Raichur: ಗಡಿ ಜಿಲ್ಲೆಯಲ್ಲಿ ಲೈಬ್ರರಿ ಕ್ರಾಂತಿ! ಕನ್ನಡ ಬೆಳೆಸೋದು ಅಂದ್ರೆ ಇದೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಪಬ್ಲಿಸಿಟಿ ಪಡೆಯಲು ಇಷ್ಟಪಡದ ಅಧ್ಯಾಪಕ ಮಾರುತಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳು ಇಷ್ಟಪಡೊ ಪುಸ್ತಕಗಳನ್ನ ತಂದಿದ್ದಾರೆ. ಅಷ್ಟೇ ಅಲ್ಲ, ಗ್ರಾಮಸ್ಥರ ಸಹಾಯದಿಂದ ಈ ಗ್ರಂಥಾಲಯವನ್ನ ಹೈಟೆಕ್ ಆಗಿ ನಿರ್ಮಿಸಲಾಗಿದೆ.

  • News18 Kannada
  • 2-MIN READ
  • Last Updated :
  • Raichur, India
  • Share this:

    ರಾಯಚೂರು: ಹೀಗೆ ಬಣ್ಣ ಬಣ್ಣದ ಕಲಾಕೃತಿಗಳು, ಇಲ್ಲಿ ಬಿಡಿಸಿರೊ ಚಿತ್ರಗಳನ್ನ ಒಮ್ಮೆ ನೋಡಿ, ಪುಸ್ತಕ ಹಿಡಿದುಕೊಂಡು ಬಾಲಕ ಕುಳಿತಿರೋದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಪುಸ್ತಕಗಳ (Books) ರಾಶಿಯೆದುರು ಕುಳಿತ ಬಾಲಕನ ಮತ್ತೊಂದು ಚಿತ್ರ. ಇವೆಲ್ಲಾ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣದ (Village Students Education) ಮೇಲೆ ಆಸಕ್ತಿ ಹುಟ್ಟಿಸಲು ಮಾಡಲಾಗಿರುವ ಭಿನ್ನ ವಿಭಿನ್ನ ಚಿತ್ರಗಳು.


    ರಾಯಚೂರು ಜಿಲ್ಲೆ ಆಂಧ್ರ-ತೆಲಂಗಾಣದ ಗಡಿಯಲ್ಲಿದೆ. ಬಿಸಿಲುನಾಡು ಅಂತಲೇ ಕರೆಸಿಕೊಳ್ಳುವ ರಾಯಚೂರು ಜಿಲ್ಲೆ ಶಿಕ್ಷಣದಲ್ಲಿ ತೀರಾ ಹಿಂದುಳಿದಿದೆ. ತೀರಾ ಬಡತನ, ಅನಕ್ಷರತೆಯ ಹಿನ್ನೆಲೆಯಲ್ಲಿ ಈಗಲೂ ಕೆಲ ಗ್ರಾಮೀಣ ಭಾಗಗಳಲ್ಲಿ ಮಕ್ಕಳಿಗೆ ಓದುವ ಆಸಕ್ತಿಯೇ ಇಲ್ಲ. ಅದೆಷ್ಟೊ ಮಕ್ಕಳು ಓದುವ ಆಸೆ ಹೊಂದಿದ್ರು ತಮ್ಮ ಮನೆಗಳಲ್ಲಿನ ಸಮಸ್ಯೆಗಳಿಂದಲೇ ಓದಿನ ಮೇಲಿನ ಆಸಕ್ತಿ ಕಳೆದುಕೊಳ್ತಿದ್ದಾರೆ. ಈ ಕಾರಣಗಳಿಂದಲೇ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಮಲದಕಲ್ ಗ್ರಾಮದಲ್ಲಿ ತಮ್ಮೂರಿನ ಮಕ್ಕಳು ಓದಿ ವಿದ್ಯಾವಂತರಾಗ್ಬೇಕು ಅಂತ ಮಾರುತಿ ಅನ್ನೋ ಅಧ್ಯಾಪಕರು ಶಿಕ್ಷಣ ಕ್ರಾಂತಿಗೆ ಮುಂದಾಗಿದ್ದಾರೆ.


    ಸ್ವಂತ ಖರ್ಚಲ್ಲಿ ಲೈಬ್ರರಿ!
    ಪಬ್ಲಿಸಿಟಿ ಪಡೆಯಲು ಇಷ್ಟಪಡದ ಅಧ್ಯಾಪಕ ಮಾರುತಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳು ಇಷ್ಟಪಡೊ ಪುಸ್ತಕಗಳನ್ನ ತಂದಿದ್ದಾರೆ. ಅಷ್ಟೇ ಅಲ್ಲ, ಗ್ರಾಮಸ್ಥರ ಸಹಾಯದಿಂದ ಈ ಗ್ರಂಥಾಲಯವನ್ನ ಹೈಟೆಕ್ ಆಗಿ ನಿರ್ಮಿಸಲಾಗಿದೆ.


    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಿಪೇರ್ ಆಗ್ತಿರುವ ಯುವಕರು
    ಗ್ರಾಮೀಣ ಭಾಗದ ಮಕ್ಕಳಿಗೆ ಕಲಿಕಾಸಕ್ತಿ ಹುಟ್ಟು ಹಾಕಲು ಗ್ರಂಥಾಲಯವನ್ನ ವಿವಿಧ ಬಣ್ಣಗಳ ಮೂಲಕ ಅಲಂಕರಿಸಲಾಗಿದೆ. ಗೋಡೆಗಳ ಮೇಲೆ ವಿವಿಧ ಮಕ್ಕಳ ಚಿತ್ರಗಳನ್ನ ಬಿಡಿಸಲಾಗಿದೆ. ಇದು ಗ್ರಾಮೀಣ ಭಾಗವಾಗಿರೋದ್ರಿಂದ ಮಕ್ಕಳು ಮನೆಯಲ್ಲಿ ಕೂತು ಓದಲು ಆಗಲ್ಲ. ಅಷ್ಟು ಸಂದಿಗ್ಧ ಪರಿಸ್ಥಿತಿಯಿರುತ್ತೆ. ಆದ್ರೆ ಈ ಹೈಟೆಕ್ ಲೈಬ್ರರಿ ಸ್ಥಾಪನೆಯಾಗಿರೋದ್ರಿಂದ ಮಕ್ಕಳು ಇಲ್ಲೇ ಬಂದು ಪುಸ್ತಕ ಓದುತ್ತಾರೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಿಪೇರ್ ಆಗ್ತಿರುವ ಯುವಕರಂತು ಈ ಲೈಬ್ರರಿ ಬಿಟ್ಟು ಹೊರ ಹೋಗಲ್ಲ.


    ಇದನ್ನೂ ಓದಿ: Raichur: ಗ್ರಾಮ ಪಂಚಾಯತ್ ಚೇರ್ಮನ್ ಈಗ ಭಿಕ್ಷುಕ! ಈತ ಸಿಎಂ ಬೊಮ್ಮಾಯಿಗೂ ಗೆಳೆಯ!




    ಈ ಲೈಬ್ರರಿ ಬೆಳಿಗ್ಗೆ 8 ಕ್ಕೆ ಶುರುವಾದ್ರೆ ರಾತ್ರಿ 8 ಕ್ಕೆ ಬಂದ್ ಆಗುತ್ತೆ. ಈ ಸಮಯದವರೆಗೂ ಯುವಕರು ಈ ಲೈಬ್ರರಿಯಲ್ಲಿ ಕೂತು ಓದುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗ್ತಿದ್ದಾರೆ. ಇಲ್ಲಿ ಕಾದಂಬರಿ, ಕಥೆಗಳು, ಗ್ರಂಥಗಳು, ಗಣಿತ, ಸಮಾಜ, ಸಾಮಾನ್ಯ ಜ್ಞಾನದಂತಹ ಪುಸ್ತಗಳು ಸೇರಿ ವಿವಿಧ ವಿಷಯಗಳ ಪುಸ್ತಕಗಳು ಸಿಗುತ್ತವೆ. ಹೀಗಾಗಿ ಮಲದಕಲ್ ಗ್ರಾಮದ ಮಕ್ಕಳು, ಯುವಕರಿಗೆ ಈ ಲೈಬ್ರರಿ ಹಾಟ್ ಫೇವರೇಟ್ ಆಗಿದೆ.


    ಇದನ್ನೂ ಓದಿ: Mantralaya: ಶ್ರೀ ಗುರು ರಾಘವೇಂದ್ರರ ಸ್ಮರಿಸಿರೋ! ಮಂತ್ರಾಲಯದಲ್ಲಿ ಪಟ್ಟಾಭಿಷೇಕ ಮಹೋತ್ಸವದ ವೈಭವ


    ಅದೇನೆ ಇರ್ಲಿ, ಶಿಕ್ಷಣದ ಬಗ್ಗೆ ಸರ್ಕಾರ ಅದೆಷ್ಟೋ ಯೋಜನೆಗಳನ್ನ ತಂದ್ರೂ ಕೆಲವೊಮ್ಮೆ ಗ್ರಾಮೀಣ ಭಾಗಗಳಲ್ಲಿ ಅವುಗಳಿಗೆ ಸೂಕ್ತ ನೆಲೆಯೇ ಇರಲ್ಲ. ಅಂಥದ್ರಲ್ಲಿ ಗ್ರಾಮಸ್ಥರು ಹಾಗೂ ಅಧ್ಯಾಪಕ ಮಾರುತಿ ಅವರ ಈ ಶ್ರಮಕ್ಕೆ ಮಕ್ಕಳು ವಿದ್ಯಾವಂತರಾಗ್ತಿರೋದಂತೂ ಸುಳ್ಳಲ್ಲ.


    ವರದಿ: ವಿಶ್ವನಾಥ್ ಹೂಗಾರ್ ನ್ಯೂಸ್ 18 ರಾಯಚೂರು

    Published by:ಗುರುಗಣೇಶ ಡಬ್ಗುಳಿ
    First published: