ಏಷ್ಯನ್ ಗೇಮ್ಸ್​​ 2018: 12ನೇ ದಿನ 5 ಪದಕ: 2014ರ ದಾಖಲೆ ನೆಲಸಮ ಮಾಡಿದ ಭಾರತ

news18
Updated:August 30, 2018, 9:39 PM IST
ಏಷ್ಯನ್ ಗೇಮ್ಸ್​​ 2018: 12ನೇ ದಿನ 5 ಪದಕ: 2014ರ ದಾಖಲೆ ನೆಲಸಮ ಮಾಡಿದ ಭಾರತ
ಹಿಮಾ ದಾಸ್​
  • News18
  • Last Updated: August 30, 2018, 9:39 PM IST
  • Share this:
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​​ನ 12ನೇ ದಿನದಾಟದಲ್ಲಿ ಭಾರತ 2 ಚಿನ್ನದ ಜೊತೆಗೆ 5 ಪದಕಗಳನ್ನ ಗೆದ್ದು ಬೀಗಿದೆ.

ಮೊದಲಿಗೆ ಮಹಿಳೆಯರ 1500 ಮೀಟರ್ ಓಟದಲ್ಲಿ ಚೈತ್ರ ಉನ್ನಿಕೃಷ್ಣನ್ ಕಂಚಿನ ಪದಕ ಗೆದ್ದರೆ, ಶಾರ್ಟ್ ಪುಟ್ ಎಸೆತದಲ್ಲಿ ಸೀಮಾ ಪುನಿಯ ಕೂಡ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಆದರೆ ಟ್ರ್ಯಾಕ್ ರೇಸ್​​ನಲ್ಲಿ ಭಾರತದ ಅತ್ಯುತ್ತಮ ಸಾಧನೆ ಮುಂದುವರೆದಿದೆ. ಪುರುಷರ 1500 ಮೀಟರ್ ಓಟದಲ್ಲಿ ಜಿನ್ಸನ್ ಜಾನ್ಸನ್ ಚಿನ್ನದ ಪದಕವನ್ನು ಭಾರತಕ್ಕೆ ಗೆದ್ದು ಕೊಟ್ಟಿದ್ದಾರೆ. ಜಾನ್ಸನ್ ಅವರು 3:44:72 ಸೆಕೆಂಡ್​​ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ತಮ್ಮದಾಗಿಸಿದರು. 800 ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದಿದ್ದ ಜಿನ್ಸನ್, 1500 ಮೀಟರ್ ಓಟದಲ್ಲಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಇನ್ನು ಮಹಿಳೆಯರ ವಿಭಾಗದ ರಿಲೇಯಲ್ಲಿ ಭಾರತದ ವನಿತೆಯರು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಹಿಮಾ ದಾಸ್, ಪೂವಮ್ಮ, ಗಾಯಕ್​ವಾಡ್ ಹಾಗೂ ವಿಸ್ಮಯ ಅವರು 3:28:72 ಸೆಕೆಂಡ್​​ಗಳಲ್ಲಿ ಮೊದಲ ಸ್ಥಾನ ತಲುಪಿದರು. ಜೊತೆಗೆ ಪುರುಷರು ಇದೇ ರಿಲೇ ಓಟದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಈ ಮೂಲಕ ಭಾರತ ಒಟ್ಟಾರೆ 13 ಚಿನ್ನದ ಪದಕ , 21 ಬೆಳ್ಳಿ, 25 ಕಂಚಿನ ಪದಕಗಳು ಸೇರಿದಂತೆ ಒಟ್ಟಾರೆ 59 ಪದಕಗಳನ್ನ ಗೆದ್ದು 8ನೇ ಸ್ಥಾನದಲ್ಲಿ ಮುಂದುವರಿದಿದೆ. ಅಲ್ಲದೆ 2014ರಲ್ಲಿ ನಡೆದ ಇಂಚಿಯಾನ್ ಏಷ್ಯನ್ ಗೇಮ್ಸ್​​​ಗಿಂತ ಹೆಚ್ಚಿನ ಪದಕ ಗೆದ್ದು ಉತ್ತಮ ಸಾಧನೆ ಮಾಡಿದೆ.
First published: August 30, 2018, 9:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading