿ 407 ರನ್ ಗಳಿಸಿದ್ದಾರೆ. ಇದಕ್ಕಾಗಿ ಅವರು ಆಡಿದ್ದು ಕೇವಲ 165 ಎಸೆತಗಳು.

  • News18 Kannada
  • Last Updated :
  • New Delhi, India
  • Share this:

16 ನೇ ವಯಸ್ಸಿನಲ್ಲಿ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಭಾರತೀಯ ಕ್ರಿಕೆಟ್ (Cricket) ತಂಡಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ದಿನ ಕಳೆದಂತೆ ಕ್ರಿಕೆಟ್​ ಎಂಬ ಜಂಟಲ್​ಮೆನ್​ ಗೇಮ್​ ಅನ್ನೇ ಏಕಮಾತ್ರ ಆಟಗಾರನಾಗಿ ಬ್ಯಾಟಿಂಗ್​ನಲ್ಲಿ ಆಳಿದರು. ದಶಕಗಳ ಕಾಲ ಅಬ್ಬರಿಸಿದ ಸಚಿನ್​ ಇಂದಿಗೂ ಅದೆಷ್ಟೋ ಯುವ ಕ್ರಿಕೆಟಿಗರಿಗೆ ಆದರ್ಶರಾಗಿದ್ದಾರೆ. ಇದೀಗ ಅಂಥದ್ದೇ ಮತ್ತೊಬ್ಬ ಬ್ಯಾಟ್ಸ್ ಮನ್ ಕ್ರಿಕೆಟ್​ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಚಿನ್ ಅವರಷ್ಟೇ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಆದರೆ, ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಕ್ರಿಕೆಟಿಗನ ಹೆಸರು ತನ್ಮಯ್ ಮಂಜುನಾಥ್ (Tanmay Manjunath) ಎಂದು. 16 ವರ್ಷದ ತನ್ಮಯ್ 50 ಓವರ್‌ಗಳ ಪಂದ್ಯದಲ್ಲಿ ಏಕಾಂಗಿಯಾಗಿ 407 ರನ್ ಗಳಿಸಿದ್ದಾರೆ. ಇದಕ್ಕಾಗಿ ಅವರು ಆಡಿದ್ದು ಕೇವಲ 165 ಎಸೆತಗಳು.


16ನೇ ವಯಸ್ಸಿನಲ್ಲೇ ದಾಖಲೆ ಬರೆದ ಯುವಕ:


ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ಸಾಗರದ ನಿವಾಸಿ ತನ್ಮಯ್ ಈ ಸಾಧನೆ ಮಾಡಿದ್ದಾರೆ. ಶಿವಮೊಗ್ಗದ ಪೆಸಿಟ್ ಎಂಜಿನಿಯರಿಂಗ್ ‌ಕಾಲೇಜಿನ‌‌ ಅಟಲ್ ಬಿಹಾರಿ ವಾಜಪೇಯಿ‌ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿತ್ತು. ಸಾಗರ ಕ್ರಿಕೆಟ್ ಕ್ಲಬ್ ಮತ್ತು ಭದ್ರಾವತಿ ಎನ್‌ಟಿಟಿಸಿ ಕ್ಲಬ್ ನಡುವೆ ಪಂದ್ಯ ನಡೆಯಿತು. ಸಾಗರ ಕ್ರಿಕೆಟ್ ಕ್ಲಬ್‌ಗಾಗಿ ಆಡುತ್ತಿದ್ದ ತನ್ಮಯ್ 50 ಓವರ್‌ಗಳ ಪಂದ್ಯದಲ್ಲಿ 407 ರನ್‌ಗಳ ಇನ್ನಿಂಗ್ಸ್‌ ಆಡಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 48 ಬೌಂಡರಿಗಳನ್ನು ಗಳಿಸಿದರೆ, ಅವರ ಬ್ಯಾಟ್‌ನಿಂದ 24 ಸಿಕ್ಸರ್‌ಗಳು ಸಿಡಿದಿದ್ದವು. ಇವರ ಇನ್ನಿಂಗ್ಸ್ ನೋಡಿದವರೆಲ್ಲ ಒಮ್ಮೆ ನಿಬ್ಬೆರಗಾಗಿದ್ದಾರೆ.ತನ್ಮಯ್ ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ 407 ರನ್‌ಗಳಲ್ಲಿ 336 ರನ್ ಗಳಿಸಿದರು. ತನ್ಮಯ್ ಅವರ ಈ ಇನ್ನಿಂಗ್ಸ್‌ನಿಂದಾಗಿ ಅವರ ತಂಡ ಸಾಗರ ಕ್ಲಬ್ 50 ಓವರ್‌ಗಳ ಪಂದ್ಯದಲ್ಲಿ 583 ರನ್ ಗಳಿಸಿತು. ಈ ಮೂಲಕ ಸಾಗರ ತಂಡ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಭದ್ರಾವತಿ ತಂಡ ಕೇವಲ 73 ರನ್‌ ಗಳಿಸಿ ಆಲ್ ಔಟ್ ಆಯಿತು.


ಕ್ರಿಕೆಟ್​ನ ಎಲ್ಲಾ ದಾಖಲೆ ಪುಡಿಗಟ್ಟಿದ ತನ್ಮಯ್:


ಏಕದಿನದಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆ ಭಾರತೀಯ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದೆ. ರೋಹಿತ್ ಶ್ರೀಲಂಕಾ ವಿರುದ್ಧ 264 ರನ್‌ಗಳ ದಾಖಲೆಯ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಅವರು 33 ಬೌಂಡರಿ ಹಾಗೂ 9 ಸಿಕ್ಸರ್‌ಗಳನ್ನು ಬಾರಿಸಿದ್ದರು. ರೋಹಿತ್ ಏಕದಿನದಲ್ಲಿ ಮೂರು ದ್ವಿಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್. 2010 ರಲ್ಲಿ ಸಚಿನ್ ಬ್ಯಾಟ್‌ನಿಂದ ಏಕದಿನದ ಮೊದಲ ದ್ವಿಶತಕ ಹೊರಹೊಮ್ಮಿತ್ತು. ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ್ದರು. ಆದರೆ ಇದೀಗ ಈ ಯುವ ಆಟಗಾರ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಲ್ಲದಿದ್ದರೂ, ಕ್ಲಬ್ ಕ್ರಿಕೆಟ್​ನಲ್ಲಿ ರೋಹಿತ್ ಅವರ ದಾಖಲೆಯನ್ನೂ ಮುರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಯುವ ಆಟಗಾರ ತನ್ಮಯ್ ಅವರು ಭವಿಷ್ಯದ ಟೀಂ ಇಂಡಿಯಾದ ಆಟಗಾರರಾಬಹುದೆಂದು ಹೇಳಲಾಗುತ್ತಿದೆ.
ಕರ್ನಾಟಕ ತಂಡಕ್ಕೆ ಆಯ್ಕೆ ಆಗಿದ್ದ ತನ್ಮಯ್:


ಇನ್ನು, ಕಳೆದ ವರ್ಷ, ತನ್ಮಯ್ ಮಂಜುನಾಥ್ ಅವರು 16 ವರ್ಷ  ವಯಸ್ಸಿನ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ತನ್ಮಯ್ ಅವರಿಗೆ ಕೊರೋನಾ ದೊಡ್ಡ ಹೊಡೆತ ನೀಡಿತು. ಕೊರೋನಾದಿಂದಾಗಿ ಕೆಎಸ್‌ಸಿಎ 16 ವರ್ಷದ ವಯೋಮಿತಿಯ ಕ್ರಿಕೆಟ್ ಟೂರ್ನಿ ರದ್ದಾಯಿತು. ಇದರಿಂದ ಅವರಿಗೆ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಮಿಸ್​ ಮಾಡಿಕೊಂಡರು. ಆದರೆ ಇದೀಗ ಮತ್ತೆ ಅಬ್ಬರಿಸುವ ಮೂಲಕ ತನ್ಮಯ್ ಅವರು ಆಯ್ಕೆಗಾರರ ಗಮನವನ್ನು ಸೆಳೆದಿದ್ದಾರೆ.

Published by:shrikrishna bhat
First published: