ಏಷ್ಯನ್ ಗೇಮ್ಸ್​ 2018: 11ನೇ ದಿನ 2 ಚಿನ್ನ,1 ಕಂಚು-ಬೆಳ್ಳಿ ಬಾಚಿಕೊಂಡ ಭಾರತ

news18
Updated:August 29, 2018, 9:50 PM IST
ಏಷ್ಯನ್ ಗೇಮ್ಸ್​ 2018: 11ನೇ ದಿನ 2 ಚಿನ್ನ,1 ಕಂಚು-ಬೆಳ್ಳಿ ಬಾಚಿಕೊಂಡ ಭಾರತ
news18
Updated: August 29, 2018, 9:50 PM IST
ನ್ಯೂಸ್ 18 ಕನ್ನಡ

ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನ 11 ದಿನದಾಟದಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. ಇಂದು 2 ಚಿನ್ನ , ತಲಾ 1 ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದ ಭಾರತದ ಕ್ರೀಡಾಪಟುಗಳು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಮೊದಲಿಗೆ ಟೇಬಲ್ ಟೆನಿಸ್ ಮಿಕ್ಸೆಡ್ ಡಬಲ್ಸ್​​ನಲ್ಲಿ ಭಾರತ ಕಂಚಿನ ಪದಕ ಗೆದ್ದಿತು. ಮನಿಕಾ ಬಾತ್ರಾ ಹಾಗೂ ಶರತ್ ಕಮಲ್ ಜೋಡಿ ಚೀನಾ ವಿರುದ್ಧ ಸೋತು ಕಂಚಿಗೆ ತೃಪ್ತಿ ಪಟ್ಟಿತು. ಆನಂತರದಲ್ಲಿ ಮಹಿಳೆಯರ 200 ಮೀಟರ್ ಓಟದಲ್ಲಿ ದ್ಯುತಿ ಚಾಂದ್ ಬೆಳ್ಳಿ ಪದಕ ಗೆದ್ದರು. ಪುರುಷರ ತ್ರಿಪಲ್ ಜಂಪ್​​ನಲ್ಲಿ ಅರ್ಪಿಂದರ್ ಸಿಂಗ್ 48 ವರ್ಷಗಳ ಬಳಿಕ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟರು. ಕಠಿಣ ಕ್ರೀಡೆಗಳಲ್ಲಿ ಒಂದಾದ ಮಹಿಳೆಯರ ಹೆಪ್ಟಾಥ್ಲಾನ್​​ನಲ್ಲಿ ಸ್ವಪ್ನ ಬರ್ಮನ್ ಸ್ವರ್ಣ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. 7 ಸ್ಪರ್ಧೆಗಳನ್ನೊಳಗೊಂಡ ಈ ಕ್ರೀಡೆಯಲ್ಲಿ ಭಾರತ ಸ್ವರ್ಣ ಗೆದ್ದಿದ್ದು ಇದೇ ಮೊದಲು.

ಇನ್ನು ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್​​ನಲ್ಲಿ ಚೀನಾ ವಿರುದ್ಧ 1-0 ಗೋಲುಗಳಿಂದ ಗೆಲುವು ಕಂwಉ ಪೈನಲ್​​ಗೆ ಲಗ್ಗೆ ಇಟ್ಟಿದೆ.

ಒಟ್ಟಾರೆಯಾಗಿ ಭಾರತ 11 ಚಿನ್ನದ ಪದಕ ಗೆದ್ದಿದ್ದು, 54 ಪದಕಗಳೊಂದಿಗೆ 8ನೇ ಸ್ಥಾನ ಪಡೆದಿದೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ