• ಹೋಂ
  • »
  • ನ್ಯೂಸ್
  • »
  • ರಾಯಚೂರು
  • »
  • Mantralaya: ರಾಘವೇಂದ್ರ ಸ್ವಾಮಿಗಳ 428ನೇ ಹುಟ್ಟುಹಬ್ಬದ ವೈಭವ, ಮಂತ್ರಾಲಯದಲ್ಲಿ 5 ದಿನಗಳ ಸಂಭ್ರಮದ ಉತ್ಸವ

Mantralaya: ರಾಘವೇಂದ್ರ ಸ್ವಾಮಿಗಳ 428ನೇ ಹುಟ್ಟುಹಬ್ಬದ ವೈಭವ, ಮಂತ್ರಾಲಯದಲ್ಲಿ 5 ದಿನಗಳ ಸಂಭ್ರಮದ ಉತ್ಸವ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಭಕ್ತರ ಪಾಲಿನ ಕಾಮಧೇನು ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಹಾಗೂ ವರ್ಧಂತಿಯ ಗುರು ಭಕ್ತಿ ಉತ್ಸವ ಸಂಪನ್ನಗೊಂಡಿತು. ನಾಡಿನ ಮೂಲೆ ಮೂಲೆಗಳಿಂದ ಬಂದ ಭಕ್ತರು ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಧನ್ಯತೆ ಅನುಭವಿಸಿದರು.

  • News18 Kannada
  • 5-MIN READ
  • Last Updated :
  • Raichur, India
  • Share this:

    ರಾಯಚೂರು: ಕಲಿಯುಗದ ಕಾಮಧೇನು, ಕಲ್ಪವೃಕ್ಷ, ನಾದಪ್ರಿಯ ರಾಯರನ್ನು ಭಕ್ತರು ಕರೆಯುವ ಹೆಸರುಗಳು ಒಂದೊಂದೂ ವಿಶೇಷ! ಹಲವು ಹೆಸರಿನಿಂದ ಕರೆಯಲ್ಪಡುವ, ತುಂಗೆಯ ತಟದಲ್ಲಿ ನೆಲೆಸಿರುವ ಗುರು ಸಾರ್ವಭೌಮ ಮಂತ್ರಾಲಯದ (Mantralaya) ಶ್ರೀ ರಾಘವೇಂದ್ರ ಸ್ವಾಮಿಗಳ (Guru Raghavendra Swamy) 428 ನೇ ವರ್ಧಂತಿ ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

    ವರ್ಧಂತಿ ಮಹೋತ್ಸವ ಎಂಬ ಸಂಸ್ಕೃತ ಪದದ ಅರ್ಥ ಹುಟ್ಟುಹಬ್ಬ. ಹೀಗಾಗಿ ಮಂತ್ರಾಲಯ ಮಠದಲ್ಲೂ ರಾಯರ ಹುಟ್ಟು ಹಬ್ಬವನ್ನು ವರ್ಧಂತಿ ಉತ್ಸವವನ್ನಾಗಿ ಆಚರಿಸಲಾಯ್ತು. ಶ್ರೀ ಮಠದಲ್ಲಿ ಹಲವು ಕಾರ್ಯಕ್ರಮಗಳು ಜರುಗಿದವು.


    5 ದಿನಗಳಿಂದ ಹಲವು ಕಾರ್ಯಕ್ರಮಗಳ ಸಡಗರ
    ಗುರು ಸಾರ್ವಭೌಮರ ವರ್ಧಂತಿ ಉತ್ಸವಕ್ಕೂ ಮುನ್ನ ಕಳೆದ 5 ದಿನಗಳಿಂದ ಗುರುಗಳ ವೈಭವವೋತ್ಸವವನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯ್ತು. ಗುರುಗಳ ಪಟ್ಟಾಭಿಷೇಕ, ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಸೇರಿದಂತೆ ಹಲವು ವಿಧದ ರಥೋತ್ಸವ ಕಾರ್ಯಕ್ರಮಗಳು ಜರುಗಿವೆ.


    ಸಂಗೀತ ಸೇವೆ, ವಿಶೇಷ ಪೂಜೆ
    ರಾಯರ 428 ನೇ ಹುಟ್ಟುಹಬ್ಬ ನಿಮಿತ್ತ ಮಠದ ಪ್ರಾಂಗಣದಲ್ಲಿ ಹಲವು ವಿಶಿಷ್ಟಪೂರ್ಣ ಕಣ್ಮನ ಸೆಳೆಯುವ ಕಾರ್ಯಕ್ರಮಗಳು ಜರುಗಿದವು. ಮೂಲತಃ ಸಂಗೀತ ಪ್ರೇಮಿಗಳಾಗಿದ್ದ ಗುರು ರಾಯರಿಗೆ ತಮಿಳುನಾಡಿನ ನಾದಾಹಾರ ಟ್ರಸ್ಟ್​ನ 150 ವಿದ್ವಾಂಸರಿಂದ ಏಕಕಾಲಕ್ಕೆ ಗಾಯನ ಮಾಡಿ ಸಂಗೀತ ಸೇವೆ ಸಮರ್ಪಿಸಲಾಯಿತು.




    ಎಂದಿನಂತೆ ಈ ದಿನವೂ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾಂವನಕ್ಕೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ ಮಾಡಲಾಯಿತು. ವರ್ಧಂತ್ಯೋತ್ಸವದ ನಿಮಿತ್ತ ವಿಶೇಷವಾಗಿ ತಿರುಮಲ ತಿರುಪತಿ ದೇವಸ್ಥಾನ ಸಮಿತಿಯಿಂದ ಶೇಷ ವಸ್ತ್ರ ಬರ ಮಾಡಿಕೊಂಡು, ಪೂಜೆ ಸಲ್ಲಿಸಿ ರಾಯರಿಗೆ ಸಮರ್ಪಿಸಲಾಯಿತು.


    ಇದನ್ನೂ ಓದಿ: Mantralaya: ಶ್ರೀ ಗುರು ರಾಘವೇಂದ್ರರ ಸ್ಮರಿಸಿರೋ! ಮಂತ್ರಾಲಯದಲ್ಲಿ ಪಟ್ಟಾಭಿಷೇಕ ಮಹೋತ್ಸವದ ವೈಭವ


    ರಾಘವೇಂದ್ರ ಸ್ವಾಮಿಗಳ ಹುಟ್ಟು ಹಬ್ಬದ ಅಂಗವಾಗಿ ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ಜರುಗಿತು.ಇನ್ನು ಸ್ವತಃ ಸಂಗೀತ ಪ್ರಿಯರು, ವೈಣಿಕರಾಗಿದ್ದ ಶ್ರೀ ರಾಘವೇಂದ್ರ ಯತಿಗಳಿಗೆ ಚೆನೈನ ನಾದಾಹಾರ ಟ್ರಸ್ಟ್​ನಿಂದ ಕಳೆದ 18 ವರ್ಷಗಳಿಂದ ನಿರಂತರವಾಗಿ ಸಂಗೀತ ಸೇವೆ ಮಾಡುತ್ತಾ ಬರಲಾಗಿದೆ. ಈ ವರ್ಷವೂ ಕೂಡ 150 ಸಂಗೀತಗಾರರಿಂದ ಏಕ ಕಾಲಕ್ಕೆ ಗಾಯನ ಮಾಡುವ ಮೂಲಕ ನಾದಹಾರ ಸಮರ್ಪಿಸಿದರು.


    ಇದನ್ನೂ ಓದಿ: Raichur: ಗ್ರಾಮ ಪಂಚಾಯತ್ ಚೇರ್ಮನ್ ಈಗ ಭಿಕ್ಷುಕ! ಈತ ಸಿಎಂ ಬೊಮ್ಮಾಯಿಗೂ ಗೆಳೆಯ!


    ಒಟ್ಟಾರೆ ಭಕ್ತರ ಪಾಲಿನ ಕಾಮಧೇನು ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಹಾಗೂ ವರ್ಧಂತಿಯ ಗುರು ಭಕ್ತಿ ಉತ್ಸವ ಸಂಪನ್ನಗೊಂಡಿತು. ನಾಡಿನ ಮೂಲೆ ಮೂಲೆಗಳಿಂದ ಬಂದ ಭಕ್ತರು ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಧನ್ಯತೆ ಅನುಭವಿಸಿದರು.


    ವರದಿ: ವಿಶ್ವನಾಥ್ ಹೂಗಾರ್, ನ್ಯೂಸ್ 18 ರಾಯಚೂರು

    Published by:ಗುರುಗಣೇಶ ಡಬ್ಗುಳಿ
    First published: