Nikhat Zareen: ಇತಿಹಾಸ ನಿರ್ಮಿಸಿದ ನಿಖತ್ ಝರೀನ್, ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್​ನಲ್ಲಿ ಭಾರತಕ್ಕೆ ಚಿನ್ನ

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ( World Boxing Championship) ಹೊಸ ಇತಿಹಾಸ ನಿರ್ಮಾಣವಾಗಿದೆ. ತೆಲಂಗಾಣದ ನಿಖತ್ ಝರೀನ್ (Nikhat Zareen) 52 ಕೆಜಿ ವಿಭಾಗದಲ್ಲಿ ಚಿನ್ನದ (Gold) ಪದಕ ಪಡೆದರು.

ನಿಖತ್ ಝರೀನ್

ನಿಖತ್ ಝರೀನ್

  • Share this:
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ( World Boxing Championship) ಹೊಸ ಇತಿಹಾಸ ನಿರ್ಮಾಣವಾಗಿದೆ. ತೆಲಂಗಾಣದ ನಿಖತ್ ಝರೀನ್ (Nikhat Zareen) 52 ಕೆಜಿ ವಿಭಾಗದಲ್ಲಿ ಚಿನ್ನದ (Gold) ಪದಕ ಪಡೆದರು. ನಿಖತ್ ಝರೀನ್ ಫೈನಲ್‌ನಲ್ಲಿ ಥಾಯ್ಲೆಂಡ್ ನ ಬಾಕ್ಸರ್ (Boxer) ಅನ್ನು ಸೋಲಿಸಿದರು. ಇಸ್ತಾನ್‌ಬುಲ್‌ನಲ್ಲಿ ಗುರುವಾರ ನಡೆದ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 12 ನೇ ಆವೃತ್ತಿಯಲ್ಲಿ ಭಾರತದ ಬಾಕ್ಸರ್ ನಿಖತ್ ಝರೀನ್ 5-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ನಿರೀಕ್ಷೆಗೆ ತಕ್ಕಂತೆ ನಿಖತ್ 52 ಕೆಜಿ ವಿಭಾಗದ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುಟಮಾಸ್ ಅವರನ್ನು ಸೋಲಿಸಿದರು, 30-27, 29-28, 29-28, 30-27, 29-28ರ ನೇರ ಸೆಟ್​ನ ಮೂಲಕ ನಿಖತ್ ಝರೀನ್ ಪಂದ್ಯವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು.

ಮೇರಿ ಕೋಮ್ ನಂತರದ ಗೆದ್ದ ಮೊದಲ ಚಿನ್ನದ ಪದಕ:

ನಿಜಾಮಾಬಾದ್ (ತೆಲಂಗಾಣ) ಮೂಲದ ಬಾಕ್ಸರ್ ಆರು ಬಾರಿಯ ಚಾಂಪಿಯನ್ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018), ಸರಿತಾ ದೇವಿ (2006) ನಂತರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ ಏಕೈಕ ಐದನೇ ಭಾರತೀಯ ಮಹಿಳೆಯಾಗಿದ್ದಾರೆ. ಈ ಮೂಲಕ 2018 ರಲ್ಲಿ ಬಾಕ್ಸಿಂಗ್ ಪಟು ಮೇರಿ ಕೋಮ್ ಗೆದ್ದ ನಂತರ ಇದು ಭಾರತದ ಮೊದಲ ಚಿನ್ನದ ಪದಕವಾಗಿದೆ.

ಚಿನ್ನದ ಪದಕ ಗೆದ್ದ ಸಭ್ರಮದಲ್ಲಿ ನಿಖತ್ ಝರೀನ್


ಉತ್ತಮ ಆರಂಭ ಪಡೆದ ನಿಖತ್ :

ಮೂರು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನ ಪದಕ ವಿಜೇತೆ ಕಜಕಿಸ್ತಾನ್‌ನ ಝೈನಾ ಶೆಕರ್ಬೆಕೋವಾ ಅವರನ್ನು ಸೋಲಿಸಿದ ಆತ್ಮವಿಶ್ವಾಸದಲ್ಲಿ ಜುಟಾಮಾಸ್ ವಿರುದ್ಧ ನಿಖತ್ ಆರಂಭಿಕ 3 ನಿಮಿಷಗಳಲ್ಲಿ ತ್ವರಿತವಾಗಿ ಮೇಲುಗೈ ಸಾಧಿಸಲು ಉತ್ಸಾಹಭರಿತ ಆರಂಭವನ್ನು ಪಡೆದರು ಮತ್ತು ಕೆಲವು ತೀಕ್ಷ್ಣವಾದ ಪಂಚ್‌ಗಳನ್ನು ಹೊಡೆಯುವ ಮೂಲಕ ಪಂದ್ಯವನ್ನು ಗೆದ್ದರು. ಇದರ ನಡುವೆ ಜುಟಮಾಸ್ ಎರಡನೇ ಸುತ್ತಿನಲ್ಲಿ ಪ್ರತಿದಾಳಿ ಪ್ರದರ್ಶನದೊಂದಿಗೆ ಹೋರಾಡಲು ಪ್ರಯತ್ನಿಸಿದರು ಆದರೆ ಭಾರತದ ನಿಖತ್‌ಗೆ ಯಾವುದೇ ಪ್ರತಿರೋಧ ಒಟ್ಟಲು ಆಗಲಿಲ್ಲ.

ಇದನ್ನೂ ಓದಿ: IPL 2022 Rohit Sharma: ರೋಹಿತ್ ಶರ್ಮಾ ಹೇಳಿಕೆಗೆ RCB ಅಭಿಮಾನಿಗಳ ಬೇಸರ, ಅಂತದೇನಂದ್ರು ಗೊತ್ತಾ ಹಿಟ್​ಮ್ಯಾನ್?

ಚಿನ್ನದ ಪದಕ ಸೇರಿ ಒಟ್ಟು 3 ಪದಕ ಗೆದ್ದ ಭಾರತೀಯರು:

ಇನ್ನು, ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಫ್ ನಲ್ಲಿ ಮನಿಶಾ (57 ಕೆಜಿ) ಮತ್ತು ಪರ್ವೀನ್ (63 ಕೆಜಿ) ವಿಭಾಗದಲ್ಲಿ ಸೆಮಿಫೈನಲ್ ಮುಕ್ತಾಯದ ನಂತರ ಕಂಚಿನ ಪದಕವನ್ನು ಗೆದ್ದರು. ಉಳಿದಂತೆ ನಿಖಿತ್ ಫೈನಲ್​ ನಲ್ಲಿ ಚಿನ್ನ ಗೆಲ್ಲುವ ಮೂಲಕ ಒಟ್ಟು 3 ಪದಕಗಳನ್ನು ಭಾರತ್ಕಕೆ ಒಲಿಯುವಂತೆ ಮಾಡಿದರು. 73 ದೇಶಗಳ ದಾಖಲೆಯ 310 ಬಾಕ್ಸರ್ಗಳ ಉಪಸ್ಥಿತಿಯಲ್ಲಿ ರೋಮಾಂಚನಕಾರಿ ಸ್ಪರ್ಧೆಗೆ ಸಾಕ್ಷಿಯಾದ ವಿಶ್ವದ ಅತಿದೊಡ್ಡ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೂರು ಪದಕಗಳೊಂದಿಗೆ ಭಾರತೀಯ ತಂಡವು ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿತು.

8 ಭಾರತೀಯ ಬೌಕ್ಸರ್​ಗಳು ಕ್ವಾರ್ಟರ್-ಫೈನಲ್‌ಗೆ:

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಫ್ ನಲ್ಲಿ ಭಾಗವಹಿಸಿದ 12 ಭಾರತೀಯ 8 ಮಂದಿ ಈ ವರ್ಷದ ಪಂದ್ಯಾವಳಿಯಲ್ಲಿ ಕ್ವಾರ್ಟರ್-ಫೈನಲ್‌ಗೆ ಪ್ರವೇಶಿಸಿದರು. ಇದು ಟರ್ಕಿಯೊಂದಿಗೆ ಜಂಟಿ ದಾಖಲೆಯಾಯಿತು. ಇಸ್ತಾನ್‌ಬುಲ್‌ನಲ್ಲಿ 3 ಪದಕಗಳ ಸೇರ್ಪಡೆಯೊಂದಿಗೆ, ಪ್ರತಿಷ್ಠಿತ ಈವೆಂಟ್‌ನ 12 ಆವೃತ್ತಿಗಳಲ್ಲಿ 10 ಚಿನ್ನ, ಎಂಟು ಬೆಳ್ಳಿ ಮತ್ತು 21 ಕಂಚು ಸೇರಿದಂತೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ 39ಕ್ಕೆ ಏರಿದೆ - ರಷ್ಯಾ (60) ಮತ್ತು ಚೀನಾ (50) ನಂತರ ಮೂರನೇ ಅತ್ಯಧಿಕ ಪದಕ ಭೇಟೆ ಭಾರತೀಯರದ್ದಾಗಿದೆ.

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಕನ್ನಡಿಗನ ವಿಶೇಷ ದಾಖಲೆ, ಸತತ 5 ಸೀಸನ್​ಗಳಲ್ಲಿ 500ರ ಗಡಿ ದಾಟಿದ ರಾಹುಲ್

ವಿಶ್ವ ಚಾಂಪಿಯನ್‌ಶಿಪ್ ಚಿನ್ನಕ್ಕೆ ನಿಖತ್ ಜರೀನ್ ಜರ್ನಿ:

ಪ್ರೀ ಕ್ವಾರ್ಟರ್ಸ್: ಭಾರತದ ನಿಖತ್ ಜರೀನ್ ಅವರು ಮೆಕ್ಸಿಕೊದ ಹೆರೆರಾ ಅಲ್ವಾರೆಜ್ ಅವರನ್ನು ಸೋಲಿಸಿದರು (5-0)
ಕ್ವಾರ್ಟರ್‌ಫೈನಲ್: ಭಾರತದ ನಿಖತ್ ಝರೀನ್ ಇಂಗ್ಲೆಂಡ್‌ನ ಚಾರ್ಲಿ-ಸಿಯಾನ್ ಡೇವಿಸನ್ (5-0) ಅವರನ್ನು ಸೋಲಿಸಿದರು.
ಸೆಮಿಫೈನಲ್: ಭಾರತದ ನಿಖತ್ ಜರೀನ್ ಬ್ರೆಜಿಲ್‌ನ ಕ್ಯಾರೊಲಿನ್ ಡಿ ಅಲ್ಮೇಡಾ ಅವರನ್ನು ಸೋಲಿಸಿದರು (5-0)
ಫೈನಲ್: ಭಾರತದ ನಿಕತ್ ಝರೀನ್ ಥಾಯ್ಲೆಂಡ್‌ನ ಜುಟಮಾಸ್ ಜಿಟ್‌ಪಾಂಗ್‌ರನ್ನು ಸೋಲಿಸಿದರು (5-0).
Published by:shrikrishna bhat
First published: