ಅಭ್ಯಾಸ ಪಂದ್ಯಕ್ಕೆ ಮಳೆ: ವರುಣನಿಗೇ ಸೆಡ್ಡು ಹೊಡೆದು ವಿರಾಟ್ ಮಾಡಿದ್ದೇನು..?

4 ದಿನಗಳ ಅಭ್ಯಾಸ ಪಂದ್ಯದಲ್ಲಿ ಮೊದಲ ದಿನವನ್ನು ಮಳೆಯಿಂದಾಗಿ ರದ್ದುಗೊಳಿಸಲಾಗಿದೆ. ಹೀಗಿರುವಾಗ ಟೀಂ ಇಂಡಿಯಾ ಆಟಗಾರರು ಅದರಲ್ಲು ನಾಯಕ ವಿರಾಟ್ ಕೊಹ್ಲಿ ಸುಮ್ಮನೆ ಕೂತಿಲ್ಲ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • News18
  • Last Updated :
  • Share this:
ಸಿಡ್ನಿ: ಟಿ-20 ಸರಣಿಯಲ್ಲಿ ಸಮಬಲ ಸಾಧಿಸಿರುವ ಭಾರತ ಸದ್ಯ ಟೆಸ್ಟ್​ ಸರಣಿ ಮೇಲೆ ಕಣ್ಣಿಟ್ಟಿದೆ. ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಕೇಳಿಕೊಂಡಂತೆ ಆಸ್ಟ್ರೇಲಿಯಾ 4 ದಿನಗಳ ಅಭ್ಯಾಸ ಪಂದ್ಯ ಆಯೋಜಿಸಿದೆ. ಅದರಂತೆ ಇಂದು ಅಭ್ಯಾಸ ಪಂದ್ಯ ಆರಂಭವಾಗಬೇಕಿತ್ತು.

ಇದನ್ನೂ ಓದಿIPL 2019: ಯುವಿ, ಗಂಭೀರ್ ಸೇರಿದಂತೆ ಸ್ಟಾರ್ ಆಟಗಾರರು ಅನ್​ಸೋಲ್ಡ್​​?

ಆದರೆ, ಸಿಡ್ನಿ ಕ್ರೀಡಾಂಗಣದಲ್ಲಿ ನಿಲ್ಲದೆ ಜೋರಾಗಿ ಮಳೆ ಸುರಿಯುತ್ತಿರುವುದರಿಂದ 4 ದಿನಗಳ ಅಭ್ಯಾಸ ಪಂದ್ಯದಲ್ಲಿ ಮೊದಲ ದಿನ ಮಳೆಗೆ ಆಹುತಿಯಾಗಿದೆ. ಹೀಗಿರುವಾಗ ಟೀಂ ಇಂಡಿಯಾ ಆಟಗಾರರು ಅದರಲ್ಲು ನಾಯಕ ವಿರಾಟ್ ಕೊಹ್ಲಿ ಸುಮ್ಮನೆ ಕೂತಿಲ್ಲ. ಅಭ್ಯಾಸ ಮಾಡಲು ಮಳೆ ಅಡ್ಡಿಯಾದ ಕಾರಣ ಕೊಹ್ಲಿ ಜಿಮ್​​ಗೆ ಹೋಗಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಕೊಹ್ಲಿ ಇನ್​ಸ್ಟಗ್ರಾಂನಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದು, ‘ಮಳೆ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಹೀಗಾಗಿ ಈ ದಿನವನ್ನು ವಿಶೇಷವಾಗಿ ಕಳೆಯಲು ನಿರ್ಧರಿಸಿದ್ದೇವೆ. ಈ ಆಟಗಾರರ ಜೊತೆ ವರ್ಕೌಟ್ ಮಾಡಿದ್ದು ತುಂಬಾ ಸಂತಸ ನೀಡಿದೆ’ ಎಂದು ಬರೆದುಕೊಂಡಿದ್ದಾರೆ.


ವಿರಾಟ್ ಕೊಹ್ಲಿ ಜೊತೆ ಜಿಮ್​​ನಲ್ಲಿ ಮುರಳಿ ವಿಜಯ್ ಹಾಗೂ ಇಶಾಂತ್ ಶರ್ಮಾ ಕೂಡ ಬೆವರಿಳಿಸಿದ್ದು, ತರಬೇತುಗಾರ ಶಂಕರ್ ಕೂಡ ಜೊತೆಗಿದ್ದರು. ಸಿಡ್ನಿ ಕ್ರೀಡಾಂಗಣದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇಂದು ಕೂಡ ಮುಂದುವರಿದಿದೆ. ಹೀಗಾಗಿ ಟಾಸ್ ಪ್ರಕ್ರಿಯೆ ಕೂಡ ನಡೆಯದೆ ಮೊದಲ ದಿನದ ಅಭ್ಯಾಸ ಪಂದ್ಯವನ್ನು ರದ್ದು ಗೊಳಿಸಲಾಗಿದೆ.

Published by:Vinay Bhat
First published: