ಹೊರಗಿನಿಂದ ಆಹಾರ ಆರ್ಡರ್ ಮಾಡುವುದು ಮತ್ತು ವಿತರಣಾ ಪ್ಲಾಟ್ಫಾರ್ಮ್ ಜೋಮ್ಯಾಟೊ (Zomato) ಯಾಕೋ ಇತ್ತೀಚೆಗೆ ಸುದ್ದಿಯಿಂದ ಹೊರಬರುವಂತೆ ಕಾಣುತ್ತಿಲ್ಲ. ತನ್ನ ಡೆಲಿವರಿ ಬಾಯ್ಸ್ ಅಥವಾ ಎಕ್ಸಿಕ್ಯೂಟಿವ್ಸ್ಗಳನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಹೆಚ್ಚು ಸದ್ದು ಮಾಡಿತು. ನಂತರ ಜೋಮ್ಯಾಟೊ ಒತ್ತಡದ ಕೆಲಸವನ್ನು ಸಾಮಾನ್ಯಗೊಳಿಸಲು ಬಾಲಿವುಡ್ ತಾರೆಯರನ್ನು ಒಳಗೊಂಡ ಜಾಹೀರಾತಿನೊಂದಿಗೆ ಬಂದು ಮತ್ತೆ ವಿವಾದ ಹುಟ್ಟುಹಾಕಿತು. ಈಗ, ಕಂಪನಿಯು ಇತ್ತೀಚಿನ ಜಾಹೀರಾತನ್ನು ಸಮರ್ಥಿಸುವ ಹೇಳಿಕೆ ನೀಡಿದೆ. "ನಮ್ಮ ಜಾಹೀರಾತುಗಳು ಸದುದ್ದೇಶ ಹೊಂದಿದೆ ಎಂದು ನಾವು ನಂಬುತ್ತೇವೆ, ಆದರೆ ದುರದೃಷ್ಟವಶಾತ್ ಕೆಲವು ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ" ಎಂದು ಟ್ವಿಟ್ಟರ್ನಲ್ಲಿ ಸಮರ್ಥಿಸಿಕೊಂಡಿದೆ. ಗ್ರಾಹಕರಿಗೆ ಆಹಾರವನ್ನು ಸರಿಯಾದ ಸಮಯಕ್ಕೆ ಪೂರೈಸಲು ಡೆಲಿವರಿ ಎಕ್ಸಿಕ್ಯುಟಿವ್ಗಳ ಬದ್ಧತೆ ತೋರಿಸುವ ಉದ್ದೇಶದಿಂದ ಮಾಡಿದ ಜಾಹೀರಾತು ಇದು ಎಂದಿದ್ದಾರೆ. ಈ ಜಾಹೀರಾತಿನಲ್ಲಿ ಒಬ್ಬರು ಡೆಲಿವರಿ ಎಕ್ಸಿಕ್ಯುಟಿವ್ ತನ್ನ ಮುಂದಿನ ಆರ್ಡರ್ ಅನ್ನು ಸಮಯಕ್ಕೆ ಸರಿಯಾಗಿ ತಲುಪಿಸಲು ಸೂಪರ್ಸ್ಟಾರ್ಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸುವ ಅವಕಾಶವನ್ನು ಬಿಟ್ಟುಬಿಡುತ್ತಾರೆ ಎಂದು ಕಂಪೆನಿ ಹೇಳಿಕೆ ನೀಡಿದೆ.
ಜೋಮ್ಯಾಟೊ ವಿತರಕರನ್ನು "ಜಾಹೀರಾತಿನ ನಾಯಕ" ಮಾಡುವ ಉದ್ದೇಶದಿಂದ ತಮ್ಮ ಜಾಹೀರಾತನ್ನು ಚಿತ್ರೀಕರಿಸಲಾಗಿದೆ ಎಂದು ಸಂಸ್ಥೆ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ, ವಿತರಣಾ ಪಾಲುದಾರರ ಕಡೆಗೆ"ಕೆಲವೇ ಕೆಲವು ಜನರು" ಉತ್ತಮ ನಡವಳಿಕೆ ತೋರುತ್ತಾರೆ. ಇಂತಹವರನ್ನು ಕಂಪನಿಯು ಉತ್ತೇಜಿಸುವ ಉದ್ದೇಶ ಹೊಂದಿದೆ ಎಂದೂ ಕಂಪನಿ ಹೇಳಿಕೊಂಡಿದೆ. ಪ್ರತಿಯೊಬ್ಬ ವಿತರಣಾ ಪಾಲುದಾರನು ಈ ಜಾಹೀರಾತಿನಲ್ಲಿ ''ಸ್ಟಾರ್'' ಮತ್ತು "ಹೃತಿಕ್ ಅಥವಾ ಕತ್ರಿನಾಗಿಂತ ಕಡಿಮೆಯಿಲ್ಲ" ಎಂದು ತಿಳಿಸುವ ಪ್ರಯತ್ನವಾಗಿತ್ತು. ಇದು ಡೆಲಿವರಿ ಎಕ್ಸಿಕ್ಯೂಟಿವ್ ಕೆಲಸಕ್ಕೆ ಸಂಬಂಧಿಸಿದ ಘನತೆ ಹೆಚ್ಚಿಸಲು ಮತ್ತು ಅವರು ಅದನ್ನು ಹೊರಹಾಕುವ ಹೆಮ್ಮೆಯನ್ನು ಪ್ರದರ್ಶಿಸುವ ಗುರಿ ಹೊಂದಿದ್ದೇವೆ ಎಂದೂ ಜೋಮ್ಯಾಟೊ ಹೇಳಿದೆ.
The other side of the story... pic.twitter.com/hNRj6TpK1X
— zomato (@zomato) August 30, 2021
View this post on Instagram
ಇದನ್ನೂ ಓದಿ: Curry Leaf Tea: ಕರಿಬೇವಿನ ಎಲೆಗಳ ಟೀ ಕುಡಿದು ಈ ಪ್ರಯೋಜನಗಳನ್ನು ಪಡೆಯಿರಿ..!
ಟ್ವಿಟ್ಟರ್ನಲ್ಲಿ ತುಂಬಾ ನೆಗೆಟಿವ್ ಕಮೆಂಟ್ಗಳು ಬರುತ್ತಿದೆ ಎಂದು ನೀವು ಭಾವಿಸಿದರೆ, ಆಹಾರ ವಿತರಣಾ ಆ್ಯಪ್ ವಿರುದ್ಧ ಯಾಕೆ ಇಷ್ಟೊಂದು ಟೀಕೆ ಕಂಡುಬರುತ್ತಿದೆ ಎಂಬುದನ್ನು ತಿಳಿಯಲು ನೀವು ಇಷ್ಟಪಡಬಹುದು. ‘SwiggyDE’ ಮತ್ತು ‘Delivery Bhoy’ ಎಂಬ ಎರಡು ಅನಾಮಧೇಯ ಟ್ವಿಟ್ಟರ್ ಖಾತೆಗಳು ಜೋಮ್ಯಾಟೊ ಕಂಪನಿ ಮತ್ತು ಅದರ ಪ್ರತಿಸ್ಪರ್ಧಿ ಸ್ವಿಗ್ಗಿ ತಮ್ಮ ಕೆಲಸಗಾರರನ್ನು ಶೋಷಿಸುತ್ತಿವೆ ಎಂದು ಆರೋಪಿಸಲು ಆರಂಭಿಸಿದಾಗ ಹೆಚ್ಚು ವೈರಲ್ ಆಗಿ ನೆಟ್ಟಿಗರಿಂದ ಎರಡೂ ಕಂಪನಿಗಳ ವಿರುದ್ಧ ಸಾಕಷ್ಟು ಟೀಕೆ ಕೇಳಿಬಂದಿತು.
ಅಲ್ಪ ಪಾವತಿ, ಬೆನಿಫಿಟ್ಸ್ಗಳ ಅನುಪಸ್ಥಿತಿ ಮತ್ತು ಹೆಚ್ಚಿನ ಅಪಘಾತದ ಅಪಾಯಗಳು ಈ ಎರಡು ಖಾತೆಗಳಿಂದ ಹೈಲೈಟ್ ಮಾಡಲಾದ ಕೆಲವು ಸಮಸ್ಯೆಗಳಾಗಿವೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭವಾದ ಈ ಸಂವಾದ ಬಹಿರಂಗಗೊಂಡಿದ್ದು, ಇದರಲ್ಲಿ ಅನೇಕ ಬಳಕೆದಾರರು ಕಾರ್ಮಿಕರ ಸಂಕಷ್ಟದ ಬಗ್ಗೆ ಸಹಾನುಭೂತಿ ಹೊಂದಿದ್ದರು.
ಇದನ್ನೂ ಓದಿ: ಇನ್ಸ್ಟಾಗ್ರಾಂಗೆ ಲಗ್ಗೆ ಇಟ್ಟ ನಟಿ Jyotika: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್ಗೂ ಹೆಚ್ಚು ಹಿಂಬಾಲಕರು..!
ಅಂದಿನಿಂದ, ಜೋಮ್ಯಾಟೊ ಕೆಲ ಜಾಹೀರಾತುಗಳ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಿದ್ದು, ಅದು ಅವರ ವಿತರಣಾ ಪಾಲುದಾರರ ಪಾತ್ರವನ್ನು ಎತ್ತಿ ತೋರಿಸುತ್ತದೆ. ಹಾಸ್ಯನಟ ಡ್ಯಾನಿಶ್ ಸೇಟ್ ನಟಿಸಿದ ಮೊದಲನೆಯ ಜಾಹೀರಾತನ್ನು ರದ್ದುಗೊಳಿಸಲಾಯಿತು. ವಾಸ್ತವವಾಗಿ, ಕ್ಷಮೆಯಾಚಿಸಿದ ನಂತರ ಹಾಸ್ಯನಟ ತನ್ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್ನಿಂದ ಆ ಜಾಹೀರಾತನ್ನು ತೆಗೆದುಹಾಕಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ