• Home
  • »
  • News
  • »
  • national-international
  • »
  • ಮೃಗಾಲಯದ ನಿರ್ವಾಹಕನಿಗೆ ಚುಂಬಿಸಿದ ಕತ್ತೆ ಕಿರುಬ: ವಿಡಿಯೋ ವೈರಲ್​..!

ಮೃಗಾಲಯದ ನಿರ್ವಾಹಕನಿಗೆ ಚುಂಬಿಸಿದ ಕತ್ತೆ ಕಿರುಬ: ವಿಡಿಯೋ ವೈರಲ್​..!

ವೈರಲ್​ ವಿಡಿಯೋ

ವೈರಲ್​ ವಿಡಿಯೋ

ಜೇ ಬ್ರಿವರ್... ಇವರು ರೆಪ್ಟೈಲ್ ಮೃಗಾಲಯದಲ್ಲಿ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರಾಣಿ ಸಂಗ್ರಹಾಲಯ ಕ್ಯಾಲಿಫೋರ್ನಿಯಾದಲ್ಲಿದೆ. ಇವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋ ಸಖತ್ ವೈರಲ್​ ಆಗುತ್ತಿದೆ.

  • Share this:

ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಸಾಕಿ ಸಲಹುತ್ತಿರುವ ಪ್ರಾಣಿಗಳು ತೋರುವ ಪ್ರೀತಿಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಆನಂದ ಪಡುತ್ತಾರೆ. ಅವುಗಳ ಪ್ರೀತಿಯ ಬಗ್ಗೆ ಹೆಮ್ಮೆಯಿಂದ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಸಾಕು ಪ್ರಾಣಿಗಳು ಮಾತ್ರವಲ್ಲ, ಮೃಗಾಲಯದಲ್ಲಿರುವ ಪ್ರಾಣಿ-ಪಕ್ಷಿಗಳು ಆರೈಕೆ ಮಾಡುವವರಿಗೆ ಪ್ರೀತಿ ತೋರುವ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ. ಸಿಂಹ, ಹುಲಿ, ಆನೆ  ಸೇರಿದಂತೆ ಇತರೆ ವನ್ಯ ಜೀವಿಗಳ  ವಿಡಿಯೋಗಳು ಈ ಹಿಂದೆಯೂ ವೈರಲ್​ ಆಗಿವೆ. ಈಗಲೂ ಸಹ ಮೃಗಾಲಯವೊಂದರಲ್ಲಿ ಪ್ರಾಣಿಯೊಂದು ತನ್ನ ಆರೈಕೆ ಮಾಡುವವರಿಗೆ ಮುತ್ತು ಕೊಡುವ ಮೂಲಕ ಪ್ರೀತಿ ತೋರುವ ವಿಡಿಯೋ ವೈರಲ್​ ಆಗುತ್ತಿದೆ. ಜೊತೆಗೆ ಲಕ್ಷಗಟ್ಟಲೆ ಆದರೆ, ಈ ವ್ಯಕ್ತಿ ಸ್ವಲ್ಪ ವಿಭಿನ್ನ. ಈತ ಪ್ರಾಣಿ ಸಂಗ್ರಹಾಲಯದವರಾಗಿದ್ದು, ಕತ್ತೆ ಕಿರುಬ ಮುತ್ತು ನೀಡುವ ಪರಿಯನ್ನು ಶೇರ್ ಮಾಡಿದ್ದಾರೆ. 


ಜೇ ಬ್ರಿವರ್... ಇವರು ರೆಪ್ಟೈಲ್ ಮೃಗಾಲಯದಲ್ಲಿ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರಾಣಿ ಸಂಗ್ರಹಾಲಯ ಕ್ಯಾಲಿಫೋರ್ನಿಯಾದಲ್ಲಿದೆ. ಇವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋ ಸಖತ್ ವೈರಲ್​ ಆಗುತ್ತಿದೆ.
ಮೃಗಾಲಯದಲ್ಲಿರುವ ಕತ್ತೆ ಕಿರುಬ ಜೇ ಅವರಿಗೆ ಮುತ್ತಿಡುತ್ತಿರುವ ವಿಡಿಯೋ ಇದಾಗಿದೆ.  ಕುತ್ತಿಗೆವರೆಗೂ ನೀರಿರುವ ಕೊಳದಲ್ಲಿ ಜೇ ಕತ್ತೆ ಕಿರುಬವನ್ನು ಎತ್ತಿಕೊಂಡು ನಿಂತಿರುತ್ತಾರೆ.   ಈ ಸಂದರ್ಭದಲ್ಲಿ ಕತ್ತೆ ಕಿರುಬು ಮುತ್ತು ಕೊಡಲು ಶುರು ಮಾಡುತ್ತದೆ. ಯಾವ ರೀತಿ ಅಂದರೆ ಒಂದು ಕ್ಷಣವೂ ಬಿಡುವು ಕೊಡದೆ ನಿರಂತರವಾಗಿ ಮುಖಕ್ಕೆಲ್ಲ ಮುತ್ತು ಕೊಡುತ್ತದೆ.


ಇದನ್ನೂ ಓದಿ: Bigg Boss 8 Kannada: ಕಡೆಗೂ ಅರವಿಂದ್​ ಮೇಲೆ ಸಿಟ್ಟು ತೀರಿಸಿಕೊಂಡ ನಿಧಿ ಸುಬ್ಬಯ್ಯ


ಈ ವಿಡಿಯೋವನ್ನು ಜೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಒಂದು ಲಕ್ಷ 30 ಸಾವಿರಕ್ಕೂ ಹೆಚ್ಚು ಲೈಕ್ಸ್​ ಸಿಕ್ಕಿದೆ. ಒಂದು ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.


ನಾನು ಕತ್ತೆ ಕಿರುಬದಿಂದ ಇಷ್ಟೊಂದು ಮುತ್ತುಗಳನ್ನು ಪಡೆದುಕೊಳ್ಳುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಆದರೆ ಕ್ಷಣಕಾಲ ಏನಾಯಿತು ಎಂದು ನನಗೆ ತಿಳಿಯಲಿಲ್ಲ ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ಇವರ ಈ ವಿಡಿಯೋ ಜೇಪ್ರೀಹಿಸ್ಟೋರಿಕ್ ಪಿಕ್ಸ್ ಎಂಬ ಇನ್‍ಸ್ಟಾಗ್ರಾಂ ಖಾತೆಯಿಂದ ಶೇರ್ ಆಗಿದೆ.


ಕತ್ತೆ ಕಿರುಬ ಮತ್ತಿಡುವ ವಿಡಿಯೋವನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಮೆಂಟ್ ಮಾಡುತ್ತಿದ್ದಾರೆ. ತುಂಬಾ ಜನ ಲವ್​ ಸಿಂಬಲ್​​ ಇಮೋಜಿ ಕಳುಹಿಸಿದರೆ, ಇನ್ನು ಕೆಲವರು ಹಾರ್ಟ್ ಇಮೋಜಿ ಕಳುಹಿಸಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪ್ರೀತಿಯ ಮುತ್ತುಗಳು ಎಂದರೆ, ಇನ್ನೊಬ್ಬರು ಸುಂದರ ಎಂದು ಹೇಳಿದ್ದಾರೆ. ಮತ್ತೊಬ್ಬರು ನನಗೂ ಒಂದು ಭೇಕು ಎಮದು ಕೇಳಿದ್ದಾರೆ. ಮತ್ತೊಬ್ಬರು ಕ್ಯೂಟ್ನೆಸ್ ಓವರ್‍ಲೋಡೆಡ್ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ನಿಮ್ಮದು ಆರಾಮದಾಯಕ ಜೀವನ ಎಂದು ಹೇಳಿದ್ದಾರೆ.


ಇದನ್ನೂ ಓದಿ: Kangana Ranaut: ಬುಡಾಪೆಸ್ಟ್​ನಲ್ಲಿ ನಡೆಯಲಿದೆ ಆ್ಯಕ್ಷನ್​ ಸೀಕ್ವೆನ್ಸ್​: ಇನ್​ಸ್ಟಾ ಫ್ಯಾಮಿಲಿಗಾಗಿ ಫೋಟೋ ಹಂಚಿಕೊಂಡ ಕಂಗನಾ..!


ಇವರ ಈ ವಿಡಿಯೋ ಕೇವಲ ಇನ್‍ಸ್ಟಾಗ್ರಾಂ ಮಾತ್ರವಲ್ಲ ಸಾಮಾಜಿಕ ಜಾಲತಾಣದ ಬೇರೆ ಬೇರೆ ವೇದಿಕೆಗಳಲ್ಲೂ ಶೇರ್ ಆಗಿದೆ. ಇವರು ಪ್ರಾಣಿಗಳೊಟ್ಟಿಗಿನ ಅಂದರೆ ಹಾವು, ಹದ್ದು, ದೊಡ್ಡ ಹಲ್ಲಿಗಳೊಂದಿಗಿನ ಒಡನಾಟದ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಇವು ಕೂಡ ಒಂದು ಮಿಲಿಯನ್‍ಗಿಂತಲೂ ಹೆಚ್ಚು ವೀಕ್ಷಣೆ ಕಂಡಿವೆ. ಇವರು ಶೇರ್ ಮಾಡಿರುವ ಪ್ರತಿಯೊಂದು ವಿಡಿಯೋಗಳನ್ನು ಗಮನಿಸಿದರೆ ಅವರು ಪ್ರಾಣಿಗಳೊಂದಿಗೆ ಹೆದರದೆ ಎಷ್ಟೊಂದು ಪ್ರೀತಿ ಪಾತ್ರರಾಗಿ ವರ್ತಿಸುತ್ತಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಇವರದ್ದೇ ಆದ ಯೂಟೂಬ್ ಚಾನಲ್ ಕೂಡ ಇದ್ದು, ಇಲ್ಲಿಯೂ ಸಹ ವಿವಿಧ ಪ್ರಾಣಿಗಳ ಅವರೊಟ್ಟಿಗೆ ಒಲುಮೆಯನ್ನು ವೀಕ್ಷಿಸಲು ಅವಕಾಶವಿದೆ.
ಜುಲೈ 10, 2009 ರಂದು ಈ ಮೃಗಾಲಯ ಸ್ಥಾಪನೆಯಾದಾಗಿನಿಂದ ಸರೀಸೃಪ ಮೃಗಾಲಯವು ಸಮುದಾಯಕ್ಕೆ ಒಂದು ಅನನ್ಯ ಶೈಕ್ಷಣಿಕ ಸೌಲಭ್ಯವನ್ನು ಒದಗಿಸಿದೆ. ಇದು ವಿಶ್ವದಾದ್ಯಂತ ಇರುವ ಸರೀಸೃಪಗಳು, ಉಭಯಚರಗಳು ಮತ್ತು ಅರಾಕ್ನಿಡ್‍ಗಳನ್ನು ಹೊಂದಿದೆ.

Published by:Anitha E
First published: