• Home
 • »
 • News
 • »
 • sports
 • »
 • Virat Kohli: ಶತಕ ಸಿಡಿಸಿದ ವಿರಾಟ್​! ಪ್ರಶಸ್ತಿ ಗೆದ್ದ ಕೊಹ್ಲಿಗೆ ಬಂಗಾರದಂತ ಪ್ರತಿಕ್ರಿಯೆ

Virat Kohli: ಶತಕ ಸಿಡಿಸಿದ ವಿರಾಟ್​! ಪ್ರಶಸ್ತಿ ಗೆದ್ದ ಕೊಹ್ಲಿಗೆ ಬಂಗಾರದಂತ ಪ್ರತಿಕ್ರಿಯೆ

ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ

ಮೊಹಮ್ಮದ್ ಸಿರಾಜ್ ತಮ್ಮ ಮಾಂತ್ರಿಕ ಬೌಲಿಂಗ್ ಕೈಚಳಕವನ್ನು ಪ್ರದರ್ಶಿಸಿದರು. ಶ್ರೀಲಂಕಾ 22 ಓವರ್‌ಗಳಲ್ಲಿ 73 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಮೂಲಕ 3 ನೇ ಏಕದಿನ ಪಂದ್ಯವನ್ನು 317 ರನ್‌ಗಳ ಬೃಹತ್ ಅಂತರದಿಂದ ಭಾರತದ ವಿರುದ್ಧ ಸೋತರು. 

 • News18 Kannada
 • 3-MIN READ
 • Last Updated :
 • New Delhi, India
 • Share this:

ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ  ನಡೆಯುತ್ತಿರುವ ಭಾರತ ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಅಂತಾರಾಷ್ಟ್ರೀಯ (ODI) ಪಂದ್ಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡವು ಉತ್ತಮ ಮೊತ್ತ ಕಲೆಹಾಕಿದೆ. ವಿರಾಟ್ ತಮ್ಮ 46 ನೇ ಒಡಿಐ ಶತಕವನ್ನು ಮೈದಾನದಲ್ಲಿ ಸಿಡಿಸಿದ್ದು, ದಸುನ್ ಶನಕ ನಾಯಕತ್ವದ ಶ್ರೀಲಂಕಾ ಪಡೆಗೆ ಕಠಿಣ ಪೈಪೋಟಿಯನ್ನೊಡ್ಡಿದರು. ಕೊಹ್ಲಿಯ ಅದ್ಭುತ ಶತಕದ ನೆರವಿನಿಂದ ರೋಹಿತ್ ನೇತೃತ್ವದ ಟೀಂ ಇಂಡಿಯಾ 50 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 390 ಪಂದ್ಯ ಗೆಲ್ಲುವಂತಹ ಬೃಹತ್ ಮೊತ್ತವನ್ನು ದಾಖಲಿಸಿತು. 


ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶನ


ಮೊಹಮ್ಮದ್ ಸಿರಾಜ್ ತಮ್ಮ ಮಾಂತ್ರಿಕ ಬೌಲಿಂಗ್ ಕೈಚಳಕವನ್ನು ಪ್ರದರ್ಶಿಸಿದರು. ಶ್ರೀಲಂಕಾ 22 ಓವರ್‌ಗಳಲ್ಲಿ 73 ರನ್‌ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಮೂಲಕ 3 ನೇ ಏಕದಿನ ಪಂದ್ಯವನ್ನು 317 ರನ್‌ಗಳ ಬೃಹತ್ ಅಂತರದಿಂದ ಭಾರತದ ವಿರುದ್ಧ ಸೋತರು.


ಭಾರತದ ಮಾಜಿ ನಾಯಕ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು ಜೊತೆಗೆ ಬ್ಯಾಟಿಂಗ್ ಐಕಾನ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೂ ಅರ್ಹರಾದರು. ವಿರಾಟ್ ತಮ್ಮ 34 ನೇ ಹರೆಯದಲ್ಲೂ 10 ನೇ ಬಾರಿಗೆ ಸರಣಿಯ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮ್ಮ ವೃತ್ತಿರಂಗದಲ್ಲೇ ಕೊಹ್ಲಿ ಮಾಡಿರುವ ಅದ್ಭುತ ಸಾಧನೆ ಇದಾಗಿದ್ದು ಈ ಕುರಿತು ತಮ್ಮ ಅನಿಸಿಕೆಗಳನ್ನು ಅಷ್ಟೇ ಸ್ಪಷ್ಟತೆಯಿಂದ ಬಹಿರಂಗಪಡಿಸಿದ್ದಾರೆ.


ಉತ್ತಮ ಮನಸ್ಥಿತಿಯಿಂದ ಆಡುವುದು ನನ್ನನ್ನು ಜಯಶಾಲಿಯನ್ನಾಗಿಸುತ್ತದೆ


ನಾನು ಎಷ್ಟು ಸರಣಿ ಪ್ರಶಸ್ತಿಗಳಿಗೆ ಅರ್ಹನಾಗಿರುವೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಪಂದ್ಯಾಟದಲ್ಲಿ ಅದ್ಭುತವಾಗಿ ಆಡಬೇಕು ಎಂಬ ಮನಸ್ಸನ್ನು ಇರಿಸಿಕೊಂಡು ನಾನು ಆಟವಾಡುತ್ತೇನೆ. ನನ್ನ ಮನಸ್ಥಿತಿ ಪಂದ್ಯಾಟವನ್ನು ಆಡಲು ನೆರವಾಗುತ್ತದೆ.


ಇದನ್ನೂ ಓದಿ: Virat Kohli: ಇದೇ ದಿನ ಸೆಂಚುರಿ ಮೇಲೆ ಸೆಂಚುರಿ ಬಾರಿಸಿದ್ದು ಹೇಗೆ ಕಿಂಗ್ ಕೊಹ್ಲಿ? ವಿರಾಟ್‌ ಸೀಕ್ರೆಟ್ 15 ಇಲ್ಲಿದೆ


ನನ್ನ ಮನಸ್ಥಿತಿಯಿಂದಾಗಿ ನನಗೆ ಹೆಚ್ಚು ದೀರ್ಘಕಾಲದವರೆಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತದೆ. ಸರಿಯಾದ ಕಾರಣಗಳನ್ನು ಮುಂದಿಟ್ಟುಕೊಂಡೇ ನಾನು ಬ್ಯಾಟ್ ಕೈಯಲ್ಲಿ ಹಿಡಿಯುತ್ತೇನೆ. ಸಾಧ್ಯವಾದಷ್ಟು ತಂಡಕ್ಕೆ ಸಹಕಾರಿಯಾಗಿರಬೇಕು ಎಂಬುದೇ ನನ್ನ ಗುರಿಯಾಗಿದೆ, ನಿಶ್ಚಿತ ಉದ್ದೇಶವನ್ನಿಟ್ಟುಕೊಂಡು ಆಡಬೇಕು ಎಂಬುದು ಮಾತ್ರ ನನ್ನ ಗುರಿಯಾಗಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.


ಸಚಿನ್ ದಾಖಲೆ ಮುರಿದ ಕೊಹ್ಲಿ


ಕೊಹ್ಲಿ 110 ಎಸೆತಗಳಲ್ಲಿ ಅಜೇಯ 166 ರನ್ ಗಳಿಸಿ ಸರಣಿಯನ್ನು ಅಗ್ರ ರನ್ ಗಳಿಸಿ ಪಂದ್ಯವನ್ನು ಮುಕ್ತಾಯಗೊಳಿಸಿದರು. ಏಕದಿನದಲ್ಲಿ 12,754 ರನ್ ಗಳಿಸಿರುವ ಕೊಹ್ಲಿ, 50 ಓವರ್‌ಗಳ ಮಾದರಿಯಲ್ಲಿ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಬ್ಯಾಟಿಂಗ್ ಮಾಂತ್ರಿಕ ಅತಿ ಹೆಚ್ಚು ಶತಕ (20) ಸಿಡಿಸಿದ ದಾಖಲೆಯನ್ನೂ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 34 ರ ಹರೆಯದ ವಿರಾಟ್, ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿದು ವಿಶೇಷ ಸಾಧನೆಯನ್ನು ಮಾಡಿದ್ದಾರೆ. ದೀರ್ಘ ಬ್ರೇಕ್‌ನಿಂದ ಹಿಂತಿರುಗಿದ ನಂತರ ಆಡುವ ಹುಮ್ಮಸ್ಸು ನನ್ನಲ್ಲಿ ಇನ್ನಷ್ಟು ಹೆಚ್ಚಾಗಿದೆ. ನನ್ನ ಆಟವನ್ನು ನಾನು ಆನಂದಿಸುತ್ತೇನೆ. ಕ್ರಿಕೆಟ್‌ನಿಂದ ಆಗಾಗ ಬ್ರೇಕ್ ತೆಗೆದುಕೊಂಡಿರುವುದು ನನಗೆ ಇನ್ನಷ್ಟು ಮುಂದೆ ಬರಲು ನೆರವಾಗಿದೆ.


ಶಮಿ ಉತ್ತಮ ಆಟಗಾರನಾಗಿ ಬೆಳೆದಿದ್ದಾರೆ, ಇನ್ನು ಸಿರಾಜ್ ಕೂಡ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಕ್ರೀಡಾಂಗಣದಲ್ಲಿ ಪ್ರದರ್ಶಿಸುತ್ತಿದ್ದಾರೆ. ಸಿರಾಜ್ ಪವರ್ ಪ್ಲೇಯಲ್ಲಿ ಗರಿಷ್ಠ ಸಂಖ್ಯೆಯ ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ಇದುವೇ ನಮ್ಮ ತಂಡಕ್ಕೆ ಸವಾಲಾಗಿತ್ತು ಆದರೆ ಈ ಸವಾಲನ್ನು ಸಿರಾಜ್ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಸಿರಾಜ್ ಬ್ಯಾಟ್ಸ್‌ಮನ್‌ಗಳಿಗೆ ನೀಡುವ ಕಠಿಣ ಸ್ಪರ್ಧೆಯು ಕ್ಷಣಹೊತ್ತು ಅವರನ್ನು ಗೊಂದಲಕ್ಕೆ ದೂಡುತ್ತದೆ. ವಿಶ್ವಕಪ್‌ಗೆ ತಂಡವನ್ನು ಮುನ್ನಡೆಸುತ್ತದೆ ಎಂಬ ಉತ್ತಮ ಸಂಕೇತ ಇದಾಗಿದೆ ಎಂದು ಕೊಹ್ಲಿ ಮನಬಿಚ್ಚಿ ನುಡಿದಿದ್ದಾರೆ.

First published: