Zomato: ಸೆಪ್ಟೆಂಬರ್ 17 ರಿಂದ ದಿನಸಿ ಪೂರೈಕೆ ಸ್ಥಗಿತ ಮಾಡಲಿರುವ ಜೊಮ್ಯಾಟೊ

ಈ ವರ್ಷ ಜುಲೈನಲ್ಲಿ ಜೊಮ್ಯಾಟೊ ಮನೆ ಬಾಗಿಲಿಗೆ ದಿನಸಿ ತಲುಪಿಸುವ ಸೇವೆಯನ್ನು ಆರಂಭಿಸಿತ್ತು. 45 ನಿಮಿಷಗಳಲ್ಲಿ ಗ್ರಾಹಕರಿಗೆ ದಿನಸಿ ತಲುಪಿಸುವ ಭರವಸೆ ನೀಡಿತ್ತು.

ಜೊಮ್ಯಾಟೊ

ಜೊಮ್ಯಾಟೊ

  • Share this:
    ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ತಲುಪಿಸುತ್ತಿದ್ದ ಆನ್​ಲೈನ್​ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್ ಜೊಮ್ಯಾಟೊ ಕಂಪನಿ ಇದೇ ಸೆಪ್ಟೆಂಬರ್ 17ರಿಂದ ಆ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ದಿನಸಿ ಸಾಮಗ್ರಿಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಇದು ಗ್ರಾಹಕರಲ್ಲಿ ಬೇಸರ ಹಾಗೂ ಅಸಮಾಧಾನ ಮೂಡಿಸುತ್ತಿದೆ. ಹೀಗಾಗಿ ಮನೆಬಾಗಿಲಿಗೆ ದಿನಸಿ ಪೂರೈಕೆ ಮಾಡುವ ಸೇವೆಯನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಜೊಮ್ಯಾಟೊ ಕಂಪನಿ ತಿಳಿಸಿದೆ.

    ಜೊಮ್ಯಾಟೊದಲ್ಲಿ, ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಮತ್ತು ನಮ್ಮ ವ್ಯಾಪಾರಿ ಪಾಲುದಾರರಿಗೆ ಅತಿದೊಡ್ಡ ಬೆಳವಣಿಗೆಯ ಅವಕಾಶಗಳನ್ನು ನೀಡುತ್ತಿರುವುದಾಗಿ ನಾವು ನಂಬುತ್ತೇವೆ. ನಮ್ಮ ಗ್ರಾಹಕರು ಮತ್ತು ವ್ಯಾಪಾರಿ ಪಾಲುದಾರರಿಗೆ ಇವುಗಳನ್ನು ತುಲಪಿಸಲು ಪ್ರಸ್ತುತ ಮಾದರಿಯು ಉತ್ತಮ ಮಾರ್ಗ ಎಂದು ನಾವು ನಂಬುವುದಿಲ್ಲ. ಹೀಗಾಗಿ ಸೆಪ್ಟೆಂಬರ್ 17ರಿಂದ ದಿನಸಿ ಸಾಮಗ್ರಿಗಳನ್ನು ಪೂರೈಸುವ ಸೇವೆಯನ್ನು ನಿಲ್ಲಿಸಲು ಉದ್ದೇಶಿಸಲಾಗಿದೆ ಎಂದು ದಿನಸಿ ಸಾಮಗ್ರಿಗಳನ್ನು ಪೂರೈಸುವ ಪಾಲುದಾರರಿಗೆ ಇ-ಮೇಲ್​ ಮೂಲಕ ಜೊಮ್ಯಾಟೊ ತಿಳಿಸಿದೆ.

    ಇದನ್ನೂ ಓದಿ:JEE Advanced 2021 Registrations: ಜೆಇಇ ಅಡ್ವಾನ್ಸ್​ ಪರೀಕ್ಷೆಗೆ ಹೀಗೆ ರಿಜಿಸ್ಟ್ರೇಶನ್ ಮಾಡಿ..!

    ಜೊಮ್ಯಾಟೊಗೆ ತೃಪ್ತಿದಾಯಕ ಗ್ರಾಹಕರ ಅನುಭವವನ್ನು ನೀಡುವುದು ಕಷ್ಟಕರವಾಗಿದೆ. ಹೀಗಾಗಿ ಕಂಪನಿಯು ತನ್ನ ದಿನಸಿ ವಿತರಣಾ ಸೇವೆಯನ್ನು ನಿಲ್ಲಿಸಲು ಬಯಸಿದೆ. ತನ್ನ ಪ್ಲಾಟ್​ಫಾರ್ಮ್​ ಮೂಲಕ ಬೇರೆ ಯಾವುದೇ ದಿನಸಿ ವಿತರಣೆ ಮಾಡುವ ಯೋಜನೆಯನ್ನು ಹೊಂದಿಲ್ಲ ಎಂದು ಜೊಮ್ಯಾಟೊ ವಕ್ತಾರರು ಹೇಳಿದ್ದಾರೆ.

    ಈ ವರ್ಷ ಜುಲೈನಲ್ಲಿ ಜೊಮ್ಯಾಟೊ ಮನೆ ಬಾಗಿಲಿಗೆ ದಿನಸಿ ತಲುಪಿಸುವ ಸೇವೆಯನ್ನು ಆರಂಭಿಸಿತ್ತು. 45 ನಿಮಿಷಗಳಲ್ಲಿ ಗ್ರಾಹಕರಿಗೆ ದಿನಸಿ ತಲುಪಿಸುವ ಭರವಸೆ ನೀಡಿತ್ತು. ಕಳೆದ ಎರಡು ತಿಂಗಳ ಹಿಂದೆ ಜೊಮ್ಯಾಟೊ ಸಿಇಒ ಅಕ್ಷಂತ್​ ಗೋಯಲ್, ಆನ್​ಲೈನ್​ ದಿನಸಿ ಕಲ್ಪನೆಯನ್ನು ಪರಿಚಯಿಸಿ ಅನುಮೋದಿಸಿದ್ದರು. ಈ ಸೇವೆ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ವೇಗವಾಗಿ ಬೆಳೆಯುತ್ತದೆ ಮತ್ತು ಇದೊಂದು ದೊಡ್ಡ ಅವಕಾಶ ಎಂದು ಹೇಳಿದ್ದರು.

    ಇದನ್ನೂ ಓದಿ:Mysuru Dasara 2021: ವಿಶ್ವವಿಖ್ಯಾತ ಜಂಬೂ ಸವಾರಿಗೆ ‘ಗಜಪಯಣ‘ ಆರಂಭ; ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ನಾಡಿಗೆ

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
    Published by:Latha CG
    First published: