ಏಷ್ಯನ್ ಗೇಮ್ಸ್​ 2018: 14ನೇ ದಿನದಲ್ಲಿ ಭಾರತಕ್ಕೆ 2 ಚಿನ್ನ, 1 ಬೆಳ್ಳಿ-ಕಂಚು

news18
Updated:September 1, 2018, 9:12 PM IST
ಏಷ್ಯನ್ ಗೇಮ್ಸ್​ 2018: 14ನೇ ದಿನದಲ್ಲಿ ಭಾರತಕ್ಕೆ 2 ಚಿನ್ನ, 1 ಬೆಳ್ಳಿ-ಕಂಚು
news18
Updated: September 1, 2018, 9:12 PM IST
ನ್ಯೂಸ್ 18 ಕನ್ನಡ

ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಅಂತಿಮ ಹಂತ ತಲುಪಿದ್ದು 14ನೇ ದಿನದಾಟದಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ.

ಮೊದಲಿಗೆ ಇಂದು ಬಾಕ್ಸರ್ ಅಮಿತ್ ಪಂಘಲ್ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಬೇಟೆಯಾಡಿದ್ದಾರೆ. ಪುರುಷರ 49 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಕಳೆದ ಒಲಿಂಪಿಕ್ಸ್ ಚಾಂಪಿಯನ್ ಉಜ್ಬೇಕಿಸ್ತಾನದ ಹಸನ್ಬಾಯ್ ಡಸ್ಮಮಾವ್ ಅವರನ್ನು ಮಣಿಸಿ ಅಮಿತ್ ಪಂಘಲ್ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದರ ಜೊತೆಗೆ ಭಾರತದ ಪುರುಷರ ತಂಡ ಬ್ರಿಡ್ಜ್ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದೆ. ಪ್ರಣಬ್ ಬರ್ಧನ್ ಹಾಗೂ ಶಿಬ್ನಾಭ್ 384 ಪಾಯಿಂಟ್ ಕಲೆಹಾಕುವ ಮೂಲಕ ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದು ಕೊಟ್ಟಿದ್ದಾರೆ. ಇದಾದ ಬಳಿಕ ನಡೆದ ಮಹಿಳೆಯರ ಸ್ಕ್ವಾಷ್ ಫೈನಲ್​ನಲ್ಲಿ ಭಾರತದ ವನಿತೆಯರು ರಜತ ಪದಕ ಗೆದ್ದಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಭಾರತ ಪುರುಷರ ಹಾಕಿ ತಂಡ ಪಾಕಿಸ್ತಾನ ವಿರುದ್ಧ 2-1 ಗೋಲುಗಳಿಂದ ಗೆದ್ದು ಪದಕ ಜಯಿಸಿದೆ.

ಒಟ್ಟಾರೆ ಭಾರತ ಇಂದು 4 ಪದಕ ಗೆದ್ದಿದ್ದು, ಚಿನ್ನ 15, ಬೆಳ್ಳಿ 24, ಹಾಗೂ 30 ಕಂಚಿನ ಪದಕಗಳನ್ನ ತನ್ನದಾಗಿಸಿಕೊಂಡಿದ್ದು, ಒಟ್ಟಾರೆ 69 ಪದಕಗಳೊಂದಿಗೆ 8ನೇ ಸ್ಥಾನದಲ್ಲಿ ಮುಂದುವರಿದಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ  ಇದು ಭಾರತ ಅತ್ಯುತ್ತಮ ಸಾಧನೆಯಾಗಿದೆ.
First published:September 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ