Mantralaya Devotee Rishi Sunak: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗುರುವಾರ ಉಪವಾಸ ಮಾಡ್ತಾರೆ!

ರಿಷಿ ಸುನಕ್, ಗುರು ರಾಯರು ಮತ್ತು ಸುಧಾ ಮೂರ್ತಿ

ರಿಷಿ ಸುನಕ್, ಗುರು ರಾಯರು ಮತ್ತು ಸುಧಾ ಮೂರ್ತಿ

ರಿಷಿ ಸುನಕ್ ಗುರುವಾರ ಉಪವಾಸ ಮಾಡಲು ಕಾರಣವನ್ನು ಸುಧಾ ಮೂರ್ತಿ ರಿವೀಲ್ ಮಾಡಿದ್ದಾರೆ. ಸದ್ಯ ವೈರಲ್ ಆಗಿರುವ ವಿಡಿಯೋ ಇಲ್ಲಿದೆ ನೋಡಿ.

  • News18 Kannada
  • 5-MIN READ
  • Last Updated :
  • Raichur, India
  • Share this:

ಬ್ರಿಟನ್ ಪ್ರಧಾನಿ ರಿಷಿ ಸುನಕ್ (Britain PM Rishi Sunak) ಯಾರಿಗೆ ಗೊತ್ತಿಲ್ಲ ಹೇಳಿ? ಸುಧಾ ಮೂರ್ತಿ-ನಾರಾಯಣ ಮೂರ್ತಿ (Sudha Murty-Infosys Narayana Murthy) ದಂಪತಿಯ ಅಳಿಯ ರಿಷಿ ಸುನಕ್ ಸಹ ಮಂತ್ರಾಲಯದ (Mantralaya) ರಾಯರ ಭಕ್ತರು. ರಾಯರ ಹೆಸರಲ್ಲಿ ಪ್ರತಿ ಗುರುವಾರ ರಿಷಿ ಸುನಕ್ ಉಪವಾಸ (Rishi Sunak Fasting) ಮಾಡ್ತಾರೆ ಎಂಬ ಕುತೂಹಲಕರ ಮಾಹಿತಿಯೊಂದು ಇದೀಗ ಹೊರಬಿದ್ದಿದೆ. ಸ್ವತಃ ರಿಷಿ ಸುನಕ್ ಅವರ ಅತ್ತೆ ಸುಧಾ ಮೂರ್ತಿ ಅವರೇ ಈ ವಿಷಯ ಬಹಿರಂಗಗೊಳಿಸಿದ್ದಾರೆ.


ಅಷ್ಟೇ ಅಲ್ಲ,  ರಿಷಿ ಸುನಕ್ ಗುರುವಾರ ಉಪವಾಸ ಮಾಡಲು ಕಾರಣವನ್ನು ಸಹ ಸುಧಾ ಮೂರ್ತಿ ರಿವೀಲ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ (Viral Video) ಆಗ್ತಿದೆ.




ಅತ್ತೆ ಮಾವನಿಂದ ಅಳಿಯನಿಗೆ ರಾಯರ ಸ್ಪೂರ್ತಿ!
ಸುಧಾ ಮೂರ್ತಿ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಅಪ್ಪಟ ಭಕ್ತರು. ರಾಯರ ಸೇವೆಯೇ ನನಗೆ ಪೂಜೆ. ಅದರಲ್ಲೇ ಭಕ್ತಿ ಕಾಣುತ್ತೇನೆ ಎಂದು ಅವರು ಆಗಾಗ ಹೇಳುತ್ತಿರುತ್ತಾರೆ. ಅಲ್ಲದೇ ರಾಯರ ಮಠದಲ್ಲಿ ಆಗಾಗ ಸೇವೆ ಮಾಡುತ್ತಿರುತ್ತಾರೆ. ಅಲ್ಲದೇ ಅವರ ಗಂಡ ಇನ್ಫೋಸಿಸ್ ನಾರಾಯಣ ಮೂರ್ತಿ ಸಹ ರಾಯರ ಭಕ್ತರು. ಹೀಗಾಗಿ ಸಹಜವಾಗಿ ಈ ದಂಪತಿಯ ಮಗಳು ಅಳಿಯನಿಗೂ ರಾಯರ ಮೇಲೆ ಭಕ್ತಿ ಮೂಡಿದೆ.




ಪ್ರತಿ ಗುರುವಾರ ಉಪವಾಸ
ಹೌದು, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್​ಗೆ ರಾಯರ ಮೇಲೆ ಅಪಾರ ಭಕ್ತಿ ಬೆಳೆದಿದೆ. ರಾಯರ ಹೆಸರಲ್ಲಿ ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ಪ್ರತಿ ಗುರುವಾರ ಉಪವಾಸ ಮಾಡ್ತಾರೆ. ಅಲ್ಲದೇ, ಗುರು ರಾಯರಿಗೆ ಪೂಜೆಯನ್ನು ಸಹ ಸಲ್ಲಿಸುತ್ತಾರೆ ಎಂದು ಸ್ವತಃ ಸುಧಾ ಮೂರ್ತಿ ಅವರೇ ವಿವರಿಸಿದ್ದಾರೆ.



ಇದನ್ನೂ ಓದಿ: Raichur: ಗ್ರಾಮ ಪಂಚಾಯತ್ ಚೇರ್ಮನ್ ಈಗ ಭಿಕ್ಷುಕ! ಈತ ಸಿಎಂ ಬೊಮ್ಮಾಯಿಗೂ ಗೆಳೆಯ!




ಸುಧಾ ಮೂರ್ತಿ ಮಗಳು ಅಕ್ಷತಾ ಪ್ರಭಾವ
ರಿಷಿ ಸುನಕ್ ಪಂಜಾಬ್ ಮೂಲದವರು. ಅವರಿಗೆ ಧಾರ್ಮಿಕ ಮನೋಭಾವವಿದೆ. ಭಾರತದ ಜೊತೆಗಿನ ಧಾರ್ಮಿಕ ಸಂಪರ್ಕವನ್ನು ಇಂಗ್ಲೆಂಡ್ ಪ್ರಧಾನಿಯಾದ ಮೇಲೆ ಸಹ ರಿಷಿ ಸುನಕ್ ಮುಂದುವರೆಸಿದ್ದಾರೆ.


ಇದನ್ನೂ ಓದಿ: Mantralaya: ಶ್ರೀ ಗುರು ರಾಘವೇಂದ್ರರ ಸ್ಮರಿಸಿರೋ! ಮಂತ್ರಾಲಯದಲ್ಲಿ ಪಟ್ಟಾಭಿಷೇಕ ಮಹೋತ್ಸವದ ವೈಭವ


ಸುಧಾ ಮೂರ್ತಿ ಮಗಳು ಅಕ್ಷತಾ ಅವರ ಪ್ರಭಾವದಿಂದ ರಿಷಿ ಸುನಕ್ ಮಂತ್ರಾಲಯದ ರಾಯರ ಭಕ್ತರಾಗಿದ್ದಾರೆ. ಈ ಕಾರಣದಿಂದ ಪ್ರತಿ ಗುರುವಾರ ಉಪವಾಸ ಮಾಡಿ ರಾತ್ರಿ ಮಾತ್ರ ಊಟ ಮಾಡುತ್ತಾರೆ ಎಂದು ತಮ್ಮ ಅಳಿಯನ ಬಗ್ಗೆ ಸುಧಾ ಮೂರ್ತಿ ಮಾಹಿತಿ ಹಂಚಿಕೊಂಡಿದ್ದಾರೆ.

First published: