ಮುಳುಗುವವನಿಗೆ ತರಗೆಲೆಯೇ ಆಸರೆ ಎಂಬಂತೆ ಶೂ ಒಂದು ಬಾಲಕನ ಜೀವ ಕಾಪಾಡಿದೆ. ಹೌದು ಅಚ್ಚರಿ ಎನಿಸಿದರೂ, ನಂಬಲೇಬೇಕಾದ ಈ ಘಟನೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ನ(Queensland, Australia)ಲ್ಲಿ ನಡೆದಿದೆ.ಆಸ್ಟ್ರೇಲಿಯದ ಕ್ವೀನ್ಸ್ಲ್ಯಾಂಡ್ನ 14 ವರ್ಷದ ಬಾಲಕನಿಗೆ (14 Year Old Boy) ಕಳೆದ ಶುಕ್ರವಾರ ಸಿಡಿಲು ಬಡಿದಿದ್ದರೂ ಆತನ ಶೂಗಳು ಆತನನ್ನು ರಕ್ಷಿಸಿವೆ. ಟ್ಯಾಲಿನ್ ರೋಸ್ ತನ್ನ ಶಾಲೆಯಾದ ರೋಬಿನಾ ಸ್ಟೇಟ್ ಹೈಸ್ಕೂಲ್ ಹೊರಗೆ ನಡೆದು ಹೋಗುತ್ತಿರುವ ವೇಳೆ ಮಿಂಚು (Lighting) ಅಪ್ಪಳಿಸಿದೆ. ಇದರ ತೀವ್ರತೆಗೆ ಬಾಲಕ ನಿಂತಲ್ಲೇ ನಿಸ್ತೇಜನಾಗಿದ್ದಾನೆ. ಡೈಲಿ ಮೇಲ್ ವರದಿಗಳ ಪ್ರಕಾರ, ಟ್ಯಾಲಿನ್ ತನ್ನ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಠಾತ್ ಅಬ್ಬರಿಸಿದ ಮಿಂಚು ಹತ್ತಿರದ ಲೋಹದ ಕಂಬದಿಂದ ಪುಟಿದೆದ್ದು ಅವನಿಗೆ ಬಡಿದಿದೆ ಎಂದು ಹೇಳಿದೆ.
7 ನ್ಯೂಸ್ಯೊಂದಿಗೆ ಮಾತನಾಡಿದ ಟ್ಯಾಲಿನ್ ರೋಸ್ ತಾಯಿ ಮಿಚೆಲ್ ನಿಮ್ಮೋ, ಮಗ ಧರಿಸಿದ್ದ ಬೂಟುಗಳ ದಪ್ಪವಾದ ರಬ್ಬರ್ ಅಡಿಭಾಗವು ನಿಮ್ಮ ಮಗನ ಜೀವವನ್ನು ಉಳಿಸಿದೆ. ದಪ್ಪವಾದ ರಬ್ಬವು ಮಗನಿಗೆ ಅಪ್ಪಳಿಸಿದ್ದ ಮಿಂಚಿನ ತೀವ್ರತೆಯನ್ನು ಕಡಿಮೆ ಮಾಡಿದೆ ಎಂದು ಆತನನ್ನು ಪರೀಕ್ಷಿಸಿದ ಆಸ್ಪತ್ರೆಯ ವೈದ್ಯರು ತಿಳಿಸಿದರು ಎಂಬುದಾಗಿ ಹೇಳಿದರು.
ಘಟನೆಯ ಬಗ್ಗೆ ಮಾತನಾಡುತ್ತಾ ಮಿಚೆಲ್, ಟ್ಯಾಲಿನ್ನನ್ನು ಶಾಲೆಗೆ ಬಿಟ್ಟಾಗ ಬೆಳಗ್ಗೆ ಗುಡುಗು ಸಹಿತ ಮಳೆಯಾಗುತ್ತಿತ್ತು ಎಂದು ನೆನಪಿಸಿಕೊಂಡರು.
ಘಟನೆಯ ನಂತರ, ಮಿಚೆಲ್ ಶಾಲೆಯ ಸಿಬ್ಬಂದಿಯು ಫೋನ್ ಕರೆ ಮಾಡಿ ಮಗನಿಗೆ ಆದ ಅನಾಹುತದ ಬಗ್ಗೆ ಮಾಹಿತಿ ನೀಡಿದರು. ಘಟನಾ ಸ್ಥಳದಲ್ಲಿ ತಂದೆ ಇದ್ದರು. ಅವರು ಟ್ಯಾಲಿನ್ ರೋಸ್ಗೆ ಮಿಂಚು ಬಡಿದು ಕೆಳಗೆ ಬಿದ್ದದ್ದನ್ನು ಕಂಡರು ಮತ್ತು ಟ್ಯಾಲಿನ್ನ ಬಳಿ ಓಡಿಹೋಗಿ ಸುರಕ್ಷಿತವಾಗಿ ಶಾಲೆಯೊಳಗೆ ಕರೆದೊಯ್ದರು ಎಂದು ಉಲ್ಲೇಖಿಸಿದ್ದಾರೆ.
ವರದಿಗಳ ಪ್ರಕಾರ, ಮಿಚೆಲ್ ಶಾಲೆಗೆ ತಲುಪುವ ಹೊತ್ತಿಗೆ, ಟ್ಯಾಲಿನ್ ಮಿಂಚಿನ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದದ್ದು ಕಂಡು ಬಂತು. ಆದರೆ ಆತನಿಗೆ ಏನಾದರೂ ತೊಂದರೆಯಾಗಿದೆಯೇ ಎಂಬುದನ್ನು ಪರೀಕ್ಷಿಸಲು ಆಸ್ಪತ್ರೆಗೆ ಸೇರಿಸಲಾಯಿತು.
ಹುಡುಗನಿಗೆ ಪ್ರಜ್ಞೆ ಬಂದ ನಂತರ, ಆಘಾತದ ನಂತರ, ಅವನಿಗೆ ಒಂದು ನಿಮಿಷ ಪೂರ್ತಿ ಏನನ್ನೂ ಹೇಳಲು ಅಥವಾ ಕೇಳಲು ಸಾಧ್ಯವಾಗಲಿಲ್ಲ. ತದ ನಂತರ ಘಟನೆಯನ್ನು ವಿವರಿಸಿದನು ಎಂದು ಹೇಳಿದರು.
ಈ ರೀತಿಯ ಪ್ರಕರಣಗಳು ಆಸ್ಪತ್ರೆಗೆ ಇದುವರೆಗೂ ಬಂದಿರಲಿಲ್ಲ. ತಮಗೂ ಈ ರೀತಿ ಅನುಭವವಾಗಿರಲಿಲ್ಲ ಮತ್ತು ನಿಮ್ಮ ಮಗ ಜೀವಂತವಾಗಿರುವುದೇ ನಿಮ್ಮ ಅದೃಷ್ಟ ಎಂದು ವೈದ್ಯರು ಹೇಳಿರುವುದಾಗಿ ಮಿಚೆಲ್ ವಿವರಿಸಿದರು ಆಸ್ಪತ್ರೆಯ ಸಿಬ್ಬಂದಿ ಕೂಡ ತನ್ನ ಮಗನಿಗೆ ಪ್ರೀತಿಯಿಂದ "ಮಿಂಚಿನ ಮಗು" ಎಂದು ಹೆಸರಿಟ್ಟಿದ್ದರು.
ಮಿಂಚಿನಿಂದ ಟ್ಯಾಲಿನ್ ಪಾರಾಗಿದ್ದರು ಆತನ ಭುಜಗಳು ಮತ್ತು ಪಾದಗಳ ಮೇಲೆ ತಾತ್ಕಾಲಿಕ ಗುರುತುಗಳಿದ್ದವು, ಅದು ಸಂಪೂರ್ಣವಾಗಿ ಕಡಿಮೆಯಾಗಲು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ವೈದ್ಯರು ಹೇಳಿದರು.
ಮಳೆ, ಗಾಳಿ, ಸಿಡಿಲು, ಮಿಂಚು, ಗುಡುಗಿಗೆ ಎಷ್ಟೋ ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮಿಂಚಿನ ಹೊಡೆತದಲ್ಲಿ ಬದುಕುಳಿದ ಪ್ರಕರಣಗಳು ತೀರಾ ಅಪರೂಪವೂ ಹೌದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ