Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!

ಜೇನು ಕೃಷಿ ಲಾಭದಾಯಕ ಉದ್ದಿಮೆ ಅನ್ನೋದನ್ನ ಶಿವಮೊಗ್ಗದ ವ್ಯಕ್ತಿಯೊಬ್ಬರು ತೋರಿಸಿಕೊಟ್ಟಿದ್ದಾರೆ. ಆದರೆ ಜೇನು ಕೃಷಿ ಬಗ್ಗೆ ತಿಳಿದುಕೊಳ್ಳಬೇಕಾದ ಮಹತ್ವದ ವಿಚಾರಗಳೂ ಇವೆ. ಅದೇನು ಅಂತೀರಾ? ಇಲ್ಲಿದೆ ನೋಡಿ.

ಗುರುಪ್ರಸಾದ್ ಕಾನ್ಲೆ ಮತ್ತು ತಂಡ

"ಗುರುಪ್ರಸಾದ್ ಕಾನ್ಲೆ ಮತ್ತು ತಂಡ"

 • Share this:
  ಶಿವಮೊಗ್ಗದ ಕಾನಲೆಯಲ್ಲೊಬ್ಬ ಜೇನುಗುರು.. ಗುರು ಅಂದ ತಕ್ಷಣ ಇದ್ಯಾರೋ ಪವಾಡ ಪುರುಷ ಅನ್ಕೊಂಡ್ರಾ? ಛೇ ಛೇ ಛೇ ಇಲ್ಲಪ್ಪ ಇವರೊಂಥರಾ "ಪ್ರಸಾದ" ಪುರುಷ! ಯಾಕೆ ಅಂತೀರಾ? ನಮಗೆ ದಿನನಿತ್ಯ ಪ್ರಸಾದಕ್ಕೆ ಬಳಕೆ ಆಗೋ, ನಾವು ಪವಿತ್ರ ಅಂತ ಭಾವಿಸಿರೋ, ನಮಗೆ ಅಮೂಲ್ಯ ಎನಿಸೋ, ಸ್ವರ್ಗಾನಂದ ಕೊಡೋ ಒಂದು ಅಪ್ಪಟ ವಸ್ತುವಿನ ಸಂಗ್ರಾಹಕ ಈ ಗುರು.. ನಾವೆಲ್ಲ ರಾಣಿ ಜೇನು ರಾಣಿ ಜೇನು ಬಂತು ನೋಡು! ಅಂತ ಹಾಡೋ ಹುಡುಗ್ರು, ಇವ್ರು ರಾಣಿ ಜೇನಿನ‌ ಸಂಸಾರವನ್ನು ಸಾಕಿಯೇಬಿಟ್ಟಿದಾರೆ‌.ಹೌದ್ರೀ! ಕಳೆದ ಕೆಲ ವರ್ಷದಿಂದ ಜೇನ್ನೊಣಗಳಿಂದ (Honey Bee) ಚುಚ್ಚಿಸಿಕೊಳ್ತಾ, ಕಚ್ಚಿಸಿಕೊಳ್ತಾ, ನಮಗೆ ಅಚ್ಚುಕಟ್ಟಾದ ಸಿಹಿ ಪದಾರ್ಥವಾದ ಜೇನನ್ನ ಬಸಿದು ತೆಗಿತಿರೋರು ನಮ್ಮ ಶಿವಮೊಗ್ಗದ (Shivamogga) ಸಾಗರ - ಸಿದ್ದಾಪುರ  ನಡುವೆ ಇರೋ ಊರಿನ ಕಾನಲೆಯ ಗುರುಪ್ರಸಾದ್!

  ಇವರೂ ಹಾಗೂ ಇವರ ಸ್ನೇಹಿತರಾದ ಪರ್ವ ಮಲ್ನಾಡ್ ಇಬ್ರು ಸೇರಿ ತಮ್ಮ ಮನೆಯ ಹತ್ತಿರ ಮತ್ತು ತಾಲೂಕಿನ ಬೇರೆ ಬೇರೆ ಹಳ್ಳಿಗಳಲ್ಲಿನ ತೋಟಗಳಲ್ಲಿ,ಜೇನು ಸಂಸಾರವನ್ನು ಸಾಕುತ್ತಿದ್ದಾರೆ. ಜೇನು ಡೇಂಜರ್ ಅಲ್ವಾ? ಅಂದ್ರೆ, ‘‘ಅದರಂತಹ ಪರೋಪಕಾರಿ ಜೀವಿನೇ ಇನ್ನೊಂದಿಲ್ವೋ ಮಾರಾಯ!‘‘ ಅಂತಾರೆಈ ಜೇನು ಗುರು.  ಜೇನ್ನೊಣದ ಮಹತ್ವ
  ಜೇನ್ನೋಣಗಳು ಪ್ರಕೃತಿಯ ಸಸ್ಯಗಳಲ್ಲಿನ ಹೂವುಗಳಲ್ಲಿ ಪರಾಗಸ್ಪರ್ಶ ಮಾಡುವ, ನೈಸರ್ಗಿಕವಾಗಿ ಸಿಗುವ ಅತ್ಯದ್ಭುತ ಸಂಪನ್ಮೂಲ ಅಷ್ಟೇ ಅಲ್ಲ ಅವುಗಳು ನಮ್ಮನ್ನು ಕಾಪಾಡೋ ಏಂಜೆಲ್ಸ್ ಥರ! ಹೌದು ಪರಾಗ ಸ್ಪರ್ಷ ಮಾಡಿಸಿ ಸಸ್ಯಗಳ ಸಂಸಾರನ ಸಾಕಿ ತಮ್ಮ ಸಂಸಾರನೂ ಸಾಕೋ ಈ ಸಹಬಾಳ್ವೆನ ಮನುಷ್ಯ ನೋಡಿ ನಾಚಿ ಕಲಿಲೇಬೇಕು, ಜೇನಿಲ್ಲಂದ್ರೆ ನಾವಿಲ್ಲರೀ!

  ಇನ್ನೂ ಶುದ್ಧಜೇನು ತುಪ್ಪ ಸಿಗುತ್ತಲ್ಲ ಅದೊಂತರಾ ಆಯುರ್ವೇದದಲ್ಲಿ ರ್ಯಾಂಕ್ ಸ್ಟೂಡೆಂಟ್! ಜೇನು ತುಪ್ಪ ನಮಗೆ ಯಾಕೆ ಬೇಕು ಅಂತಾನೇ ಒಂದು ಪ್ರಬಂಧ ಮಂಡಿಸಿಬಿಡಬಹುದೇನೋ! ಇನ್ನೂ ಹುಡುಗಿಯರಿಗೆ ಜೇನುತುಪ್ಪ ಇದೆಯಲ್ಲ ಅದು ಜೀವನಾಡಿ.. ಯಾಕೆ ಅಂತ ಹೇಳ್ತಿವಿ ಕೇಳಿ.  ಗುರುಪ್ರಸಾದ್ ಕಾನ್ಲೆ ಅವರ ಸಂಪರ್ಕ ಸಂಖ್ಯೆ: 91 81476 88898

  ಜೇನುತುಪ್ಪದಿಂದ ಕೂದಲಿನ ಸಮಸ್ಯೆ ನಿವಾರಣೆಯಾಗ್ತದೆ ಬಾಯಿಹುಣ್ಣು ಹೋಗ್ತದೆ ಇದು ನೈಸರ್ಗಿಕ "ಮೇಕಪ್ ಕಿಟ್. "ಬೊಜ್ಜಿನ ಸಮಸ್ಯೆ ನಿವಾರಣೆಯಾಗ್ತದೆ. ಜೀರ್ಣಕ್ರಿಯೆ ಸುಲಭ ಆಗ್ತದೆ. ಸಕ್ಕರೆಗೆ ಪರ್ಯಾಯ ತಲೆಮಾರುಗಳ ಕಳೆದರೂ ಜೇನು ಮಾಸೋದಿಲ್ಲ. ವಿಟಮಿನ್ ಬಿ ಮತ್ತು ಮಿನರಲ್ಸ್ ಗಳಿಗೆ ಜೇನು ತುಪ್ಪ ದೊಡ್ಡ ಅಡ್ಡಾ! ಸದ್ಯಕ್ಕಿಷ್ಟು ಸಾಕು! ಇನ್ನೂ ಹೇಳ್ತಾ ಹೋದ್ರೆ ಮುಗಿಯೋದೆ ಇಲ್ಲ. ಸ್ವಲ್ಪ ಜೇನು ಕೃಷಿ ಬಗ್ಗೆ ತಿಳ್ಕೋಳೋಣ್ವ..?

  ಜೇನು ಕಚ್ಚಲ್ಲ, ಮಾಸ್ಕ್ ಬಂದಿದೆ!
  ಜೇನು ಕೃಷಿ ಅತ್ಯಂತ ಸೂಕ್ಷ್ಮ ಹಾಗೂ ತಾಳ್ಮೆ ಬೇಡೋ ಕೆಲಸ, ತಾಳಿದವನು ಬಾಳಿಯಾನು ಎಂಬಂತೆ ನಿಮ್ಮ ಬದುಕನ್ನ ಹಸನಾಗಿಸೋ ಕೆಲಸ ಕೂಡ ಹೌದು! ಈಗೇನು ಜೇನು ಕಚ್ತಾವೆ ಅಂತ ಕಂಪ್ಲೆಂಟೂ ಬೇಡ ಅದಕ್ಕಾಗೆಯೇ ಮಾಸ್ಕ್ ಎಲ್ಲ ಬಂದಿವೆ.ಹವ್ಯಾ‌ಸಕ್ಕಾಗಿ ಆದರೆ ಐಎಸ್ಐ ಮಾರ್ಕ್ ನ ಎಂಟು ಫ್ರೇಂಗಳ ಪೆಟ್ಟಿಗೆ ಬೇಕು, ಉದ್ಯಮಕ್ಕಾದ್ರೆ ಕೇರಳ ಬ್ರ್ಯಾಂಡ್ ಆರು ಫ್ರೇಂಗಳ ಪೆಟ್ಟಿಗೆ ಬೇಕು ಎಂಬುದು ಜೇನ್‌ಗುರು ಅಭಿಪ್ರಾಯ.

  ಇದನ್ನೂ ಓದಿ: Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

  ಕರ್ವಾಲೋ ಮಂದಣ್ಣನ ಮಡಿಕೆ ಪ್ರಯೋಗನೂ ನೀವು ಮಾಡಬಹುದು, ಜೇನ್ನೋಣಕ್ಕೆ ರೋಗ ತಾಗದ ಹಾಗೆ ನೋಡಿಕೊಳ್ಳಬೇಕು, ಹಾಗೆಯೇ ಅವುಗಳಿಗೆ ಸದ್ದು-ಗದ್ದಲ ಆಗಿಬರೋಲ್ಲ! ಆಮೇಲೆ ಹಕ್ಕಿಗಳು, ಭಂಡಾರಮಕ್ಕಿ ನೊಣ ಮುಂತಾದವು ಜೇನಿಗೆ ಶತ್ರುಗಳು.  ಅವುಗಳನ್ನು ಸಂಪೂರ್ಣವಾಗಿ ಜೇನುಪೆಟ್ಟಿಗೆ ಹತ್ತಿರ ಬಾರದಂತೆ ತಡೆಯುವುದು ಕಷ್ಟವಾದರೂ, ತಕ್ಕಮಟ್ಟಿಗೆ ನಿಯಂತ್ರಣ ಮಾಡಬಹುದು. ಜೇನು ಪೆಟ್ಟಿಗೆಯನ್ನು ಕುತೂಹಲಕ್ಕಾಗಿ ಪದೇ ಪದೇ ತೆಗೆಯುವುದು ಸರಿಯಲ್ಲ ಎನ್ನುತ್ತಾರೆ ಗುರುಪ್ರಸಾದ್.

  ಜೇನಿನ ಸಂಪಾದನೆ
  ಸಂಪಾದನೆ ಇದಕ್ಕೆ ಯಾವ ಮಿತಿಯೂ ಇಲ್ಲ, ಸಾವಿರದಿಂದ ಎಣಿಕೆ ಶುರುವಾಗಿ ಲಕ್ಷ ದಾಟುತ್ತದೆ. ಅದು ಕೂಡ ಕಡಿಮೆ ಬಂಡವಾಳದಲ್ಲಿ, ಇನ್ನು ಖುಷಿಯ ವಿಚಾರ ಏನಪ್ಪ ಅಂದ್ರೆ ರಾಷ್ಟ್ರೀಯ ಜೇನು ಮಂಡಳಿಯಿಂದ ನಿಮ್ಮ ತೋಟಗಾರಿಕೆ ಇಲಾಖೆ ಇದಕ್ಕೆ ಸಬ್ಸಿಡಿಯನ್ನೂ ಕೊಡ್ತದೆ.  ಜೇನು ಗುರು ಬಗ್ಗೆ
  ಗುರುಪ್ರಸಾದ್ ಕಾನಲೆಯವರು ಬಹುಪ್ರತಿಭಾನ್ವಿತರು ಅವರ ಹಲವು ಉದ್ಯಮಗಳಲ್ಲಿ ಜೇನು ಕೃಷಿ ಒಂದು ಭಾಗ. ಜೇನುಪೆಟ್ಟಿಗೆ, ಜೇನು ಸಂಸಾರ, ಜೇನು ಕೃಷಿಕರಿಗೆ ಅಗತ್ಯವಾದ ಸಲಕರಣೆಗಳು, ಜೇನು ತೆಗೆಯುವ ಯಂತ್ರ ಇತ್ಯಾದಿ ಅವರ ಬಳಿ ದೊರೆಯುತ್ತದೆ. ಮತ್ತು ಜೇನುಸಾಕಣೆ ತರಬೇತಿಯನ್ನು ಕೂಡಾ ನೀಡುತ್ತಾರೆ. ನಿಮಗೆ ಅಚ್ಚುಕಟ್ಟಾದ ಜೇನು ತುಪ್ಪ ಬೇಕಂದ್ರೆ ಜೇನು ಸಾಕಾಣಿಕೆ ಮಾಹಿತಿ ಬೇಕಂದ್ರೆ ಅವರನ್ನ ಸಂಪರ್ಕಿಸಬಹುದು.

  ಇದನ್ನೂ ಓದಿ: Uttara Kannada: ಮುಂಡಗೋಡಿನ ಈ ಸರ್ಕಾರಿ ಹೈಸ್ಕೂಲ್ ಕಲಿಯೋಕೂ ಚಂದ, ನೋಡೋಕೋ ಚಂದ!

  ಆಚೆಮನೆ ಶಂಕ್ರಜ್ಜ ‘‘ಇದೆಂತ ಮಾಡ್ತಿದ್ಯೋ ಗುರೂ ಅಂದ್ರೆ ಕೊನೇಗೌಡರ ತಲೆಬಿ‌ಸಿ ಇಲ್ಲದ ಕೃಷಿ ಮಾಡ್ತಿದ್ನೋ ಬಾವ‘‘ ಅಂತ ಅಂದ್ರು ನಮ್ ಗುರು ಅಣ್ಣ.!

  ವರದಿ: ಎ.ಬಿ.ನಿಖಿಲ್, ಉತ್ತರ ಕನ್ನಡ
  Published by:guruganesh bhat
  First published: