Zika Virus: ಡೆಲ್ಟಾ ಬೆನ್ನಲ್ಲೇ ಕೇರಳದಲ್ಲಿ ಜಿಕಾ ವೈರಸ್​ ಆತಂಕ

ಸೊಳ್ಳೆ

ಸೊಳ್ಳೆ

ಜಿಕಾ ವೈಸ್​ ಸೋಂಕಿಗೆ ಒಳಗಾದವರಲ್ಲಿ ಸಾಮಾನ್ಯವಾಗಿ ಜ್ವರ, ದದ್ದು, ಸ್ನಾಯು ಸೆಳೆತ, ಕೀಲು ನೋವು, ಅಸ್ವಸ್ಥತೆ ಮತ್ತು ತಲೆ ನೋವಿನ ಲಕ್ಷಣಗಳು ಕಂಡು ಬರುತ್ತದೆ

  • Share this:

ಕೋವಿಡ್​ ಎರಡನೇ ಅಲೆಯಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ಕೇರಳದಲ್ಲಿ ಜಿಕಾ ವೈರಸ್​ ಪ್ರಕರಣಗಳು ದಾಖಲಾಗಿದ್ದು, ಮತ್ತಷ್ಟು ಆತಂಕ ಮೂಡಿಸಿದೆ. ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಗುರುವಾರ 13 ಜಿಕಾ ವೈರಸ್​ ಪ್ರಕರಣಗಳು ಕಂಡು ಬಂದಿದೆ. ಸೋಂಕು ಪತ್ತೆಯಾದವರ ಸ್ಯಾಂಪಲ್​ ಅನ್ನು ಪುಣೆಯ ವೈರಲಾಜಿ ವಿಭಾಗಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಕೂಡ ಇದು ಜಿಕಾ ವೈರಸ್​ ಸೋಂಕು ಹರಡಿರುವುದು ಸ್ಪಷ್ಟವಾಗಿದೆ. ಈ ಕುರಿತು ಮಾತನಾಡಿರುವ ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್​, 13 ಪ್ರಕರಣಗಳ ಬಗ್ಗೆ ಅನುಮಾನ ವ್ಯಕ್ತವಾಗಿ ಪುಣೆಯ ರಾಷ್ಟ್ರೀಯ ವೈರಲಾಜಿ ಸಂಸ್ಥೆಗೆ ಕಳುಹಿಸಿದ್ದೇವು. ಇದು ಜಿಕಾ ವೈರಸ್​ ಸೋಂಕು ಎಂದು ವರದಿ ಬಂದಿದೆ ಎಂದಿದ್ದಾರೆ. ಇನ್ನು ಪತ್ತೆಯಾದ ಎಲ್ಲಾ ಪ್ರಕರಣಗಳು ತಿರುವನಂತರಪುರದಿಂದಲೇ ದಾಖಲಾಗಿದೆ ಎನ್ನಲಾಗಿದೆ.


ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಿಕಾ ವೈರಸ್ ಸೋಂಕು ಏಡೆಸ್​ ಸೊಳ್ಳೆಯಿಂದ ಹಬ್ಬುತ್ತದೆ. ಬೆಳಗ್ಗಿನ ಹೊತ್ತು ಈ ಸೊಳ್ಳೆಗಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಮೊದಲ ಜಿಕಾ ವೈರಸ್​ ಪ್ರಕರಣ 1947ರಲ್ಲಿ ಉಗಾಂಡಾದ ಕೋತಿಗಳಲ್ಲಿ ಕಂಡು ಬಂದಿತ್ತು. ಇದಾದ ಬಳಿಕ 1952 ರಲ್ಲಿ ಉಗಾಂಡಾ ಮತ್ತು ಯುನೈಟೆಡ್ ರಿಪಬ್ಲಿಕ್ ಆಫ್ ಟಾಂಜಾನಿಯಾದಲ್ಲಿ ಮನುಷ್ಯರಲ್ಲಿ ಕಂಡು ಬಂದಿತ್ತು. ಏಷ್ಯಾ, ಆಫ್ರಿಕಾ, ಅಮೆರಿಕ ಮತ್ತು ಪೆಸಿಫಿಕ್ ದ್ವೀಪಗಳಲ್ಲಿ ಜಿಕಾ ವೈರಸ್ ಹರಡಿರುವುದು ಪತ್ತೆಯಾಗಿದೆ.


ಇದನ್ನು ಓದಿ: ಕೊರೋನಾ ಮೂರನೇ ಅಲೆ : 12 ಜನ ಮಕ್ಕಳ ತಜ್ಞ ವೈದ್ಯರ ವಿಶೇಷ ಸಮಿತಿ ರಚಿಸಿದ ಬಿಬಿಎಂಪಿ


ಇನ್ನು ಈ ಜಿಕಾ ವೈಸ್​ ಸೋಂಕಿಗೆ ಒಳಗಾದವರಲ್ಲಿ ಸಾಮಾನ್ಯವಾಗಿ ಜ್ವರ, ದದ್ದು, ಸ್ನಾಯು ಸೆಳೆತ, ಕೀಲು ನೋವು, ಅಸ್ವಸ್ಥತೆ ಮತ್ತು ತಲೆ ನೋವಿನ ಲಕ್ಷಣಗಳು ಕಂಡು ಬರುತ್ತದೆ. ಈ ಲಕ್ಷಣಗಳು ಸಾಮಾನ್ಯವಾಗಿ ಎರಡರಿಂದ ಏಳು ದಿನಗಳವರೆಗೆ ಕಾಡುತ್ತದೆ.


ಇನ್ನು ಈ ಏಡಿಸ್​ ಸೊಳ್ಳೆಯಿಂದ ಈ ಜಿಕಾ ಸೋಂಕು ಕಂಡು ಬರುತ್ತದೆ. ಇದರಲ್ಲಿ ಏಡಿಸ್​ ಏಜಿಪ್ತಿ ಪ್ರಕಾರದ ಸೊಳ್ಳೆಗಳು ಡೆಂಗ್ಯೂ, ಚಿಕನ್​ ಗುನ್ಯಾ ಮತ್ತು ಹಳದಿ ಜ್ವರಕ್ಕೆ ಕೂಡ ಕಾರಣವಾಗುತ್ತದೆ.


ಈ ಸೋಂಕು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ. ಆದರೆ, ಗರ್ಭಿಣಿ ಮಹಿಳೆಯರಲ್ಲಿ ಈ ಸೋಂಕು ಕಂಡು ಬಂದರೆ, ಅದು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಸಾಕಷ್ಟು ಹಾನಿ ಮಾಡುವ ಸಾಧ್ಯತೆ ಹೆಚ್ಚು. ಇದರಿಂದ ನವಜಾತ ಶಿಶುಗಳಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ.


ದೇಶದಲ್ಲಿಯೇ ಮೊದಲ ಕೋವಿಡ್​ ಪ್ರಕರಣ ಪತ್ತೆಯಾದ ಕೇರಳದಲ್ಲಿ ಸೋಂಕಿನ ನಿಯಂತ್ರಣವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಸೋಂಕಿನ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗಿ ಕೇರಳ ನಿಂತಿದೆ. ಈ ನಡುವೆ ಕಳೆದ ಹತ್ತು ದಿನಗಳಿಂದ ಕೇರಳದಲ್ಲಿ ಕೋವಿಡ್​ ಸಂಕು ಪ್ರಕರಣ ಹೆಚ್ಚುಗೊಂಡಿದೆ. ಜೂನ್​ 28ರಿಂದ ಕೋವಿಡ್​ ಪ್ರಕರಣಗಳ ಸಂಖ್ಯೆ ಎರಡರಷ್ಟು ಹೆಚ್ಚಿದ್ದು, ಡೆಲ್ಟಾ ಸೋಂಕಿ ಪ್ರಕರಣಗಳು ಕೂಡ ಕಂಡು ಬಂದಿದೆ.  ಇದು ಮೂರನೇ ಅಲೆ ಎಚ್ಚರಿಕೆ ಎನ್ನಲಾಗಿದೆ. ಈ ನಡುವೆ ರಾಜ್ಯದಲ್ಲಿ ಜಿಕಾ ವೈರಸ್​ ಪ್ರಕರಣ ಕಂಡು ಬಂದಿರುವುದು ಮತ್ತಷ್ಟು ಆತಂಕ ಮೂಡಿಸಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

First published: