• Home
  • »
  • News
  • »
  • national-international
  • »
  • Zulu King: ಬಾಕಿ ಹಣ ಪಾವತಿಸದೇ ಸಿಂಹಾಸನ ಇಲ್ಲ; ದಕ್ಷಿಣ ಆಫ್ರಿಕಾದ ಜುಲು ರಾಜನಿಗೆ ಇದೆಂಥಾ ಪರಿಸ್ಥಿತಿ!

Zulu King: ಬಾಕಿ ಹಣ ಪಾವತಿಸದೇ ಸಿಂಹಾಸನ ಇಲ್ಲ; ದಕ್ಷಿಣ ಆಫ್ರಿಕಾದ ಜುಲು ರಾಜನಿಗೆ ಇದೆಂಥಾ ಪರಿಸ್ಥಿತಿ!

ಜುಲು ಹೊಸ ರಾಜ

ಜುಲು ಹೊಸ ರಾಜ

ಹೊಸ ರಾಜ ಮಿಸುಜಲುವಿಗೆ ಸಿಂಹಾಸನ ಸಂಕಷ್ಟ ಎದುರಾಗಿದ್ದು, ಬಾಕಿ ಹಣ ನೀಡುವವರೆಗೂ ಸಿಂಹಾಸನ ತಯಾರು ಮಾಡಲ್ಲ ಎನ್ನುತ್ತಿದ್ದಾರೆ ರಾಜೀವ್ ಸಿಂಗ್.

  • Share this:

    ಜೋಹಾನ್ಸ್‌ಬರ್ಗ್: ರಾಜಮನೆತನದಿಂದ ಬಾಕಿ ಪಾವತಿಸದ ಕಾರಣ ದಕ್ಷಿಣ ಆಫ್ರಿಕಾದ ಭಾರತೀಯ ಮೂಲದ ಪೀಠೋಪಕರಣ ತಯಾರಿಸುವ ವ್ಯಕ್ತಿಯೊಬ್ಬರು ಸಿಂಹಾಸನಗಳನ್ನು ತಯಾರು ಮಾಡುವ ಆರ್ಡರನ್ನು ನಿರಾಕರಿಸಿದ್ದಾರೆ.  ಹಳೆ ಬಾಕಿ ಪಾವತಿಗೆ ಒತ್ತಾಯಿಸಿದ್ದಾರೆ. 48 ವರ್ಷದ ಮಿಸುಜುಲು ಅವರನ್ನು (Zulu King Misuzulu ka Zwelithini)  ದಕ್ಷಿಣ ಆಫ್ರಿಕಾದ ಸರ್ಕಾರವು ಶನಿವಾರ ಅಧಿಕೃತವಾಗಿ ಜುಲು ಪ್ರಭುತ್ವದ ರಾಜ (Zulu King)  ಎಂದು ಗುರುತಿಸಿತು. ಆಫ್ರಿಕಾದ ಅತಿದೊಡ್ಡ ಸ್ವತಂತ್ರ ಜನಾಂಗೀಯ ಮತ್ತು ಅತ್ಯಂತ ಪ್ರಭಾವಶಾಲಿ ಸಾಂಪ್ರದಾಯಿಕ ಗುಂಪು ಜುಲುವಿನಲ್ಲಿ ಮಿಸುಜುಲು ಕಾ ಜ್ವೆಲಿಥಿನಿಯ ಜುಲುವಿನ ಹೊಸ ರಾಜನಾಗಿ ನೇಮಕಗೊಂಡಿದ್ದಾರೆ.


    ಬಾಕಿ ಪಾವತಿಸದ ಕಾರಣ ಸಿಂಹಾಸನ ಆರ್ಡರ್‌ ತೆಗೆದುಕೊಳ್ಳಲು ನಿರಾಕರಣೆ
    ಈ ವಿಶೇಷ ಸಂದರ್ಭಕ್ಕಾಗಿ ಎರಡು ಸಿಂಹಾಸನಗಳನ್ನು ಮಾಡಿಕೊಡುವಂತೆ ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಮೂಲದ ಪೀಠೋಪಕರಣ ತಯಾರಕ ರಾಜೀವ್ ಸಿಂಗ್ ಎಂಬುವವರಿಗೆ ಆದೇಶಿಸಲಾಗಿತ್ತು. ಆದರೆ ರಾಜೀವ್, ರಾಜಮನೆತನ ಹಿಂದಿನ ಆರ್ಡರ್‌ಗಳ ಬಾಕಿ ಪಾವತಿಸದ ಕಾರಣ ಎರಡು ಸಿಂಹಾಸನದ ಆರ್ಡರ್‌ಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.


    ಅಪರೂಪದ ಸಿಂಹಾಸನ
    ಅಪರೂಪದ ತಾಂಬೋಟಿ ಮರದಿಂದ ಮಾಡಿದ ಸಿಂಹಾಸನವನ್ನು ಇವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಬಳಸಲಾಗುತ್ತದೆ. ಅದೇ ಸಿಂಹಾಸನದ ಮೇಲೆ ಹೊಸ ರಾಜ ಕೂತು ಅಧಿಕಾರ ನಡೆಸುತ್ತಾನೆ. ಆದರೆ ಹೊಸ ರಾಜ ಮಿಸುಜಲುವಿಗೆ ಸಿಂಹಾಸನ ಸಂಕಷ್ಟ ಎದುರಾಗಿದ್ದು, ಬಾಕಿ ಹಣ ನೀಡುವವರೆಗೂ ಸಿಂಹಾಸನ ತಯಾರು ಮಾಡಲ್ಲ ಎನ್ನುತ್ತಿದ್ದಾರೆ ರಾಜೀವ್ ಸಿಂಗ್.


    ತಾಂಬೋಟಿ ಮರದಿಂದ ಪಿಠೋಪಕರಣ ತಯಾರಿಸುವ ರಾಜೀವ್‌ ಸಿಂಗ್‌ ಕುಟುಂಬ
    ದಕ್ಷಿಣ ಆಫ್ರಿಕಾದ ಅತ್ಯಂತ ಪ್ರಭಾವಶಾಲಿ ಸಾಂಪ್ರದಾಯಿಕ ರಾಜಪ್ರಭುತ್ವದ ಮುಖ್ಯಸ್ಥರಾಗಿ ಹೊಸ ಜುಲು ಕಿಂಗ್ ಔಪಚಾರಿಕವಾಗಿ ಸಿಂಹಾಸನಾರೋಹಣ ಮಾಡುತ್ತಿದ್ದಂತೆ, ಅಪರೂಪದ ಮರದ ಪೀಠೋಪಕರಣ ಶಿಲ್ಪಿ ರಾಜೀವ್ ಸಿಂಗ್ ಅವರು ತಮ್ಮ ಕುಟುಂಬವು ಪರಿಣತಿ ಹೊಂದಿರುವ ಅಪರೂಪದ ತಾಂಬೋಟಿ ಮರದಿಂದ ಮಾಡಿದ ರಾಜನಿಗೆ ಎರಡು ಸಿಂಹಾಸನಗಳ ಆದೇಶವನ್ನು ನಿಲ್ಲಿಸಿರುವುದಾಗಿ ಎಂದು ಹೇಳಿದ್ದಾರೆ.


    ಬಾಕಿ ಹಣ ಬರುವವರೆಗೂ ಸಿಂಹಾಸನ ಮಾಡಲ್ಲ
    ಏಳು ವರ್ಷಗಳ ಹಿಂದೆ ರಾಜನ ದಿವಂಗತ ತಂದೆ ಗುಡ್‌ವಿಲ್ ಜ್ವೆಲಿಥಿನಿಗೆ R100,000 (ಅಂದಾಜು INR 453,710) ಮೌಲ್ಯದ ತಂಬೋಟಿ ಸಿಂಹಾಸನಗಳನ್ನು ಮಾಡಿಕೊಡಲಾಯಿತು. ಆದರೆ ರಾಜ ಈ ಹಣದ ಬಾಕಿಯನ್ನು ಪಾವತಿಸದೇ ಇನ್ನೂ ಉಳಿಸಿಕೊಂಡಿದ್ದಾರೆ. ಹಲವು ಬಾರಿ ಹಣ ನೀಡಲು ಕೇಳಿಕೊಂಡರೂ ಸಹ ಅವರು ನಿರ್ಲಕ್ಷ್ಯಿಸಿದ್ದಾರೆ. ಹೀಗಾಗಿ ರಾಜಮನೆತನದಿಂದ ಬಾಕಿ ಹಣ ಬರುವವರೆಗೂ ತಾನು ಸಿಂಹಾಸನಗಳನ್ನು ಮಾಡಿಕೊಡುವುದಿಲ್ಲ ಎಂದು ರಾಜೀವ್‌ ಸಿಂಗ್‌ ಹೇಳಿದ್ದಾರೆ.


    "ಹೊಸದಾಗಿ ಬಂದ ಆರ್ಡರ್‌ಗೆ ನಾನು ಏನನ್ನೂ ವಿನ್ಯಾಸಗೊಳಿಸಿಲ್ಲ. ನಾವು ಇನ್ನೂ ಹಣವನ್ನು ಪಡೆಯಬೇಕಾಗಿರುವುದರಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಸಿಂಹಾಸನ ತಯಾರು ಮಾಡುವಂತೆ ಅವರು ಮತ್ತೆ ನಮ್ಮನ್ನು ಸಂಪರ್ಕಿಸಿದರು. ನಾನು ಬಾಕಿಯಿರುವ ಹಣದ ಬಗ್ಗೆ ಅವರ ಕಡೆಯಿಂದ ಬಂದ ಪ್ರತಿನಿಧಿಗೆ ತಿಳಿಸಿದ್ದೇನೆ" ಎಂದು ಸಿಂಗ್ ಇತ್ತೀಚೆಗೆ ಸುದ್ದಿ ಮಾಧ್ಯಮಗಳಿಗೆ ತಿಳಿಸಿದರು.


    ಇದನ್ನೂ ಓದಿ: Pulwama Attack: ಪುಲ್ವಾಮ ದಾಳಿಯಲ್ಲಿ ಭಾರತೀಯ ಸೈನಿಕರ ಸಾವಿಗೆ ಸಂಭ್ರಮ, ಬೆಂಗಳೂರು ವಿದ್ಯಾರ್ಥಿಗೆ 5 ವರ್ಷ ಜೈಲು!


    ನೀವು ಈ ಆರ್ಡರ್‌ ಅನ್ನು ಮಾಡಿಕೊಟ್ಟರೆ ನಿಮಗೆ ಹಳೆ ಬಾಕಿಯನ್ನು ಪೂರೈಸುತ್ತೇವೆ ಎಂದು ಹೇಳಿದ್ದಾರೆ. ರಾಜಮನೆತನ ಆಗಿರಬಹುದು ಯಾರಾದರೂ ಆಗಿರಬಹುದು ನೀವು ಏನನ್ನಾದರೂ ಖರೀದಿಸಿದರೆ, ಅದಕ್ಕೆ ನೀವು ಪಾವತಿಸಬೇಕು ಎಂದು ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಈ ಬಗ್ಗೆ ಜುಲು ರಾಜಮನೆತನಕ್ಕೆ ಪ್ರಶ್ನೆ ಕೇಳಲಾದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಲ್ಲಿನ ವಾರಪತ್ರಿಕೆಯು ವರದಿ ಮಾಡಿದೆ.


    ಜುಲು ಮನೆತನಕ್ಕೆ ಪೀಠೋಪಕರಣ ಮಾಡಿಕೊಟ್ಟಿದ್ದ ಕುಬೇರ್ ಈದೇವ್ ಸಿಂಗ್
    ರಾಜೀವ್‌ ಸಿಂಗ್ ಅವರ ತಂದೆ ಕುಬೇರ್ ಈದೇವ್ ಸಿಂಗ್, ಹಲವಾರು ದಶಕಗಳಿಂದ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಇತರ ಸೆಲೆಬ್ರಿಟಿಗಳಿಗೆ ತಾಂಬೋಟಿ ಪೀಠೋಪಕರಣಗಳನ್ನು ಉಡುಗೊರೆ ನೀಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.


    ಎರಡು ಸಿಂಹಾಸನಕ್ಕೆ ನೀಡಬೇಕಾದ ಹಣ ಬಾಕಿ
    ಇವರು ಜುಲು ರಾಜರಿಗೆ ಎರಡು ಸಿಂಹಾಸನಗಳನ್ನು ಸೇರಿ ರಾಯಲ್ ಸ್ಟಿಕ್ ಅನ್ನು ಇರಿಸಲು ಒಂದು ಟೇಬಲ್, ದಿವಂಗತ ರಾಜ ಜ್ವೆಲಿಥಿನಿಯ ಏಳು ಹೆಂಡತಿಯರಿಗೆ ತಲಾ ಒಂದು ಸಿಂಹಾಸನ. ಅವರು ತಮ್ಮ ಕೈಚೀಲಗಳನ್ನು ಇರಿಸಲು ಮತ್ತು ಮೂರು ಟೀ ಟ್ರೇಗಳನ್ನು ಇರಿಸಬಹುದಾದ 10 ಟೇಬಲ್‌ಗಳನ್ನು ಮಾಡಿಕೊಟ್ಟಿದ್ದರಂತೆ. ಪ್ರಸ್ತುತ ಎರಡು ಸಿಂಹಾಸನಕ್ಕೆ ನೀಡಬೇಕಾದ ಹಣ ಬಾಕಿ ಇದೆ ಎಂದು ತಿಳಿಸಿದ್ದಾರೆ.


    ಬಾಕಿ ಹಣದ ಮೊತ್ತವನ್ನು ಪಡೆಯಲು ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದು, 2017 ರಲ್ಲಿ ರಾಜನ ಕಚೇರಿಯಲ್ಲಿ ಪಾವತಿಗೆ ಒತ್ತಾಯಿಸಿ ಸಮನ್ಸ್ ನೀಡಲಾಗಿತ್ತು.


    ಇದನ್ನೂ ಓದಿ: Explained: ಅಮೆರಿಕಾ-ಚೀನಾ ನಡುವೆ ʼಚಿಪ್‌ ಯುದ್ಧʼ: ಬಹುಬೇಡಿಕೆ ಉದ್ಯಮದಲ್ಲಿ ಭಾರತ ಎಲ್ಲಿದೆ?


    ಸಿಂಗ್ ಕುಟುಂಬ 1, 200 ವರ್ಷಗಳಷ್ಟು ಹಳೆಯದಾದ ತಂಬೋಟಿ ಗಟ್ಟಿಮರದಿಂದ ಮಾಡಿದ ಉಡುಗೊರೆಗಳನ್ನು ದಿವಂಗತ ಎಲಿಜಬೆತ್‌ ರಾಣಿಗೂ ನೀಡಿದ್ದಾರೆ. ತಮ್ಮ ಕೈಯಿಂದ ಕೆತ್ತಿದ ವಸ್ತುಗಳನ್ನು ಅಲ್ಲದೇ ಪ್ರಿನ್ಸ್ ಚಾರ್ಲ್ಸ್ ಅವರ ವಿವಾಹಕ್ಕೆ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಾದ ನೆಲ್ಸನ್ ಮಂಡೇಲಾ ಮತ್ತು ಥಾಬೊ ಎಂಬೆಕಿ ಮತ್ತು ಯುಎಸ್ ಅಧ್ಯಕ್ಷರಾದ ರೊನಾಲ್ಡ್ ರೇಗನ್ ಮತ್ತು ಜಾರ್ಜ್ ಬುಷ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ತಾಂಬೋಟಿ ಮರದಲ್ಲಿ ತಯಾರಾದ ವಸ್ತಗಳು ಮಸಾಲೆಯುಕ್ತ ಸುವಾಸನೆಯನ್ನು ಹೊರಸೂಸುತ್ತದೆ ಮತ್ತು ವಾಸನೆಯು ವರ್ಷಗಳವರೆಗೆ ಇರುತ್ತದೆ.

    Published by:ಗುರುಗಣೇಶ ಡಬ್ಗುಳಿ
    First published: