ಪ್ರಧಾನಿ ಮೋದಿಯ ಫಿಟ್ನೆಸ್​ ವಿಡಿಯೋಗೆ 1 ಪೈಸೆಯೂ ಖರ್ಚಾಗಿಲ್ಲವಂತೆ!: RTI ಗೆ ಪಿಎಂಒ ಉತ್ತರ


Updated:August 22, 2018, 10:23 AM IST
ಪ್ರಧಾನಿ ಮೋದಿಯ ಫಿಟ್ನೆಸ್​ ವಿಡಿಯೋಗೆ 1 ಪೈಸೆಯೂ ಖರ್ಚಾಗಿಲ್ಲವಂತೆ!: RTI ಗೆ ಪಿಎಂಒ ಉತ್ತರ

Updated: August 22, 2018, 10:23 AM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.22): ಆರ್​ಟಿಐ ಮೂಲಕ ಕೇಳಲಾದ ಒಂದು ಪ್ರಶ್ನೆಗೆ ಉತ್ತರಿಸಿರುವ ಪ್ರಧಾನ ಮಂತ್ರಿ ಸಚಿವಾಲಯವು ಜೂನ್​ನಲ್ಲಿ ಪ್ರಧಾನಿ ಮೋದಿ ಶೇರ್​ ಮಾಡಿದ್ದ ಫಿಟ್ನೆಸ್​ ವಿಡಿಯೋ ಮಾಡಲು ಸರ್ಕಾರದ ಒಂದು ಪೈಸೆಯೂ ಖರ್ಚಾಗಿಲ್ಲ ಎಂದು ಹೇಳಿದೆ. ಯೋಗದಿನದ ಒಂದು ವಾರಕ್ಕೂ ಮೊದಲು, ಜೂನ್​ 13 ರಂದು ಪ್ರಧಾನ ಮಂತ್ರಿಯವರು ಟ್ವಿಟರ್​ನಲ್ಲಿ ತಮ್ಮ ಫಿಟ್ನೆಸ್​ ವಿಡಿಯೋ ಅಪ್ಲೋಡ್​ ಮಾಡಿದ್ದರು. ಈ ವಿಡಿಯೋದಲ್ಲಿ ಮೋದಿಯವರು ಬಂಡೆಯ ಮೇಲೆ ಕುಳಿತು ವ್ಯಾಯಾಮ ಮಾಡಿದ್ದಲ್ಲದೆ, ಬರಿಗಾಲಲ್ಲಿ ಓಡಾಡಿಕೊಂಡು, ಯೋಗ ಮಾಡಿದ ದೃಶ್ಯಗಳಿದ್ದವು.


ಪ್ರಧಾನ ಮಂತ್ರಿ ಸಚಿವಾಲಯವು "ನರೇಂದ್ರ ಮೋದಿಯವರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದ ವಿಡಿಯೋ ಮಾಡಲು, ಯಾವುದೇ ಖರ್ಚು ಮಾಡಿರಲಿಲ್ಲ. ವಿಡಿಯೋವನ್ನು ಅವರ ಮನೆಯಲ್ಲೇ ಮಾಡಲಾಗಿತ್ತು. ಅಲ್ಲದೇ ವಿಡಿಯೋಗ್ರಫಿಯನ್ನು ಪ್ರಧಾನ ಮಂತ್ರಿ ಸಚಿವಾಲಯದ ಕ್ಯಾಮರಾಮೆನ್​ ಮಾಡಿದ್ದರು. ವಿಡಿಯೋಗಾಗಿ ಏನೂ ಖರೀದಿಸಿರಲಿಲ್ಲ" ಎಂದು ಆರ್​ಟಿಐ ಮೂಲಕ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದೆ.

ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ನೀಡಿದ್ದ ಫಿಟ್ನೆಸ್​ ಚಾಲೆಂಜ್​ ಸ್ವೀಕರಿಸಿದ್ದ ನರೇಂದ್ರ ಮೋದಿ ಕೆಲ ದಿನಗಳ ಬಳಿಕ ವಿಡಿಯೋ ಒಂದನ್ನು ಪೋಸ್ಟ್​ ಮಾಡಿದ್ದರು. ಪಿಎಂ ಮೋದಿ ಇದರಲ್ಲಿ ಕಪ್ಪು ಬಣ್ಣದ ಜಾಗಿಂಗ್​ ವಸ್ತ್ರವನ್ನು ಧರಿಸಿದ್ದರು.


ಯೋಗ ದಿನದ ಮೊದಲು "ಹಮ್​ ಫಿಟ್​ ತೋ ಇಂಡಿಯಾ ಫಿಟ್​" ಎಂಬ ಅಭಿಯಾನವನ್ನು ಆರಂಭಿಸಲಾಗಿತ್ತು. ಕ್ರೀಡಾ ಸಚಿವ ರಾಜವರ್ಧನ್​ ಸಿಂಗ್​ ರಾಥೋಡ್​ ಇದನ್ನು ಆರಂಭಿಸಿದ್ದು, ಇದಕ್ಕೆ ಪಿಎಂ ಮೋದಿಯೇ ಪ್ರೇರಣೆ ಎಂದಿದ್ದರು.ಈ ಹಿಂದೆ ಕಾಂಗ್ರೆಸ್​ ನಾಯಕ, ಸಂಸದ ಶಶಿ ತರೂರ್​ ಈ ವಿಡಿಯೋ ಮಾಡಲು ಮೋದಿಯವರು ಬರೋಬ್ಬರಿ 35 ಲಕ್ಷ ಖರ್ಚು ಮಾಡಿದ್ದರಅಎ ಎಂದು ಆರೋಪಿಸಿದ್ದರು. ಆದರೀಗ ಈ ಆರೋಪವನ್ನು ಸರ್ಕಾರವು ತಿರಸ್ಕರಿಸಿದೆ.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...