ಏಷ್ಯನ್ ಗೇಮ್ಸ್​ 2018: 10ನೇ ದಿನ 9 ಪದಕ ಬಾಜಿಕೊಂಡ ಭಾರತ

news18
Updated:August 28, 2018, 8:32 PM IST
ಏಷ್ಯನ್ ಗೇಮ್ಸ್​ 2018: 10ನೇ ದಿನ 9 ಪದಕ ಬಾಜಿಕೊಂಡ ಭಾರತ
news18
Updated: August 28, 2018, 8:32 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​​​ನ 10ನೇ ದಿನದಾಟದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರಿ 9 ಪದಕಗಳನ್ನು ಬಾಚಿಕೊಂಡಿದೆ.

ಮೊದಲಿಗೆ ಪುರುಷರ ಹಾಗೂ ಮಹಿಳಾ ಆರ್ಚರಿ ತಂಡ ಕೊರಿಯಾ ವಿರುದ್ಧ ಫೈನಲ್​​ನಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ನಂತರದಲ್ಲಿ ನಡೆದ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್​​ನಲ್ಲಿ ಸೋತ ಪಿವಿ ಸಿಂಧು ಅವರು ಐತಿಹಾಸಿಕ ರಜತ ಪದಕಕ್ಕೆ ಕೊರಳೊಡ್ಡಿದರು. ಪುರುಷರ ಟೇಬಲ್ ಟೆನ್ನಿಸ್ ತಂಡ ಕಂಚಿಗೆ ತೃಪ್ತಿಪಟ್ಟಿತು. ಆದರೆ ದಿನದ ಹೈಲೇಟ್ಸ್ ಎಂಬಂತೆ ಕಂಡುಬಂದಿದ್ದು ಪುರುಷರ 800 ಮೀಟರ್ ಓಟ. ಮಂಜಿತ್ ಸಿಂಗ್ ಹಾಗೂ ಜಿನ್ಸನ್ ಜಾನ್ಸನ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. 400 ಮೀಟರ್ ರಿಲೇಯಲ್ಲೂ ಭಾರತ ಬೆಳ್ಳಿ ಪದಕ ಗೆದ್ದುಕೊಂಡಿದೆ. ಮಾರ್ಷಿಯಲ್ ಆಟ್ಸ್ ಸ್ಪರ್ಧೆಗಳಲ್ಲಿ ಒಂದಾದ ಕುರಷ್​​ನಲ್ಲೂ ಬೆಳ್ಳಿ, ಕಂಚಿನ ಪದಕ ತನ್ನದಾಗಿಸಿಕೊಂಡಿದೆ.

ಈ ಮೂಲಕ ಒಟ್ಟಾರೆ ಭಾರತ 9 ಚಿನ್ನ, 19 ಬೆಳ್ಳಿ, ಹಾಗೂ 22 ಕಂಚಿನ ಪದಕಗಳನ್ನು ಒಳಗೊಂಡಂತೆ 50  ಪದಕಗಳನ್ನು ಗೆದ್ದು ಬೀಗಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...