Shivamogga: ಶೂನಲ್ಲಿ ಬುಸ್​ ಬುಸ್ ನಾಗ! ಶಿವಮೊಗ್ಗದ ವಿಡಿಯೋ ವೈರಲ್

ಮಳೆಗಾಲ ಆರಂಭವಾಗಿದೆ. ವಿಷಜಂತುಗಳು ಶೂ, ಹೂ ಕುಂಡಲಿಗಳನ್ನು ಸುಲಭವಾಗಿ ಸೇರಿಕೊಳ್ಳುತ್ತಿವೆ. ಇಲ್ಲೂ ಅಂತಹದ್ದೇ ಒಂದು ಘಟನೆ ನಡೆದಿದ್ದು, ಅದರ ವಿವರ ಇಲ್ಲಿದೆ ನೋಡಿ.

ಶೂನಲ್ಲಿ ಹೊಕ್ಕ ಹಾವು!

"ಶೂನಲ್ಲಿ ಹೊಕ್ಕ ಹಾವು!"

  • Share this:
    ಶಿವಮೊಗ್ಗ: ನಾಗರ ಪಂಚಮಿ ಹಬ್ಬದ ಹಿನ್ನೆಲೆ ಬೆಳಗ್ಗೆದ್ದು ಇನ್ನೇನು ಕಲ್ಲು ನಾಗರನಿಗೆ ಹಾಲೆರೆಯಲು ಮುಂದಾಗಿದ್ದರೆ, ಇತ್ತ ಶಿವಮೊಗ್ಗದ (Shivamogga) ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಿಜ ನಾಗರಹಾವು (Cobra) ಕಂಡು ಆತಂಕಕ್ಕೆ ಕಾರಣವಾಯಿತು. ಮನೆಯೊಂದರ ಹೊರಗಿದ್ದ ಶೂ ನಲ್ಲಿ ಬೆಚ್ಚಗೆ ಅವಿತು ಕೂತಿದ್ದ ನಾಗರಹಾವು ಸೈಲೆಂಟಾಗಿ ಆಶ್ರಯಪಡೆದಿತ್ತು. ಬಳಿಕ ಮನೆಯವರಿಗೆ ಗೊತ್ತಾಗಲೇ ಉರಗಪ್ರೇಮಿ ಸ್ನೇಕ್ ಕಿರಣ್ (Snake Kiran) ಅವರನ್ನು ಕರೆದು ಯಶಸ್ವಿಯಾಗಿ ಅದನ್ನು ಹಿಡಿದು ರಕ್ಷಿಸಲಾಯಿತು. ಮನೆಯವರ ಕರೆಗೆ ಧಾವಿಸಿ ಬಂದ ಸ್ನೇಕ್ ಕಿರಣ್, ಮನೆ ಮಂದಿಯ ಆತಂಕ ದೂರ ಮಾಡಿದರು. ಶೂನಿಂದ ನಾಗರಹಾವನ್ನು ಹೊರಗೆಳೆಯುತ್ತಲೇ ನಾಗಪ್ಪ ಬುಸುಗುಡಲು ಆರಂಭಿಸಿದ್ದ.

    ಹೀಗಿತ್ತು ಕೋಬ್ರಾ ಆಪರೇಷನ್
    ಆದರೆ ಸ್ನೇಕ್ ಕಿರಣ್ ತನ್ನ ಕೈಗಳಿಂದಲೇ ಅದನ್ನ ನಯವಾಗಿ ಮಗುವಿನಂತೆ ಅಲ್ಲಿಂದ ರಕ್ಷಿಸಿ ತಮ್ಮ ಚೀಲದಲ್ಲಿ ತುಂಬಿಕೊಂಡರು. ಇಷ್ಟಾಗುತ್ತಲೇ ಅಲ್ಲಿ ನೆರೆದಿದ್ದವರು ಕೈ ಚಪ್ಪಾಳೆ ಮೂಲಕ ಸ್ನೇಕ್ ಕಿರಣ್ ಅಭಿನಂದಿಸಿದರು.

    ಭಯ ಬೇಡ, ಜಾಗೃತಿ ಇರಲಿ
    ಇದೇ ವೇಳೆ ಸ್ನೇಕ್ ಕಿರಣ್ ಹಾವಿನ ಬಗ್ಗೆ ಭಯ ಬೇಡ. ಅದೊಂದು ಸಾಮಾನ್ಯ ಜೀವಿ. ಹಾಗಂತ, ಯಾವುದೇ ಪೂರ್ವ ತಯಾರಿ ಅಥವಾ ತರಬೇತಿ ಇಲ್ಲದೇ ಅದನ್ನ ಹಿಡಿಯಲು ಮುಂದಾಗುವುದು ಅಷ್ಟೇ ರಿಸ್ಕ್ ಎಂದು ಕಿವಿ ಮಾತು ಹೇಳಿದರು.

    ಇದನ್ನೂ ಓದಿ:  Shivamogga: ಶಿವಮೊಗ್ಗದ ಜೇನು ಗುರು! ಜೇನ್ನೊಣಗಳೇ ಇವರ ಫ್ರೆಂಡ್ಸ್!

    ಸ್ನೇಕ್ ಕಿರಣ್ ಮನವಿಯಿದು..
    ನಾಗರ ಪಂಚಮಿ ಹಬ್ಬದ ಶುಭ ಕೋರಿದ ಸ್ನೇಕ್ ಕಿರಣ್, ಯಾರೂ ನಾಗರಹಾವಿನ ಹುತ್ತಗಳಿಗೆ ಹಾಲು ಎರೆಯದಂತೆ ಮನವಿ ಮಾಡಿಕೊಂಡರು. ಯಾಕೆಂದರೆ, ಹಾವಿನ ಆಹಾರ ಹಾಲಲ್ಲ, ಬದಲಿಗೆ ಇಲಿ, ಕಪ್ಪೆಗಳಾಗಿವೆ ಎಂದು ಸ್ನೇಕ್ ಕಿರಣ್ ಅಲ್ಲಿದ್ದವರಿಗೆ ತಿಳಿ ಹೇಳಿದರು.

    ಇದನ್ನೂ ಓದಿ: Uttara Kannada: ಜೀವಂತ ಹಾವಿಗೆ ಪೂಜೆ! ಇವರ ಹೆಂಡತಿ, ಮಕ್ಕಳಿಗೂ ಹಾವಂದ್ರೆ ಭಯವಿಲ್ಲ!

    ಶೂ ಸೇರಿದ್ದೇಕೆ?
    ಸಾಮಾನ್ಯವಾಗಿ ಮಳೆಗಾಲದಲ್ಲಿ ಕಪ್ಪೆ, ಇಲಿಗಳನ್ನು ಅರಸಿ ಬರೋ ಹಾವುಗಳು ಶೂ, ಹೂ ಕುಂಡಲಿ ಅಥವಾ ಬೈಕ್ ಗಳಲ್ಲಿ ಅವಿತುಕೊಳ್ತಾವೆ. ಇಲ್ಲೂ ಅಷ್ಟೇ.. ಹೀಗೆ ಬಂದಿದ್ದ ನಾಗಪ್ಪ ಯಾರಿಗೂ ಕಾಣದಂತೆ ಶೂ ಏರಿ ಒಳಗೆ ಭದ್ರವಾಗಿ ಕೂತಿದ್ದ. ಕೊನೆಗೂ ಬಡಾವಣೆಯಿಂದ ನಾಗರಹಾವನ್ನು ಸೇಫ್ ಆದ ಜಾಗಕ್ಕೆ ಕೊಂಡೊಯ್ಯಲಾಯಿತು. ಇದ್ರಿಂದ ಅತ್ತ ನಾಗರಾಜನೂ ಸೇಫ್ ಆದ, ಇತ್ತ ಬಡಾವಣೆ ಮಂದಿನೂ ನಿಟ್ಟುಸಿರು ಬಿಡುವಂತಾಯಿತು..
    Published by:guruganesh bhat
    First published: