• Home
  • »
  • News
  • »
  • national-international
  • »
  • Drugs ವಿರುದ್ಧ ನಮ್ಮ ಶೈಲಿಯ ಆಪರೇಷನ್​ ಸಕ್ಸಸ್ ಆಗಿದೆ ಎಂದ ಅಮಿತ್ ಶಾ; 30,000 kg ಡ್ರಗ್ಸ್ ನಾಶ

Drugs ವಿರುದ್ಧ ನಮ್ಮ ಶೈಲಿಯ ಆಪರೇಷನ್​ ಸಕ್ಸಸ್ ಆಗಿದೆ ಎಂದ ಅಮಿತ್ ಶಾ; 30,000 kg ಡ್ರಗ್ಸ್ ನಾಶ

ಅಮಿತ್​ ಶಾ

ಅಮಿತ್​ ಶಾ

ZeroTolerance Policy: ಭಾರತ ಸರ್ಕಾರವು ಡ್ರಗ್ಸ್ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿತು. ತ್ವರಿತವಾಗಿ ಮತ್ತು ಸರಿಯಾದ ದಿಕ್ಕಿನಲ್ಲಿ ಡ್ರಗ್ಸ್ ವಿರುದ್ಧದ ಹೋರಾಟ ಮಾಡಿದ್ದು ಫಲಿತಾಂಶಗಳನ್ನು ತೋರಿಸಲು ಪ್ರಾರಂಭಿಸಿದೆ.

  • Share this:

ಚಂಡೀಗಢ: ಪಂಜಾಬ್ ರಾಜಭವನದಲ್ಲಿ ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಎರಡು ದಿನಗಳ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah), ಮಾದಕ ದ್ರವ್ಯಗಳ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು (Zero Tolerance Policy) ಅಳವಡಿಸಿಕೊಂಡಿದ್ದು, ಒಳ್ಳೆಯ ಫಲಿತಾಂಶವನ್ನು ಕೊಡುತ್ತಿದೆ ಎಂದರು.


ಆರೋಗ್ಯಕರ ಸಮಾಜ ಮತ್ತು ಸಮೃದ್ಧ ರಾಷ್ಟ್ರಕ್ಕಾಗಿ ಮಾದಕವಸ್ತುವನ್ನು ನಮ್ಮ ಆಡಳಿತ ತೃಣ ಮಾತ್ರವೂ ಸಹಿಸುವುದಿಲ್ಲ. ಇದು ಸದ್ಯ ತುರ್ತು ಅಗತ್ಯವಾಗಿದೆ ಅಗತ್ಯ ಎಂದು ಶಾ ಹೇಳಿದರು. ಭದ್ರತಾ ದೃಷ್ಟಿಯಿಂದಲೂ ಇದು ಮುಖ್ಯವಾಗಿದೆ ಎಂದರು. ಮಾದಕ ಔಷಧ ವ್ಯಾಪಾರದಿಂದ ಉತ್ಪತ್ತಿಯಾಗುವ ಕೊಳಕು ಹಣವನ್ನು ದೇಶದ ವಿರುದ್ಧದ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ ಎಂದು ತಿಳಿಸಿದರು.


ಶೂನ್ಯ ಸಹಿಷ್ಣು ನೀತಿ ಫಲ ಕೊಟ್ಟಿದೆ


2014 ರಲ್ಲಿ ನರೇಂದ್ರ ಮೋದಿ ಜಿ ಪ್ರಧಾನಿಯಾದಾಗ, ಭಾರತ ಸರ್ಕಾರವು ಡ್ರಗ್ಸ್ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿತು. ತ್ವರಿತವಾಗಿ ಮತ್ತು ಸರಿಯಾದ ದಿಕ್ಕಿನಲ್ಲಿ ಡ್ರಗ್ಸ್ ವಿರುದ್ಧದ ಹೋರಾಟ ಮಾಡಿದ್ದು ಫಲಿತಾಂಶಗಳನ್ನು ತೋರಿಸಲು ಪ್ರಾರಂಭಿಸಿದೆ. ಡ್ರಗ್ಸ್ ಯುವ ಪೀಳಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಗೆದ್ದಲಿನಂತೆ ಹಾನಿ ಮಾಡುತ್ತದೆ ಎಂದರು. ಮಾದಕವಸ್ತು ಪಿಡುಗನ್ನು ತೊಡೆದುಹಾಕಲು ಸರ್ಕಾರ ಬದ್ಧವಾಗಿದೆ ಎಂದು ಒತ್ತಿ ಹೇಳಿದರು. ಡ್ರಗ್ಸ್ ಸೇವಿಸುವವರ ಮೇಲೆ ಮಾತ್ರವಲ್ಲದೆ ಸಮಾಜ, ಆರ್ಥಿಕತೆ ಮತ್ತು ದೇಶದ ಭದ್ರತೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಾವು ಅದನ್ನು ಬೇರಿನ ಸಮೇತ ಕಿತ್ತು ಹಾಕುತ್ತೇವೆ ಎಂದರು.


ಇದನ್ನೂ ಓದಿ: Supreme Court: ಅಂಬಾನಿ ಕುಟುಂಬಕ್ಕೆ ಕೇಂದ್ರ ಸರ್ಕಾರದ ಭದ್ರತೆ ಮುಂದುವರೆಸಲು ಸುಪ್ರೀಂ ಅನುಮತಿ


30,000 ಕೆಜಿಗೂ ಹೆಚ್ಚು ಡ್ರಗ್ಸ್ ನಾಶ


ಗೃಹ ಸಚಿವರ ವರ್ಚುವಲ್ ಮುಖ್ಯಸ್ಥಿಕೆಯಲ್ಲಿ 30,000 ಕೆಜಿಗೂ ಹೆಚ್ಚು ಡ್ರಗ್ಸ್ ಅನ್ನು ಎನ್‌ಸಿಬಿ ನಾಶಪಡಿಸಿದೆ. ಸಂಸ್ಥೆಯು ಜೂನ್ 1 ರಿಂದ ಮಾದಕ ದ್ರವ್ಯ ವಿಲೇವಾರಿ ಅಭಿಯಾನವನ್ನು ಪ್ರಾರಂಭಿಸಿದೆ. ಜುಲೈ 29 ರವರೆಗೆ 11 ರಾಜ್ಯಗಳಲ್ಲಿ 51,217 ಕೆಜಿ ಮಾದಕ ದ್ರವ್ಯಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 30,468 ಕೆಜಿಗೂ ಹೆಚ್ಚು ಔಷಧಗಳನ್ನು ವಿಲೇವಾರಿ ಮಾಡಿದ ನಂತರ, ಒಟ್ಟು ಪ್ರಮಾಣವು ಸುಮಾರು 81,686 ಕೆಜಿಯನ್ನು ತಲುಪುತ್ತದೆ.  ಇದು NCB ಯ ಗುರಿಯನ್ನು ಮೀರಿಸುತ್ತದೆ. ಇದು ಡ್ರಗ್ಸ್ ಮುಕ್ತ ಭಾರತದ ಹೋರಾಟದಲ್ಲಿ ದೊಡ್ಡ ಸಾಧನೆಯಾಗಿದೆ ಎಂದು ಅಧಿಕಾರಿ ಬಣ್ಣಿಸಿದರು. ಶನಿವಾರ ದೆಹಲಿಯಲ್ಲಿ 19,320 ಕೆಜಿ, ಚೆನ್ನೈನಲ್ಲಿ 1,309 ಕೆಜಿ, ಗುವಾಹಟಿಯಲ್ಲಿ 6,761 ಕೆಜಿ ಮತ್ತು ಕೋಲ್ಕತ್ತಾದಲ್ಲಿ 3,077 ಕೆಜಿ ಡ್ರಗ್ಸ್ ನಾಶವಾಗಿದೆ.


ಇದನ್ನೂ ಓದಿ: Punjab: ಆಸ್ಪತ್ರೆಯಲ್ಲಿ ಕೊಳಕಾದ ಹಾಸಿಗೆ ಕಂಡು ಸಚಿವರು ಸಿಡಿಮಿಡಿ, ವೈದ್ಯರನ್ನು ಅದೇ ಹಾಸಿಗೆ ಮೇಲೆ ಮಲಗಿಸಿ ತರಾಟೆ


75,000 ಕೆಜಿ ಡ್ರಗ್ಸ್ ನಾಶಕ್ಕೆ ಪ್ರತಿಜ್ಞೆ


ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸಲು ಪ್ರಧಾನಿ ನರೇಂದ್ರ ಮೋದಿಯವರ ಕರೆ ಮೇರೆಗೆ ಎನ್‌ಸಿಬಿ ಸ್ವಾತಂತ್ರ್ಯದ 75 ವರ್ಷಗಳಲ್ಲಿ 75,000 ಕೆಜಿ ಡ್ರಗ್ಸ್ ನಾಶಪಡಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡಿತು. ಪಂಜಾಬ್ ಗವರ್ನರ್ ಬನ್ವರಿಲಾಲ್ ಪುರೋಹಿತ್, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಹರಿಯಾಣ ಗೃಹ ಸಚಿವ ಅನಿಲ್ ವಿಜ್, ಚಂಡೀಗಢ ಸಂಸದ ಕಿರಣ್ ಖೇರ್ ಮತ್ತು ಚಂಡೀಗಢ ಸಲಹೆಗಾರ ಧರಂ ಪಾಲ್ ಅವರು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಶಾ ಅವರನ್ನು ಬರಮಾಡಿಕೊಂಡರು.


ಶನಿವಾರ ಸಂಜೆ ಶಾ ಅವರು ಪ್ರಸಿದ್ಧ ಮಳೆಯಾಶ್ರಿತ ಸುಖನಾ ಸರೋವರದಲ್ಲಿ “ಹರ್ ಘರ್ ತಿರಂಗ” ಮತ್ತು “ಆಜಾದಿ ಕಾ ಅಮೃತ್ ಮಹೋತ್ಸವ” ಲೇಸರ್ ಶೋನಲ್ಲಿ ಭಾಗವಹಿಸಲಿದ್ದಾರೆ. ಎನ್‌ಸಿಬಿ ಸ್ವಾತಂತ್ರ್ಯದ 75 ವರ್ಷಗಳಲ್ಲಿ 75,000 ಕೆಜಿ ಡ್ರಗ್ಸ್ ನಾಶಪಡಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡಿತು.

Published by:Kavya V
First published: