ಚಿಕ್ಕಪ್ಪನ ಕೊಲೆ ಪ್ರಕರಣ; ಸಿಎಂ ನಾಯ್ಡು ಕೈವಾಡವಿದೆ ಎಂದು ಜಗನ್​​​ ಆರೋಪ!

ಇನ್ನು ಚಿಕ್ಕಪ್ಪನ ಹತ್ಯೆ ಹಿಂದೆ ತೆಲುಗು ದೇಶಂ ಪಕ್ಷದ ಕೈವಾಡವಿದೆ ಎಂಬುದು ಬಹುತೇಕ ಖಚಿತ. ನನ್ನ ಕುಟುಂಬದಲ್ಲಿ ಯಾವಾಗ ಕೊಲೆಯಾದರೂ ರಾಜ್ಯದಲ್ಲಿ ಟಿಡಿಪಿಯೇ ಅಧಿಕಾರದಲ್ಲಿರುತ್ತದೆ ಎಂದರು.

Ganesh Nachikethu | news18
Updated:April 3, 2019, 7:15 PM IST
ಚಿಕ್ಕಪ್ಪನ ಕೊಲೆ ಪ್ರಕರಣ; ಸಿಎಂ ನಾಯ್ಡು ಕೈವಾಡವಿದೆ ಎಂದು ಜಗನ್​​​ ಆರೋಪ!
ಸಿಎಂ ಚಂದ್ರಬಾಬು ನಾಯ್ಡು, ವೈಎಸ್​​​ ಜಗನ್​​ ಮೋಹನ್​ ರೆಡ್ಡಿ
Ganesh Nachikethu | news18
Updated: April 3, 2019, 7:15 PM IST
ನವದೆಹಲಿ(ಮಾ.16): ಮಾಜಿ ಸಂಸದ ವೈ.ಎಸ್​​​​ ವಿವೇಕಾನಂದ ರೆಡ್ಡಿ ಕೊಲೆ ಹಿಂದೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕೈವಾಡವಿದೆ ಎಂದು ಪ್ರತಿಪಕ್ಷದ ನಾಯಕ ವೈ.ಎಸ್​​​ ಜಗನ್​​ ಮೋಹನ್ ರೆಡ್ಡಿ ಆರೋಪಿಸಿದ್ದಾರೆ. ಈ ಬೆನ್ನಲ್ಲೇ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ ತೆಲುಗು ದೇಶಂ ಮುಖ್ಯಸ್ಥ ಸಿಎಂ ಚಂದ್ರಬಾಬು ನಾಯ್ಡು, ವೈಎಸ್​​​ಆರ್​​ ಕಾಂಗ್ರೆಸ್​​ ನೇತಾರ ಜಗನ್​​ ಮಾಡಿದ ಆಪಾದನೆ ಶುದ್ದಸುಳ್ಳು ಎಂದು ಸಾರಸಗಟಾಗಿ ತಳ್ಳಿ ಹಾಕ್ಕಿದ್ದಾರೆ.

ಶುಕ್ರವಾರ(ನಿನ್ನೆ) ಕಡಪ ಜಿಲ್ಲೆಯ ನಿವಾಸದಲ್ಲಿ ಮಾಜಿ ಸಿಎಂ ವೈ.ಎಸ್​​ ರಾಜಶೇಖರ್​​​ ರೆಡ್ಡಿಯವರ ಕಿರಿಯ ಸಹೋದರ ವಿವೇಕಾನಂದ ರೆಡ್ಡಿ ಶವ ಪತ್ತೆಯಾಗಿತ್ತು. ಅಲ್ಲಿನ ಮನೆ ಕೊಠಡಿ ಮತ್ತು ಶೌಚಾಲಯದಲ್ಲಿ ಭಾರೀ ಪ್ರಮಾಣದಲ್ಲಿ ರಕ್ತದ ಕಲೆಗಳಾಗಿದ್ದ ಬಟ್ಟೆಗಳು ಕೂಡ ಪತ್ತೆಯಾಗಿದ್ದವು. ಬಳಿಕ ವೈಎಸ್​​ಆರ್​​​ ಕಾಂಗ್ರೆಸ್​​ ಮಾಜಿ ಸಂಸದನ ಸಾವು ಸಹಜ ಸಾವಲ್ಲ, ಬದಲಿಗೆ ಅನುಮಾನಸ್ಪದ ಸಾವು ಎಂದು ಕುಟುಂಬ ವರ್ಗ ಶಂಕೆ ವ್ಯಕ್ತಪಡಿಸಿತ್ತು.

ಇದಾದ ಬಳಿಕ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ವೈ.ಎಸ್​​​ ಜಗನ್​​ ಅವರು, ಸಾವಿನ ಹಿಂದೆ ಸಿಎಂ ಚಂದ್ರಬಾಬು ನಾಯ್ಡು ಕೈವಾಡವಿದೆ. ಈಗಾಗಲೇ ಕಡಪ ಪೊಲೀಸರು ಚಿಕ್ಕಪ್ಪನ ಕೊಲೆಯನ್ನು ಧೃಡಪಡಿಸಿದ್ದಾರೆ. ಈ ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದರು. ಅಲ್ಲದೇ ರಾಜ್ಯ ಪೊಲೀಸ್​ ಇಲಾಖೆ ಮುಖ್ಯಮಂತ್ರಿಗಳ ಕೈಗೊಂಬೆಯಾಗಿ ವರ್ತಿಸುತ್ತಿದೆ. ಯಾವುದೇ ಕಾರಣಕ್ಕೂ ಪೊಲೀಸರು ನಿಷ್ಪಕ್ಷಪಾತ ತನಿಖೆ ಮಾಡುತ್ತಾರೆಂಬ ನಂಬಿಕೆಯಿಲ್ಲ. ಹೀಗಾಗಿ ಚಿಕ್ಕಪ್ಪನ ಕೊಲೆ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದರು.

ಇದನ್ನೂ ಓದಿ: ಕಡಪದಲ್ಲಿ ಜಗನ್ಮೋಹನ್ ರೆಡ್ಡಿ ಚಿಕ್ಕಪ್ಪನ ಹತ್ಯೆ; ಎಸ್ಐಟಿ ತನಿಖೆಗೆ ಆದೇಶ

ಇನ್ನು ಚಿಕ್ಕಪ್ಪನ ಹತ್ಯೆ ಹಿಂದೆ ತೆಲುಗು ದೇಶಂ ಪಕ್ಷದ ಕೈವಾಡವಿದೆ ಎಂಬುದು ಬಹುತೇಕ ಖಚಿತ. ನನ್ನ ಕುಟುಂಬದಲ್ಲಿ ಯಾವಾಗ ಕೊಲೆಯಾದರೂ ರಾಜ್ಯದಲ್ಲಿ ಟಿಡಿಪಿಯೇ ಅಧಿಕಾರದಲ್ಲಿರುತ್ತದೆ ಎಂದರು.

ಇದನ್ನೂ ಓದಿ: ಅಪ್ಪನ ಹಾದಿಯಲ್ಲಿ ಮಗ: ಜಗನ್ ಮೋಹನ್ ರೆಡ್ಡಿಯ 13 ತಿಂಗಳುಗಳ 3 ಸಾವಿರ ಕಿ.ಮೀ ಪಾದಯಾತ್ರೆ ಇಂದು ಅಂತ್ಯ
Loading...

ಜಗನ್​​ ತಮ್ಮ ಮೇಲೆ ಮಾಡಿದ ಆರೋಪವನ್ನು ಸಿಎಂ ಚಂದ್ರಬಾಬು ನಾಯ್ಡು ತಳ್ಳಿ ಹಾಕಿದ್ದಾರೆ. ಹಾಗೆಯೇ ಚುನಾವಣೆ ಹೊತ್ತಲ್ಲಿಯೇ ವಿವಾದ ಸೃಷ್ಟಿಸಲಿಕ್ಕಾಗಿಯೇ ಜಗನ್​​​ ಆರೋಪ ಮಾಡುತ್ತಿದ್ದಾರೆ. ವೈಎಸ್​​​ಆರ್​​ ಕಾಂಗ್ರೆಸ್​​ ಮಾಡುತ್ತಿರುವ ಆರೋಪ ಸಂಪೂರ್ಣ ಸುಳ್ಳು ಎಂದು ಖಾರವಾಗಿಯೇ ಕಿಡಿಕಾರಿದ್ದಾರೆ.
----------------
First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626