HOME » NEWS » National-international » ZOMATO GUY KIDNAPPED OUR DOG PUNE WOMANS SOS AFTER DELIVERY MAN WALKS OFF WITH HER PET RMD

ಡೆಲಿವರಿಗೆ ಬಂದ ಜೊಮ್ಯಾಟೋ ಬಾಯ್ ಮನೆಯಿಂದ ನಾಯಿಯನ್ನೇ ಕದ್ದೊಯ್ದ!

ವಂದನಾ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಅವರು ದೂರು ದಾಖಲಿಸಿದ್ದು, ಪೊಲೀಸರು ನಾಯಿ ಮರಿಯನ್ನು ವಾಪಾಸು ಕೊಡಿಸುವ ಭರವಸೆ ನೀಡಿದ್ದಾರೆ.

Rajesh Duggumane | news18-kannada
Updated:October 9, 2019, 8:49 AM IST
ಡೆಲಿವರಿಗೆ ಬಂದ ಜೊಮ್ಯಾಟೋ ಬಾಯ್ ಮನೆಯಿಂದ ನಾಯಿಯನ್ನೇ ಕದ್ದೊಯ್ದ!
ಸಾಂದರ್ಭಿಕ ಚಿತ್ರ
  • Share this:
ಪುಣೆ (ಅ.9): ಮನೆ ಬಾಗಿಲಿಗೆ ಆಹಾರ ಪೂರೈಸುವ ಜೊಮ್ಯಾಟೋ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದೆ. ಈಗ ಜೊಮ್ಯಾಟೋ ಡೆಲಿವರಿ ಬಾಯ್​ ವಿರುದ್ಧ ಪುಣೆಯ ಮಹಿಳೆಯೋರ್ವಳು ಕಳ್ಳತನದ ಆರೋಪ ಹೊರಿಸಿದ್ದಾಳೆ. ಅಷ್ಟಕ್ಕೂ ಆತ ಕದ್ದಿದ್ದು ಮನೆಯಲ್ಲಿ ಸಾಕಿದ್ದ ನಾಯಿ ಮರಿಯನ್ನು!

ಪುಣೆಯ ಕಾವೇರಿ ರಸ್ತೆ ಭಾಗದಲ್ಲಿ ವಾಸವಾಗಿದ್ದ ವಂದನಾ ಶಾ ಜೊಮ್ಯಾಟೋದಲ್ಲಿ ಆಹಾರ ಆರ್ಡರ್​ ಮಾಡಿದ್ದರು. ಡೆಲಿವರಿ ಬಾಯ್ ತುಷಾರ್​ ಎಂಬಾತ ಆಹಾರ ತಂದುಕೊಟ್ಟು ಹೋಗಿದ್ದ. ಅಚ್ಚರಿ ಎಂದರೆ, ಹೋಗುವಾಗ ಆತ ವಂದನಾ ಶಾ ಸಾಕಿದ್ದ ದತ್ತು ಹೆಸರಿನ ನಾಯಿ ಮರಿಯನ್ನು ಕದ್ದೊಯ್ದಿದ್ದ.

ದತ್ತು ಮನೆಯ ಒಳಭಾಗದಲ್ಲಿ ಆಟವಾಡುತ್ತಿದ್ದ. ಡೆಲಿವರಿ ಬಾಯ್​ ಬಂದು ಹೋದ ನಂತರ ದತ್ತು ಕಾಣಿಸಿರಲಿಲ್ಲ. ಅನೇಕ ಬಾರಿ ಕರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಿಸಿಟಿವಿ ಪರಿಶೀಲಿಸಿದಾಗ ತುಷಾರ್​ ನಾಯಿ ಮರಿಯನ್ನು ಕದ್ದೊಯ್ದ ವಿಚಾರ ಬಯಲಾಗಿದೆ.

ಮಹಿಳೆ ತಕ್ಷಣಕ್ಕೆ ಈ ಬಗ್ಗೆ ಜೊಮ್ಯಾಟೋಗೆ ದೂರು ನೀಡಿದ್ದಾರೆ. ಈ ಬಗ್ಗೆ ತುಷಾರ್​ ಬಳಿ ಕೇಳಿದಾಗ ಆತ ಈ ವಿಚಾರವನ್ನು ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲ, ನಾಯಿ ಮರಿ ಇಷ್ಟವಾಗಿದೆ. ನಾನು ಅದನ್ನು ವಾಪಾಸು ಕೊಡುವುದಿಲ್ಲ ಎಂದು ಹಠ ಹಿಡಿದಿದ್ದಾನೆ. ಇದರಿಂದ ಸಿಟ್ಟಾದ ವಂದನಾ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಅವರು ದೂರು ದಾಖಲಿಸಿದ್ದು, ಪೊಲೀಸರು ನಾಯಿ ಮರಿಯನ್ನು ವಾಪಾಸು ಕೊಡಿಸುವ ಭರವಸೆ ನೀಡಿದ್ದಾರೆ.

First published: October 9, 2019, 8:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories