2020ರ ಎಎಫ್​ಸಿ ಅಂಡರ್-16 ಚಾಂಪಿಯನ್​ಶಿಪ್​ಗೆ ಭಾರತ ಸೇರಿ 16 ತಂಡಗಳ ಪ್ರವೇಶ

ಈ ಬಾರಿ ಕೋಚ್ ಬಿಬಿಯಾನೋ ಅವರ ಗರಡಿಯಲ್ಲಿ ಹೊಸ ಚುರುಕು ಕಂಡಿರುವ ಭಾರತದ ಸಬ್ ಜೂನಿಯರ್ ತಂಡವು ತನ್ನ ಆಕರ್ಷಕ ಆಟದ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

Vijayasarthy SN | news18
Updated:September 23, 2019, 3:04 PM IST
2020ರ ಎಎಫ್​ಸಿ ಅಂಡರ್-16 ಚಾಂಪಿಯನ್​ಶಿಪ್​ಗೆ ಭಾರತ ಸೇರಿ 16 ತಂಡಗಳ ಪ್ರವೇಶ
ಭಾರತದ ಅಂಡರ್-16 ಫುಟ್ಬಾಲ್ ತಂಡದ ಆಟಗಾರರು
  • News18
  • Last Updated: September 23, 2019, 3:04 PM IST
  • Share this:
ಬೆಂಗಳೂರು: ಭಾರತದ 16 ವರ್ಷ ವಯೋಮಾನದೊಳಗಿನ ಫುಟ್ಬಾಲ್ ತಂಡ 2020ರ ಎಎಫ್​ಸಿ ಚಾಂಪಿಯನ್​ಶಿಪ್​ನ ಪ್ರಧಾನ ಹಂತಕ್ಕೆ ಲಗ್ಗೆ ಇಟ್ಟಿದೆ. ನಿನ್ನೆ ಮುಕ್ತಾಯಗೊಂಡ ಅರ್ಹತಾ ಟೂರ್ನಿಯಲ್ಲಿ ಭಾರತೀಯ ಹುಡುಗರು ತಮ್ಮ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾಲಿಫೈ ಆಗಿದ್ದಾರೆ. ಭಾರತ ಸೇರಿ ಒಟ್ಟು 16 ತಂಡಗಳು ಪ್ರಧಾನ ಹಂತಕ್ಕೆ ಅರ್ಹತೆ ಗಿಟ್ಟಿಸಿವೆ.

ಚಾಂಪಿಯನ್​ಶಿಪ್​ಗೆ ಅರ್ಹತೆ ಪಡೆದ ತಂಡಗಳು:
ಭಾರತ, ಬಹರೇನ್, ತಜಿಕಿಸ್ತಾನ್, ಇರಾನ್, ಸೌದಿ ಅರೇಬಿಯಾ, ಕತಾರ್, ಯುಎಇ, ಚೀನಾ, ಆಸ್ಟ್ರೇಲಿಯಾ, ನಾರ್ಥ್ ಕೊರಿಯಾ, ಜಪಾನ್, ಸೌಥ್ ಕೊರಿಯಾ, ಯೆಮೆನ್, ಇಂಡೋನೇಷ್ಯಾ, ಉಜ್ಬೆಕಿಸ್ತಾನ್ ಮತ್ತು ಓಮನ್.

ಇದನ್ನೂ ಓದಿ: ಯುವರಾಜ್ ಜೆರ್ಸಿ ನಂಬರ್ 12 ಅನ್ನು ನಿವೃತ್ತಿಯೆಂದು ಘೋಷಿಸಿ; ಬಿಸಿಸಿಗೆ ಗಂಭೀರ್ ಮನವಿ

ಇರಾಕ್, ಥಾಯ್ಲೆಂಡ್ ಮೊದಲಾದ ದೇಶಗಳ ತಂಡಗಳು ಅರ್ಹತೆ ಪಡೆಯಲು ವಿಫಲಗೊಂಡಿವೆ. ಭಾರತದ ಅಂಡರ್-16 ತಂಡವು ನಿನ್ನೆ ತಮ್ಮ ಗುಂಪಿನ ಕೊನೆಯ ಪಂದ್ಯದಲ್ಲಿ ಉಜ್ಬೆಕಿಸ್ತಾನ ವಿರುದ್ಧ ಡ್ರಾ ಮಾಡಿಕೊಂಡಿತು. ಇದರೊಂದಿಗೆ ಎರಡೂ ತಂಡಗಳು ಅಗ್ರಸ್ಥಾನ ಹಂಚಿಕೊಂಡು ಪ್ರಧಾನ ಹಂತಕ್ಕೆ ಮುನ್ನಡೆದಿದ್ದವು. ಇದೇ ಗುಂಪಿನಲ್ಲಿದ್ದ ಬಹರೇನ್ ತಂಡವು 2020ರ ಚಾಂಪಿಯನ್​ಶಿಪ್​ಗೆ ಆತಿಥ್ಯ ವಹಿಸುತ್ತಿರುವುದರಿಂದ ಅದೇ ಆಧಾರದ ಮೇಲೆ ಕ್ವಾಲಿಫೈ ಆಗಿದೆ. ಉಜ್ಬೆಕಿಸ್ತಾನದ ಪಂದ್ಯಕ್ಕಿಂತ ಮುಂಚೆ ಭಾರತೀಯ ಬಾಲಕರು ತುರ್ಕ್​ಮೆನಿಸ್ತಾನ ಹಾಗೂ ಬಹರೇನ್ ತಂಡಗಳನ್ನು ಭಾರೀ ಅಂತರದಿಂದ ಪರಾಭವಗೊಳಿಸಿದ್ದರು.

ಇದನ್ನೂ ಓದಿ: ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು? ಎಂಬ ಪ್ರಶ್ನೆಗೆ ಕಾಜಲ್ ನೀಡಿದ ಉತ್ತರವೇನು ಗೊತ್ತಾ..?

ಭಾರತದ ಅಂಡರ್-16 ತಂಡವು ಎಎಫ್​ಸಿ ಚಾಂಪಿಯನ್​ಶಿಪ್​ಗೆ ಅರ್ಹತೆ ಪಡೆದಿರುವುದು ಇದು 9ನೇ ಬಾರಿಯಾಗಿದೆ. ಒಮ್ಮೆ ಮಾತ್ರ ಕ್ವಾರ್ಟರ್​ಫೈನಲ್ ಪ್ರವೇಶ ಮಾಡಿದ್ದು ಅದರ ಗರಿಷ್ಠ ಸಾಧನೆ. 2018ರ ಎಎಫ್​ಸಿ ಟೂರ್ನಿಯಲ್ಲಿ ಆ ಸಾಧನೆ ಬಂದಿತ್ತು. ಕ್ವಾರ್ಟರ್​ಫೈನಲ್​ನಲ್ಲಿ ಸೌಥ್ ಕೊರಿಯಾ ವಿರುದ್ಧ ಏಕೈಕ ಗೋಲಿನಿಂದ ಸೋತು ವಿಶ್ವಕಪ್​ಗೆ ಅರ್ಹತೆ ಗಿಟ್ಟಿಸುವುದರಿಂದ ಸ್ವಲ್ಪದರಲ್ಲಿ ವಂಚಿತವಾಗಿತ್ತು. ಅದು ಬಿಟ್ಟರೆ ಭಾರತೀಯ ಬಾಲಕರು ಎಎಫ್​ಸಿ ಅಂಡರ್-16 ಚಾಂಪಿಯನ್​ಶಿಪ್​ನಲ್ಲಿ ಎಂದಿಗೂ ಮೊದಲ ಸುತ್ತು ದಾಟಿ ಹೋಗಿದ್ದಿಲ್ಲ. ಆದರೆ, ಈ ಬಾರಿ ಕೋಚ್ ಬಿಬಿಯಾನೋ ಅವರ ಗರಡಿಯಲ್ಲಿ ಹೊಸ ಚುರುಕು ಕಂಡಿರುವ ಭಾರತದ ಸಬ್ ಜೂನಿಯರ್ ತಂಡವು ತನ್ನ ಆಕರ್ಷಕ ಆಟದ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.2020ರ ಸೆಪ್ಟೆಂಬರ್​ನಲ್ಲಿ ಪ್ರಾರಂಭಗೊಳ್ಳಲಿರುವ ಎಎಫ್​ಸಿ ಚಾಂಪಿಯನ್​ಶಿಪ್​ನಲ್ಲಿ 16 ತಂಡಗಳನ್ನು 4 ಗುಂಪುಗಳಾಗಿ ವಿಭಾಗಿಸಲಾಗುತ್ತದೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್​ಫೈನಲ್ ಪ್ರವೇಶಿಸಲಿವೆ. ಭಾರತ ತಂಡ ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾ, ಜಪಾನ್, ಸೌಥ್ ಕೊರಿಯಾದಂಥ ಪ್ರಬಲ ತಂಡಗಳನ್ನು ಎದುರುಗೊಳ್ಳುವ ಸಾಧ್ಯತೆ ಇಲ್ಲದಿಲ್ಲ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ