Zomato- ಜೊಮಾಟೊ ಸಹಸಂಸ್ಥಾಪಕ ಗೌರವ್ ಗುಪ್ತಾ ರಾಜೀನಾಮೆ; ಪ್ರಯೋಗಗಳು ಕೈಕೊಟ್ಟಿದ್ದು ಕಾರಣವೇ?

Gaurav Gupta Resignation- ಜೊಮಾಟೋದಲ್ಲಿ ದಿನಸಿ ಸರಬರಾಜು ಮತ್ತು ಪೌಷ್ಟಿಕ ಆಹಾರ ವ್ಯವಹಾರಗಳನ್ನ ಪ್ರಾರಂಭಿಸಿ ಕೈ ಸುಟ್ಟುಕೊಂಡಿದ್ದ ಗೌರವ್ ಗುಪ್ತಾ ತಾವು ಸಹ ಸ್ಥಾಪಕರಾಗಿದ್ದ ಕಂಪನಿಗೆ ಗುಡ್ ಬೈ ಹೇಳಿದ್ದಾರೆ. ಹೊಸ ಹಾದಿ ತುಳಿಯುತ್ತಿರುವುದಾಗಿ ಅವರು ತಿಳಿಸಿದ್ಧಾರೆ.

ಜೊಮಾಟೋದ ಸಹ ಸಂಸ್ಥಾಪಕ ಗೌರವ್ ಗುಪ್ತಾ

ಜೊಮಾಟೋದ ಸಹ ಸಂಸ್ಥಾಪಕ ಗೌರವ್ ಗುಪ್ತಾ

 • News18
 • Last Updated :
 • Share this:
  ಮುಂಬೈ, ಸೆ. 14: ಭಾರತದ ನಂಬರ್ ಒನ್ ಆನ್​ಲೈನ್ ಫೂಡ್ ಡೆಲಿವರಿ ಕಂಪನಿ ಎನಿಸಿರುವ ಜೊಮಾಟೋದ (Food Delivery App Zomato) ಚೀಫ್ ಆಫರೇಟಿಂಗ್ ಆಫೀಸರ್ ಗೌರವ್ ಗುಪ್ತಾ (Gaurav Gupta) ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಮನಿ ಕಂಟ್ರೋಲ್ ವೆಬ್ ಸೈಟ್ ತನ್ನ ಮೂಲಗಳನ್ನ ಉಲ್ಲೇಖಿಸಿ ವರದಿ ಮಾಡಿದೆ. ಜೊಮಾಟೋದ ಸಹ ಸಂಸ್ಥಾಪಕರೂ ಆಗಿರುವ ಗೌರವ್ ಗುಪ್ತಾ 2015ರಿಂದಲೂ ಕಂಪನಿ ಜೊತೆಗಿದ್ದು ಅದರ ಏರಿಳಿತಗಳ ಹಾದಿಯನ್ನ ಕಂಡಿದ್ದಾರೆ. ಇವರು ಮಾಡಿದ ಕೆಲ ಪ್ರಯೋಗಗಳು ನಿರೀಕ್ಷಿತ ಫಲ ಕೊಟ್ಟಿಲ್ಲ. ಇದು ಇವರ ರಾಜೀನಾಮೆಗೆ ಕಾರಣವಾಗಿರುವ ಸಾಧ್ಯತೆ ಇದೆ. ಗೌರವ್ ಗುಪ್ತ ಅವರು ಜೊಮಾಟೋದಿಂದ ಹೊರಬಂದು ಪರ್ಯಾಯ ವ್ಯವಹಾರ ಶುರು ಮಾಡುವ ನಿರೀಕ್ಷೆ ಇದೆ. ಅದನ್ನ ಗುಪ್ತಾ ಅವರು ಆಂತರಿಕ ಪತ್ರದಲ್ಲಿ (Internal E-mail) ಬರೆದಿರುವುದು ಮನಿ ಕಂಟ್ರೋಲ್​ಗೆ ಮಾಹಿತಿ ಸಿಕ್ಕಿದೆ.

  ಜೊಮಾಟೋ ಇತ್ತೀಚೆಗಷ್ಟೇ ಐಪಿಒಗೆ (Zomato IPO) ತೆರೆದುಕೊಂಡಿತ್ತು. ಈ ರೀತಿ ಲಿಸ್ಟೆಂಟ್ ಕಂಪನಿ ಆಗಿರುವ ಮೊದಲ ಫುಡ್ ಡೆಲಿವರಿ ಆ್ಯಪ್ ಆಗಿದೆ. ಈ ಸಂಬಂಧ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಲು ಹಾಗು ಮಾಧ್ಯಮಗಳಿಗೆ ಮಾಹಿತಿ ನೀಡಲು ಗೌರವ್ ಗುಪ್ತಾ ಅವರದ್ದೇ ಪ್ರಮುಖ ಪಾತ್ರವಿತ್ತು. 2018ರಲ್ಲಿ ಇವರು ಜೊಮಾಟೋದ ಸಿಒಒ ಆದರೆ, 2019ರಿಂದ ಇವರು ಕಂಪನಿಯ ಫೇಸ್ ಎನಿಸಿದ್ದರು. ಗೌರವ್ ಗುಪ್ತಾ ಅವರು ಮಾಡಿದ ಕೆಲ ಪ್ರಯೋಗಗಳು ವಿಫಲಗೊಂಡಿದ್ದವು. ಫೂಡ್ ಡೆಲಿವರಿ ಜೊತೆಗೆ ದಿನಸಿ ವಸ್ತುಗಳ (Grocery Delivery) ಸರಬರಾಜು ಹಾಗೂ ನ್ಯೂಟ್ರಾಸ್ಯೂಟಿಕಲ್ (Neutraceutical- ಪೌಷ್ಟಿಕಾಂಶ ಆಹಾರ) ವ್ಯವಹಾರಗಳನ್ನ ಜೊಮಾಟೋ ಅಡಿಯಲ್ಲಿ ಪ್ರಾರಂಭಿಸಲು ಹಿಂದಿನ ಶಕ್ತಿಯೇ ಗೌರವ್ ಗುಪ್ತ. ಅವರ ದುರದೃಷ್ಟಕ್ಕೆ ಈ ಎರಡೂ ವ್ಯವಹಾರಗಳು ಕೈ ಹಿಡಿಯಲಿಲ್ಲ. ಹಾಗೆಯೇ, ಜೊಮಾಟೋವನ್ನು ಭಾರತದಿಂದ ಹೊರಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಜವಾಬ್ದಾರಿಯಲ್ಲೂ ಗೌರವ್ ಗುಪ್ತಾ ವಿಫಲರಾಗಿದ್ದಾರೆ.

  ಜೊಮಾಟೋದ ಸಂಸ್ಥಾಪಕ ದೀಪೇಂದರ್ ಗೋಯಲ್ (Deepinder Goyal) ಹಾಗೂ ಗೌರವ್ ಗುಪ್ತಾ ಮಧ್ಯೆ ಕೆಲ ವಿಚಾರಗಳಿಗೆ ಇತ್ತೀಚೆಗೆ ಭಿನ್ನಾಭಿಪ್ರಾಯಗಳಿದ್ದವೆನ್ನಲಾಗಿದೆ. ಅದು ವಿಕೋಪಕ್ಕೆ ಹೋಗಬಹುದು ಎಂಬುದು ನಿರೀಕ್ಷಿತವೇ ಆಗಿತ್ತು. ಈಗ ರಾಜೀನಾಮೆ ನೀಡಿರುವ ಗೌರವ್ ಗುಪ್ತಾ ತಾನು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದ್ಧಾರೆ.

  “ಜೊಮಾಟೋವನ್ನು ಮುನ್ನಡೆಸಲು ಈಗ ಒಳ್ಳೆಯ ತಂಡವಿದೆ. ನನ್ನ ಪ್ರಯಾಣದಲ್ಲಿ ಇನ್ನೊಂದು ಪರ್ಯಾಯ ಹಾದಿ ತುಳಿಯಲು ಸಮಯ ಬಂದಿದೆ. ಈ ಪತ್ರ ಬರೆಯುತ್ತಿರುವಂತೆಯೇ ಭಾವೋದ್ವೇಗಗೊಂಡಿದ್ದೇನೆ. ನನಗೆ ಈಗ ಏನನಿಸುತ್ತಿದೆ ಎಂದು ಹೇಳಲು ಪದಗಳೇ ಬರುತ್ತಿಲ್ಲ” ಎಂದು ಜೊಮಾಟೋದ ಟಾಪ್ ಅಧಿಕಾರಿಗಳನ್ನುದ್ದೇಶಿಸಿ ಬರೆದ ಮೇಲ್​ನಲ್ಲಿ ಗೌರವ್ ಗುಪ್ತಾ ಹೇಳಿದ್ದಾರೆ.

  ಇದನ್ನೂ ಓದಿ: ‘ನೀಚಂಗೆ ದೊರೆತನು…’- ಮೈಸೂರಿನಲ್ಲಿ ದೇಗುಲ ಕೆಡವಿದ ವಿಚಾರಕ್ಕೆ ಕೋಡಿಮಠ ಶ್ರೀಗಳಿಂದ ಭವಿಷ್ಯ

  ದೀಪಿಂದರ್ ಗೋಯಲ್ ಅವರು ತಮ್ಮ ಗೌರವ್ ಗುಪ್ತಾಗೆ ಆಲ್ ದ ಬೆಸ್ಟ್ ಹೇಳಿದ್ದಾರೆ. “ಗೌರವ್ ಗುಪ್ತಾಗೆ ಧನ್ಯವಾದಗಳು. ಕಳೆದ 6 ವರ್ಷ ಅದ್ಬುತವಾಗಿತ್ತು. ನಾವು ಬಹಳ ಮುಂದೆ ಬಂದಿದ್ದೇವೆ. ನಮ್ಮ ಪ್ರಯಾಣ ಇನ್ನೂ ಬಹಳಷ್ಟು ಸವೆಸಬೇಕಿದೆ. ನಮ್ಮನ್ನು ಮುನ್ನಡೆಸಲು ನಮಗೆ ಒಳ್ಳೆಯ ತಂಡ ಮತ್ತು ನಾಯಕತ್ವ ಸಿಕ್ಕಿದೆ… ಗೌರವ್ ಗುಪ್ತಾ, ನಿಮ್ಮ ಭವಿಷ್ಯ ಒಳ್ಳೆಯದಿರಲಿ ಎಂದು ಹಾರೈಸುತ್ತೇನೆ. ನಮ್ಮ ಜೀವನದ ಕೊನೆಯ ಕ್ಷಣದವರೆಗೂ ನಾವು ಸ್ನೆಹಿತರಾಗಿಯೇ ಇರೋಣ. ನೀವು ಮಂದೆ ಏನು ಸಾಹಸ ಮಾಡುತ್ತೀರಿ ಎಂದು ನೋಡುವ ಉತ್ಸಾಹ ನನ್ನಲ್ಲಿ ಮೂಡಿದೆ. ಜೊಮಾಟೋಗೆ ಹೆಮ್ಮೆ ತರುವ ಕೆಲಸ ಮಾಡಿ” ಎಂದು ದೀಪಿಂದರ್ ಗೋಯಲ್ ಟ್ವೀಟ್ ಮಾಡಿದ್ದಾರೆ.

  ಜೊಮಾಟೋದಲ್ಲಿ ತಾನು ಆರಂಭಿಸಿದ ಗ್ರಾಸರಿ ಮತ್ತು ನ್ಯೂಟ್ರಾಸಿಟಿಕಲ್ ವ್ಯವಹಾರ ಕ್ಲಿಕ್ ಆಗುತ್ತದೆ ಎಂದು ಗೌರವ್ ಗುಪ್ತಾ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಕೋವಿಡ್ ಕಾರಣಕ್ಕೆ ಜನರು ಈ ವ್ಯವಹಾರಕ್ಕೆ ಸ್ಪಂದಿಸುತ್ತಾರೆ ಎಂದು ಅವರು ಭಾವಿಸಿದ್ದರು. ಆದರೆ, ಎರಡೂ ವ್ಯವಹಾರಗಳು ಹಳ್ಳ ಹಿಡಿದವು. ಸದ್ಯ ಕಂಪನಿಯು ಈ ಎರಡೂ ಹೊಸ ಸೇವೆಗಳನ್ನ ಕೈಬಿಟ್ಟಿದೆ. ಜುಲೈನಲ್ಲಿ ಲಿಸ್ಟೆಡ್ ಕಂಪನಿಯಾಗಿರುವ ಜೊಮಾಟೋದ ಆದಾಯ ಒಂದು ತ್ರೈಮಾಸಿಕ ಅವಧಿಯಲ್ಲಿ 916 ಕೋಟಿ ರೂಗೆ ಹೈಜಂಪ್ ಆದರೂ ನಿವ್ವಳ ನಷ್ಟ 356 ಕೋಟಿ ರೂ ಇದೆ.
  Published by:Vijayasarthy SN
  First published: