ರಾಯಚೂರು: ನೆನೆಯಿರೋ ನೆನೆಯಿರೋ ಶ್ರೀ ಗುರು ರಾಘವೇಂದ್ರರ ನೆನೆಯಿರೋ ಅಂತಿರೋ ಈ ಸಾವಿರಾರು ಭಕ್ತರು ಆಗಮಿಸಿರೋದು ಶ್ರೀ ಕ್ಷೇತ್ರ ಗುರು ರಾಘವೇಂದ್ರರ ಸನ್ನಿಧಿಗೆ. ಮಂತ್ರಾಲಯದಲ್ಲಿ (Mantralaya) ಗುರು ಸಾರ್ವಭೌಮರ ಪಟ್ಟಾಭಿಷೇಕ ಮಹೋತ್ಸವ ಕಳೆಗಟ್ಟುತ್ತಿದೆ. ಸಡಗರ ಸಂಭ್ರಮದಲ್ಲಿ ಭಕ್ತರು ಗುರು ರಾಘವೇಂದ್ರರ (Shri Guru Raghavendra Swamy) ಸ್ಮರಣೆ ಮಾಡುತ್ತಿದ್ದಾರೆ.
ಗುರು ಸಾರ್ವಭೌಮರ 402 ನೇ ಪಟ್ಟಾಭಿಷೇಕ ಹಾಗೂ 428 ನೇ ವರ್ಧಂತಿ ಮಹೋತ್ಸವ 7 ದಿನಗಳ ಕಾಲ ಶ್ರೀಮಠದಲ್ಲಿ ಜರುಗಲಿದೆ. ವೈಭವೋಪಿತ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾವಿರಾರು ಭಕ್ತರು ಈಗಾಗಲೇ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
ಮೂಲ ರಾಮದೇವರ ಪೂಜೆ
ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿದೆ. ಉತ್ಸವದ ಅಂಗವಾಗಿ ಶ್ರೀಮಠದಲ್ಲಿ ಬೆಳಗ್ಗೆಯಿಂದಲೇ ಸುಪ್ರಭಾತ, ನಿರ್ಮಲ ವಿಸರ್ಜನೆ, ಮೂಲ ರಾಮದೇವರ ಪೂಜೆ ನಡೆಯಲಿದೆ.
ಇದನ್ನೂ ಓದಿ: Raichur: ಗ್ರಾಮ ಪಂಚಾಯತ್ ಚೇರ್ಮನ್ ಈಗ ಭಿಕ್ಷುಕ! ಈತ ಸಿಎಂ ಬೊಮ್ಮಾಯಿಗೂ ಗೆಳೆಯ!
ಬಂಗಾರದ ರಥೋತ್ಸವದ ವೈಭವ
ಇದಲ್ಲದೇ ಮಂತ್ರಾಲಯದಲ್ಲಿ ಅಲಂಕಾರ ಸೇವೆ, ಉತ್ಸವ ಮೂರ್ತಿ ಶ್ರೀ ಪ್ರಹ್ಲಾದರಾಜರ ಮೆರವಣಿಗೆ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಪಂಚಾಮೃತ ಅಭಿಷೇಕ, ಸಿಂಹವಾಹನೋತ್ಸವ, ಬಂಗಾರದ ರಥೋತ್ಸವ ಕೂಡ ಇದೇ ವೇಳೆ ಜರುಗಲಿದೆ.
ಇದನ್ನೂ ಓದಿ: Viral News: 5 ರೂಪಾಯಿಗೆ 500 ಲಾಭ! ಇದು ಕುರ್ಕುರೆ ಕರಾಮತ್ತಿನ ಗುಟ್ಟು
ಏಳು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವ ವರ್ಧಂತಿಗೆಂದು ಮಂತ್ರಾಲಯಕ್ಕೆ ಭೇಟಿ ನೀಡಿದ ಭಕ್ತರ ಮೊಗದಲ್ಲಿ ಕೃತಾರ್ಥ ಭಾವ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ